AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Event Calendar October 2026: ಅಕ್ಟೋಬರ್ ತಿಂಗಳಲ್ಲಿ ಆಚರಿಸಲಾಗುವ ರಾಷ್ಟ್ರೀಯ, ಅಂತಾರಾಷ್ಟ್ರೀಯ ದಿನಾಚರಣೆಗಳ ಪಟ್ಟಿ ಇಲ್ಲಿದೆ

ಪ್ರತಿಯೊಂದು ತಿಂಗಳಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ, ಸಾಮಾಜಿಕ, ಸಂಸ್ಕೃತಿ, ಪರಿಸರ, ಕಲೆ, ಹವಾಮಾನ, ಆರೋಗ್ಯ, ಜನ್ಮದಿನಗೆ ಸಂಬಂಧಪಟ್ಟ ವಿಶೇಷ ದಿನಗಳನ್ನು ಕಾಣಬಹುದಾಗಿದೆ. ಹತ್ತನೇ ತಿಂಗಳಾದ ಅಕ್ಟೋಬರ್ ನಲ್ಲಿ ವಿವಿಧ ಉದ್ದೇಶಗಳಿಂದ ವಿಶೇಷ ದಿನಗಳನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

Event Calendar October 2026: ಅಕ್ಟೋಬರ್ ತಿಂಗಳಲ್ಲಿ ಆಚರಿಸಲಾಗುವ ರಾಷ್ಟ್ರೀಯ, ಅಂತಾರಾಷ್ಟ್ರೀಯ ದಿನಾಚರಣೆಗಳ ಪಟ್ಟಿ ಇಲ್ಲಿದೆ
Event Calendar OctoberImage Credit source: Getty Images
ಸಾಯಿನಂದಾ
|

Updated on: Sep 24, 2026 | 4:55 PM

Share

2026 ಈ ವರ್ಷದಲ್ಲಿ ತಿಂಗಳು ದಿನಗಳಂತೆ, ದಿನಗಳು ಕ್ಷಣಗಳಂತೆ ಕಳೆಯುತ್ತಿರುವುದು ತಿಳಿಯುತ್ತಲೇ ಇಲ್ಲ. ಹೌದು, ಕಣ್ಣು ಮುಚ್ಚಿ ಬಿಡುವುದರೊಳಗೆ ಇದೀಗ ಅಕ್ಟೋಬರ್ ತಿಂಗಳಿಗೆ ಕಾಲಿಡಲು ಸಜ್ಜಾಗಿದ್ದೇವೆ. ಈ ತಿಂಗಳಲ್ಲಿ ವಿವಿಧ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಆಚರಣೆಗಳಿವೆ. ಒಂದು ನಿರ್ದಿಷ್ಟ ಉದ್ದೇಶಗಳಿಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ಈ ವಿಶೇಷ ದಿನಗಳನ್ನು (day special) ಆಚರಿಸಲಾಗುತ್ತದೆ. ಹಾಗಾದ್ರೆ ಈ ತಿಂಗಳಲ್ಲಿ ಯಾವೆಲ್ಲಾ ದಿನಾಚರಣೆಗಳಿವೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಶೇಷ ದಿನಗಳ ಪಟ್ಟಿ ಇಲ್ಲಿದೆ

  • ಅಕ್ಟೋಬರ್ 01- ಅಂತಾರಾಷ್ಟ್ರೀಯ ಹಿರಿಯರ ದಿನ
  • ಅಕ್ಟೋಬರ್ 01- ಅಂತಾರಾಷ್ಟ್ರೀಯ ಕಾಫಿ ದಿನ
  • ಅಕ್ಟೋಬರ್ 02- ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ
  • ಅಕ್ಟೋಬರ್ 02- ಗಾಂಧಿ ಜಯಂತಿ
  • ಅಕ್ಟೋಬರ್ 02- ಅಂತಾರಾಷ್ಟ್ರೀಯ ಅಹಿಂಸಾ ದಿನ
  • ಅಕ್ಟೋಬರ್ 03 – ವಿಶ್ವ ಪ್ರಕೃತಿ ದಿನ
  • ಅಕ್ಟೋಬರ್ 04- ವಿಶ್ವ ಪ್ರಾಣಿ ಕಲ್ಯಾಣ
  • ಅಕ್ಟೋಬರ್ 04- ವಿಶ್ವ ಆವಾಸಸ್ಥಾನ ದಿನ
  • ಅಕ್ಟೋಬರ್ 05- ವಿಶ್ವ ಶಿಕ್ಷಕರ ದಿನ
  • ಅಕ್ಟೋಬರ್ 07 – ವಿಶ್ವ ಹತ್ತಿ ದಿನ
  • ಅಕ್ಟೋಬರ್ 08 – ಭಾರತೀಯ ವಾಯುಪಡೆ ದಿನ
  • ಅಕ್ಟೋಬರ್ 09- ವಿಶ್ವ ಅಂಚೆ ದಿನ
  • ಅಕ್ಟೋಬರ್ 10 – ವಿಶ್ವ ಮಾನಸಿಕ ಆರೋಗ್ಯ ದಿನ
  • ಅಕ್ಟೋಬರ್ 10: ವಿಶ್ವ ದೃಷ್ಟಿ ದಿನ
  • ಅಕ್ಟೋಬರ್ 11- ಅಂತಾರಾಷ್ಟ್ರಿಯ ಹೆಣ್ಣು ಮಕ್ಕಳ ದಿನ
  • ಅಕ್ಟೋಬರ್ 12 – ವಿಶ್ವ ಸಂಧಿವಾತ ದಿನ
  • ಅಕ್ಟೋಬರ್ 14 – ವಿಶ್ವ ಮೊಟ್ಟೆ ದಿನ
  • ಅಕ್ಟೋಬರ್ 15- ವಿಶ್ವ ವಿದ್ಯಾರ್ಥಿಗಳ ದಿನ
  • ಅಕ್ಟೋಬರ್ 15 – ಜಾಗತಿಕ ಕೈತೊಳೆಯುವ ದಿನ
  • ಅಕ್ಟೋಬರ್ 16- ವಿಶ್ವ ಆಹಾರ ದಿನ
  • ಅಕ್ಟೋಬರ್ 17 – ಅಂತಾರಾಷ್ಟ್ರೀಯ ಬಡತನ ನಿರ್ಮೂಲನಾ ದಿನ
  • ಅಕ್ಟೋಬರ್ 21 – ಪೊಲೀಸ್ ಸ್ಮರಣಾರ್ಥ ದಿನ
  • ಅಕ್ಟೋಬರ್ 24 – ವಿಶ್ವಸಂಸ್ಥೆಯ ದಿನ
  • ಅಕ್ಟೋಬರ್ 24 – ವಿಶ್ವ ಪೋಲಿಯೋ ದಿನ
  • ಅಕ್ಟೋಬರ್ 25 – ರಾಷ್ಟ್ರೀಯ ಆಯುರ್ವೇದ ದಿನ
  • ಅಕ್ಟೋಬರ್ 29 – ವಿಶ್ವ ಸ್ಟ್ರೋಕ್ ದಿನ
  • ಅಕ್ಟೋಬರ್ 31- ರಾಷ್ಟ್ರೀಯ ಏಕತಾ ದಿನ

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More