ಮಕ್ಕಳನ್ನು ಬೆಳೆಸುವ ವಿಷಯದಲ್ಲಿ ನೀವು ಬೆಸ್ಟ್ ಅಪ್ಪ ಅಮ್ಮ ಆಗಬೇಕೇ? ಈ ಟಿಪ್ಸ್ ಅನುಸರಿಸಿ
ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಮಾತಿದೆ. ಆ ಮಾತಿನಂತೆ ಮಕ್ಕಳನ್ನು ಯಾವ ರೀತಿ ಬೆಳೆಸುತ್ತಿರಿ ಎನ್ನುವುದು ತಂದೆ ತಾಯಿಯ ಮೇಲೆ ನಿರ್ಧರಿತವಾಗಿರುತ್ತದೆ. ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಬಯಸುವ ತಂದೆ ತಾಯಿಗಳಿಬ್ಬರೂ ಮಕ್ಕಳ ಪಾಲಿಗೆ ನಿಜವಾದ ಹೀರೋಗಳಾಗಿರುತ್ತಾರೆ. ಹಾಗಾದ್ರೆ ನಿಮ್ಮ ಮಕ್ಕಳನ್ನು ಬೆಳೆಸುವ ರೀತಿಯು ಬೆಸ್ಟ್ ಆಗಿದೆಯೇ ಇಲ್ಲವೇ ಎನ್ನುವುದನ್ನು ನೀವಿಲ್ಲಿ ತಿಳಿದುಕೊಳ್ಳಿ.
ಮಕ್ಕಳ ಆರೈಕೆಯಲ್ಲಿ ತಂದೆ ತಾಯಿಯೂ ಇಬ್ಬರು ಸಮಪಾಲುದಾರರಾಗಿರುತ್ತಾರೆ. ಹೀಗಾಗಿ ಮಕ್ಕಳ ವರ್ತನೆಯಲ್ಲಿ ಸ್ವಲ್ಪ ಬದಲಾವಣೆಗಳು ಕಂಡು ಬಂದರೂ ಮೊದಲು ಬೆರಳು ಮಾಡಿ ತೋರಿಸುವುದು ತಂದೆ ತಾಯಿಯನ್ನು. ಮಕ್ಕಳ ಬೆಳವಣಿಗೆ ಹಾಗೂ ಪೋಷಣೆಯನ್ನು ಸರಿಯಾಗಿ ನಿಭಾಯಿಸುವುದು ಇಬ್ಬರ ಜವಾಬ್ದಾರಿಯಾಗಿರುವ ಕಾರಣ ಮಕ್ಕಳ ಭವಿಷ್ಯದ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುವಾಗ ಇಬ್ಬರೂ ಚರ್ಚಿಸಿ ಯೋಗ್ಯವಾದ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಹಾಗಾದ್ರೆ ಮಕ್ಕಳನ್ನು ಬೆಳೆಸುವಾಗ ಈ ಟಿಪ್ಸ್ ಗಳನ್ನು ಅನುಸರಿಸಿದರೆ ಮಕ್ಕಳು ಒಳ್ಳೆಯ ಸಂಸ್ಕಾರದೊಂದಿಗೆ ಉತ್ತಮ ಪ್ರಜೆಯಾಗುತ್ತಾರೆ.
ಮಕ್ಕಳನ್ನು ಬೆಳೆಸುವ ತಂದೆ ತಾಯಿಯರಿಗೆ ಟಿಪ್ಸ್ ಇಲ್ಲಿದೆ
* ಕೌಟುಂಬಿಕ ವಾತಾವರಣ ಉತ್ತಮವಾಗಿರಲಿ: ಮಕ್ಕಳ ಬೆಳವಣಿಗೆಯ ವೇಳೆ ಕೌಟುಂಬಿಕ ವಾತಾವರಣವು ಕೂಡ ಉತ್ತಮವಾಗಿರುವುದು ಮುಖ್ಯ. ಮಕ್ಕಳು ಇರುವ ಸ್ಥಳ ಸುಖ ಶಾಂತಿ ನೆಮ್ಮದಿ ಹಾಗೂ ಆರೋಗ್ಯಕರವಾಗಿರಬೇಕು. ಈ ವಾತಾವರಣದಲ್ಲಿ ಮಕ್ಕಳನ್ನು ಬೆಳೆಸುವುದು ಮುಖ್ಯವಾಗಿರುತ್ತದೆ.
* ಮಕ್ಕಳ ಎಲ್ಲಾ ಬೇಡಿಕೆಗಳನ್ನು ಸಲೀಸಾಗಿ ಈಡೇರಿಸದಿರಿ: ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಯಾವುದರಲ್ಲಿ ಕೊರತೆಯಾಗದಿರಲಿ ಎಂದೇ ಬಯಸುತ್ತಾರೆ. ಆದರೆ ಮಕ್ಕಳು ಕೇಳಿ ಕೇಳಿದ್ದನ್ನೆಲಾ ತೆಗೆಸಿಕೊಡುವುದು ಮಕ್ಕಳಿಗೆ ಎಲ್ಲವು ಸುಲಭವಾಗಿ ಸಿಗುವಂತೆ ಮಾಡುತ್ತದೆ. ಮಕ್ಕಳು ಅದು ಬೇಕು ಇದು ಬೇಕು ಎಂದು ಹೇಳಿದೊಡನೆ ಪೋಷಕರು ಅಗತ್ಯವಿದ್ದರೆ ಮಾತ್ರ ಅದನ್ನು ನೆರವೇರಿಸಿ.
* ಇತರರೊಂದಿಗೆ ನಡೆದುಕೊಳ್ಳುವಾಗ ಮಕ್ಕಳ ವರ್ತನೆ ಹೀಗಿರಲಿ : ಮಕ್ಕಳಿಗೆ ಫೋಷಕರು ಪ್ರೀತಿ ನೀಡಿದರೆ ಸಾಲದು. ಮಕ್ಕಳು ಕೂಡ ಇತರರೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುವುದು, ಸಾಂತ್ವಾನ ಹೇಳಿ ಬೆಂಬಲಿಸುವುದು ಈ ಸಂಸ್ಕಾರವನ್ನು ಮಕ್ಕಳಿಗೆ ಕಲಿಸಿಕೊಡಬೇಕು.
* ಶಿಸ್ತಿನ ಕ್ರಮಗಳನ್ನು ಕಲಿಸಿ : ಮಕ್ಕಳಿಗೆ ಅಪ್ಪ ಅಮ್ಮ ಶಿಸ್ತಿನ ಕ್ರಮಗಳನ್ನು ಕಲಿಸುವುದು ಬಹಳ ಮುಖ್ಯವಾಗುತ್ತದೆ. ಶಿಸ್ತಿನ ಜೀವನ ಶೈಲಿಯನ್ನು ರೂಢಿಸಿಕೊಂಡಿದ್ದರೆ, ಸರಿಯಾದ ವಿಧಾನಗಳಲ್ಲಿ ಬೆಳೆದಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ.
*ಮಕ್ಕಳು ಹಿರಿಯರನ್ನು ಗೌರವಿಸುವಂತಿರಲಿ : ಹಿರಿಯರಿಗೆ ಮಕ್ಕಳು ಗೌರವ ಸುಚಿಸುವುದು ಒಳ್ಳೆಯ ಬೆಳವಣಿಗೆಯ ಲಕ್ಷಣವಾಗಿದೆ. ಮಾತನಾಡುವಾಗ “ದಯವಿಟ್ಟು” ಮತ್ತು “ಧನ್ಯವಾದಗಳು” ಸೇರಿದಂತೆ ಸೌಜನ್ಯದ ಭಾಷೆಯನ್ನು ಬಳಸಲು ಕಲಿಸುವುದರಿಂದ ಮಕ್ಕಳು ಸೌಜನ್ಯಯುತವಾಗಿ ಬೆಳೆಯುತ್ತಾರೆ.
* ಮುಕ್ತವಾಗಿ ಸಂವಹನ ನಡೆಸುವ ಕೌಶಲ್ಯವನ್ನು ಕಲಿಸಿ : ಮಕ್ಕಳು ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಲು, ಭಾವನೆಗಳನ್ನು ಹಂಚಿಕೊಳ್ಳಲು ಸಂವಹನ ಬಹಳ ಮುಖ್ಯವಾಗುತ್ತದೆ. ನೀವು ಮಕ್ಕಳ ಜೊತೆಗೆ ಮುಕ್ತವಾಗಿ ಮಾತನಾಡುವುದನ್ನು ಬೆಳೆಸಿಕೊಂಡರೆ, ಮಕ್ಕಳು ಎಲ್ಲರ ಜೊತೆಗೂ ಯಾವುದೇ ಅಳುಕು ಆತಂಕವಿಲ್ಲದೇ ಸಂವಹನವನ್ನು ನಡೆಸುತ್ತಾರೆ.
ಇದನ್ನೂ ಓದಿ: ಸಂಬಂಧವನ್ನು ಮುರಿಯಬೇಕೆಂದುಕೊಂಡವರು ಈ ಟಿಪ್ಸ್ ಪಾಲಿಸಿ
* ಮಕ್ಕಳಿಗೆ ತಂದೆ ತಾಯಿಗಳೇ ಮೊದಲ ಮಾದರಿ ವ್ಯಕ್ತಿಗಳು: ಮಕ್ಕಳಿಗೆ ಮೊದಲ ರೋಲ್ ಮಾಡೆಲ್ ಗಳೇ ತಂದೆ ತಾಯಿಗಳು. ಹೀಗಾಗಿ ತಂದೆ ತಾಯಿಯ ವ್ಯಕ್ತಿತ್ವ, ಮಾತು, ನಡೆದುಕೊಳ್ಳುವ ರೀತಿಯೂ ಉತ್ತಮವಾಗಿರಲಿ. ಮಕ್ಕಳು ಕೂಡ ತಂದೆ ತಾಯಿಯರನ್ನು ರೋಲ್ ಮಾಡೆಲ್ ಗಳಂತೆ ಸ್ವೀಕರಿಸುತ್ತಾರೆ.
* ಮಕ್ಕಳಿಗೆ ಕಷ್ಟ ಪಟ್ಟು ದುಡಿಯುವ ಬಗ್ಗೆ ತಿಳಿಸಿ : ತಂದೆ ತಾಯಿಯರು ಮಕ್ಕಳಿಗೆ ಸುಲಭವಾಗಿ ಯಾವುದು ಸಿಗುವುದಿಲ್ಲ. ಕಷ್ಟ ಪಟ್ಟು ದುಡಿದರೆ ಮಾತ್ರ ತಾವು ಅಂದುಕೊಂಡದ್ದು ಪಡೆಯಲು ಸಾಧ್ಯ ಎನ್ನುವುದನ್ನು ಮನವರಿಕೆ ಮಾಡಿಕೊಡಿ. ಈ ಮೂಲಕ ಯಾವ ರೀತಿ ಕೆಲಸ ಮಾಡಬೇಕು ಎಂದು ತಿಳಿಸಿಕೊಡಬೇಕು.
* ಮಕ್ಕಳಲ್ಲಿ ಸ್ವಾಭಿಮಾನ ಗುಣವಿರಲಿ : ಮಕ್ಕಳಿಗೆ ಸ್ವಾಭಿಮಾನದ ಗುಣವನ್ನು ಕಲಿಸುವುದು ಮುಖ್ಯವಾಗುತ್ತದೆ. ಸ್ವಾಭಿಮಾನ ಮತ್ತು ಆತ್ಮವಿಶ್ವಾಸದ ಪ್ರಜ್ಞೆಯನ್ನು ಬೆಳೆಸಬೇಕು. ಇದರಿಂದ ಮಕ್ಕಳು ತಮ್ಮ ಆಸಕ್ತಿಯತ್ತ ಹೆಜ್ಜೆ ಹಾಕಲು ಹಾಗೂ ಸ್ವಾಭಿಮಾನದಿಂದ ಬದುಕಲು ಕಲಿಸಿದಂತೆ ಆಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ