Power Of Pets: ಮಾನಸಿಕ ಆರೋಗ್ಯಕ್ಕೆ ಸಾಕು ಪ್ರಾಣಿಗಳೇ ಉತ್ತಮ ಮದ್ದು ಹೇಗೆ? ಇಲ್ಲಿದೆ ನೋಡಿ

ಸಾಕುಪ್ರಾಣಿಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಬಹುತೇಕರು ಸಾಕುಪ್ರಾಣಿಗಳನ್ನು ಮನೆಯಲ್ಲಿ ಸಾಕಲು ಇಷ್ಟಪಡುತ್ತಾರೆ. ಆದರೆ ನಿಮಗೆ ತಿಳಿದಿದೆಯೇ, ಸಾಕುಪ್ರಾಣಿಗಳ ಜೊತೆ ಸಮಯ ಕಳೆಯುವುದು ಹಾಗೂ ಅವುಗಳನ್ನು ಮುದ್ದಾಡುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಸಾಕುಪ್ರಾಣಿಗಳನ್ನು ಮುದ್ದಾವುದರಿಂದ ದೊರಕುವ ಆರೋಗ್ಯ ಪ್ರಯೋಜಗಳ ಕುರಿತ ಮಾಹಿತಿ ಇಲ್ಲಿದೆ.

Power Of Pets: ಮಾನಸಿಕ ಆರೋಗ್ಯಕ್ಕೆ ಸಾಕು ಪ್ರಾಣಿಗಳೇ ಉತ್ತಮ ಮದ್ದು ಹೇಗೆ? ಇಲ್ಲಿದೆ ನೋಡಿ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 12, 2023 | 6:27 PM

ಅನೇಕ ಜನರು ಸಾಕು ಪ್ರಾಣಿಗಳನ್ನು ತುಂಬಾ ಪ್ರೀತಿಸುತ್ತಾರೆ. ಆದ್ದರಿಂದ ಅವರು ತಮ್ಮ ಮನೆಯಲ್ಲಿ ನಾಯಿ, ಬೆಕ್ಕು ಮುಂತಾದ ಸಾಕು ಪ್ರಾಣಿಗಳನ್ನು ಸಾಕುವ ಹವ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಆ ಸಾಕು ಪ್ರಾಣಿಗಳು ತುಂಟಾಟವಾಡುತ್ತಾ ಮನೆ ಹಾಗೂ ಮನೆಯವರ ಮನಸ್ಸನ್ನು ಧನಾತ್ಮಕವಾಗಿರಿಸುತ್ತದೆ. ಸಾಕು ಪ್ರಾಣಿಗಳು ಮನೆಯಲ್ಲಿ ಧನಾತ್ಮಕ ವಾತಾವರಣವನ್ನು ನಿರ್ಮಿಸುವುದು ಮಾತ್ರವಲ್ಲದೆ, ಪ್ರಾಣಿಗಳೊಂದಿಗೆ ಆಟವಾಡುತ್ತಾ, ಮುದ್ದಾಡುತ್ತಾ ಅವುಗಳೊಂದಿಗೆ ಸಮಯ ಕಳೆಯುವುಯುವುದು ಬಹಳಷ್ಟು ಪ್ರಯೋಜನಕಾರಿಯಾಗಿದೆ. ಅಲ್ಲದೆ ಅನೇಕ ಅಧ್ಯಯನಗಳು ನಾಯಿ, ಬೆಕ್ಕುಗಳನ್ನು ಸಾಕುವುದು ನಮ್ಮ ಮಾನಸಿಕ ಆರೋಗ್ಯಕ್ಕೆ ತುಂಬಾ ಪ್ರಯೋಜಕಾರಿ ಎಂಬುದನ್ನು ತೋರಿಸಿಕೊಟ್ಟಿದೆ. ಅಷ್ಟಕ್ಕೂ ಸಾಕುಪ್ರಾಣಿಗಳನ್ನು ಮುದ್ದಾಡುವುದರಿಂದ ಸಿಗುವ ಆರೋಗ್ಯ ಲಾಭಗಳೇನು ಎಂಬುದನ್ನು ಇಂದು ತಿಳಿಯೋಣ.

ಸಾಕು ಪ್ರಾಣಿಗಳನ್ನು ಏಕೆ ಮುದ್ದಾಡಬೇಕು:

ಸಾಕುಪ್ರಾಣಿಗಳು ನಮ್ಮ ಜೀವನದ ಒಂಟಿತನವನ್ನು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಿಮ್ಮ ಜೀವನದಲ್ಲಿನ ಬೇಸರವನ್ನು ತೊಡೆದುಹಾಕಲು ಮತ್ತು ನಿಮ್ಮನ್ನು ಸಂತೋಷವಾಗಿರಲು ಸಹಾಯ ಮಾಡುತ್ತದೆ. ಮತ್ತು ಇದು ನಿಮ್ಮ ದೈನಂದಿನ ಜೀವನಕ್ಕೆ ಹೊಸ ಚೈತನ್ಯವನ್ನು ತರುತ್ತದೆ. ಅಲ್ಲದೆ ಸಾಕುಪ್ರಾಣಿಗಳ ಜೊತೆ ಸಮಯ ಕಳೆಯುವುದರಿಂದ ಒತ್ತಡವು ಕಡಿಮೆಯಾಗಿ ನಿಮ್ಮ ಮನಸ್ಥಿತಿಯು ಸುಧಾರಣೆಯಾಗುತ್ತದೆ. ಸಾಕುಪ್ರಾಣಿಗಳನ್ನು ಮುದ್ದಾಡುವುದರಿಂದ ದೊರಕುವ ಆರೋಗ್ಯ ಪ್ರಯೋಜನಗಳೆಂದರೆ:

ಸಾಕು ಪ್ರಾಣಿಗಳನ್ನು ಮುದ್ದಾಡುವುದರಿಂದ ಆತಂಕವನ್ನು ಹೋಗಲಾಡಿಸಬಹುದು:

ಆತಂಕವು ಸಾಮಾನ್ಯ ಮಾನಸಿಕ ಆರೋಗ್ಯ ಸಮಸ್ಯೆಯಾಗಿದೆ. ನೀವು ನಿರಂತರವಾಗಿ ಯಾವುದೇ ಒಂದು ವಿಷಯದ ಬಗ್ಗೆ ಅತಿಯಾಗಿ ಯೋಚಿಸಿದಾಗ ಮತ್ತು ನಿರಂತರವಾಗಿ ಅದೇ ಚಿಂತೆಯಲ್ಲಿದ್ದಾಗ ಈ ಆತಂಕವು ಸಾಮಾನ್ಯವಾಗಿ ಸಂಭವಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇಂತಹ ಸಮಯದಲ್ಲಿ ನೀವು ಸಾಕುಪ್ರಾಣಿಗಳೊಂದಿಗೆ ಸಮಯ ಕಳೆಯುತ್ತಾ, ಅವುಗಳನ್ನು ಮುದ್ದಾಡಬೇಕು. ಏಕೆಂದರೆ ಸಾಕುಪ್ರಾಣಿಗಳನ್ನು ಮುದ್ದಾಡುವುದರಿಂದ ಡೋಪಮೈನ್ ಮತ್ತು ಸಿರೋಟೋನಿನ್ ಎಂಬ ಹಾರ್ಮೋನು ನಮ್ಮ ದೇಹದಲ್ಲಿ ಹೆಚ್ಚು ಉತ್ಪತ್ತಿಯಾಗುತ್ತದೆ. ಈ ಹಾರ್ಮೋನುಗಳು ನಮ್ಮನ್ನು ಸಂತೋಷವಾಗಿರುವಂತೆ ಮಾಡುತ್ತದೆ. ಮತ್ತು ಇದು ಆತಂಕವನ್ನು ತೊಡೆದುಹಾಕಲು ಸಹಕಾರಿಯಾಗಿದೆ.

ಒತ್ತಡವನ್ನು ನಿಭಾಯಿಸಲು ಸಹಾಯ ಮಾಡುತ್ತದೆ:

ಕೆಲಸ ಅಥವಾ ಕೌಟುಂಬಿಕ ಕಾರಣಗಳ ಒತ್ತಡಗಳಿರಲಿ, ಈ ಒತ್ತಡಗಳು ಮನುಷ್ಯನನ್ನು ಮಾನಸಿಕವಾಗಿ ಕುಗ್ಗಿಸುತ್ತದೆ. ಎಷ್ಟೇ ಒತ್ತಡವಿದ್ದರೂ ಸ್ವಲ್ಪ ಬಿಡುವು ಮಾಡಿಕೊಂಡು ನಿಮ್ಮ ಸಾಕುಪ್ರಾಣಿಗಳ ಜೊತೆಗೆ ಸಮಯವನ್ನು ಕಳೆಯಿರಿ. ಏಕೆಂದರೆ ಇದು ನಿಮ್ಮ ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಬ್ರಿಟಿಷ್ ಕೊಲಂಬಿಯಾ ಒಕಾನಗನ್ ವಿಶ್ವವಿದ್ಯಾನಿಲಯದ ಅಧ್ಯಯವೊಂದು ನಾಯಿಯನ್ನು ಮುದ್ದಾಡುವುದು ವ್ಯಕ್ತಿಯ ಯೋಗಕ್ಷೇಮಕ್ಕೆ ಅನೇಕ ಪ್ರಯೋಜನವನ್ನು ನೀಡುತ್ತದೆ ಮತ್ತು ಇದು ಒತ್ತಡವನ್ನು ಕೂಡಾ ಕಡಿಮೆ ಮಾಡುತ್ತದೆ ಎಂದು ಸಾಬೀತುಪಡಿಸಿದೆ.

ಸಾಕು ಪ್ರಾಣಿಗಳನ್ನು ಮುದ್ದಾಡುವುದರಿಂದ ಖಿನ್ನತೆಯನ್ನು ಕಡಿಮೆ ಮಾಡಬಹುದು:

ನಿಮ್ಮ ಸಾಕುಪ್ರಾಣಿಗಳೊಂದಿಗೆ ನೀವು ಸಮಯ ಕಳೆಯುವಾಗ, ನೀವು ಅವುಗಳೊಂದಿದೆ ಆಟವಾಡುತ್ತಾ, ತುಂಟಾಟ ಮಾಡುತ್ತಾ, ಮುದ್ದಾಡುತ್ತಾ ಸಮಯವನ್ನು ಕಳೆಯುತ್ತೀರಿ. ಹೀಗೆ ಪ್ರಾಣಿಗಳ ಜೊತೆ ಹೆಚ್ಚು ಸಮಯ ಕಳೆದಾಗ ನಮ್ಮ ಮೆದುಳಿನಲ್ಲಿ ಸಿರೋಟೋನಿನ್ ಎಂಬ ಹಾರ್ಮೋನು ಉತ್ಪತ್ತಿಯಾಗುತ್ತದೆ. ಇದು ನೈಸರ್ಗಿಕವಾಗಿ ಖಿನ್ನತೆಯನ್ನು ಶಮನಗೊಳಿಸಲು ಸಹಕಾರಿಯಾಗಿದೆ.

ಇದನ್ನೂ ಓದಿ: Cancer In Pets: ಈ ಲಕ್ಷಣಗಳು ನಿಮ್ಮ ಸಾಕು ಪ್ರಾಣಿಗಳಲ್ಲಿ ಕಂಡುಬಂದರೆ ಎಚ್ಚರವಹಿಸಿ

ಹೃದಯಾಘಾತ ಅಥವಾ ಪಾರ್ಶ್ವವಾಯುವಿನ ಅಪಾಯವನ್ನು ಕಡಿಮೆ ಮಾಡಬಹುದು:

ಸಾಕುಪ್ರಾಣಿಗಳ ಜೊತೆ ಸಮಯವನ್ನು ಕಳೆಯುವುದರಿಂದ ನೀವು ಹೆಚ್ಚು ಕ್ರೀಯಾಶೀಲರಾಗಿರಬಹುದು ಮತ್ತು ಸಂತೋಷವಾಗಿರಬಹುದು. ವಾಸ್ಕುಲರ್ ಆಂಡ್ ಇಂಟರ್ವೆನ್ಷನ್ ನ್ಯೂರಾಲಜಿ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾದ ಅಧ್ಯಯನೊಂದು ಬೆಕ್ಕನ್ನು ಸಾಕುವುದು ಮತ್ತು ಅವುಗಳ ಜೊತೆ ಸಮಯ ಕಳೆಯುವುದರಿಂದ ಒಬ್ಬ ವ್ಯಕ್ತಿಯು ಹೃದಯಾಘಾತ ಮತ್ತು ಪಾರ್ಶ್ವವಾಯುಗೆ ತುತ್ತಾಗಿ ಮರಣ ಹೊಂದುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದೆ.

ಧನಾತ್ಮಕತೆ:

ನೀವು ದುಃಖ ಮತ್ತು ಒತ್ತಡದಲ್ಲಿದ್ದಾಗ ಸಾಕುಪ್ರಾಣಿಗಳ ಜೊತೆಗೆ ಆಟವಾಡುತ್ತಾ, ಅವುಗಳೊಂದಿಗೆ ಸಮಯ ಕಳೆದಾದ ಅದು ನಿಮ್ಮಲ್ಲಿ ಧನಾತ್ಮಕ ಮನಸ್ಥಿತಿಯನ್ನು ರೂಪಿಸುತ್ತದೆ. ಮನೆಯಲ್ಲಿ ಸಾಕುಪ್ರಾಣಿಗಳಿದ್ದರೆ ಆ ಮನೆಯ ವಾತಾವರಣವು ಆಹ್ಲಾದಕರವಾಗಿರುತ್ತದೆ ಎಂದು ಅನೇಕ ಸಂಶೋಧನೆಗಳು ಹೇಳಿವೆ. ಅಲ್ಲದೆ ಸಾಕುಪ್ರಾಣಿಗಳು ವ್ಯಕ್ತಿಯ ಒಳಗಿನ ನಕಾರಾತ್ಮಕತೆಯನ್ನು ತೆಗೆದುಹಾಕುತ್ತದೆ, ಒತ್ತಡ ಮತ್ತು ಖಿನ್ನತೆಯನ್ನು ಶಮನಗೊಳಿಸುತ್ತದೆ.

ಮನಸ್ಥಿತಿಯನ್ನು ಸುಧಾರಿಸುತ್ತದೆ:

ಪ್ರಾಣಿಗಳನ್ನು ಸಾಕುವುದು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ಎಲ್ಲಾ ಚಿಂತೆ ಮತ್ತು ಒತ್ತಡಗಳನ್ನು ನಿವಾರಿಸಿ ನಮ್ಮ ಮನಸ್ಸನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆರೋಗ್ಯ ವರದಿಗಳ ಪ್ರಕಾರ, ಸಾಕುಪ್ರಾಣಿಗಳ ಬಳಿ ಇದ್ದಾಗ ನಮ್ಮ ದೇಹದಲ್ಲಿ ಒತ್ತಡವನ್ನು ಉಂಟುಮಾಡುವ ಕಾರ್ಟಿಸೋಲ್ ಹಾರ್ಮೋನಿನ ಉತ್ಪಾದನೆ ಕಡಿಮೆ ಇರುತ್ತದೆ. ಅದೇ ಸಮಯದಲ್ಲಿ ಸಂತೋಷದ ಹಾರ್ಮೋನುಗಳಾದ ಆಕ್ಸಿಟೋಸಿನ್ ಮತ್ತು ಎಂಡಾರ್ಫಿನ್ ಹೆಚ್ಚು ಉತ್ಪಾದನೆಯಾಗುತ್ತದೆ. ಇದು ನಿಮ್ಮನ್ನು ಸಂತೋಷವಾಗಿರುವಂತೆ ಮಾಡುತ್ತದೆ. ಇದಲ್ಲದೆ ಸಾಕುಪ್ರಾಣಿಗಳು ನಮ್ಮ ಮನಸ್ಥಿತಿಯನ್ನು ಹಾಗೂ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಕಾರಿಯಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ