Double Chin: ಗಲ್ಲದ ಕೆಳಗೆ ಕಾಣಿಸುವ ಕೊಬ್ಬು ಕಡಿಮೆ ಮಾಡಲು ಆಯುರ್ವೇದ ಪರಿಹಾರ ಇಲ್ಲಿದೆ
ನೀವು ಎಷ್ಟೇ ಪ್ರಯತ್ನಿಸಿದರೂ, ಗಲ್ಲದ ಸುತ್ತಲಿನ ಈ ಮೊಂಡು ಕೊಬ್ಬನ್ನು ಕರಗಿಸುವುದು ತುಂಬಾ ಕಷ್ಟ. ಹಾಗಾಗಿ ಆಯುರ್ವೇದ ತಜ್ಞರು ಗಲ್ಲದ ಕೆಳಗೆ ಬಂದಿರುವ ಕೊಬ್ಬನ್ನು ಸುಲಭವಾಗಿ ಕಡಿಮೆ ಮಾಡಲು ಕೆಲವು ನೈಸರ್ಗಿಕ ಪರಿಹಾರಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಇಲ್ಲಿದೆ ಮಾಹಿತಿ.
ಸಾಮಾನ್ಯವಾಗಿ ವ್ಯಕ್ತಿಯ ತೂಕ ಹೆಚ್ಚಾಗಲು ಪ್ರಾರಂಭಿಸಿದಾಗ, ಅವನು/ ಅವಳು ಅವರ ದೇಹದಲ್ಲಿ ಅನೇಕ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಿಗೆ ಒಳಗಾಗುತ್ತಾರೆ. ಅದರ ಜೊತೆಗೆ ತೂಕ ಹೆಚ್ಚಾಗುವಾಗ ಕಂಡುಬರುವ ಅತ್ಯಂತ ಮಹತ್ವದ ಬದಲಾವಣೆ ಎಂದರೆ ಗಲ್ಲದ ಕೆಳಗೆ ಕೊಬ್ಬು ಕಾಣಿಸಿಕೊಳ್ಳುವುದು. ಇದನ್ನು ಡಬಲ್ ಚಿನ್ ಸಮಸ್ಯೆ ಎಂದು ಕೂಡ ಕರೆಯಲಾಗುತ್ತದೆ. ಮಹಿಳೆಯರಲ್ಲಿ ಮತ್ತು ಪುರುಷರಲ್ಲಿ ಇದು ಸಾಮಾನ್ಯವಾಗಿದ್ದರೂ ಒಮ್ಮೆಲೇ ತೊಡೆದು ಹಾಕುವುದು ತುಂಬಾ ಕಷ್ಟಕರ. ನೀವು ಎಷ್ಟೇ ಪ್ರಯತ್ನಿಸಿದರೂ, ಗಲ್ಲದ ಸುತ್ತಲಿನ ಈ ಮೊಂಡು ಕೊಬ್ಬು ಮಾಯವಾಗುವುದಿಲ್ಲ. ಇದು ಒಂದು ರೀತಿ ಹಠಮಾರಿ ಕೊಬ್ಬು ಎಂದರೆ ತಪ್ಪಾಗಲಾರದು. ಡಬಲ್ ಚಿನ್ ಕಡಿಮೆ ಮಾಡಲು ಕೆಲವು ವ್ಯಾಯಾಮಗಳನ್ನು ಅಭ್ಯಾಸ ಮಾಡಲು ಕೆಲವರು ಶಿಫಾರಸು ಮಾಡುತ್ತಾರೆ. ಆದರೆ ಅದಕ್ಕಿಂತ ಸುಲಭವಾಗಿ, ಆಯುರ್ವೇದ ತಜ್ಞರು ಗಲ್ಲದ ಕೆಳಗೆ ಬಂದಿರುವ ಕೊಬ್ಬನ್ನು ಕಡಿಮೆ ಮಾಡಲು ಕೆಲವು ನೈಸರ್ಗಿಕ ಪರಿಹಾರಗಳನ್ನು ಹಂಚಿ ಕೊಂಡಿದ್ದಾರೆ. ಈ ಬಗ್ಗೆ ಇಲ್ಲಿದೆ ಮಾಹಿತಿ.
ಪರಿಹಾರಗಳನ್ನು ಹಂಚಿಕೊಂಡಿರುವವರಲ್ಲಿ ಡಾ. ಡಿಂಪಲ್ ಜಂಗ್ಡಾ ಹೀಗೆ ಬರೆದುಕೊಂಡಿದ್ದಾರೆ. ಪ್ರತಿದಿನ ವ್ಯಾಯಾಮ ಮಾಡುವುದನ್ನು ತಪ್ಪಿಸಬೇಡಿ. ಆರೋಗ್ಯಕರ ಆಹಾರವನ್ನು ತಿನ್ನುವುದನ್ನು ರೂಢಿ ಮಾಡಿಕೊಳ್ಳಿ. ಮತ್ತು ಅದನ್ನೇ ಖಡ್ಡಾಯವಾಗಿ ಅನುಸರಿಸಿ . ಡಬಲ್ ಚಿನ್ ಅನ್ನು ತೊಡೆದು ಹಾಕಲು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ನೆನಪಿನಲ್ಲಿರಲಿ, ಇದಕ್ಕೆ ತಾಳ್ಮೆ ಹೆಚ್ಚು ಅಗತ್ಯ. ಆ ಹೆಚ್ಚುವರಿ ಕೊಬ್ಬನ್ನು ಕರಗಿಸಲು, ನಿಮಗೆ ಬೇಕಾಗಿರುವುದು ಸ್ವಲ್ಪ ಪ್ರಯತ್ನ. ಆದರೆ ನಿಮ್ಮ ಡಬಲ್ ಚಿನ್ ಅನ್ನು ಕಡಿಮೆ ಮಾಡಲು ಸರಿಯಾದ ಆಹಾರ ಮತ್ತು ವ್ಯಾಯಾಮವು ಕೆಲಸ ಮಾಡದಿದ್ದರೆ, ನಿಮ್ಮ ವೈದ್ಯರನ್ನು ಸಂಪರ್ಕಿಸಿ, ಸಲಹೆ ಪಡೆದುಕೊಳ್ಳಿ.
ಆಯಿಲ್ ಪುಲ್ಲಿಂಗ್ ಅಂದರೆ ಬಾಯಲ್ಲಿ ಎಣ್ಣೆ ಇಟ್ಟುಕೊಂಡು ಉಗುಳುವ ಕ್ರಿಯೆ. ಇದರಿಂದ ನಿಮ್ಮ ದವಡೆಯಲ್ಲಿರುವ ಸ್ನಾಯುಗಳು ಕೆಲಸ ಮಾಡುವಂತೆ ಮಾಡುತ್ತದೆ. ಇದು ನಿಮ್ಮ ಡಬಲ್ ಚಿನ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆಯಿಲ್ ಪುಲ್ಲಿಂಗ್ ಬಳಸಿ ಗಲ್ಲದ ಕೊಬ್ಬನ್ನು ಕಡಿಮೆ ಮಾಡುವುದು ಹೇಗೆ ಎಂದು ತಿಳಿಯಲು ಇಲ್ಲಿದೆ ಸೂಚನೆಗಳು. 1 ಟೀ ಸ್ಪೂನ್ ಎಳ್ಳೆಣ್ಣೆಯನ್ನು ನಿಮ್ಮ ಬಾಯಿಗೆ ಹಾಕಿಕೊಳ್ಳಿ ಇದನ್ನು 10 ರಿಂದ 12 ನಿಮಿಷಗಳ ಕಾಲ ಇಟ್ಟುಕೊಂಡು ಬಳಿಕ ಅದನ್ನು ಉಗುಳಬಹುದು. ಇದನ್ನು ಪ್ರತಿದಿನ ಬೆಳಿಗ್ಗೆ ಬ್ರಷ್ ಮಾಡುವ ಮೊದಲು ಒಮ್ಮೆಯಾದರೂ ಮಾಡಿ. ಇದರಿಂದ ಗಲ್ಲದ ಕೆಳಗಿರುವ ಕೊಬ್ಬು ವೇಗವಾಗಿ ಕಡಿಮೆಯಾಗುತ್ತದೆ.
ಇದನ್ನೂ ಓದಿ: ಡಬಲ್ ಚಿನ್ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ? ಹೆಚ್ಚುವರಿ ಕೊಬ್ಬು ನಿವಾರಣೆಗೆ ಇಲ್ಲಿದೆ ಸರಳ ಸಲಹೆಗಳು
ಅಭ್ಯಂಗಂ ಎಂಬ ಆಯುರ್ವೇದ ಮಸಾಜ್ ನಿಮ್ಮ ದವಡೆಗಳಿಗೆ ರಕ್ತ ಪರಿಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆಲಿವ್ ಎಣ್ಣೆಯು ಉತ್ಕರ್ಷಣ ನಿರೋಧಕಗಳಿಂದ ತುಂಬಿದೆ. ಅದು ನಿಮ್ಮ ಚರ್ಮವನ್ನು ಪೋಷಿಸುತ್ತದೆ, ಹಾನಿಯಿಂದ ರಕ್ಷಿಸುತ್ತದೆ ಮತ್ತು ಅದನ್ನು ಗಟ್ಟಿಗೊಳಿಸಲು ಸಹಾಯ ಮಾಡುತ್ತದೆ. ಹಾಗಾಗಿ ಡಬಲ್ ಚಿನ್ ತೊಡೆದು ಹಾಕಲು ಈ ಚಟುವಟಿಕೆಗಳ ಸಂಯೋಜನೆ ಒಳ್ಳೆಯದು. ನಿಮ್ಮ ಆಹಾರದಲ್ಲಿ ಆಲಿವ್ ಎಣ್ಣೆಯನ್ನು ಸೇರಿಸುವುದರಿಂದ ಕೆಲವು ಹೆಚ್ಚುವರಿ ಪೌಂಡ್ ಗಳನ್ನು ಕಳೆದು ಕೊಳ್ಳಲು ಸಹ ನಿಮಗೆ ಸಹಾಯ ಮಾಡುತ್ತದೆ. ಜೊತೆಗೆ ಈ ಎಣ್ಣೆಯನ್ನು ತೆಗೆದುಕೊಂಡು ಹದವಾಗಿ ಬಿಸಿ ಮಾಡಿ, ಇದನ್ನು ನಿಮ್ಮ ದವಡೆ ಮತ್ತು ಕುತ್ತಿಗೆಗೆ ನಿಧಾನವಾಗಿ ಮಸಾಜ್ ಮಾಡಿ. ರಾತ್ರಿಯಿಡೀ ಇಡಬಹುದು ಅಥವಾ ಒಂದು ಅಥವಾ ಎರಡು ಗಂಟೆಗಳ ಕಾಲ ಬಿಟ್ಟು ತೊಳೆಯಬಹುದು.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:22 pm, Tue, 13 June 23