AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Deepavali 2026: ಈ ಬಾರಿಯ ದೀಪಾವಳಿಗೆ ತಯಾರಿಸಿ ಮೈಸೂರ್‌ ಪಾಕ್‌ ರುಚಿ ನೀಡೋ ಸ್ಪೆಷಲ್‌ ಕ್ಯಾರೆಟ್‌ ಪಾಯಸ

ಸಿಹಿ ತಿನಿಸು ಇಲ್ಲದೆ ಹಬ್ಬಗಳು ಪೂರ್ಣ ಆಗೋದೇ ಇಲ್ಲ. ಅದಕ್ಕಾಗಿ ಹಬ್ಬದ ಸಮಯದಲ್ಲಿ ಸಿಹಿ ತಿನಿಸುಗಳನ್ನು ಖರೀದಿಸುತ್ತಾರೆ, ಇನ್ನೂ ಕೆಲವರು ಪಾಯಸ, ಲಡ್ಡು ಇತ್ಯಾದಿ ಸಿಹಿ ತಿನಿಸುಗಳನ್ನು ಮನೆಯಲ್ಲಿಯೇ ತಯಾರಿಸುತ್ತಾರೆ. ಇನ್ನೇನೂ ದೀಪಾವಳಿ ಹಬ್ಬ ಬರುತ್ತಿದ್ದು, ಈ ಹಬ್ಬದಲ್ಲಿ ಏನಾದ್ರೂ ವಿಶೇಷವಾದ ಸಿಹಿ ಖಾದ್ಯವನ್ನು ತಯಾರಿಸಲು ಬಯಸಿದರೆ ಕ್ಯಾರೆಟ್‌ ಪಾಯಸವನ್ನು ತಯಾರಿಸಿ. ಇದು ಮೈಸೂರ್‌ ಪಾಕ್‌ ಟೇಸ್ಟ್‌ ನೀಡೋ ಸ್ಪೆಷಲ್‌ ಪಾಯಸ. ಇದರ ಈಸಿ ರೆಸಿಪಿ ಇಲ್ಲಿದೆ ನೋಡಿ.

Deepavali 2026: ಈ ಬಾರಿಯ ದೀಪಾವಳಿಗೆ ತಯಾರಿಸಿ ಮೈಸೂರ್‌ ಪಾಕ್‌ ರುಚಿ ನೀಡೋ ಸ್ಪೆಷಲ್‌ ಕ್ಯಾರೆಟ್‌ ಪಾಯಸ
ಕ್ಯಾರೆಟ್‌ ಪಾಯಸImage Credit source: Unsplash
ಮಾಲಾಶ್ರೀ ಅಂಚನ್​
|

Updated on:Oct 29, 2026 | 5:44 PM

Share

ಪ್ರತಿ ಹಬ್ಬದ ಸಮಯದಲ್ಲೂ ಮನೆಯಲ್ಲಿ ಸಿಹಿ ತಿನಿಸುಗಳನ್ನು (Sweets) ತಯಾರಿಸಲಾಗುತ್ತದೆ. ಹೆಚ್ಚಿನವರು ಪಾಯಸವನ್ನು ತಯಾರಿಸುತ್ತಾರೆ. ಸಾಮಾನ್ಯವಾಗಿ ಶ್ಯಾವಿಗೆ, ಬೇಳೆ, ಗೋಧಿ ಪಾಯಸವನ್ನು ಮಾಡುತ್ತಾರೆ. ಕೆಲವರು ಆರೋಗ್ಯಕರವಾಗಿರಬೇಕೆಂದು ಕ್ಯಾರೆಟ್‌ ಪಾಯಸವನ್ನು ಕೂಡ ತಯಾರಿಸುತ್ತಾರೆ. ನೀವು ಕೂಡ ಕ್ಯಾರೆಟ್‌ ಪಾಯಸದ ರುಚಿ ನೋಡಿರುತ್ತೀರಿ ಅಲ್ವಾ, ಆದ್ರೆ ಎಂದಾದ್ರೂ ಮೈಸೂರ್‌ ಪಾಕ್‌ ಟೇಸ್ಟ್‌ ನೀಡೋ ಕ್ಯಾರೆಟ್‌ ಪಾಯವನ್ನು ಸವಿದಿದ್ದೀರಾ? ಈ ಸ್ಪೆಷಲ್‌ ಪಾಯಸವನ್ನು ಈಸಿಯಾಗಿ ಮನೆಯಲ್ಲಿಯೇ ತಯಾರಿಸಬಹುದು. ಈ ರೆಸಿಪಿಯ ಪೂರ್ಣ ವಿವರ ಇಲ್ಲಿದೆ.

ಮೈಸೂರ್‌ ಪಾಕ್‌ ರುಚಿ ನೀಡೋ ಕ್ಯಾರೆಟ್‌ ಪಾಯಸ:

ಈ ಬಾರಿಯ ದೀಪಾವಳಿ ಹಬ್ಬಕ್ಕೆ ಏನಾದ್ರೂ ವಿಶೇಷ ಸಿಹಿ ಖಾದ್ಯವನ್ನು ತಯಾರಿಸುವ ಪ್ಲಾನ್‌ ಇದ್ರೆ ಸ್ಪೆಷಲ್‌ ಕ್ಯಾರೆಟ್‌ ಪಾಯಸ ತಯಾರಿಸಿ. ಇದು ಬರೀ ಪಾಯಸವಲ್ಲ, ಮೈಸೂರ್‌ ಪಾಕ್‌ ಟೇಸ್ಟ್‌ ನೀಡೋ ಸ್ಪೆಷಲ್‌ ಪಾಯಾಸ. ಕ್ಯಾರೆಟ್‌ ಪಾಯಸಕ್ಕೆ ಮೈಸೂರ್‌ ಪಾಕ್‌ ರುಚಿ ನೀಡುವ ಆ ಸೀಕ್ರೆಟ್‌ ಇಂಗ್ರಿಡಿಯಂಟ್‌ ಯಾವುದೆಂದರೆ ಕಡ್ಲೆ ಹಿಟ್ಟು. ಕ್ಯಾರೆಟ್‌ ಪಾಯಸಕ್ಕೆ ಕಡ್ಲೆ ಹಿಟ್ಟು ಸೇರಿಸುವುದರಿಂದ ಪಾಯಸದ ಟೇಸ್ಟ್‌ ಮೈಸೂರ್‌ ಪಾಕ್‌ನಂತಿರುತ್ತದೆ. ಈ ಒಂದು ಸ್ಪೆಷಲ್‌ ರೆಸಿಪಿಯನ್ನು shimogakitchen.recipes ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ರೆಸಿಪಿ ವಿಡಿಯೋ ಇಲ್ಲಿದೆ ನೋಡಿ:‌

ಕ್ಯಾರೆಟ್‌ ಪಾಯಸ ಮಾಡಲು ಬೇಕಾಗಿರುವ ಸಾಮಾಗ್ರಿ:

ಕ್ಯಾರೆಟ್‌, ಬಾದಾಮಿ, ಹಾಲು, ತುಪ್ಪ, ಗೋಡಂಬಿ, ಕಡ್ಲೆಹಿಟ್ಟು, ಸಕ್ಕರೆ, ಏಲಕ್ಕಿ ಪುಡಿ, ಕೇಸರಿ (ಐಚ್ಛಿಕ)

ಇದನ್ನೂ ಓದಿ: ಹಬ್ಬದ ಕ್ಲೀನಿಂಗ್‌ ಸಮಯದಲ್ಲಿ ಈ ವಸ್ತುಗಳನ್ನು ಮನೆಯಿಂದ ಬಿಸಾಡಿ

ಕ್ಯಾರೆಟ್‌ ಪಾಯಸ ಮಾಡುವ ವಿಧಾನ:

  • ಮೊದಲಿಗೆ ಎರಡು ಕ್ಯಾರೆಟ್‌ ಕಟ್‌ ಮಾಡಿ, ಅದಕ್ಕೆ ಎಂಟು ಬಾದಾಮಿ ಹಾಗೂ ಒಂದು ಲೋಟ ಹಾಲನ್ನು ಸೇರಿಸಿ, ಈ ಮಿಶ್ರಣವನ್ನು ಕುಕ್ಕರ್‌ನಲ್ಲಿ ಮೂರು ವಿಸಿಲ್‌ ಬರುವವರೆಗೆ ಚೆನ್ನಾಗಿ ಬೇಯಿಸಿಕೊಳ್ಳಿ.
  • ನಂತರ ಆ ಬೆಂದ ಬಾದಮಿಯ ಸಿಪ್ಪೆ ಬಿಡಿಸಿ, ಬೆಂದ ಬಾದಾಮಿ, ಕ್ಯಾರೆಟ್‌ ಅನ್ನು ಕ್ಯಾರೆಟ್‌ ಬೇಯಿಸಿದ ಹಾಲಿನೊಂದಿದೆ ಸೇರಿಸಿ ನುಣ್ಣಗೆ ರುಬ್ಬಿ, ನೈಸ್‌ ಪೇಸ್ಟ್‌ ಮಾಡಿಟ್ಟುಕೊಳ್ಳಬೇಡಿ.
  • ಈಗ ಒಂದು ಬಾಣಲೆಗೆ ಎರಡು ಸ್ಪೂನ್‌ ತುಪ್ಪ ಹಾಕಿ, ಅದರಲ್ಲಿ ಸ್ವಲ್ಪ ಗೋಡಂಬಿಯನ್ನು ಫ್ರೈ ಮಾಡಿಕೊಂಡು ಅದನ್ನು ಪಕ್ಕಕ್ಕೆ ಇಟ್ಟುಬಿಡಿ. ಈಗ ಅದೇ ಬಾಣಲೆಗೆ ಎರಡು ಸ್ಪೂನ್ ಕಡ್ಲೆ ಹಿಟ್ಟು ಹಾಕಿ ಮಧ್ಯಮ ಉರಿಯಲ್ಲಿ ಹಸಿ ವಾಸನೆ ಹೋಗುವ ವರೆಗೆ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
  • ಕಡ್ಲೆಹಿಟ್ಟಿನ ಹಸಿ ವಾಸನೆ ಹೋದ ಬಳಿಕ ಅದಕ್ಕೆ ಮೊದಲೇ ರುಬ್ಬಿಟ್ಟುಕೊಂಡ ಕ್ಯಾರೆಟ್‌ ಪೇಸ್ಟ್‌ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ ಜೊತೆಗೆ ಅದಕ್ಕೆ ಉಳಿದಿರುವ ಹಾಲನ್ನು ಕೂಡ ಸೇರಿಸಿಕೊಳ್ಳಿ.
  • ಇನ್ನೂ ಸಿಹಿಗೆ ತಕ್ಕಂತೆ ಸಕ್ಕರೆ ಸೇರಿಸಿ ಚೆನ್ನಾಗಿ ಕುದಿಸಿಕೊಳ್ಳಿ. ಕೊನೆಗೆ ಕೇಸರಿ ದಳ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿದರೆ ಮೈಸೂರ್‌ ಪಾಕ್‌ ಟೇಸ್ಟ್‌ ನೀಡೋ ಸ್ಪೆಷಲ್‌ ಕ್ಯಾರೆಟ್‌ ಪಾಯಸ ಸವಿಯಲು ಸಿದ್ಧ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:44 pm, Thu, 29 October 26

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More