
ಕಾಜಲ್ (kajal) ಕಣ್ಣಿನ (Eye) ಸೌಂದರ್ಯವನ್ನು ದುಪ್ಪಟ್ಟುಗೊಳಿಸುವುದು ಮಾತ್ರವಲ್ಲದೆ, ಕಣ್ಣುಗಳ ಆರೈಕೆಯಲ್ಲೂ (eye care) ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ಅದಕ್ಕಾಗಿ ಶತಮಾನಗಳಿಂದಲೂ ಹೆಂಗಳೆಯರು (women) ಕಣ್ಣಿಗೆ ಕಾಡಿಗೆ ಹಚ್ಚುತ್ತಿದ್ದಾರೆ. ಅಲ್ಲದೆ ಕಾಡಿಗೆ ಕಾಜಲ್ (kajal) ಹಚ್ಚಿಕೊಳ್ಳದೆ ಮಹಿಳೆಯರ ಮೇಕಪ್ (makeup) ಕೂಡ ಪೂರ್ಣಗೊಳ್ಳುವುದಿಲ್ಲ. ಹಿಂದೆಲ್ಲಾ ಮಹಿಳೆಯರು ಮನೆಯಲ್ಲಿಯೇ ತಯಾರಿಸಿದ ಕಾಡಿಗೆಯನ್ನು ಕಣ್ಣಿಗೆ ಹಚ್ಚಿಕೊಳ್ಳುತ್ತಿದ್ದರು. ಆದ್ರೆ ಈಗಿನ ಕಾಲದ ಮಹಿಳೆಯರು ಮಾರುಕಟ್ಟೆಯಲ್ಲಿ ಸಿಗುವ ಬಗೆ ಬಗೆಯ ಬ್ರ್ಯಾಂಡ್‌ಗಳ ಕೆಮಿಕಲ್ ಯುಕ್ತ ಕಾಜಲ್‌ಗಳನ್ನೇ ಬಳಸುತ್ತಾರೆ. ಹೀಗಿರುವಾಗ ಸುಮ್ಮನೆ ದುಡ್ಡು ಖರ್ಚು ಮಾಡಿ ಇಂತಹ ಪ್ರೋಡಕ್ಟ್‌ಗಳನ್ನು ಖರೀದಿಸುವ ಬದಲು ಮನೆಯಲ್ಲಿಯೇ ಈ ರೀತಿ ನೀವು ನೈಸರ್ಗಿಕವಾಗಿ, ರಾಸಾಯನಿಕ ಮುಕ್ತ ಕಾಜಲ್ ತಯಾರಿಸಿ, ಜೊತೆಗೆ ಕಾಜಲ್‌ಗೆ ಖರ್ಚು ಮಾಡುವ ದುಡ್ಡನ್ನೂ ಉಳಿಸಿ.
ನೀವು ಮನೆಯಲ್ಲಿಯೇ ಕೆಮಿಕಲ್ ಫ್ರೀ ಕಾಜಲ್ ತಯಾರಿಸಬಹುದು. ಅದಕ್ಕಾಗಿ ಒಂದು ದೀಪ ತೆಗೆದುಕೊಂಡು ಅದಕ್ಕೆ ತುಪ್ಪದಲ್ಲಿ ಅದ್ದಿದ ಬತ್ತಿಯನ್ನು ಹಾಕಿ ಅದರ ಮೇಲೆ ಒಂದೆರಡು ಬಾದಾಮಿ ಇಟ್ಟು ದೀಪ ಬೆಳಗಿಸಿ, ನಂತರ ಜ್ವಾಲೆಗೆ ಒಂದು ಪ್ಲೇಟ್ ಮುಚ್ಚಿ. ದೀಪ ಆರಿದ ಮೇಲೆ ಆ ಬಟ್ಟಲನ್ನು ತೆಗೆದುಕೊಂಡು ಅದರಲ್ಲಿ ಸಂಗ್ರಹವಾದ ಕಪ್ಪು ಬಣ್ಣದ ಪುಡಿಯನ್ನು ಸಂಗ್ರಹಿಸಿ ಅದಕ್ಕೆ ತುಪ್ಪ ಅಥವಾ ಸ್ವಲ್ಪ ತೆಂಗಿನ ಎಣ್ಣೆಯನ್ನು ಹಾಕಿ ಮಿಶ್ರಣ ಮಾಡಿ ಡಬ್ಬದಲ್ಲಿ ಸಂಗ್ರಹಿಸಿದರೆ, ಸುಲಭವಾಗಿ ತಯಾರಾಗುತ್ತೆ ಕೆಮಿಕಲ್ ಫ್ರೀ ಕಾಜಲ್. ಈ ಕುರಿತ ವಿಡಿಯೋವನ್ನು _shailashree ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿದೆ.
ಇದನ್ನೂ ಓದಿ: ಹುಡುಗರು ಹೆಚ್ಚಾಗಿ ವಿವಾಹಿತ ಮಹಿಳೆಯರನ್ನೇ ಇಷ್ಟಪಡೋದು ಏಕೆ ಗೊತ್ತಾ?
ವಿಡಿಯೋ ಇಲ್ಲಿದೆ ನೋಡಿ:
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:55 pm, Wed, 9 April 25