Relationship Tips: ಪ್ರೇಮಿಗಳಿಬ್ಬರೂ ಈ ಮಾತುಗಳನ್ನು ಅಪ್ಪಿ ತಪ್ಪಿಯೂ ಆಡಲೇಬೇಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 02, 2024 | 5:42 PM

ಯಾವುದೇ ಸಂಬಂಧವಿರಲಿ, ಈ ವೇಳೆಯಲ್ಲಿ ನಾವಾಡುವ ಒಂದೊಂದು ಮಾತುಗಳು ಭಿನ್ನಾಭಿಪ್ರಾಯಕ್ಕೆ ಕಾರಣವಾಗುತ್ತದೆ. ಅದರಲ್ಲಿ ಪ್ರೇಮ ಸಂಬಂಧದಲ್ಲಿ ಒಂದು ಕ್ಷಣ ಎಚ್ಚರ ತಪ್ಪು ಏನಾದರೂ ಮಾತಾಡಿ ಬಿಟ್ಟರೆ ಅಲ್ಲೇ ಬ್ರೇಕ್ ಆಗೋದು ಗ್ಯಾರಂಟಿ. ಹೀಗಾಗಿ ಪ್ರೇಮಿಗಳು ಪ್ರೀತಿ ಚಿಗುರೊಡೆದ ಆರಂಭದಲ್ಲಿಯೇ ಈ ಕೆಲವು ಮಾತುಗಳು ಬರದಂತೆ ಗಮನ ವಹಿಸಬೇಕು. ಈ ಕೆಲವು ಮಾತುಗಳು ಇಬ್ಬರಲ್ಲಿ ಒಬ್ಬರು ಆಡಿದರೂ ಅಲ್ಲಿಗೆ ಸಂಬಂಧವು ಸಡಿಲವಾಗಲು ಪ್ರಾರಂಭವಾಗುತ್ತದೆ.

Relationship Tips: ಪ್ರೇಮಿಗಳಿಬ್ಬರೂ ಈ ಮಾತುಗಳನ್ನು ಅಪ್ಪಿ ತಪ್ಪಿಯೂ ಆಡಲೇಬೇಡಿ
Follow us on

ಪ್ರೀತಿಯು ಎರಡು ಮನಸ್ಸಿನ ನಡುವಿನ ಮಧುರವಾದ ಭಾವನೆ. ಪ್ರೀತಿಗೆ ಕಣ್ಣಿಲ್ಲ ನಿಜ. ಆದರೆ ಈಗಿನ ಕಾಲದ ಪ್ರೀತಿಗೆ ವ್ಯಾರಂಟಿನೂ ಇಲ್ಲ, ಗ್ಯಾರಂಟಿ ಕೂಡ ಇಲ್ಲ.ಸಣ್ಣ ಪುಟ್ಟ ವಿಷಯಗಳಿಗೂ ಉಂಟಾದ ಮನಸ್ತಾಪಗಳು ಸಂಬಂಧವು ಮುರಿದುಕೊಳ್ಳುವ ಹಂತಕ್ಕೆ ತಲುಪುದು ಸರ್ವೇ ಸಾಮಾನ್ಯವಾಗಿದೆ. ಇಬ್ಬರೂ ವ್ಯಕ್ತಿಗಳಿಗೆ ಸಂಬಂಧವನ್ನು ನಿಭಾಯಿಸಿಕೊಂಡು ಹೋಗುವ ಕಲೆ ಗೊತ್ತಿರಬೇಕು. ಕೆಲವೊಮ್ಮೆ ಈ ಕೆಲವು ಮಾತುಗಳು ಇಬ್ಬರ ವ್ಯಕ್ತಿಗಳ ನಡುವೆ ಬಿರುಕು ಮೂಡಲು ಕಾರಣವಾಗುತ್ತದೆ. ಹೀಗಾಗಿ ಯಾವ ಸಂದರ್ಭದಲ್ಲಿ ಹೇಗೆ ಮಾತನಾಡಬೇಕು ಎನ್ನುವುದು ಅರಿತಿರುವುದು ಬಹಳ ಮುಖ್ಯ.

* ಮಾಜಿ ಪ್ರೇಮಿ ನೆನಪು ಮಾಡಿಕೊಳ್ಳುವುದು : ಲವ್ ರಿಲೇಷನ್ಶಿಪ್ ನಲ್ಲಿ ಮಾಜಿ ಪ್ರೇಮಿಯ ನೆನಪು ಮಾಡಿಕೊಳ್ಳುವುದು ಹಾಗೂ ಅವರ ಬಗ್ಗೆ ಮಾತನಾಡುವುದು ಸಂಬಂಧವನ್ನು ಹಾಳು ಮಾಡುತ್ತದೆ. ಅದಲ್ಲದೇ ಮಾಜಿ ಪ್ರೇಮಿಯೊಂದಿಗೆ ಹೋಲಿಕೆ ಮಾಡುವುದು ಕೂಡ ಇಬ್ಬರ ನಡುವೆ ಬಿರುಕು ಮೂಡುವುದಕ್ಕೆ ಕಾರಣವಾಗುತ್ತದೆ. ಹೀಗಾಗಿ ಪ್ರೇಮಿಗಳಿಬ್ಬರೂ ಸಮಯ ಕಳೆಯುತ್ತಿರುವ ಸಮಯದಲ್ಲಿ ಹಳೆಯ ಪ್ರೇಮದ ಬಗ್ಗೆ ಮಾತನಾಡುವುದನ್ನು ಸಾಧ್ಯವಾದಷ್ಟು ತಪ್ಪಿಸುವುದು ಒಳ್ಳೆಯದು.

* ಕುಟುಂಬಕ್ಕೆ ಸಮಯ ಕೊಡುವುದನ್ನು ತಪ್ಪಿಸಬೇಡಿ : ಹೆಚ್ಚಿನ ಸಂಬಂಧದಲ್ಲಿ ಸಂಗಾತಿಯು ನನಗೆ ಮಾತ್ರ ಸಮಯ ಕೊಡಬೇಕು ಎಂದು ಬಯಸುತ್ತಾರೆ. ನಿಮ್ಮ ಸಂಗಾತಿಗೆ ಆಯ್ಕೆ ಮಾಡಿಕೊಳ್ಳುವಂತಹ ಪರಿಸ್ಥಿತಿಯನ್ನು ತರುವುದು ಸರಿಯಲ್ಲ. ನಾನು ಮುಖ್ಯವೋ ಅಥವಾ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರ ಮುಖ್ಯನಾ ಎನ್ನುವ ಪ್ರಶ್ನೆಯನ್ನು ಕೇಳಿ ಸಂಗಾತಿಯನ್ನು ಇಕ್ಕಟಿನ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಳ್ಳುವಂತೆ ಮಾಡುವುದು ಸರಿಯಲ್ಲ. ಈಗಾಗಲೇ ಇದೇ ಕಾರಣದಿಂದಾಗಿ ಎಷ್ಟು ಸಂಬಂಧಗಳು ಅರ್ಧದಲ್ಲೇ ಮುರಿದು ಬಿದ್ದಿದೆ.

* ವಾದಗಳ ನಡುವೆ ಕೆಟ್ಟ ಪದಗಳು ಬರದಿರಲಿ : ಯಾವುದೇ ಸಂಬಂಧದಲ್ಲಿ ಜಗಳಗಳು ಸರ್ವೇ ಸಾಮಾನ್ಯ. ಆದರೆ ಜಗಳ ಮಾಡುವ ಸಂದರ್ಭದಲ್ಲಿ ಪದಗಳ ಬಳಕೆಯತ್ತ ಹೆಚ್ಚು ಗಮನ ವಹಿಸಬೇಕು. ವಾದಿಸುವಾಗ “ ಬಾಯಿ ಮುಚ್ಚಿ” ಅಥವಾ “ಈಗಲೇ ಹೊರಟು ಹೋಗು” ಎಂದು ಹೇಳುವುದು ಸರಿಯಲ್ಲ. ಈ ಮಾತುಗಳು ಎದುರಿಗಿರುವ ವ್ಯಕ್ತಿಗೆ ನೋವನ್ನು ಉಂಟು ಮಾಡಬಹುದು. ಕೆಲವೊಮ್ಮೆ ಈ ಮಾತನ್ನು ಗಂಭೀರವಾಗಿ ಪರಿಗಣಿಸಿ ಎದುರಿಗಿರುವವರು ಈ ಸಂಬಂಧಕ್ಕೆ ಗುಡ್ ಬೈ ಹೇಳುವ ಸನ್ನಿವೇಶವೇ ಹೆಚ್ಚಾಗಿರುತ್ತದೆ.

ಇದನ್ನೂ ಓದಿ: ನೀವೆಷ್ಟೇ ಇಂಪ್ರೆಸ್ ಮಾಡಿದ್ರು ಹುಡುಗಿಯೂ ಬೀಳ್ತಿಲ್ವಾ? ಇಲ್ಲಿದೆ ಸಿಂಪಲ್ ಟಿಪ್ಸ್

* ಸಂಗಾತಿಯ ಸ್ನೇಹಿತರ ಬಗ್ಗೆ ತಿಳಿದುಕೊಳ್ಳುವ ಕಾತುರ ಬೇಡ : ಪ್ರೇಮಿಗಳಿಬ್ಬರೂ ಮಾತನಾಡುತ್ತಾ ಸ್ನೇಹಿತರ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ವಹಿಸಬಹುದು. ಆದರೆ ಒಬ್ಬರ ಆಸಕ್ತಿ ಎದುರಿಗಿರುವ ವ್ಯಕ್ತಿಗೆ ತಪ್ಪಾಗಿ ಕಾಣಬಹುದು. ಹುಡುಗನಿಗೆ ಯಾರದರೋ ಸ್ನೇಹಿತೆ ಇದ್ದು ಬಿಟ್ಟರೆ, ತನ್ನ ಪ್ರೇಮಿಯ ಮುಂದೆ ಬೆಸ್ಟ್ ಫ್ರೆಂಡ್ ಎನ್ನುವ ರೀತಿ ನಟಿಸುತ್ತಾರೆ. ಹೆಣ್ಣು ಮಕ್ಕಳು ಪೊಸೆಸಿವ್ ಆಗಿರುವ ಕಾರಣ ತನ್ನ ಪ್ರೇಮಿಗೆ ತಾನೊಬ್ಬಳೇ ಎಲ್ಲಾ ಆಗಿರಬೇಕು ಎಂದು ಬಯಸುತ್ತಾರೆ. ಇದರಿಂದಲೇ ಸಂಬಂಧಗಳು ಮುರಿದು ಬೀಳುವ ಸಾಧ್ಯತೆಯೇ ಹೆಚ್ಚಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ