AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕಾಲೇಜು ಫೇರ್ವೆಲ್ ದಿನದಂದು ವಿದ್ಯಾರ್ಥಿನಿಯ ಸಖತ್​​ ಡಾನ್ಸ್, ನೆಟ್ಟಿಗರು ಹೇಳಿದ್ದೇನು

ಇನ್ಸ್ಟಾಗ್ರಾಮ್​​​ನಲ್ಲಿ ಹಂಚಿಕೊಳ್ಳಲಾದ ವೈರಲ್ ಡಾನ್ಸ್ ವೀಡಿಯೋದಲ್ಲಿ ಮಹಿಳೆಯೊಬ್ಬರು ಸೀರೆಯುಟ್ಟು ಬಾಲಿವುಡ್ ಕ್ಲಾಸಿಕ್ ಹಿಟ್ ಚೋಲಿ ಕೆ ಪೀಚೆ ಕ್ಯಾ ಹೈ ಹಾಡಿಗೆ ನೃತ್ಯ ಮಾಡುವುದನ್ನು ಕಾಣಬಹುದು.

Viral Video: ಕಾಲೇಜು ಫೇರ್ವೆಲ್ ದಿನದಂದು ವಿದ್ಯಾರ್ಥಿನಿಯ ಸಖತ್​​ ಡಾನ್ಸ್, ನೆಟ್ಟಿಗರು ಹೇಳಿದ್ದೇನು
ವೈರಲ್ ವೀಡಿಯೊ
TV9 Web
| Edited By: |

Updated on:May 08, 2023 | 3:16 PM

Share

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಡಾನ್ಸ್ ವೀಡಿಯೋಗಳನ್ನು ನೋಡುವುದೆಂದರೆ ಅನೇಕರಿಗೆ ಇಷ್ಟ. ಪುಟ್ಟ ಮಕ್ಕಳಿಂದ ಹಿಡಿದ ವಯಸ್ಕರರವರೆಗೆ ಡಾನ್ಸ್ ಮಾಡುವ ವೀಡಿಯೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಮತ್ತು ಇವುಗಳು ನೋಡುಗರಿಗೆ ಮನೋರಂಜನೆಯನ್ನು ನೀಡುವುದು ನಿಜ. ಮತ್ತು ಇನ್ನು ಕೆಲವರಿಗೆ ನೃತ್ಯ ಕಲಿಯಲು ಈ ರೀತಿಯ ವೀಡಿಯೋಗಳು ಪ್ರೋತ್ಸಾಹವನ್ನು ನೀಡುತ್ತದೆ. ಇದೀಗ ಚೋಲಿ ಕೆ ಪೀಚೆ ಕ್ಯಾ ಹೈ ಹಾಡಿಗೆ ಮಹಿಳೆಯೊಬ್ಬರು ನೃತ್ಯ ಮಾಡಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರಿಂದ ಮೆಚ್ಚುಗೆಯನ್ನು ಪಡೆದುಕೊಂಡಿದೆ. 1993ರ ಹಿಂದಿ ಚಲನಚಿತ್ರ ಖಲ್ ನಾಯಕ್ ಚಿತ್ರದ ಸೂಪರ್ ಹಿಟ್ ಹಾಡು ಚೋಲಿ ಕೆ ಪೀಚೆ ಕ್ಯಾ ಹೈ’ ಹಾಡಿಗೆ ನಾರಿಯ ಸೀರೆ ಡಾನ್ಸ್ ನೆಟ್ಟಿಗರ ಮನಗೆದ್ದಿದೆ.

ಕನಿಕಾ ಗೋಪಾಲ್ ಎಂಬವರು ತನ್ನ ಕಾಲೇಜು ಫೇರ್ವೆಲ್ ದಿನದಂದು ಪ್ರದರ್ಶಿಸಿದ ಈ ಡಾನ್ಸ್ ವೀಡಿಯೋವನ್ನು ತಮ್ಮ ಇನ್ಟಾಗ್ರಾಮ್ ಪೇಜ್ ನಲ್ಲಿ ಹಂಚಿಕೊಂಡಿದ್ದು, ವೀಡಿಯೋಗೆ ‘ಈ ನಾಲ್ಕು ವರ್ಷಗಳು ಅಸಹನೀಯವಾಗಿದ್ದವು, ಆದರೆ ಈ ವೇದಿಗೆ ನನಗೆ ಅದನ್ನು ಎದುರಿಸಿ ನಿಲ್ಲಲು ಸಹಾಯ ಮಾಡಿದೆ. ಇದು ನಾನು ಇಂದು ಹೇಗಿದ್ದೇನೆ ಎಂಬುದನ್ನು ತೋರಿಸಿಕೊಟ್ಟಿದೆ’ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಕನಿಕಾ ಅವರು ಕಾಲೇಜು ಫೇರ್ವೆಲ್ ದಿನದಂದು ಕೆಂಪು ಬಣ್ಣದ ಸೀರೆಯನ್ನು ಧರಿಸಿ ವೇದಿಕೆಯ ಮೇಲೆ ಬಾಲಿವುಡ್​​​ನ ಸೂಪರ್ ಹಿಟ್ ಕ್ಲಾಸಿಕ್ ಹಾಡುಗಳಲ್ಲಿ ಒಂದಾದ ಚೋಲಿ ಕೆ ಪೀಚೆ ಕ್ಯಾ ಹೈ’ ಹಾಡಿಗೆ ಸಕ್ಕತ್ ಆಗಿ ನೃತ್ಯ ಮಾಡಿದ್ದು, ಪ್ರೇಕ್ಷಕರಿಂದ ಶಿಳ್ಳೆ ಮತ್ತು ಚಪ್ಪಾಳೆ ಗಿಟ್ಟಿಸಿಕೊಂಡದ್ದನ್ನು ಈ ವೀಡಿಯೋದಲ್ಲಿ ಕಾಣಬಹುದು. ಈ ನೃತ್ಯ ಪ್ರದರ್ಶನದ ವೀಡಿಯೋ ನೋಡುಗರನ್ನು ಬೆರಗುಗೊಳಿಸಿದೆ.

View this post on Instagram

A post shared by Kanika (@_kanikagopal)

ಇದನ್ನೂ ಓದಿ:Viral video from China: ಹೋಟೆಲ್ ನಲ್ಲಿ ಲ್ಯಾಪ್ ಟಾಪ್ ಕಳೆದಿದೆ ಅಂತ ರೊಚ್ಚಿಗೆದ್ದ ವ್ಯಕ್ತಿ ಲಾಬಿಯೊಳಗೆ ಕಾರು ನುಗ್ಗಿಸಿ ಅಲ್ಲಿದ್ದ ವಸ್ತುಗಳನ್ನು ಧ್ವಂಸ ಮಾಡಿದ!

ಏಪ್ರಿಲ್ 3ರಂದು ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಈವರೆಗೆ ಸುಮಾರು 1 ಮಿಲಿಯನ್​​​​​ಗಿಂತಲೂ ಹೆಚ್ಚು ವೀಕ್ಷಣೆಯನ್ನು ಹಾಗೂ 125k ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಅನೇಕರು ಈಕೆಯ ನೃತ್ಯಕ್ಕೆ ಮನಸೋತು ಕಮೆಂಟ್​​​ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರರು ‘ನಿಮ್ಮ ಆತ್ಮವಿಶ್ವಾಸಕ್ಕೆ ನನ್ನದೊಂದು ಮೆಚ್ಚುಗೆ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಪರಿಪೂರ್ಣವಾದ ನೃತ್ಯ’ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಅದ್ಭುತ ನೃತ್ಯ ಪ್ರದರ್ಶನ’ ಎಂದು ಕಮೆಂಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:15 pm, Mon, 8 May 23