ನೀವು ಕೂಡ ಬೆಳಗ್ಗೆ ಎದ್ದಕೂಡಲೆ ಮೊಬೈಲ್ ನೋಡುತ್ತೀರಾ?; ಆ ಅಭ್ಯಾಸ ಬಿಟ್ಟುಬಿಡಿ
ಬೆಳಗ್ಗೆ ಎದ್ದಾಗ ಮೊಬೈಲ್ನಲ್ಲಿ ಇ-ಮೇಲ್ ಚೆಕ್ ಮಾಡುವುದು, ವಾಟ್ಸಾಪ್ ನೋಡುವುದು, ಯೂಟ್ಯೂಬ್, ಇನ್ಸ್ಟಾಗ್ರಾಂ ನೋಡುವ ಅಭ್ಯಾಸ ಹಲವರಿಗೆ ಇದೆ. ನಿಮಗೂ ಆ ಅಭ್ಯಾಸವಿದ್ದರೆ ಕೂಡಲೇ ಬಿಟ್ಟು ಬಿಡುವುದು ಉತ್ತಮ.
ನಿಮಗೂ ದಿನವೂ ಬೆಳಗ್ಗೆ ಎದ್ದ ಕೂಡಲೆ ಮೊಬೈಲ್ (Mobile) ನೋಡುವ ಅಭ್ಯಾಸ ಇದೆಯಾ? ಹಾಸಿಗೆಯಲ್ಲಿ ಉರುಳಿಕೊಂಡು ಮೊಬೈಲ್ ನೋಡುತ್ತಾ ಟೈಂ ಪಾಸ್ ಮಾಡುತ್ತೀರಾ? ಹಾಗಿದ್ದರೆ ಆ ಅಭ್ಯಾಸವನ್ನು ಬಿಟ್ಟುಬಿಡಿ. ಬೆಳಗ್ಗೆ ಎದ್ದಕೂಡಲೆ ಮೊಬೈಲ್ ನೋಡುವುದರಿಂದ ಆರೋಗ್ಯಕ್ಕೆ ಬಹಳಷ್ಟು ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ, ಮಲಗುವಾಗ ನಿಮ್ಮ ಮೊಬೈಲನ್ನು ದೂರವಿಟ್ಟು ಮಲಗಿದರೆ ಉತ್ತಮ.
ಈ ಬಗ್ಗೆ ಪೌಷ್ಟಿಕತಜ್ಞ ಲೊವ್ನೀತ್ ಬಾತ್ರಾ ಅವರು ಬೆಳಿಗ್ಗೆ ಯಾಕೆ ಮೊಬೈಲ್ ಫೋನ್ ನೋಡಬಾರದು ಎಂಬುದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಬೆಳಗ್ಗೆ ನಾವು ಎದ್ದಾಗಿನ ನಮ್ಮ ಮೂಡ್ ಬಹಳ ಮುಖ್ಯವಾಗಿರುತ್ತದೆ. ಆ ಸಮಯವನ್ನು ಮೊಬೈಲ್ ನೋಡುತ್ತಾ ಕಳೆದರೆ ನಮ್ಮ ದಿನವೂ ಚೆನ್ನಾಗಿರುವುದಿಲ್ಲ.
ಬೆಳಗ್ಗೆ ಎದ್ದಾಗ ಮೊಬೈಲ್ನಲ್ಲಿ ಇ-ಮೇಲ್ ಚೆಕ್ ಮಾಡುವುದು, ವಾಟ್ಸಾಪ್ ನೋಡುವುದು, ಯೂಟ್ಯೂಬ್, ಇನ್ಸ್ಟಾಗ್ರಾಂ ನೋಡುವ ಅಭ್ಯಾಸ ಹಲವರಿಗೆ ಇದೆ. ಇದರಿಂದ ರಾತ್ರಿಯಿಡೀ ರಿಲ್ಯಾಕ್ಸ್ ಆಗಿದ್ದ ಮೆದುಳಿಗೆ ಇದ್ದಕ್ಕಿದ್ದಂತೆ ಒತ್ತಡ ಬೀಳುತ್ತದೆ. ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಫೋನ್ ಅನ್ನು ನೋಡುವುದರಿಂದ ನಿಮ್ಮ ಸಮಯವೂ ವ್ಯರ್ಥವಾಗುತ್ತದೆ.
ಇದನ್ನೂ ಓದಿ: ನಿದ್ರೆಯಲ್ಲಿ ಕನವರಿಸುವ, ಓಡಾಡುವ ಅಭ್ಯಾಸ ಇದೆಯಾ, ಇದು ಯಾವುದಾದರೂ ರೋಗದ ಲಕ್ಷಣವೇ?
ಸಾಮಾಜಿಕ ಮಾಧ್ಯಮ ಅಥವಾ ಇಮೇಲ್ ಅನ್ನು ಪರಿಶೀಲಿಸುವಾಗ, ಮೆದುಳು ಬಹಳಷ್ಟು ಡೋಪಮೈನ್ ಅನ್ನು ಬಿಡುಗಡೆ ಮಾಡುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಬೆಳಿಗ್ಗೆ ನಮ್ಮ ಫೋನ್‌ಗಳನ್ನು ಮೊದಲು ಪರಿಶೀಲಿಸುವುದರಿಂದ ನಾವು ನಮ್ಮ ಬೆಳಗಿನ ದಿನಚರಿಯನ್ನು ಕಳೆದುಕೊಳ್ಳುತ್ತೇವೆ. ನಾವು ನಮ್ಮ ಫೋನ್‌ಗಳಿಗೆ ನಮ್ಮನ್ನು ಬಿಟ್ಟುಕೊಡುತ್ತೇವೆ. ಇದು ನಮ್ಮ ಆ ದಿನದ ಬಿಹೇವಿಯರ್ ಮತ್ತು ಮೂಡ್ ಮೇಲೂ ಪರಿಣಾಮ ಬೀರುತ್ತದೆ.
View this post on Instagram
ಹೆಚ್ಚಿನ ಜನರಿಗೆ, ಅವರು ಬೆಳಿಗ್ಗೆ ಎದ್ದ ನಂತರ ಅವರ ಮನಸ್ಸಿಗೆ ಬರುವ ಮೊದಲ ವಿಷಯವೆಂದರೆ ಅವರ ಮೊಬೈಲ್ ಫೋನ್‌ಗಳಲ್ಲಿ ಸ್ಕ್ರೋಲಿಂಗ್ ಮಾಡುವುದು. ಇದು ದೊಡ್ಡ ಸಮಸ್ಯೆಯಾಗಿದೆ. ಸಂಶೋಧನೆಯ ಪ್ರಕಾರ, ಸುಮಾರು ಶೇ. 80ರಷ್ಟು ಸ್ಮಾರ್ಟ್‌ಫೋನ್ ಬಳಕೆದಾರರು ಪ್ರತಿದಿನ ಬೆಳಿಗ್ಗೆ ಎದ್ದ 15 ನಿಮಿಷಗಳಲ್ಲಿ ತಮ್ಮ ಮೊಬೈಲ್ ಫೋನ್‌ಗಳನ್ನು ಪರಿಶೀಲಿಸುತ್ತಾರೆ.
ಇದನ್ನೂ ಓದಿ: Tips for Good Sleep: ಒಳ್ಳೆಯ ನಿದ್ರೆಗಾಗಿ ಈ 3 ಅಭ್ಯಾಸಗಳನ್ನು ರೂಢಿಸಿಕೊಳ್ಳಿ
ನಿಮ್ಮ ಆರೋಗ್ಯ ಮತ್ತು ನಿಮ್ಮ ಸಂತೋಷಕ್ಕೆ ಆದ್ಯತೆ ನೀಡಲು ನೀವು ಸಿದ್ಧರಿದ್ದರೆ, ನಿಮ್ಮ ದಿನವನ್ನು ಉತ್ತಮ ರೀತಿಯಲ್ಲಿ ಪ್ರಾರಂಭಿಸಲು ಕೆಲವು ಸಲಹೆಗಳನ್ನು ಅನುಸರಿಸಿ.
– ಬೆಳಗ್ಗೆ ಎದ್ದ ನಂತರ ಫ್ರೆಶ್ ಆಗಿ, ಒಂದು ವಾಕ್ ಅಥವಾ 10 ನಿಮಿಷಗಳ ಕಾಲ ಯೋಗ ಮಾಡಿ.
– 10ರಿಂದ 15 ನಿಮಿಷಗಳ ಕಾಲ ಸ್ವಲ್ಪ ನೈಸರ್ಗಿಕ ಬೆಳಕನ್ನು ಪಡೆಯಿರಿ.
– ಎಳೆ ಬಿಸಿಲಿಗೆ ಮೈಯೊಡ್ಡಿ. ನಂತರ ಉತ್ತಮ ಉಪಹಾರವನ್ನು ಸೇವಿಸಿ.