Eid-ul-Fitr 2024:ರಂಜಾನ್ ಹಬ್ಬದ ಸಂಭ್ರಮ ಹೆಚ್ಚಿಸಲು ಆಕರ್ಷಕ ಮೆಹಂದಿ ಡಿಸೈನ್ಸ್​​​​

| Updated By: ಅಕ್ಷತಾ ವರ್ಕಾಡಿ

Updated on: Apr 09, 2024 | 6:26 PM

ಭಾರತ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಈದ್ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಮುಸ್ಲಿಂಮರು ಈ ಈದ್ ಹಬ್ಬದ ದಿನದಂದು ಬಣ್ಣ ಬಣ್ಣದ ಬಟ್ಟೆ ಧರಿಸಿಕೊಂಡು, ವಿವಿಧ ಬಗೆಯ ಖಾದ್ಯವನ್ನು ಸವಿಯುತ್ತ ಅದ್ದೂರಿಯಾಗಿ ಆಚರಿಸುತ್ತಾರೆ. ಅದಲ್ಲದೇ, ಕೈ ತುಂಬ ಮೆಹಂದಿ ಹಚ್ಚುವುದು ಕೂಡ ಹಬ್ಬದ ರಂಗನ್ನು ಹೆಚ್ಚಾಗುವಂತೆ ಮಾಡುತ್ತದೆ. ಈ ಈದ್-ಉಲ್-ಫಿತರ್ ಹಬ್ಬಕ್ಕೆ ಕೈ ತುಂಬ ಮೆಹಂದಿ ಹಚ್ಚಿ ಹಬ್ಬದ ಮೆರಗನ್ನು ಹೆಚ್ಚಿಸಬೇಕೆಂದು ಕೊಂಡವರಿಗೆ ವಿಭಿನ್ನ ಮೆಹಂದಿ ಡಿಸೈನ್ ಐಡಿಯಾಗಳು ಇಲ್ಲಿವೆ.

Eid-ul-Fitr 2024:ರಂಜಾನ್ ಹಬ್ಬದ ಸಂಭ್ರಮ ಹೆಚ್ಚಿಸಲು ಆಕರ್ಷಕ ಮೆಹಂದಿ ಡಿಸೈನ್ಸ್​​​​
Eid Mehndi Designs
Image Credit source: Pinterest
Follow us on

ಹಬ್ಬಗಳು ಬಂತೆಂದರೆ ಆ ದಿನದ ಸಂಭ್ರಮವನ್ನು ಪದಗಳಲ್ಲಿ ವರ್ಣಿಸುವುದು ಕಷ್ಟ. ಆಚರಣೆಗಳಲ್ಲಿ ಭಿನ್ನತೆಯಿದ್ದರೂ ಸಡಗರ ಮಾತ್ರ ಜೋರಾಗಿಯೇ ಇರುತ್ತದೆ. ಹೌದು, ಈ ರಂಜಾನ್ ಇಸ್ಲಾಂನಲ್ಲಿ ಅತ್ಯಂತ ಪವಿತ್ರವಾದ ತಿಂಗಳಾಗಿದೆ. ಮುಸ್ಲಿಂ ಬಾಂಧವರು ಅದ್ದೂರಿಯಾಗಿ ಆಚರಿಸುವ ಈ ಹಬ್ಬದ ಆಚರಣೆಯು ಈ ಬಾರಿ ಏಪ್ರಿಲ್ 10ರಂದು ನಡೆಯಲಿದೆ. ಆದರೆ, ಚಂದ್ರ ದರ್ಶನವಾದ ನಂತರ ಮುಸ್ಲಿಮರು ಹಬ್ಬವನ್ನು ಆಚರಿಸುತ್ತಾರೆ.

ಹೂವಿನ ಮೆಹೆಂದಿ ಡಿಸೈನ್:

ಹೂವಿನ ಮೆಹಂದಿ ಮಾದರಿಗಳು ಅತ್ಯುತ್ತಮ ಮೆಹಂದಿ ಡಿಸೈನ್ ಆಗಿದೆ. ಈ ಡಿಸೈನ್ ಕೈಯನ್ನು ಸಂಕೀರ್ಣವಾದ ಹೂವಿನ ಮಾದರಿಯಿಂದ ಭರ್ತಿ ಮಾಡಿ ಎಲೆಗಳು ಮತ್ತು ಬಳ್ಳಿಗಳೊಂದಿಗೆ ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.

ಚಂದ್ರನ ಮೆಹೆಂದಿ ಡಿಸೈನ್:

ಚಂದ್ರನ ವಿನ್ಯಾಸಗಳು ಈದ್ ಆಚರಣೆಗಳಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಕೈಯ ಮಧ್ಯದಲ್ಲಿ ನಕ್ಷತ್ರಗಳನ್ನು ಹೊಂದಿರುವ ಸುಂದರವಾದ ಅರ್ಧಚಂದ್ರಾಕೃತಿಯ ವಿನ್ಯಾಸವನ್ನು ಕೈಯನ್ನು ಅಂದವನ್ನು ಹೆಚ್ಚಿಸಿ ಹಬ್ಬಕ್ಕೆ ಹೇಳಿಮಾಡಿಸಿದ್ದಾಗಿದೆ.

ಅರೇಬಿಕ್ ಮೆಹಂದಿ ಡಿಸೈನ್:

ಅರೇಬಿಕ್ ಮೆಹಂದಿ ವಿನ್ಯಾಸಗಳು ಅತ್ಯಂತ ಮೋಡಿ ಮಾಡುವ ಆಕರ್ಷಕ ಡಿಸೈನ್ ಗಳಾಗಿದ್ದು, ಮುಖ್ಯವಾಗಿ ಹೂವಿನ ಮಾದರಿಗಳನ್ನು ಒಳಗೊಂಡಿರುತ್ತದೆ. ಹೂವುಗಳು ಬಳ್ಳಿಯಿರುವ ಈ ವಿನ್ಯಾಸವನ್ನು ಎಲ್ಲರೂ ಇಷ್ಟ ಪಡುತ್ತಾರೆ.

ಇದನ್ನೂ ಓದಿ: ರಂಜಾನ್ ಸ್ಪೆಷಲ್; ಮಾರುಕಟ್ಟೆಗೆ ಎಂಟ್ರಿಕೊಟ್ಟ ಗೋಣಿಚೀಲದ ಕುರ್ತಾ-ಪೈಜಾಮ

ಭಾರತೀಯ ಮೆಹಂದಿ ವಿನ್ಯಾಸಗಳು:

ಭಾರತೀಯ ಮೆಹಂದಿ ವಿನ್ಯಾಸಗಳಲ್ಲಿ ಹೆಚ್ಚಾಗಿ ಲೆಹೆಂಗಾ ಅಥವಾ ಸಲ್ವಾರ್ ಕಮೀಜ್ ಬಟ್ಟೆಗಳಂತಹ ಡಿಸೈನ್ ಗಳನ್ನು ಕಾಣಬಹುದು. ಅದಲ್ಲದೇ, ಮೆಶ್‌ವರ್ಕ್‌ಗಳು ಮತ್ತು ಪೈಸ್ಲಿಗಳು ಕೈಗಳ ಮೇಲೆ ಹೂವಿನ ಮಾದರಿಗಳನ್ನು ಒಳಗೊಂಡಿದ್ದು ಕೈಯನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.

ಪಾಕಿಸ್ತಾನಿ ಮೆಹೆಂದಿ ವಿನ್ಯಾಸಗಳು:

ಪಾಕಿಸ್ತಾನಿ ಮೆಹೆಂದಿ ಡಿಸೈನ್ ಗಳಲ್ಲಿ ಸಾಮಾನ್ಯವಾಗಿ ಹೂವುಗಳು, ನವಿಲುಗಳು ಸೇರಿದಂತೆ ವಿಶಿಷ್ಟ ವಿನ್ಯಾಸಗಳು ನೋಡುವುದಕ್ಕೆ ಆಕರ್ಷಕವಾಗಿರುತ್ತದೆ. ಈ ಡಿಸೈನ್ ಗಳಲ್ಲಿ ಮೊಘಲ್ ವಾಸ್ತುಶಿಲ್ಪ ಮತ್ತು ವಿನ್ಯಾಸವನ್ನು ಕಾಣಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ