Solo Bike Ride: ಡಯಾಬಿಟಿಸ್ ವಿರುದ್ದ ಎಚ್ಚರಿಸಲೆಂದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಒಂದು Solo ಬೈಕ್ ರೈಡ್!

ವೃತ್ತಿ ಜೀವನದಲ್ಲಿ ಯಾವೊತ್ತೂ ಹೆಚ್ಚು ಲಾಭಕೋರತನ ಅಥವಾ ಮೋಸಗಳು ಇರಬಾರದೆಂದು ಹೇಳುತ್ತಿದ್ದ ತನ್ನ ತಾಯಿಯ ಮಾತುಗಳನ್ನು ಶಿರಸಾವಹಿಸಿ ಪಾಲಿಸಲು ಬೆಂಗಳೂರಿನವರೇ ಆದ ಕ್ರಾಂತಿ ಕೆ. ಆರ್ ಅಣಿಯಾಗುತ್ತಿದ್ದಾರೆ. ಮೇಲಿಂದ ಆ ತಾಯಿ ತಥಾಸ್ತು ಅನ್ನದೇ ಇರಲಾರಳು ಎಂಬ ನಂಬಿಕೆ ಆತನ ತಂದೆಯದು. ಮುಂದೆ ಓದಿ...

Solo Bike Ride: ಡಯಾಬಿಟಿಸ್ ವಿರುದ್ದ ಎಚ್ಚರಿಸಲೆಂದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಒಂದು Solo ಬೈಕ್ ರೈಡ್!
ಡಯಾಬಿಟಿಸ್ ವಿರುದ್ದ ಎಚ್ಚರಿಸಲೆಂದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಒಂದು Solo ಬೈಕ್ ರೈಡ್!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jun 20, 2022 | 2:00 PM

Fathers Day ಸಂದರ್ಭದಲ್ಲಿ ಮಗನ ಸಾಮಾಜಿಕ ಕಳಕಳಿ ನೆನೆದು ಅಪ್ಪನ ಸ್ವಗತ ಮಾತುಗಳು ಇಲ್ಲಿವೆ. ಮಧುಮೇಹವೆಂಬ ರಾಕ್ಷಸ ಅನಾರೋಗ್ಯಕ್ಕೆ 4 ತಿಂಗಳ ಹಿಂದೆ ಅಮ್ಮ ಸತ್ತಾಗ ಕಂಗಾಲಾದ ಮಗ, ಅಪ್ಪನ ಪಾತ್ರಧಾರಿಯಾಗಿ ತಾಯಿಯಂತೆ ತನ್ನ ಏಕಾಂಗಿ ಅಪ್ಪನನ್ನು ಸಲಹುವ ಪರಿಯ ಪರಿಚಯ ಇಲ್ಲಿದೆ. ನನ್ನ ಬಾಳ ಸಂಗಾತಿ ಸತ್ತ ಮೇಲೆ ನನ್ನ ಮಗನೇ ನನಗೆ ತಾಯಿಯಾಗಿ ಸಲಹುತ್ತಿದ್ದಾನೆ- ಇದು ಬಹುತೇಕ ಅಪ್ಪಂದಿರ ಹೃದಯತುಂಬಿದ ಮಾತು. ಲೇಖಕ ಕೇಶವ ರೆಡ್ಡಿ ಹಂದ್ರಾಳ ಅವರು (Keshava Reddy Handrala) ತುಮಕೂರು ಜಿಲ್ಲೆಯವರು. ಕೆಎಎಸ್ ಅಧಿಕಾರಿಯಾಗಿ ನಿವೃತ್ತರಾದವರು. ಅವರು ಬರೆದ ಸುಮಾರು ಐನೂರು ಕಥೆಗಳು, ಮುನ್ನೂರು ಪ್ರಬಂಧಗಳು ಕನ್ನಡದಲ್ಲಿ ಪ್ರಕಟಗೊಂಡಿವೆ.

ಸ್ನೇಹಿತರೇ ಇವನು ನನ್ನ ಮಗ ಕ್ರಾಂತಿ ಕೆ. ಆರ್ (Kranti K R) ತನ್ನ ವೃತ್ತಿಯ ಜೊತೆ ಜೊತೆಗೆ ಈ ಹತ್ತು ವರ್ಷಗಳಿಂದಲೂ ಸಮಾಜದ ಅಸಹಾಯಕ ವರ್ಗಕ್ಕೆ ( ವೃದ್ಧರು, ಅಂಗವಿಕಲರು, ಅನಾಥ ರೋಗಿಗಳು) ಒಂದಿಷ್ಟು ಸಹಾಯ ಮಾಡಿಕೊಂಡು ಬಂದವನು. ನಾಲ್ಕು ತಿಂಗಳ ಹಿಂದೆ ಅವನ ಪ್ರೀತಿಯ ಅಮ್ಮ ಅಂದರೆ ನನ್ನ ಹೆಂಡತಿ ಕಾರ್ಡಿಯಾಕ್ ಅರೆಸ್ಟ್ ನಿಂದ ಸಾಯಲು ಸಕ್ಕರೆ ಕಾಯಿಲೆ ಕೂಡ ತನ್ನ ಪಾಲು ಕೊಟ್ಟಿತ್ತು. ಆ ಕಾರಣದಿಂದಾಗಿ ಇವನು 14 -07- 2022 ರಿಂದ ಒಂದು ತಿಂಗಳ ಕಾಲ ಕನ್ಯಾಕುಮಾರಿಯಿಂದ ಕಾಶ್ಮಿರದವರೆಗೆ ರಾಯಲ್ ಎನ್ಫೀಲ್ಡ್ ಮೋಟಾರ್ ಬೈಕಿನಲ್ಲಿ ಸಂಚರಿಸುತ್ತಾ (ಸೋಲೋ ಬೈಕ್ ರೈಡ್), ಸಕ್ಕರೆ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸುವ ಸದುದ್ದೇಶ ಹೊಂದಿದ್ದಾನೆ. ಇವನ ಈ ಅಭಿಯಾನದಲ್ಲಿ ಅವನೊಂದಿಗಿರುವ ಬಯಸುವವರು ಅವನ ರೈಡ್​ ಗೆ ತಮ್ಮ ಕೈಲಾದಷ್ಟು ಸಹಾಯ ಮಾಡಬಹುದು. ಈ ಮೂಲಕ ಸಕ್ಕರೆ ಕಾಯಿಲೆ ವಿರುದ್ದದ ಜಾಗೃತಿ ಅಭಿಯಾನದಲ್ಲಿ ನೀವೂ ಭಾಗವಹಿಸಬಹುದು. ಇದಕ್ಕೆ THE GOD RIDE ಎಂದು ಹೆಸರಿಸಲಾಗಿದೆ. GOD ಎಂದರೆ GO DIABETES ಎಂದು ಅರ್ಥ. ಇದೊಂದು ದೇವರ ಕೆಲಸವೇ ಸರಿ.

ಸೋಲೋ ಬೈಕ್ ರೈಡ್ ಹೊರಟಿರುವ ಕ್ರಾಂತಿ ಕೆ. ಆರ್. ನನ್ನ ದೊಡ್ಡ ಮಗ. ಓದಿದ್ದು ಮೆಕಾನಿಕಲ್ ಇಂಜಿನಿಯರಿಂಗ್. ಆದರೆ ಕೃಷಿ ಮತ್ತು ನಿರ್ಮಾಣ ಕ್ಷೇತ್ರದಲ್ಲಿ ಒಲವು ತೋರಿದವ. ಇವನದು ಪ್ರಯೋಗ ಮತ್ತು ಸಾಹಸ ಪ್ರವೃತ್ತಿ. ಇವನ ಸಾಹಸ ಪ್ರವೃತ್ತಿಗಳಿಗೆ ಇವನ ಅಮ್ಮ (ನನ್ನ ಹೆಂಡತಿ) ಸದಾ ಪ್ರೋತ್ಸಾಹಕ್ಕೆ ನಿಲ್ಲುತ್ತಿದ್ದಳು. ಕಾಲೇಜು ದಿನಗಳಿಂದಲೂ ಬೈಕ್ ಮತ್ತು ಕಾರ್ ರೈಡಿಂಗ್ ನಲ್ಲಿ ಪಂಟರ್ ಇವನು. ಕರ್ನಾಟಕ ಮತ್ತು ದಕ್ಷಿಣ ಭಾರತಗಳಲ್ಲಿ ಕೆಲವು ಬೈಕ್ ರೈಡ್ ಗಳನ್ನು ಮಾಡಿದ್ದಾನೆ.

ನಾಲ್ಕು ತಿಂಗಳ ಹಿಂದೆ ಇವರ ಅಮ್ಮ ಹೃದಯಸ್ಥಂಭನದಿಂದ ಮೃತಪಟ್ಟಾಗ 35ರ ವಯಸ್ಸಿನಲ್ಲಿ ಪುಟ್ಟ ಮಗುವಿನಂತೆ ಬಿಕ್ಕಳಿಸಿ ಅತ್ತಿದ್ದ. ಒಂದೂವರೆ ವರ್ಷದ ಹಿಂದೆ ತನ್ನ ತಾಯಿಗೆ ಕೋವಿಡ್ ಬಂದಾಗ ತಾನೇ ತಾಯಿಯಂತೆ ಉಪಚರಿಸಿ, ಆರೈಕೆ ಮಾಡಿದ್ದ. ಕೋವಿಡ್ ನಿಂದಾಗಿ ಡಯಾಬಿಟಿಸ್ ಬಂದಿತ್ತು. ಮತ್ತು ಇದೀಗ ಹೃದಯಸ್ಥಂಭನಕ್ಕೆ ಅದೂ ಒಂದು ಕಾರಣವೆಂದು ಡಾಕ್ಟರ್ ಹೇಳಿದ್ದರು.

Bangalorean on solo bike ride from kanyakumari to kashmir to educate on diabetes

ತಾಯಿಯ ಸ್ಮರಣಾರ್ಥ ಡಯಾಬಿಟಿಸ್ ಬಗ್ಗೆ ಜಾಗೃತಿ ಮೂಡಿಸಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಬೈಕ್ ರೈಡ್

ಹಾಗಾಗಿ ಇವನು ತನ್ನ ತಾಯಿಯ ಸ್ಮರಣಾರ್ಥ ಡಯಾಬಿಟಿಸ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುಮಾರು 10 ಸಾವಿರ ಕಿಲೋ ಮೀಟರ್ ಬೈಕ್ ರೈಡ್ ಹೊರಟಿದ್ದಾನೆ. 2022 ಜುಲೈ 14 ನೇ ತಾರೀಖಿಗೆ ಸೋಲೋ ರೈಡ್ ಶುರುವಾಗಿ 31 ದಿನಗಳಲ್ಲಿ ಮುಗಿಯತ್ತದೆಂದು ಅಂದಾಜಿಸಲಾಗಿದೆ. ತನ್ನ ವೃತ್ತಿ ಜೀವನದಲ್ಲಿ ಯಾವೊತ್ತೂ ಹೆಚ್ಚು ಲಾಭಕೋರತನ ಅಥವಾ ಮೋಸಗಳು ಇರಬಾರದೆಂದು ಹೇಳುತ್ತಿದ್ದ ತನ್ನ ತಾಯಿಯ ಮಾತುಗಳನ್ನು ಶಿರಸಾವಹಿಸಿ ಪಾಲಿಸಲು ಅಣಿಯಾಗುತ್ತಿದ್ದಾನೆ. ಮೇಲಿಂದ ಆ ತಾಯಿ ತಥಾಸ್ತು ಅನ್ನದೇ ಇರಲಾರಳು ಎಂಬ ನಂಬಿಕೆ ನನ್ನದು. ಒಂದಿಷ್ಟು ವೈಯಕ್ತಿಕ ತೊಂದರೆ ತಾಪತ್ರಯಗಳಲ್ಲೂ.. ಬೇರೆಯವರು ತೊಂದರೆಯಲ್ಲಿರೋವಾಗ ತನ್ನ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಾ ಅದರಲ್ಲೇ ಖುಷಿ ಮತ್ತು ಥ್ರಿಲ್ ಪಡೆಯುವ ಸ್ವಭಾವ ಇವನದು. ಇದರಿಂದ ನನಗೂ, ಮನೆಯ ಎಲ್ಲಾ ಸದಸ್ಯರಿಗೂ ಇವನು ಆಪ್ಯಾಯಮಾನ. ಆಲ್ ದಿ ಬೆಸ್ಟ್​ ಮಗನೇ…

Published On - 1:54 pm, Mon, 20 June 22

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್