ನಿಮ್ಮ ಮಗುವಿಗೂ ಹೆಬ್ಬೆರಳು ಚೀಪುವ ಅಭ್ಯಾಸವಿದೆಯೇ? ಈ ಅಭ್ಯಾಸ ನಿಲ್ಲಿಸಲು ಇಲ್ಲಿವೆ ಸುಲಭ ಮಾರ್ಗ
ಸಾಮಾನ್ಯವಾಗಿ ಪುಟ್ಟ ಮಕ್ಕಳು ಹೆಬ್ಬೆರಳು ಚೀಪುತ್ತವೆ. ಮಕ್ಕಳಲ್ಲಿ ಈ ಅಭ್ಯಾಸ ಸಾಮಾನ್ಯವೆಂದು ಪೋಷಕರು ಈ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ. ಆದರೆ ಚಿಕ್ಕ ಮಕ್ಕಳು ಬಾಯಿಗೆ ಬೆರಳನ್ನು ಹಾಕುವ ಮೂಲಕ ಅವರ ಬಾಯಿಯೊಳಗೆ ಸುಲಭವಾಗಿ ಬ್ಯಾಕ್ಟೀರಿಯಾಗಳು ಪ್ರವೇಶಿಸುತ್ತವೆ. ಇದು ಹಲ್ಲುಗಳನ್ನು ದುರ್ಬಲಗೊಳಿಸುವುದು ಮಾತ್ರವಲ್ಲದೆ, ಹೊಟ್ಟೆ ಸಂಬಂಧಿ ಕಾಯಿಲೆಗಳನ್ನೂ ಉಂಟುಮಾಡಬಹುದು. ಹಾಗಾಗಿ ಮಕ್ಕಳ ಈ ಒಂದು ಅಭ್ಯಾಸವನ್ನು ತೊಡೆದು ಹಾಕುವುದು ಮುಖ್ಯ.

ಹೆಚ್ಚಿನ ಮಕ್ಕಳು ಹೆಬ್ಬೆರಳು ಚೀಪುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಪುಟ್ಟ ಮಕ್ಕಳಲ್ಲಿ ಇದೆಲ್ಲಾ ಸಾಮಾನ್ಯವೆಂದು ಪೋಷಕರು ಇದನ್ನು ಲಘುವಾಗಿ ತೆಗೆದುಕೊಳ್ಳಬಹುದು, ಇದನ್ನು ನಿರ್ಲಕ್ಷ್ಯ ವಹಿಸಬಹುದು. ಆದರೆ ಮಗುವಿನ ಈ ಅಭ್ಯಾಸವು ಅವರ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಉಂಟು ಮಾಡುತ್ತದೆ. ಏಕೆಂದರೆ, ಚಿಕ್ಕ ಮಕ್ಕಳು ಬಾಯಿಗೆ ಬೆರಳು ಹಾಕಿದಾಗ, ಅನೇಕ ಬ್ಯಾಕ್ಟೀರಿಯಾಗಳು ಬಾಯೊಳಗೆ ಪ್ರವೇಶಿಸುತ್ತವೆ. ಇದರಿಂದ ಹಲ್ಲುಗಳು ಕೊಳೆಯುವುದು ಮಾತ್ರವಲ್ಲದೆ ಹೊಟ್ಟೆ ಸಂಬಂಧಿ ಕಾಯಿಲೆಗಳೂ ಮಕ್ಕಳನ್ನು ಕಾಡಬಹುದು. ಹೀಗಿರುವಾಗ ಪೋಷಕರಾದವರು ಮಗುವಿನ ಈ ಅಭ್ಯಾಸವನ್ನು ತೊಡೆದು ಹಾಕುವುದು ಬಹಳ ಮುಖ್ಯವಾಗಿದೆ. ಅದಕ್ಕಿಂತ ಮೊದಲು ಚಿಕ್ಕ ಮಕ್ಕಳು ಯಾವ ಕಾರಣಕ್ಕೆ ಬೆರಳನ್ನು ಚೀಪುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
ಮಕ್ಕಳು ತಮ್ಮ ಹೆಬ್ಬೆರಳನ್ನು ಏಕೆ ಚೀಪುತ್ತಾರೆ?
ಹಸಿವು: ಕೆಲವೊಮ್ಮೆ ಮಕ್ಕಳು ಹಸಿವಿನಿಂದ ಕೂಡ ತನ್ನ ಹೆಬ್ಬೆರಳನ್ನು ಚೀಪುತ್ತವೆ. ಹಾಗಾಗಿ ಮಗುವಿಗೆ ಸಮಯಕ್ಕೆ ಸರಿಯಾಗಿ ಆಹಾರವನ್ನು ನೀಡುವುದು ಮುಖ್ಯವಾಗಿದೆ.
ಒತ್ತಡ : ಒತ್ತಡ ವಯಸ್ಕರರಿಗೆ ಮಾತ್ರವಲ್ಲ, ಮಕ್ಕಳಲ್ಲೂ ಕಾಣಿಸಿಕೊಳ್ಳುತ್ತದೆ. ಒತ್ತಡ ಹೆಚ್ಚಾದಾಗ ಅನೇಕರು ಹೆಚ್ಚು ತಿನ್ನಲು ಪ್ರಾರಂಭಿಸುತ್ತಾರೆ. ಅದೇ ರೀತಿ ಚಿಕ್ಕ ಮಕ್ಕಳೂ ಆಹಾರವನ್ನು ಹುಡುಕುತ್ತಾರೆ. ಅವರ ಸುತ್ತಲೂ ಆಹಾರ ಲಭ್ಯವಿಲ್ಲದಿದ್ದಾಗ ಅವರು ತಮ್ಮ ಹೆಬ್ಬೆರಳನ್ನು ಚೀಪಲು ಪ್ರಾರಂಭಿಸುತ್ತಾರೆ.
ಅಭದ್ರತೆಯ ಭಾವನೆ: ಕೆಲವೊಮ್ಮೆ ಮಕ್ಕಳು ತಮ್ಮ ಪೋಷಕರಿಂದ ಗಂಟೆಗಳ ಕಾಲ ದೂರವಿರುವುದರಿಂದ ಮನೆಯೊಳಗೆ ಅವರು ಅಸುರಕ್ಷಿತ ಭಾವನೆಯನ್ನು ಅನುಭವಿಸುತ್ತಾರೆ. ಆ ಸಂದರ್ಭದಲ್ಲಿ ಒಂಟಿತನ ಅವರನ್ನು ಹೆಚ್ಚಾಗಿ ಕಾಡಿದಾಗ ಹೆಬ್ಬೆರಳನ್ನು ಚೀಪುತ್ತಾರೆ.
ಇದನ್ನೂ ಓದಿ:ಪದೇ ಪದೇ ಕಾಣಿಸಿಕೊಳ್ಳುವ ತಲೆ ನೋವು ನಿಮ್ಮ ದಿನವನ್ನು ಹಾಳು ಮಾಡುತ್ತಿದೆಯೇ, ಅದರಿಂದ ಹೊರಬರುವುದು ಹೇಗೆ?
ಮಗುವಿನ ಹೆಬ್ಬೆರಳು ಚೀಪುವ ಅಭ್ಯಾಸವನ್ನು ತೊಡೆದು ಹಾಕುವುದು ಹೇಗೆ?
ಪೋಷಕರು ತಮ್ಮ ಮಗುವಿನೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಬೇಕು:
ಮಗು ತಾನು ಒಂಟಿತನವನ್ನು ಅನುಭವಿಸಿದಾಗ ಹೆಬ್ಬೆರಳು ಚೀಪಲು ಪ್ರಾರಂಭಿಸುತ್ತದೆ. ಹೀಗಿರುವಾಗ ಮಗುವಿನ ಈ ಅಭ್ಯಾಸವನ್ನು ತೊಡೆದು ಹಾಕಲು, ಮಗುವಿನ ತಾಯಿ ತಂದೆ ಆ ಮಗುವಿನೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಬೇಕು. ಇದರಿಂದ ಮಗುವಿಗೆ ಒಂಟಿತನ ಕಾಡುವುದಿಲ್ಲ.
ಹೊತ್ತು ಹೊತ್ತಿಗೆ ತಿನ್ನಲು ನೀಡಿ:
ಪುಟ್ಟ ಮಕ್ಕಳಿಗೆ ಪದೇ ಪದೇ ಹಸಿವಾಗುತ್ತಿರುತ್ತದೆ. ಹಸಿವಾದಾಗ ಹೆಚ್ಚಿನ ಮಕ್ಕಳು ಬೆರಳನ್ನು ಚೀಪುತ್ತವೆ. ಹಾಗಾಗಿ ಮಕ್ಕಳಿಗೆ ಹೊತ್ತು ಹೊತ್ತುಗೆ ಆರೋಗ್ಯಕರ ತಿಂಡಿ, ಹಾಲು ಅಥವಾ ಹಣ್ಣುಗಳನ್ನು ತಿನ್ನಲು ನೀಡಿ. ಹೀಗೆ ಹೊಟ್ಟೆ ತುಂಬಿದಾಗ ಮಕ್ಕಳು ಬೆರಳನ್ನು ಬಾಯಿಗೆ ಹಾಕಿಕೊಳ್ಳುವುದಿಲ್ಲ.
ಬೇವು ಮತ್ತು ನಿಂಬೆ:
ಮಗು ವಿಪರೀತವಾಗಿ ಹೆಬ್ಬೆರಳು ಚೀಪುವ ಚಟಕ್ಕೆ ಒಳಗಾಗಿದ್ದರೆ ಅಂತಹ ಸಂದರ್ಭದಲ್ಲಿ ನಿಂಬೆ ರಸ ಅಥವಾ ಬೇವಿನ ಪೇಸ್ಟ್ನ್ನು ಮಗುವಿನ ಹೆಬ್ಬೆರಳಿಗೆ ಹಚ್ಚಿ. ನಿಂಬೆಯ ಹುಳಿ ಮತ್ತು ಬೇವಿನ ಕಹಿಯಿಂದಾಗಿ ಮಗು ಇನ್ನೊಂದು ಬಾರಿ ಬೆರಳು ಚೀಪುವ ಸಹಸಕ್ಕೆ ಹೋಗುವುದಿಲ್ಲ.
ಹೆಬ್ಬೆರಳಿಗೆ ಬಟ್ಟೆ ಕಟ್ಟಿ:
ಮಗುವಿನ ಬೆರಳು ಚೀಪುವ ಅಭ್ಯಾಸವನ್ನು ಹೋಗಲಾಡಿಸಲು, ನೀವು ಮಗುವಿನ ಹೆಬ್ಬೆರಳಿಗೆ ಬಟ್ಟೆಯನ್ನು ಕಟ್ಟಬಹುದು ಅಥವಾ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಬ್ಬೆರಳು ಗಾರ್ಡ್ (ಫಿಂಗರ್ ಗಾರ್ಡ್) ನ್ನು ಸಹ ಬಳಸಬಹುದು.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




