
ಮನುಷ್ಯನಿಗೆ ಜೀವನದಲ್ಲಿ ಯಶಸ್ಸು, ಸಂತೋಷ ಮತ್ತು ಹಣ (money, success and happiness) ಬೇಕೆಬೇಕು. ಅದಕ್ಕಾಗಿ ಒತ್ತಡದ ಕೆಲಸ, ಶ್ರಮ ಎಲ್ಲ ರೀತಿಯ ತಂತ್ರಗಳನ್ನು ಮಾಡಿಕೊಂಡು ಜೀವನದಲ್ಲಿ ಒದ್ದಾಡುತ್ತಾರೆ. ಆದರೆ ಈ ಎಲ್ಲ ಪ್ರಯತ್ನಕ್ಕೂ ಮುನ್ನ ಕೆಲವೊಂದು ಕ್ರಮಗಳನ್ನು ಅನುಸರಿಸಬೇಕು. ಈ ತಂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಖಂಡಿತ ಯಶಸ್ಸು, ಸಂತೋಷ ಮತ್ತು ಹಣ ಪಡೆಯಬಹುದು. ಜೀವನವನ್ನು ಸಂಪೂರ್ಣವಾಗಿ ಬದಲಾಯಿಸುವ, ಸಂತೋಷ ಹೆಚ್ಚಾಗುವ, ಹಣ ಬರಲು ಪ್ರಾರಂಭಿಸುವ ಮತ್ತು ಯಶಸ್ಸು ನಿಮ್ಮ ಕಡೆಗೆ ಓಡಿ ಬರುವಂತೆ ಮಾಡುವ ಈ ಮಾರ್ಗಗಳನ್ನು ಅನುಸರಿಸಬೇಕು. ಪ್ರಸಿದ್ಧ ಜೀವನ ವಾಸ್ತುಶಿಲ್ಪಿ ಮತ್ತು ಮನೋವಿಜ್ಞಾನಿ ಶಿಖರ್ ಚೌಧರಿ (Shikhar Chaudhary) ತಮ್ಮ ಇನ್ಸ್ಟಾದಲ್ಲಿ ಈ ಬಗ್ಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಬ್ರಹ್ಮಾಂಡದ ಅತ್ಯಂತ ಶಕ್ತಿಶಾಲಿ ಮತ್ತು ರಹಸ್ಯ ನಿಯಮವನ್ನು ಮನುಷ್ಯರು ಪಾಲಿಸಬೇಕು. ಇದು ಇಡೀ ಜೀವನವನ್ನು ಕೇವಲ 21 ದಿನಗಳಲ್ಲಿ ಯಶಸ್ಸಿನ ಕಡೆಗೆ ಕರೆದುಕೊಂಡು ಹೋಗುತ್ತದೆ ಎಂದು ಹೇಳಿದ್ದಾರೆ. ಹಾಗಾದರೆ ಈ ನಿಯಮ ಯಾವುದು? ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಶಿಖರ್ ಚೌಧರಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಕಾರ, ಇದು ಬ್ರಹ್ಮಾಂಡದ ಅತ್ಯಂತ ರಹಸ್ಯ ಮತ್ತು ಅತ್ಯಂತ ಶಕ್ತಿಶಾಲಿ ನಿಯಮ, ಸಂಪೂರ್ಣ ನಿಮ್ಮ ವಾಸ್ತವವನ್ನು ಬದಲಾಯಿಸಬಹುದು. ಕೇವಲ 21 ದಿನಗಳವರೆಗೆ, ಪ್ರತಿ ರಾತ್ರಿ ಮಲಗುವ ಮೊದಲು, ನಿಮ್ಮ ಹಣೆಯ ಮಧ್ಯಭಾಗವನ್ನು ನಿಮ್ಮ ಎರಡು ಬೆರಳುಗಳಿಂದ ಲಘುವಾಗಿ ಟ್ಯಾಪ್ ಮಾಡಬೇಕು, ಶಾಸ್ತ್ರದ ಪ್ರಕಾರ ಇದನ್ನು ಮೂರನೇ ಕಣ್ಣು ಎಂದು ಕರೆಯುತ್ತಾರೆ. ಈ ಸ್ಥಳದಲ್ಲಿ ಟ್ಯಾಪ್ ಮಾಡುವಾಗ ಈ ಕೆಳಗೆ ನೀಡಿದ ವಿಚಾರಗಳನ್ನು ಪಠಿಸಬೇಕು.
‘ನಾನು ಯಶಸ್ವಿಯಾಗಿದ್ದೇನೆ’
‘ನಾನು ಸಂತೋಷವಾಗಿದ್ದೇನೆ’
‘ನನ್ನ ಬಳಿ ಹಣವಿದೆ’
‘ನಾನು ಆರೋಗ್ಯವಾಗಿದ್ದೇನೆ’
‘ನನ್ನ ಸಂಬಂಧಗಳು ಸಂತೋಷವಾಗಿವೆ’
ಈ ತಂತ್ರದ ಹಿಂದೆ ಮನೋವಿಜ್ಞಾನ ಪ್ರಭಾವ ಇರುತ್ತದೆ. ಇದು ಅಭಿವ್ಯಕ್ತಿ ವಿಚಾರಗಳನ್ನು ಬೆಳೆಸಿಕೊಳ್ಳಲು ಸಹಾಯವನ್ನು ಮಾಡುತ್ತದೆ. ಪ್ರತಿದಿನ ಈ ಸಕಾರಾತ್ಮಕ ವಿಷಯಗಳನ್ನು ಹೇಳಿಕೊಂಡಾಗ, ವಿಶೇಷವಾಗಿ ಮಲಗುವ ಮೊದಲು, ನಿಮ್ಮ ಮನಸ್ಸು ಈ ವಿಷಯಗಳನ್ನು ಸತ್ಯವೆಂದು ನಂಬಲು ಪ್ರಾರಂಭಿಸುತ್ತದೆ. ಏನು ಯೋಚಿಸುತ್ತೀರೋ ಅದು ನಿಮ್ಮ ಜೀವನದಲ್ಲಿಯೂ ಸಂಭವಿಸಲು ಪ್ರಾರಂಭಿಸುತ್ತದೆ. ನೀವು ‘ನಾನು ಯಶಸ್ವಿಯಾಗಿದ್ದೇನೆ’ ಎಂದು ಹೇಳುತ್ತಿದ್ದಂತೆ, ವಿಶ್ವವು ನಿಮ್ಮ ಜೀವನದಲ್ಲಿ ಅಂತಹ ಅವಕಾಶಗಳನ್ನು ನೀಡಲು ಮುಂದಾಗುತ್ತದೆ ಎಂದು ಶಿಖರ್ ಚೌಧರಿ ಹೇಳಿದ್ದಾರೆ.
ರಾತ್ರಿ ಮಲಗುವ ಮುನ್ನ ನಮ್ಮ ಮನಸ್ಸು ಅತ್ಯಂತ ಶಾಂತ ಮತ್ತು ಗ್ರಹಿಸುವ ಸ್ವಭಾವವನ್ನು ಹೊಂದಿರುತ್ತದೆ. ಒಂದು ದಿನದ ಕೆಲಸ, ಒತ್ತಡ ಮತ್ತು ಗಡಿಬಿಡಿಯ ನಂತರ ಮನಸ್ಸು ಸಂಪೂರ್ಣವಾಗಿ ಶಾಂತವಾಗುವುದು ಮಲಗುವಾಗ, ಆ ಸಮಯದಲ್ಲಿ ಈ ವಿಚಾರಗಳ್ನನು ಹೇಳಿಕೊಂಡರೆ ಮನಸ್ಸ ಹೇಳಿದನ್ನು ಕೇಳುತ್ತದೆ. ನಮ್ಮ ಆಲೋಚನೆ, ಭಾವನೆಗಳು ಮತ್ತು ನಿರ್ಧಾರಗಳನ್ನು ಮೆದುಳಿ ನಿಯಂತ್ರಣ ಮಾಡುತ್ತದೆ. ಈ ಸಮಯದಲ್ಲಿ, ನೀವು ನಿಮಗೆ ಸಕಾರಾತ್ಮಕವಾಗಿ ಏನನ್ನಾದರೂ ಹೇಳಿದರೆ ತಕ್ಷಣ ಗ್ರಹಿಸುತ್ತದೆ. ಹಾಗೂ ಅದನ್ನೇ ಪಾಲನೆ ಮಾಡುತ್ತದೆ. ಹೊಸ ಆಲೋಚನೆ, ಹೊಸ ನಂಬಿಕೆ ಮತ್ತು ಬದಲಾದ ವಾಸ್ತವವನ್ನು ಪ್ರಾರಂಭಿಸುತ್ತವೆ.ಇದು ಪವಾಡವಲ್ಲ, ಆದರೆ ಮನಸ್ಸಿನ ವೈಜ್ಞಾನಿಕ ಪ್ರಕ್ರಿಯೆ, ಇದು ನಿಮ್ಮ ಜೀವನವನ್ನು ಒಳಗಿನಿಂದ ಮರು-ಪ್ರೋಗ್ರಾಂ ಮಾಡುತ್ತದೆ.
ಇದನ್ನೂ ಓದಿ: ಪಿಕ್ನಿಕ್ ದಿನದ ಆಚರಣೆ ಹೇಗೆ ಪ್ರಾರಂಭವಾಯಿತು? ಈ ವಿಶೇಷ ಆಚರಣೆಯ ಇಂಟರೆಸ್ಟಿಂಗ್ ಕಥೆ ತಿಳಿಯಿರಿ
ಈ ವಿಚಾರಗಳ್ನು ಮಾಡಲು ಹಣ ಖರ್ಚು ಮಾಡಬೇಕಿಲ್ಲ. ಪ್ರತಿದಿನ ನಿಮಗಾಗಿ ಕೇವಲ 2 ನಿಮಿಷಗಳನ್ನು ಮೀಸಲಿಡಬೇಕು. 21 ದಿನಗಳ ನಂತರ ನೀವು ಯೋಚಿಸುವ ರೀತಿ, ದಿನದ ಆರಂಭ ಮತ್ತು ಜನರ ವರ್ತನೆ, ಎಲ್ಲವೂ ನಿಧಾನವಾಗಿ ಬದಲಾಗುತ್ತದೆ. ಇಂದಿನಿಂದಲ್ಲೇ ರಾತ್ರಿ ಪ್ರಾರಂಭಿಸಿ. ನಿಮ್ಮ ಬೆರಳಿನಲ್ಲೇ ಅದೃಷ್ಟ ಇದೆ. ಈ ಮಂತ್ರವು ಯಾವುದೇ ಮ್ಯಾಜಿಕ್ ಅಲ್ಲ, ಇದು ವೈಜ್ಞಾನಿಕ ಮತ್ತು ಚಿಂತನಶೀಲ ತಂತ್ರವಾಗಿ ಎಂದು ಶಿಖರ್ ಚೌಧರಿ ಹೇಳಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ