Everyday hair care: ನಿಮ್ಮ ಕೂದಲು ಉದುರಲು ಈ ಆಹಾರಗಳೇ ಕಾರಣ

ಕೂದಲು ಸೊಂಪಾಗಿ ಬೆಳೆಯಬೇಕು, ಉದುರಬಾರದು ಎಂದು ನಾನಾ ರೀತಿಯ ಕಸರತ್ತು ಮಾಡುತ್ತೇವೆ. ಈ ವಿಷಯದಲ್ಲಿ ಹುಡುಗಿಯರು ಮಾತ್ರವಲ್ಲ, ಹುಡುಗರು ಕೂಡ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಕೂದಲನ್ನು ಚೆನ್ನಾಗಿ ಬೆಳೆಸುವುದು ಮಾತ್ರವಲ್ಲ ಅದು ಉದುರಿ ಹೋಗದಂತೆ ಚೆನ್ನಾಗಿ ಕಾಪಾಡಿಕೊಳ್ಳುವುದು ಕೂಡ ಬಹಳ ಮುಖ್ಯವಾಗುತ್ತದೆ. ಅದರಲ್ಲಿಯೂ ನಾವು ಸೇವನೆ ಮಾಡುವ ಕೆಲವು ಆಹಾರಗಳು ಕೂದಲು ಉದುರುವುದಕ್ಕೆ ಮುಖ್ಯ ಕಾರಣವಾಗಬಹುದು. ಹೌದು ಇದು ಸತ್ಯ. ಆಹಾರಗಳು ಕೂಡ ಕೂದಲಿನ ಆರೋಗ್ಯದಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಹಾಗಾಗಿ ಯಾವ ರೀತಿಯ ಆಹಾರಗಳನ್ನು ಸೇವನೆ ಮಾಡಬಾರದು ಎಂಬುದು ತಿಳಿದಿರಬೇಕಾಗುತ್ತದೆ.

Everyday hair care: ನಿಮ್ಮ ಕೂದಲು ಉದುರಲು ಈ ಆಹಾರಗಳೇ ಕಾರಣ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Oct 12, 2024 | 10:29 AM

ಕೂದಲು ಸೌಂದರ್ಯದ ಪ್ರತೀಕ. ಇದು ಸೊಂಪಾಗಿ ಬೆಳೆಯಬೇಕು, ಉದುರಬಾರದು ಎಂದು ನಾನಾ ರೀತಿಯ ಕಸರತ್ತು ಮಾಡುತ್ತೇವೆ. ಈ ವಿಷಯದಲ್ಲಿ ಹುಡುಗಿಯರು ಮಾತ್ರವಲ್ಲ, ಹುಡುಗರು ಕೂಡ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಕೂದಲನ್ನು ಚೆನ್ನಾಗಿ ಬೆಳೆಸುವುದು ಮಾತ್ರವಲ್ಲ ಅದು ಉದುರಿ ಹೋಗದಂತೆ ಚೆನ್ನಾಗಿ ಕಾಪಾಡಿಕೊಳ್ಳುವುದು ಕೂಡ ಬಹಳ ಮುಖ್ಯವಾಗುತ್ತದೆ. ಅದರಲ್ಲಿಯೂ ನಾವು ಸೇವನೆ ಮಾಡುವ ಕೆಲವು ಆಹಾರಗಳು ಕೂದಲು ಉದುರುವುದಕ್ಕೆ ಮುಖ್ಯ ಕಾರಣವಾಗಬಹುದು. ಹೌದು ಇದು ಸತ್ಯ. ಆಹಾರಗಳು ಕೂಡ ಕೂದಲಿನ ಆರೋಗ್ಯದಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಹಾಗಾಗಿ ಯಾವ ರೀತಿಯ ಆಹಾರಗಳನ್ನು ಸೇವನೆ ಮಾಡಬಾರದು ಎಂಬುದು ತಿಳಿದಿರಬೇಕಾಗುತ್ತದೆ.

ಕೂದಲು ಉದುರಲು ಕಾರಣವಾಗುವ ಆಹಾರಗಳ ಬಗ್ಗೆ ಮನೋಜ್ ಮೋಹನ್ ಎಂಬುವರು ತಮ್ಮ ಇನ್ಸ್ಟಾ ಖಾತೆಯಲ್ಲಿ (i_manoj96) ಮಾಹಿತಿ ಹಂಚಿಕೊಂಡಿದ್ದು ನೀವು ಕೂಡ ಇದನ್ನು ಟ್ರೈ ಮಾಡಿ ನೋಡಬಹುದಾಗಿದೆ.

  • ಸಕ್ಕರೆ ಬೆರೆಸಿದ ಆಹಾರಗಳು: ಅತಿಯಾದ ಸಕ್ಕರೆ ಸೇವನೆಯು ಇನ್ಸುಲಿನ್ ಪ್ರತಿರೋಧಕ್ಕೆ ಕಾರಣವಾಗಬಹುದು, ಇದು ನಿಮ್ಮ ಕೂದಲಿಗೆ ಹಾನಿ ಮಾಡುತ್ತದೆ.
  • ಸಂಸ್ಕರಿಸಿದ ಕಾರ್ಬೋಹೈಡ್ರೇಟ್ಗಳು: ಬಿಳಿ ಬ್ರೆಡ್ ಮತ್ತು ಪೇಸ್ಟ್ರಿಗಳಂತಹ ಸಕ್ಕರೆ ಅಧಿಕವಾಗಿರುವ ವಸ್ತುಗಳನ್ನು ಸೇವಿಸುವುದರಿಂದ ಕೂದಲಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.
  • ಕರಿದ ಆಹಾರ: ಇದರಲ್ಲಿ ಹಾನಿಕಾರಕ ಕೊಬ್ಬುಗಳು ಹೆಚ್ಚಾಗಿರುತ್ತವೆ, ಇದು ಉರಿಯೂತ ಮತ್ತು ಕಳಪೆ ಆರೋಗ್ಯಕ್ಕೆ ಕಾರಣವಾಗಬಹುದು, ಹಾಗಾಗಿ ಇದು ಕೂಡ ಕೂದಲಿನ ಮೇಲೆ ಪರಿಣಾಮ ಬೀರುತ್ತದೆ.
  • ಆಲ್ಕೋಹಾಲ್: ಅತಿಯಾದ ಆಲ್ಕೋಹಾಲ್ ಸೇವನೆಯು ದೇಹದ ನಿರ್ಜಲೀಕರಣಕ್ಕೆ ಕಾರಣವಾಗಬಹುದು ಮತ್ತು ಪೌಷ್ಠಿಕಾಂಶದ ಕೊರತೆಗೂ ಕಾರಣವಾಗುವುದರಿಂದ ಕೂದಲಿನ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.
  • ಕೆಫೀನ್: ಇದರ ಮಿತ ಬಳಕೆಯು ಸಾಮಾನ್ಯವಾಗಿ ಸುರಕ್ಷಿತವಾಗಿದ್ದರೂ, ಆ ಪ್ರಮಾಣ ಹೆಚ್ಚಾದರೆ ವಿಟಮಿನ್ ಕೊರತೆ ಮತ್ತು ನಿರ್ಜಲೀಕರಣಕ್ಕೆ ಕಾರಣವಾಗಬಹುದು.
  • ಹೆಚ್ಚು ಸಂಸ್ಕರಿಸಿದ ಆಹಾರಗಳು: ಇಂತಹ ಆಹಾರಗಳ ಸೇವನೆ ಅನಾರೋಗ್ಯಕ್ಕೆ ಕಾರಣವಾಗಬಹುದು, ಇದು ಕೂದಲಿನ ಮೇಲೆ ಪರಿಣಾಮ ಬೀರುತ್ತದೆ.
  • ಕಡಿಮೆ ಪ್ರೋಟೀನ್ ಇರುವ ಆಹಾರಗಳು: ಕೂದಲಿನ ಬೆಳವಣಿಗೆಗೆ ಪ್ರೋಟೀನ್ ಅವಶ್ಯಕ. ಇದರ ಕೊರತೆಯಿರುವ ಆಹಾರವು ಕೂದಲನ್ನು ದುರ್ಬಲಗೊಳಿಸುವುದಲ್ಲದೆ ತೆಳುವಾಗಿಸುತ್ತದೆ.
  • ಅತಿಯಾದ ಉಪ್ಪು ಮಿಶ್ರಿತ ಆಹಾರ: ಅತಿಯಾದ ಉಪ್ಪಿನ ಸೇವನೆಯು ನಿರ್ಜಲೀಕರಣಕ್ಕೆ ಕಾರಣವಾಗಬಹುದು ಮತ್ತು ಕೂದಲಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
  • ಡಯಟ್ ಸೋಡಾ: ಡಯಟ್ ಪಾನೀಯಗಳಲ್ಲಿನ ರಾಸಾಯನಿಕಗಳು ಮತ್ತು ಕೃತಕ ಸಿಹಿಕಾರಕಗಳಿಂದ ನಿಮ್ಮ ದೇಹದ ಪೌಷ್ಠಿಕಾಂಶದ ಸಮತೋಲನದ ಮೇಲೆ ಪರಿಣಾಮ ಬೀರಬಹುದು, ಇದು ನಿಮ್ಮ ಕೂದಲಿನ ಆರೋಗ್ಯವನ್ನು ಹದಗೆಡಿಸುತ್ತದೆ.
  • ಫಾಸ್ಟ್ ಫುಡ್: ಸಾಮಾನ್ಯವಾಗಿ ಕಾರ್ಬೋಹೈಡ್ರೇಟ್ಗಳು, ಕೆಟ್ಟ ಕೊಬ್ಬುಗಳು ಮತ್ತು ಸೋಡಿಯಂನಿಂದ ಸಮೃದ್ಧವಾಗಿರುವ ಆಹಾರಗಳಲ್ಲಿ ಪೋಷಕಾಂಶ ಇರುವುದಿಲ್ಲ ಹಾಗಾಗಿ ಇವು ಅನಾರೋಗ್ಯಕರ ಕೂದಲಿಗೆ ಕಾರಣವಾಗಬಹುದು.
  • ಕಡಿಮೆ ಕೊಬ್ಬಿನ ಆಹಾರ: ಕೂದಲಿನ ಆರೋಗ್ಯಕ್ಕೆ ಅಗತ್ಯವಾದ ಕೊಬ್ಬಿನಾಮ್ಲಗಳು ಮುಖ್ಯವಾಗಿರುವುದರಿಂದ ಕಡಿಮೆ ಕೊಬ್ಬಿನ ಆಹಾರವು ಅಸಮರ್ಪಕತೆಗೆ ಕಾರಣವಾಗಬಹುದು.
  • ಕೃತಕ ಸೇರ್ಪಡೆಗಳು: ಕೃತಕ ರುಚಿಗಳು, ಬಣ್ಣಗಳು ಮತ್ತು ಸಂರಕ್ಷಕಗಳನ್ನು ಹೊಂದಿರುವ ಆಹಾರಗಳು ದೇಹದ ಪ್ರಕ್ರಿಯೆಗಳಿಗೆ ಅಡ್ಡಿಪಡಿಸಬಹುದು ಮತ್ತು ನಿಮ್ಮ ಕೂದಲಿನ ಸ್ಥಿತಿಯ ಮೇಲೆ ಪರಿಣಾಮ ಬೀರಬಹುದು.

ಹಾಗಾಗಿ ಆರೋಗ್ಯಕರ ಆಹಾರವನ್ನು ಸೇವನೆ ಮಾಡಿ. ನಿಮ್ಮ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:25 am, Sat, 12 October 24