ಪಟಾಕಿ ಸಿಡಿಸುವಾಗ ಸುಟ್ಟ ಗಾಯವಾದರೆ ಏನು ಮಾಡಬೇಕು? ಏನು ಮಾಡಬಾರದು?

|

Updated on: Nov 07, 2023 | 3:14 PM

ದೀಪಾವಳಿಯಲ್ಲಿ ಪಟಾಕಿ ಹೊಡೆಯುವಾಗ ಸುಟ್ಟ ಗಾಯಗಳಾಗುವ ಸಾಧ್ಯತೆಗಳು ಹೆಚ್ಚು. ನಾವು ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಕೆಲವೊಮ್ಮೆ ಗಾಯಗಳಾಗಿ ಬಿಡುತ್ತವೆ. ಪಟಾಕಿಯಿಂದ ಉಂಟಾಗುವ ಗಾಯಗಳಿಗೆ ಚಿಕಿತ್ಸೆ ನೀಡಲು ಅನುಸರಿಸಬೇಕಾದ ಕೆಲವು ಸಲಹೆಗಳು ಇಲ್ಲಿವೆ.

ಪಟಾಕಿ ಸಿಡಿಸುವಾಗ ಸುಟ್ಟ ಗಾಯವಾದರೆ ಏನು ಮಾಡಬೇಕು? ಏನು ಮಾಡಬಾರದು?
ಸುಟ್ಟ ಗಾಯ
Image Credit source: iStock
Follow us on

ದೀಪಾವಳಿಯು ಬೆಳಕಿನ ಹಬ್ಬ. ದೀಪಾವಳಿ ಎಂದಮೇಲೆ ಪಟಾಕಿ ಇರಲೇಬೇಕಲ್ಲ. ಆದರೆ, ಕೆಲವೊಮ್ಮೆ ಪಟಾಕಿಗಳನ್ನು ಸಿಡಿಸುವ ನಮ್ಮ ಉತ್ಸಾಹದಲ್ಲಿ ಅವು ಅಪಾಯಕಾರಿ ಎಂಬುದನ್ನು ಕೂಡ ನಾವು ಮರೆತುಬಿಡುತ್ತೇವೆ. ದೀಪಾವಳಿಯಲ್ಲಿ ಪಟಾಕಿ ಸಿಡಿಸುವಾಗ ನಿಮಗೆ ಅಥವಾ ನಿಮ್ಮ ಹತ್ತಿರವಿರುವ ಯಾರಿಗಾದರೂ ಸುಟ್ಟ ಗಾಯಗಳಾದರೆ ಆಗ ಏನು ಮಾಡಬೇಕು? ಏನು ಮಾಡಬಾರದು? ಎಂಬ ಬಗ್ಗೆ ನಿಮಗೆ ತಿಳಿದಿರುವುದು ಅಗತ್ಯ. ಸುಟ್ಟ ಗಾಯಗಳಾದಾಗ ಯಾವ ರೀತಿಯ ಪ್ರಥಮ ಚಿಕಿತ್ಸೆ ನೀಡಬೇಕು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ದೀಪಾವಳಿಯಲ್ಲಿ ಪಟಾಕಿ ಹೊಡೆಯುವಾಗ ಸುಟ್ಟ ಗಾಯಗಳಾಗುವ ಸಾಧ್ಯತೆಗಳು ಹೆಚ್ಚು. ನಾವು ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಕೆಲವೊಮ್ಮೆ ಗಾಯಗಳಾಗಿ ಬಿಡುತ್ತವೆ. ಪಟಾಕಿಗಳಲ್ಲಿ ಕಂಡುಬರುವ ಶಾಖ ಮತ್ತು ರಾಸಾಯನಿಕಗಳಿಂದ ಗಾಯದ ಪ್ರಮಾಣ ಹೆಚ್ಚಾಗಿರುತ್ತದೆ. ಮಕ್ಕಳಲ್ಲಿ ತೆಳ್ಳಗಿನ ಚರ್ಮ ಇರುವುದರಿಂದ ಮಕ್ಕಳಿಗೆ ಪಟಾಕಿಯಿಂದ ಗಾಯಗಳಾಗುವ ಸಾಧ್ಯತೆಗಳು ಹೆಚ್ಚು. ಪಟಾಕಿ ಸಿಡಿಸುವಾಗ ಎಷ್ಟೇ ಎಚ್ಚರಿಕೆ ವಹಿಸಿದರೂ ಗಾಯಗಳು ಉಂಟಾಗುತ್ತಲೇ ಇರುತ್ತವೆ.

ಇದನ್ನೂ ಓದಿ: ಹೊಕ್ಕಳ ಸುತ್ತ ಎಣ್ಣೆ ಹಚ್ಚುವುದರಿಂದಾಗುವ 5 ಪ್ರಯೋಜನಗಳಿವು

ದೀಪಾವಳಿಯ ಸಮಯದಲ್ಲಿ ಪಟಾಕಿಯಿಂದ ಉಂಟಾಗುವ ಗಾಯಗಳಿಗೆ ಚಿಕಿತ್ಸೆ ನೀಡಲು ಅನುಸರಿಸಬೇಕಾದ ಕೆಲವು ಸಲಹೆಗಳು ಇಲ್ಲಿವೆ:

ಬಟ್ಟೆಗಳನ್ನು ತೆಗೆದುಹಾಕಿ:

ಪಟಾಕಿ ಸಿಡಿಸುವಾಗ ಬೆಂಕಿ ತಗುಲಿದರೆ ತಕ್ಷಣ ಬಟ್ಟೆ, ನಿಮ್ಮ ಮೈಮೇಲಿನ ಆಭರಣ, ಬೆಲ್ಟ್​ಗಳನ್ನೆಲ್ಲವನ್ನೂ ತೆಗೆದುಹಾಕಿ. ಅವು ಸುಟ್ಟ ಚರ್ಮಕ್ಕೆ ಅಂಟಿಕೊಳ್ಳಬಹುದು. ಆದ್ದರಿಂದ, ಅವುಗಳನ್ನು ಆದಷ್ಟು ಬೇಗ ತೆಗೆದುಹಾಕಿ. ಒಂದುವೇಳೆ ಸುಟ್ಟ ಜಾಗಕ್ಕೆ ಬಟ್ಟೆ ಅಂಟಿಕೊಂಡಿದ್ದರೆ ಅದನ್ನು ನೀವೇ ತೆಗೆದುಹಾಕಲು ಪ್ರಯತ್ನಿಸಬೇಡಿ.

ತಣ್ಣೀರಿನಿಂದ ತೊಳೆಯಿರಿ:

ನೀವು ಸುಟ್ಟ ಗಾಯದಿಂದ ಬಳಲುತ್ತಿದ್ದರೆ ಗಾಯವಾದ ಜಾಗವನ್ನು ತಣ್ಣೀರಿನಿಂದ ತೊಳೆಯಿರಿ. ಆ ಜಾಗಕ್ಕೆ ಐಸ್ ಇಡಬೇಡಿ. ಐಸ್ ಇಟ್ಟರೆ ನೋವು ಇನ್ನಷ್ಟು ಹೆಚ್ಚಾಗುತ್ತದೆ. ಅದರ ಬದಲು ನಲ್ಲಿಯ ಕೆಳಗೆ ಕೈಗಳನ್ನು ಇಟ್ಟುಕೊಳ್ಳಿ. ಸುಟ್ಟ ಗಾಯವನ್ನು ತಂಪಾಗಿಸುವುದರಿಂದ ನೋವು, ಊತ ಮತ್ತು ಗಾಯದ ಅಪಾಯ ಕಡಿಮೆಯಾಗುತ್ತದೆ.

ಬ್ಯಾಂಡೇಜ್ ಹಾಕಿಕೊಳ್ಳಿ:

ಗಾಯವಾದ ಜಾಗಕ್ಕೆ ಬ್ಯಾಂಡೇಜ್ ಕಟ್ಟಿಕೊಳ್ಳಿ. ಗಾಯವಾದ ಜಾಗದ ಮೇಲೆ ಬ್ಯಾಂಡೇಜ್ ಅನ್ನು ಸಡಿಲವಾಗಿ ಕಟ್ಟಿಕೊಳ್ಳಿ. ಗಾಯವನ್ನು ಮುಚ್ಚಿಟ್ಟರೆ ಅದು ವೇಗವಾಗಿ ಗುಣವಾಗುತ್ತದೆ.

ಇದನ್ನೂ ಓದಿ: ದೀಪಾವಳಿ ಹಬ್ಬದಲ್ಲಿ ಮಧುಮೇಹಿಗಳು ಡಯಾಬಿಟಿಸ್ ನಿಯಂತ್ರಿಸುವುದು ಹೇಗೆ?

ಮಾಯಿಶ್ಚರೈಸರ್ ಲೋಷನ್ ಹಚ್ಚಿಕೊಳ್ಳಿ:

ಗಾಯವಾದ ಜಾಗದ ಮೇಲೆ ಮಾಯಿಶ್ಚರೈಸಿಂಗ್ ಲೋಷನ್ ಹಚ್ಚಿಕೊಳ್ಳಿ. ಇದು ಚರ್ಮ ಒಣಗುವುದನ್ನು ತಡೆಯುತ್ತದೆ. ಸುಟ್ಟ ಜಾಗದಲ್ಲಿ ಗುಳ್ಳೆಗಳು ಉಂಟಾಗುವ ಸಾಧ್ಯತೆಯನ್ನು ಸಹ ಕಡಿಮೆ ಮಾಡುತ್ತದೆ. ವೈದ್ಯರನ್ನು ಕೇಳದೆ ಯಾವುದೇ ಕ್ರೀಮ್, ಲೋಷನ್ ಅಥವಾ ಉತ್ಪನ್ನವನ್ನು ಬಳಸಬೇಡಿ. ಅಲ್ಲದೆ, ವೈದ್ಯರು ಸೂಚಿಸಿದ ನಂತರವೇ ನೋವು ನಿವಾರಕಗಳನ್ನು ಬಳಸಬೇಕು.

ಸುಟ್ಟ ಕೈ ಅಥವಾ ಕಾಲನ್ನು ಎತ್ತರಕ್ಕೆ ಇರಿಸಿ:

ಸುಟ್ಟ ಭಾಗವನ್ನು ಸಾಮಾನ್ಯ ಮಟ್ಟಕ್ಕಿಂತ ಸ್ವಲ್ಪ ಎತ್ತರದಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಆ ಭಾಗದಲ್ಲಿ ಊತ ಕಡಿಮೆಯಾಗುತ್ತದೆ. ಆದಷ್ಟೂ ಕೈ-ಕಾಲುಗಳನ್ನು ನೇರವಾಗಿ ಇಟ್ಟುಕೊಳ್ಳಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ