Deepavali 2026: ದೀಪಾವಳಿಯಂದು ನಿಮ್ಮ ಪ್ರೀತಿಪಾತ್ರರಿಗೆ ಈ ವಿಶೇಷ ಉಡುಗೊರೆಯನ್ನು ನೀಡಿ

ದೀಪಾವಳಿ ಹಬ್ಬವು ಸಂತೋಷವನ್ನು ಹಂಚಿಕೊಳ್ಳಲು ಮತ್ತು ಪ್ರೀತಿಪಾತ್ರರೊಂದಿಗೆ ಸಮಯ ಕಳೆಯಲು ಇರುವ ಒಂದು ಸಂದರ್ಭವಾಗಿದೆ. ಈ ವಿಶೇಷ ಸಂದರ್ಭದಲ್ಲಿ, ಜನರು ತಮ್ಮ ಕುಟುಂಬ, ಸ್ನೇಹಿತರು ಮತ್ತು ಸಂಬಂಧಿಕರಿಗೆ ಉಡುಗೊರೆಗಳನ್ನು ನೀಡಿ ಹಬ್ಬವನ್ನು ಮತ್ತಷ್ಟು ವಿಶೇಷಗೊಳಿಸುತ್ತಾರೆ. ಸಾಮಾನ್ಯವಾಗಿ ಬಟ್ಟೆ, ಸ್ವೀಟ್‌ಬಾಕ್ಸ್‌ಗಳನ್ನು ಗಿಫ್ಟ್‌ ನೀಡುತ್ತಾರೆ. ಸ್ವೀಟ್‌ ಬದಲು ಈ ಬಾರಿಯ ಹಬ್ಬಕ್ಕೆ ಈ ವಿಶೇಷ ಉಡುಗೊರೆಗಳನ್ನು ನೀಡುವ ಮೂಲಕ ನಿಮ್ಮ ಪ್ರೀತಿಪಾತ್ರರ ಮುಖದಲ್ಲಿ ನಗು ತರಿಸಿ.

Deepavali 2026: ದೀಪಾವಳಿಯಂದು ನಿಮ್ಮ ಪ್ರೀತಿಪಾತ್ರರಿಗೆ ಈ ವಿಶೇಷ ಉಡುಗೊರೆಯನ್ನು ನೀಡಿ
ಸಾಂದರ್ಭಿಕ ಚಿತ್ರ
Image Credit source: Pexels

Updated on: Nov 03, 2026 | 6:19 PM

ಹೊಸ ಬೆಳಕು, ಭರವಸೆ, ಸಂತೋಷ ಮತ್ತು ಸಮೃದ್ಧಿಯ ಸಂಕೇತವಾಗಿರುವ ಬೆಳಕಿನ ಹಬ್ಬ ದೀಪಾವಳಿಯನ್ನು (Deepavali) ದೇಶಾದ್ಯಂತ ಬಹಳ ಸಂಭ್ರಮದಿಂದ ಅಚರಿಸಲಾಗುತ್ತದೆ. ದೀಪಾವಳಿ ಸಂತೋಷವನ್ನು ಹಂಚಿಕೊಳ್ಳುವ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವ ಹಬ್ಬವಾಗಿದ್ದು, ಮನೆ ತುಂಬಾ ದೀಪ ಹಚ್ಚು, ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜೃಂಭಣೆಯಿಂದ  ಜನ ಈ ಹಬ್ಬವನ್ನು ಆಚರಿಸುತ್ಥಾರೆ. ಮತ್ತು ಮುಖ್ಯವನ್ನು ಪ್ರೀತಿಪಾತ್ರರಿಗೆ ಉಡುಗೊರೆಗಳನ್ನು ನೀಡುತ್ತಾರೆ. ಸಾಮಾನ್ಯವಾಗಿ ದೀಪಾವಳಿಗೆ ಹೆಚ್ಚಿನವರು ಸ್ವೀಟ್‌ಬಾಕ್ಸ್‌ಗಳನ್ನೇ ನೀಡುತ್ತಾರೆ. ಆದರೆ ಈ ಬಾರಿಯ ಹಬ್ಬಕ್ಕೆ ಬರೀ ಸ್ಟೀಟ್‌ ನೀಡುವ ಬದಲು ಈ ಕೆಲವು ಉಪಯುಕ್ತ ಉಡುಗೊರೆಗಳನ್ನು ನೀಡಿ, ನಿಮ್ಮ ಪ್ರೀತಿಪಾತ್ರರ ಮೊಗದಲ್ಲಿ ನಗುವನ್ನು ತರಿಸಿ.

ಒಳಾಂಗಣ ಸಸ್ಯಗಳು:

ಈ ಬಾರಿಯ ದೀಪಾವಳಿಗೆ ನಿಮ್ಮ ಪ್ರೀತಿಪಾತ್ರರಿಗೆ ನೀವು ವಿಭಿನ್ನವಾದ ಗಿಫ್ಟ್‌ ಅನ್ನು ನೀಡಲು ಬಯಸಿದರೆ, ಒಳಾಂಗಣ ಸಸ್ಯಗಳನ್ನು ನೀಡಿ. ಸುಂದರವಾದ ಪಾಟ್‌ ಮತ್ತು ಮನಿಪ್ಲಾಂಟ್‌, ಸ್ನೇಕ್‌ ಪ್ಲಾಂಟ್‌, ಲಕ್ಕಿ ಬ್ಯಾಂಬೂ ಅಥವಾ ಜೇಡ್‌ ಪ್ಲಾಂಟ್‌ನಂತಹ ಗಿಡಗಳನ್ನು ನೀಡಿ. ಸಕಾರಾತ್ಮಕತೆಯನ್ನು ಹರಡುವ ಈ ಗಿಡಗಳನ್ನು ಗಿಫ್ಟ್‌ ಮಾಡೋದು ತುಂಬಾನೇ ಒಳ್ಳೆಯದು.

ಮಣ್ಣಿನ ದೀಪಗಳು ಮತ್ತು ಅಲಂಕಾರಿಕ ವಸ್ತುಗಳು:

ದೀಪಾವಳಿಯಂದು ದೀಪಗಳಿಗೆ ವಿಶೇಷ ಮಹತ್ವವಿದೆ. ಜೇಡಿಮಣ್ಣಿನ ದೀಪಗಳು, ಕೈಯಿಂದ ಮಾಡಿದ ಅಲಂಕಾರಿಕ ವಸ್ತುಗಳು ಮತ್ತು ನೈಸರ್ಗಿಕ ವಸ್ತುಗಳಿಂದ ಮಾಡಿದ ಅಲಂಕಾರಿಕ ವಸ್ತುಗಳನ್ನು ನೀವು ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆಯನ್ನಾಗಿ ನೀಡಬಹುದು, ಹೌದು ವರ್ಣರಂಜಿತ ದೀಪಗಳ ಸೆಟ್ ಅಥವಾ ಸಣ್ಣ ಮಣ್ಣಿನ ಪ್ರತಿಮೆಗಳನ್ನು ನೀಡಬಹುದು.

ಪರಿಮಳಯುಕ್ತ ಕ್ಯಾಂಡಲ್‌ ಮತ್ತು ಡಿಫ್ಯೂಸರ್‌ಗಳು:

ನೀವು ನಿಮ್ಮ ಪ್ರೀತಿಪಾತ್ರರಿಗೆ ಪರಿಮಳಯುಕ್ತ ಅಥವಾ ಸಾರಭೂತ ತೈಲ ಡಿಫ್ಯೂಸರ್‌ಗಳನ್ನು ಉಡುಗೊರೆಯಾಗಿ ನೀಡಬಹುದು. ಲ್ಯಾವೆಂಡರ್, ಗುಲಾಬಿ ಮತ್ತು ಶ್ರೀಗಂಧದಂತಹ ಪರಿಮಳಗಳು ಹಿತವಾದ ವಾತಾವರಣವನ್ನು ಸೃಷ್ಟಿಸಬಹುದು. ಇಂತಹ ಪರಿಮಳಯುಕ್ತ ಕ್ಯಾಂಡಲ್‌ಗಳನ್ನು ಗಿಫ್ಟ್‌ ಮಾಡಬಹುದು.

ಪರ್ಸ್, ವಾಲೆಟ್ ಮತ್ತು ಫೋಟೋ ಫ್ರೇಮ್:

ನಿಮ್ಮ ಪ್ರೀತಿಪಾತ್ರರಿಗೆ ನೀವು ಪರ್ಸ್‌, ವಾಲೆಟ್‌ಗಳನ್ನು ಕೂಡ ಗಿಫ್ಟ್‌ ಮಾಡಬಹುದು. ಇಲ್ಲದಿದ್ದರೆ ಸುಂದರವಾದ ಫೋಟೋ ಫ್ರೇಮ್ ಅನ್ನು ಉಡುಗೊರೆಯಾಗಿ ನೀಡಬಹುದು.

ಕಿಚನ್‌ ಕಂಟೈನರ್:‌

ಅಡುಗೆ ಮಾಡಲು ಇಷ್ಟಪಡುವ ಸ್ನೇಹಿತರು ಅಥವಾ ಸಂಬಂಧಿಕರಿಗೆ ನೀವು ಸಣ್ಣ ಮಸಾಲೆ ಡಬ್ಬಿಗಳು ಅಥವಾ ಇನ್ನಿತರೆ ಪುಟ್ಟ ಕ್ಯೂಟ್‌ ಕಿಚನ್‌ ಐಟಂಗಳನ್ನು ಗಿಫ್ಟ್‌ ಮಾಡಬಹುದು. ಇದು ಕೂಡ ಗಿಫ್ಟ್‌ ನೀಡಲು ಉತ್ತಮ ಆಯ್ಕೆಯಾಗಿದೆ.

ಸೆಣಬಿನ ಚೀಲಗಳು ಮತ್ತು ಬಟ್ಟೆ ಚೀಲಗಳು:

ನೀವು ಪರಿಸರಸ್ನೇಹಿ ಮತ್ತು ಉಪಯುಕ್ತ ಉಡುಗೊರೆಯನ್ನು ನೀಡಲು ಬಯಸಿದರೆ, ಸೆಣಬು ಅಥವಾ ಬಟ್ಟೆಯ ಚೀಲಗಳನ್ನು ಗಿಫ್ಟ್‌ ಮಾಡಬಹುದು. ಇವು ಪ್ಲಾಸ್ಟಿಕ್ ಚೀಲ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಈ ಬಾರಿಯ ದೀಪಾವಳಿಗೆ ತಯಾರಿಸಿ ಮೈಸೂರ್‌ ಪಾಕ್‌ ರುಚಿ ನೀಡೋ ಸ್ಪೆಷಲ್‌ ಕ್ಯಾರೆಟ್‌ ಪಾಯಸ

ಡ್ರೈಫ್ರೂಟ್‌ ಬಾಕ್ಸ್:

ಸಾಮಾನ್ಯವಾಗಿ ದೀಪಾವಳಿ ಹಬ್ಬದಂದು ದೀಪಾವಳಿಯಂದು ಸ್ವೀಟ್‌ ಬಾಕ್ಸ್‌ಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಆದರೆ ಅತಿಯಾಗಿ ಸ್ವೀಟ್‌ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ನೀವು ನಿಮ್ಮ ಪ್ರೀತಿಪಾತ್ರರಿಗೆ ಡ್ರೈಫ್ರೂಟ್ಸ್‌ ಬಾಕ್ಸ್‌ಗಳನ್ನು ಗಿಫ್ಟ್‌ ಆಗಿ ನೀಡಬಹುದು.

ಸೆಲ್ಫ್‌ಕೇರ್‌ ಉತ್ಪನ್ನಗಳು:

ಸಾಮಾನ್ಯವಾಗಿ ದೀಪಾವಳಿ ಹಬ್ಬಕ್ಕೆ ಬಟ್ಟೆಯನ್ನು ಉಡುಗೊರೆಯಾಗಿ ನೀಡುತ್ತಾರೆ. ಬಟ್ಟೆಯ ಜೊತೆಗೆ ಸೆಲ್ಫ್‌ಕೇರ್‌ ಉತ್ಪನ್ನಗಳನ್ನು ಸಹ ಗಿಫ್ಟ್‌ ಮಾಡಬಹುದು. ಹೌದು ಪರಿಮಳಯುಕ್ತ, ಸೋಪ್, ಬಾಡಿ ಲೋಷನ್, ಪರ್ಫ್ಯೂಮ್‌ ಇಲ್ಲವೆ ಮೇಕಪ್‌ ಕಿಟ್‌ ಇವೆಲ್ಲವನ್ನೂ ಗಿಫ್ಟ್‌ ಮಾಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us