Christmas 2023: ಕ್ರಿಸ್ಮಸ್ ಬಗೆಗಿನ ಕೆಲವು ಸ್ವಾರಸ್ಯಕರ ಸಂಗತಿಗಳನ್ನು ತಿಳಿದುಕೊಳ್ಳಿ!

ಕ್ಯಾಲೆಂಡರ್ ವರ್ಷದ ಕೊನೆಗೆ ಬಂದಿದ್ದೇವೆ. ಪ್ರಪಂಚದಾದ್ಯಂತದ ಲಕ್ಷಾಂತರ ಜನರು ಕ್ರಿಸ್ಮಸ್ ಹಬ್ಬದ ತಯಾರಿಯಲ್ಲಿದ್ದಾರೆ. ಮನೆಯ ಸುತ್ತ ಮುತ್ತ ದೀಪದ ಅಲಂಕಾರ, ರುಚಿಕರವಾದ ಆಹಾರ, ಸಂಗೀತ ಮತ್ತು ಅತ್ಯಾಕರ್ಷಕ ಉಡುಗೊರೆಗಳನ್ನು ಎದುರು ನೋಡುತ್ತಿದ್ದಾರೆ. ಆದರೆ ಕ್ರಿಸ್ಮಸ್ ಬಗ್ಗೆ ನಿಮಗೆಷ್ಟು ಗೊತ್ತು? ಆದಕಾರಣ ನಿಮಗಾಗಿ ಕ್ರಿಸ್ಮಸ್ ಬಗೆಗಿನ ಕೆಲವು ಸ್ವಾರಸ್ಯಕರ ಸಂಗತಿಗಳನ್ನು ಇಲ್ಲಿ ನೀಡಲಾಗಿದೆ.

Christmas 2023: ಕ್ರಿಸ್ಮಸ್ ಬಗೆಗಿನ ಕೆಲವು ಸ್ವಾರಸ್ಯಕರ ಸಂಗತಿಗಳನ್ನು ತಿಳಿದುಕೊಳ್ಳಿ!
Christmas 2023
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on: Dec 21, 2023 | 6:55 PM

ಕ್ಯಾಲೆಂಡರ್ ವರ್ಷದ ಕೊನೆಗೆ ಬಂದಿದ್ದೇವೆ. ಪ್ರಪಂಚದಾದ್ಯಂತದ ಲಕ್ಷಾಂತರ ಜನರು ಕ್ರಿಸ್ಮಸ್ ಹಬ್ಬದ ತಯಾರಿಯಲ್ಲಿದ್ದಾರೆ. ಮನೆಯ ಸುತ್ತ ಮುತ್ತ ದೀಪದ ಅಲಂಕಾರ, ರುಚಿಕರವಾದ ಆಹಾರ, ಸಂಗೀತ ಮತ್ತು ಅತ್ಯಾಕರ್ಷಕ ಉಡುಗೊರೆಗಳನ್ನು ಎದುರು ನೋಡುತ್ತಿದ್ದಾರೆ. ಆದರೆ ಕ್ರಿಸ್ಮಸ್ ಬಗ್ಗೆ ನಿಮಗೆಷ್ಟು ಗೊತ್ತು? ಆದ ಕಾರಣ ನಿಮಗಾಗಿ ಕ್ರಿಸ್ಮಸ್ ಬಗೆಗಿನ ಕೆಲವು ಸ್ವಾರಸ್ಯಕರ ಸಂಗತಿಗಳನ್ನು ಇಲ್ಲಿ ನೀಡಲಾಗಿದೆ.

  1. ಕ್ರಿಸ್ಮಸ್ ಅನ್ನು ಯೇಸು ಕ್ರಿಸ್ತನ ಜನ್ಮ ದಿನವನ್ನಾಗಿ ಆಚರಿಸಲಾಗುತ್ತದೆ. ಆದರೆ ಡಿ. 25 ರೋಮನ್ ಕ್ಯಾಥೊಲಿಕ್ ಚರ್ಚ್ ಯೇಸುವಿನ ಜನ್ಮದಿನವನ್ನು ಗುರುತಿಸಲು ಆಯ್ಕೆ ಮಾಡಿದ ದಿನವಾಗಿದೆ. ವಾಸ್ತವದಲ್ಲಿ, ಯೇಸು ಹುಟ್ಟಿದ ನಿಖರವಾದ ದಿನಾಂಕ ಯಾರಿಗೂ ತಿಳಿದಿಲ್ಲ!
  2. ಎಲ್ಲಾ ಕ್ರಿಶ್ಚಿಯನ್ನರು ಒಂದೇ ದಿನ ಕ್ರಿಸ್ಮಸ್ ಆಚರಿಸುವುದಿಲ್ಲ ಎಂದು ನಿಮಗೆ ತಿಳಿದಿದೆಯೇ? ರಷ್ಯಾ, ಉಕ್ರೇನ್ ಮತ್ತು ರೊಮೇನಿಯಾದಂತಹ ಆರ್ಥೊಡಾಕ್ಸ್ ಕ್ರಿಶ್ಚಿಯನ್ನರ ದೊಡ್ಡ ಜನಸಂಖ್ಯೆ ಹೊಂದಿರುವ ದೇಶಗಳು ಕ್ರಿಸ್ಮಸ್ ಅನ್ನು ಜನವರಿ 7 ರಂದು ಆಚರಿಸುತ್ತಾರೆ.
  3. ಕ್ರಿಸ್ಮಸ್ ದಿನ ಆಚರಣೆ ಮಾಡುವ ಹಲವು ಸಂಪ್ರದಾಯಗಳು ವಿಕ್ಟೋರಿಯನ್ ಯುಗದಲ್ಲಿ ಬಂದವು ಎಂದು ಹೇಳಲಾಗುತ್ತದೆ. ಉದಾಹರಣೆಗೆ ಕ್ರಿಸ್ಮಸ್ ಕಾರ್ಡ್ಗಳು, ಉಡುಗೊರೆ ನೀಡುವುದು. ಇನ್ನು ಈ ದಿನ ಮಾಡುವ ಕೆಲವು ಆಹಾರಗಳು ಕೂಡ ಟರ್ಕಿಯಲ್ಲಿ ತಯಾರಿಸುವ ಸಾಂಪ್ರದಾಯಿಕ ಆಹಾರಗಳಾಗಿವೆ.
  4. ಕ್ರಿಸ್ಮಸ್ ಟ್ರೀ ಎಂಬ ಪರಿಕಲ್ಪನೆ 16 ನೇ ಶತಮಾನದಲ್ಲಿ ಜರ್ಮನಿಯಲ್ಲಿ ಮೊದಲ ಬಾರಿಗೆ ಕಂಡು ಬಂದಿತ್ತು ಎಂಬ ಉಲ್ಲೇಖವಿದೆ. ಅಲ್ಲಿ ಕ್ರಿಸ್ಮಸ್ ಸಮಯದಲ್ಲಿ, ಜನರು ಫಿರ್ ಮರಗಳನ್ನು ತರ ತರದ ಹಣ್ಣು ಮತ್ತು ಬೀಜಗಳಿಂದ ಅಲಂಕರಿಸಿದ್ದರು ಎಂದು ಹೇಳಲಾಗುತ್ತದೆ.
  5. ಪ್ರತಿ ವರ್ಷ, ನಾರ್ವೆಯಲ್ಲಿ ಬೆಳೆದ ಸುಂದರವಾದ ಕ್ರಿಸ್ಮಸ್ ಟ್ರೀ ಯನ್ನು ಲಂಡನ್ಗೆ ಕಳುಹಿಸಲಾಗುತ್ತದೆ. ಅಲ್ಲಿ ಅದನ್ನು ಟ್ರಾಫಲ್ಗರ್ ಚೌಕದಲ್ಲಿ ದೀಪಗಳಿಂದ ಅಲಂಕರಿಸಲಾಗುತ್ತದೆ. 20 ಮೀಟರ್ ಎತ್ತರವಿರುವ ಈ ಮರವು ಎರಡನೇ ಮಹಾಯುದ್ಧದ ಸಮಯದಲ್ಲಿ ಯುಕೆ ನಾರ್ವೆಗೆ ನೀಡಿದ ಸಹಾಯಕ್ಕಾಗಿ ಧನ್ಯವಾದಗಳನ್ನು ಹೇಳುವ ಉಡುಗೊರೆಯಾಗಿದೆ.
  6. ದೊಡ್ಡ ಗಡ್ಡದ, ಗುಲಾಬಿ ಕೆನ್ನೆಯ ಜಾಲಿ ಮನುಷ್ಯನನ್ನು ಉಲ್ಲೇಖಿಸದೆ ಕ್ರಿಸ್ಮಸ್ ಅಪೂರ್ಣವಾಗುತ್ತದೆ. ಆದರೆ ಅವನಿಗೆ ಸಾಂತಾಕ್ಲಾಸ್ ಎಂಬ ಹೆಸರು ಹೇಗೆ ಬಂತು ಎಂದು ನಿಮಗೆ ಗೊತ್ತಾ? ಇದು ಸಿಂಟರ್ಕ್ಲಾಸ್ನಿಂದ ಬಂದಿದೆ, ಅಂದರೆ ನೆದರ್ಲ್ಯಾಂಡ್ಸ್ನ ಭಾಷೆಯಾದ ಡಚ್ನಲ್ಲಿ ಸೇಂಟ್ ನಿಕೋಲಸ್ ಎಂದರ್ಥ. ಸೇಂಟ್ ನಿಕೋಲಸ್ 4 ನೇ ಶತಮಾನದಲ್ಲಿ ವಾಸಿಸುತ್ತಿದ್ದ ಕ್ರಿಶ್ಚಿಯನ್ ಬಿಷಪ್ ಆಗಿದ್ದರು. ಇವರು ದಯೆ ಮತ್ತು ಉದಾರತೆಗೆ ಹೆಸರುವಾಸಿಯಾಗಿದ್ದರು, ನಂತರ ಅವರು ಮಕ್ಕಳ ಪೋಷಕ ಸಂತರಾದರು. ಹಾಗಾಗಿ ಈ ಹೆಸರು ಚಾಲ್ತಿಯಲ್ಲಿದೆ.
  7. ಕ್ರಿಸ್ಮಸ್ ದಿನ ಜಿಂಗಲ್ ಬೆಲ್ಸ್ ಹಾಡಲು ಇಷ್ಟಪಡುತ್ತಾರೆ, ಆದರೆ ಹಾಡಿನಲ್ಲಿ ಕ್ರಿಸ್ ಮಸ್ ಎಂಬ ಪದವಿಲ್ಲದ್ದನ್ನು ಎಂದಾದರೂ ಗಮನಿಸಿದ್ದೀರಾ? ಅಥವಾ ಜೀಸಸ್ ಅಥವಾ ಸಾಂತಾಕ್ಲಾಸ್? ಏಕೆಂದರೆ ಇದು ಮೂಲತಃ ಕ್ರಿಸ್ಮಸ್ ಹಾಡಾಗಿರಲಿಲ್ಲ. ವಾಸ್ತವವಾಗಿ, ಇದೊಂದು ಜಾಲಿ ಗೀತೆ ಇದನ್ನು 1850 ರಲ್ಲಿ ಅಮೆರಿಕನ್ನರು ಒನ್ ಹಾರ್ಸ್ ಓಪನ್ ಸ್ಲೀ ಎಂಬ ಶೀರ್ಷಿಕೆಯೊಂದಿಗೆ ಬರೆದಿದ್ದರು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ