AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಮೋಡ್ ಬಳಸುವಾಗ ಯಾವ ರೀತಿ ಫ್ಲಶ್ ಮಾಡಬೇಕು?; ಈ ತಪ್ಪನ್ನೆಂದೂ ಮಾಡಬೇಡಿ

ನೀವು ಕಮೋಡ್ ಬಳಸುವವರಾಗಿದ್ದರೆ ಅದನ್ನು ಯಾವ ರೀತಿ ಬಳಸಬೇಕು, ಯಾವ ರೀತಿ ಬಳಸುವುದು ತಪ್ಪು ಎಂಬುದು ಕೂಡ ತಿಳಿದಿರುವುದು ಅಗತ್ಯ. ಇಲ್ಲವಾದರೆ, ವೈರಾಣುಗಳು ಹರಡುವ ಸಾಧ್ಯತೆ ಕೂಡ ಇರುತ್ತದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

ಕಮೋಡ್ ಬಳಸುವಾಗ ಯಾವ ರೀತಿ ಫ್ಲಶ್ ಮಾಡಬೇಕು?; ಈ ತಪ್ಪನ್ನೆಂದೂ ಮಾಡಬೇಡಿ
ಕಮೋಡ್Image Credit source: iStock
ಸುಷ್ಮಾ ಚಕ್ರೆ
|

Updated on: Jan 27, 2024 | 5:09 PM

Share

ನಮಗೆ ಅನುಕೂಲವಾಗಲೆಂದು ನಾವು ಬಳಸುವ ಪ್ರತಿ ವಸ್ತುವಿನಲ್ಲೂ ನಮಗೆ ಬೇಕಾದಂತೆ ಬದಲಾವಣೆಗಳನ್ನು ಮಾಡಿಕೊಳ್ಳುತ್ತೇವೆ. ಅದರಲ್ಲಿ ಟಾಯ್ಲೆಟ್ ವ್ಯವಸ್ಥೆಯೂ ಒಂದು. ಈಗ ಬಹುತೇಕ ಮನೆಗಳಲ್ಲಿ ಇಂಡಿಯನ್ ಟಾಯ್ಲೆಟ್ ಬದಲಿಗೆ ವೆಸ್ಟರ್ನ್ ಟಾಯ್ಲೆಟ್ ಬಳಕೆಯೇ ಹೆಚ್ಚಾಗಿದೆ. ಹಳೆಯ ಮನೆಗಳಲ್ಲಿ ಮಾತ್ರ ಈಗ ಇಂಡಿಯನ್ ಟಾಯ್ಲೆಟ್ ಬಳಸುವವರಿದ್ದಾರೆ. ಅವರಲ್ಲೂ ಅನೇಕರು ಕಾಲು ನೋವು, ಸೊಂಟ ನೋವೆಂದು ಕಮೋಡ್​ಗೆ ತಮ್ಮ ಟಾಯ್ಲೆಟ್ ರೂಂನಲ್ಲಿ ಸ್ಥಾನ ನೀಡಿದ್ದಾರೆ. ಆದರೆ, ಈ ಕಮೋಡ್​ಗಳನ್ನು ನೀವು ಹೇಗೆ ಬಳಸುತ್ತೀರಾ?ಎಂಬುದು ಕೂಡ ಮುಖ್ಯವಾಗುತ್ತದೆ.

ಕಮೋಡ್​ನಲ್ಲಿ ಫ್ಲಶ್ ಮಾಡುವಾಗ ಬಹುತೇಕ ಜನರು ಅದರ ಮುಚ್ಚಳವನ್ನು ತೆರೆದೇ ಇಡುತ್ತಾರೆ. ಆದರೆ, ಅಮೇರಿಕನ್ ಜರ್ನಲ್ ಆಫ್ ಇನ್ಫೆಕ್ಷನ್ ಕಂಟ್ರೋಲ್‌ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದಲ್ಲಿ ಅರಿಝೋನಾ ವಿಶ್ವವಿದ್ಯಾಲಯದ ಸಂಶೋಧಕರು ಟಾಯ್ಲೆಟ್ ಮುಚ್ಚಳವನ್ನು ತೆರೆದಿಡುವ ಮೂಲಕ ಫ್ಲಶ್ ಮಾಡುವುದರಿಂದ ನೀರು ಮತ್ತು ಗಾಳಿಯ ಮೂಲಕ ಸೂಕ್ಷ್ಮ ಜೀವಿಗಳು ಹರಡುತ್ತವೆ ಎಂದಿದ್ದಾರೆ.

ಇದನ್ನೂ ಓದಿ: Ginger Benefits: ಕೂದಲ ಆರೋಗ್ಯಕ್ಕೂ ಶುಂಠಿಗೂ ಏನು ಸಂಬಂಧ?

ನಾವು ಕಮೋಡ್​ ಅನ್ನು ಫ್ಲಶ್ ಮಾಡಿದಾಗ ಮುಚ್ಚಳವು ಮುಚ್ಚಿದ್ದರೂ, ಮುಚ್ಚದೇ ಇದ್ದರೂ ಸೂಕ್ಷ್ಮ ವೈರಲ್ ಕಣಗಳು ನೆಲ ಮತ್ತು ಹತ್ತಿರದ ಮೇಲ್ಮೈಗಳಿಗೆ ಹರಡುತ್ತವೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಕಮೋಡ್​ನ ಮುಚ್ಚಳವನ್ನು ಮುಚ್ಚುವುದರಿಂದ ಬ್ಯಾಕ್ಟೀರಿಯಾಗಳು ಹರಡುವುದನ್ನು ಕಡಿಮೆ ಮಾಡಬಹುದು ಎಂದು ಅವರು ಒತ್ತಿ ಹೇಳಿದ್ದಾರೆ.

ಓಕ್ಲಹೋಮ ವಿಶ್ವವಿದ್ಯಾನಿಲಯವು 2013ರಲ್ಲಿ ಪ್ರಕಟಿಸಿದ ಸಂಶೋಧನೆಯ ಪ್ರಕಾರ, ವಿವಿಧ ರೋಗಕಾರಕಗಳು ಮತ್ತು ನೀರಿನ ಕಣಗಳೊಂದಿಗೆ ಮಲವು ಗಾಳಿಯ ಮೂಲಕ ಮತ್ತು ಮುಚ್ಚಳವಿಲ್ಲದೆಯೇ ಶೌಚಾಲಯವನ್ನು ಫ್ಲಶ್ ಮಾಡಿದ ನಂತರ ಮೇಲ್ಮೈಗಳಲ್ಲಿ ಅಂಟಿಕೊಳ್ಳಬಹುದು ಎಂದು ಕಂಡುಬಂದಿದೆ. ಈ ಕಣಗಳು ಹೆಚ್ಚಾಗಿ ಚಲಿಸುತ್ತವೆ. ಹೀಗಾಗಿ, ಕಮೋಡ್​ ಸೀಟಿನ ಮುಚ್ಚಳವನ್ನು ಮುಚ್ಚುವುದರಿಂದ ಬ್ಯಾಕ್ಟೀರಿಯಾದ ಹರಡುವಿಕೆಯನ್ನು ಕಡಿಮೆ ಮಾಡಬಹುದು.

ಇದನ್ನೂ ಓದಿ: ಟಾಯ್ಲೆಟ್​ನಲ್ಲಿ ತುಂಬ ಹೊತ್ತು ಕುಳಿತುಕೊಳ್ಳುತ್ತೀರಾ?

ಅಲ್ಲದೆ, ಕಮೋಡ್ ಸೀಟಿನ ಮುಚ್ಚಳವನ್ನು ಮುಚ್ಚಿ ಫ್ಲಶ್ ಮಾಡುವುದರಿಂದ ಹೆಚ್ಚು ಶಬ್ದವಾಗುವುದಿಲ್ಲ. ಇದರಿಂದ ಹೊರಗೆ ರೂಂನಲ್ಲಿ ಮಲಗಿದವರಿಗೆ ತೊಂದರೆ ಆಗುವುದಿಲ್ಲ. ಹಾಗೇ, ಇದರಿಂದ ಮಲ ವಿಸರ್ಜನೆ ಬಳಿಕ ಹೆಚ್ಚು ವಾಸನೆ ಹರಡುವುದಿಲ್ಲ. ಕಮೋಡ್ ಸೀಟಿನ ಮುಚ್ಚಳ ತೆರೆದಿಟ್ಟು ಫ್ಲಶ್ ಮಾಡುವುದರಿಂದ ಟಾಯ್ಲೆಟ್ ರೂಂನಲ್ಲಿ ವಾಸನೆ ಹರಡುತ್ತದೆ ಎಂದು ಕೂಡ ಸಂಶೋಧನೆಯಲ್ಲಿ ತಿಳಿಸಲಾಗಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಒಂದು ಆಧಾರ್ ಕಾರ್ಡ್​ಗೆ 2 ಚೀಲ ಯೂರಿಯಾ
ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಒಂದು ಆಧಾರ್ ಕಾರ್ಡ್​ಗೆ 2 ಚೀಲ ಯೂರಿಯಾ
ಪೂಜೆ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವ ಗೃಹಿಣಿಯರು
ಪೂಜೆ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವ ಗೃಹಿಣಿಯರು
‘ನಮ್ಮ ಮನೆ ಹತ್ತಿರವೇ ಅಟ್ಯಾಕ್ ಆಗಿದೆ’: ಪೊಲೀಸ್ ಎದುರು ಪ್ರಥಮ್ ಅಳಲು
‘ನಮ್ಮ ಮನೆ ಹತ್ತಿರವೇ ಅಟ್ಯಾಕ್ ಆಗಿದೆ’: ಪೊಲೀಸ್ ಎದುರು ಪ್ರಥಮ್ ಅಳಲು
ಹುಲಿರಾಯನ ಫೋಸ್​ ಕಂಡು ಹೌದು ಹುಲಿಯಾ ಎಂದ ಪ್ರವಾಸಿಗರು
ಹುಲಿರಾಯನ ಫೋಸ್​ ಕಂಡು ಹೌದು ಹುಲಿಯಾ ಎಂದ ಪ್ರವಾಸಿಗರು
PM Modi Speech Live: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಭಾಷಣದ ನೇರಪ್ರಸಾರ
PM Modi Speech Live: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಭಾಷಣದ ನೇರಪ್ರಸಾರ
ದರ್ಶನ್ ವಿಗ್ ಧರಿಸುತ್ತಾರೆ, ಅದನ್ನು ಹೇಗೆ ಕಿತ್ತುಕೊಳ್ಳಲಾದೀತು? ಪ್ರಥಮ್
ದರ್ಶನ್ ವಿಗ್ ಧರಿಸುತ್ತಾರೆ, ಅದನ್ನು ಹೇಗೆ ಕಿತ್ತುಕೊಳ್ಳಲಾದೀತು? ಪ್ರಥಮ್
ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮೇಘಸ್ಫೋಟ; ದಿಢೀರ್ ಪ್ರವಾಹದಿಂದ ಮೂವರು ಸಾವು
ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮೇಘಸ್ಫೋಟ; ದಿಢೀರ್ ಪ್ರವಾಹದಿಂದ ಮೂವರು ಸಾವು
ಪಹಲ್ಗಾಮ್ ದಾಳಿಗೆ ಭದ್ರತಾ ಲೋಪವೇ ಕಾರಣ: ಖರ್ಗೆ
ಪಹಲ್ಗಾಮ್ ದಾಳಿಗೆ ಭದ್ರತಾ ಲೋಪವೇ ಕಾರಣ: ಖರ್ಗೆ
ಕಾಂಗ್ರೆಸ್​ನ ದಲಿತ ವಿರೋಧಿ ನೀತಿಯಿಂದ ಖರ್ಗೆ ಸಿಎಂ ಆಗಲಿಲ್ಲ: ಜ್ಞಾನೇಂದ್ರ
ಕಾಂಗ್ರೆಸ್​ನ ದಲಿತ ವಿರೋಧಿ ನೀತಿಯಿಂದ ಖರ್ಗೆ ಸಿಎಂ ಆಗಲಿಲ್ಲ: ಜ್ಞಾನೇಂದ್ರ
ಅವಮಾನಗಳ ಹೊರತಾಗಿಯೂ ಸಿಎಂ ವಿರುದ್ಧ ಮಾತಾಡದ ಶಿವಕುಮಾರ್
ಅವಮಾನಗಳ ಹೊರತಾಗಿಯೂ ಸಿಎಂ ವಿರುದ್ಧ ಮಾತಾಡದ ಶಿವಕುಮಾರ್