AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

International Day Of Awareness Of Food Loss And waste 2024: ತಿನ್ನುವ ಹಕ್ಕಿದೆಯೇ ಹೊರತು ಬಿಸಾಡುವ ಹಕ್ಕು ನಮಗಿಲ್ಲ; ತಿನ್ನೋ ಆಹಾರವನ್ನು ವ್ಯರ್ಥ ಮಾಡದಿರೋಣ

ಇಂದು ಜಾಗತಿಕ ಮಟ್ಟದಲ್ಲಿ ಆಹಾರ ನಷ್ಟ ಮತ್ತು ಆಹಾರ ತ್ಯಾಜ್ಯ ಪ್ರಮುಖ ಸಮಸ್ಯೆಯಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಆಹಾರವನ್ನು ವ್ಯರ್ಥ ಮಾಡಬೇಡಿ ಎಂಬುದರ ಬಗ್ಗೆ ಜನರಿಗೆ ಜಗೃತಿ ಮೂಡಿಸಲು ಪ್ರತಿ ವರ್ಷ ಸೆಪ್ಟೆಂಬರ್‌ 29 ರಂದು ಆಹಾರ ನಷ್ಟ ಮತ್ತು ತ್ಯಾಜ್ಯದ ಜಾಗೃತಿ ದಿನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ವಿಶೇಷತೆಯನ್ನು ತಿಳಿಯೋಣ ಬನ್ನಿ.

International Day Of Awareness Of Food Loss And waste 2024: ತಿನ್ನುವ ಹಕ್ಕಿದೆಯೇ ಹೊರತು ಬಿಸಾಡುವ ಹಕ್ಕು ನಮಗಿಲ್ಲ; ತಿನ್ನೋ ಆಹಾರವನ್ನು ವ್ಯರ್ಥ ಮಾಡದಿರೋಣ
International Day Of Awareness Of Food Loss And waste
ಮಾಲಾಶ್ರೀ ಅಂಚನ್​
| Edited By: |

Updated on: Sep 29, 2024 | 10:20 AM

Share

ತಿನ್ನುವ ಪ್ರತಿ ಅಗುಳುನ ಮೇಲೆಯೂ ತಿನ್ನುವವನ ಹೆಸರು ಬರೆದಿದೆ ಎಂಬ ಮಾತಿದೆ. ಆದರೆ ನಮ್ಮಲ್ಲಿಂದು ಶೋಕಿಗೋ, ತಿಳಿವಳಿಕೆಯ ಕೊರತೆಗೋ ಅನ್ನ, ಆಹಾರವನ್ನು ಚೆಲ್ಲುವವರೇ ಅಧಿಕ. ಹೌದು ಹೊಟೇಲ್‌ಗಳಲ್ಲಿ, ಮದುವೆ ಇತ್ಯಾದಿ ಸಮಾರಂಭಗಳಲ್ಲಿ ಇಂತಹ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತಲೇ ಇರುತ್ತವೆ. ಬಟ್ಟಲಿಗೆ ಬೇಕಾಬಿಟ್ಟಿ ತುಂಬಿಸಿಕೊಂಡು ಸ್ವಲ್ಪವೇ ತಿಂದು ಕೊನೆಗೆ ಉಳಿದ ಆಹಾರವನ್ನು ಕಸದ ಬುಟ್ಟಿಗೆ ಚೆಲ್ಲುವ ಅನೇಕರನ್ನು ಕಾಣುತ್ತೇವೆ. ನಮ್ಮಲ್ಲಿ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಆಹಾರ ನಷ್ಟ ಮತ್ತು ಆಹಾರ ತ್ಯಾಜ್ಯ ಪ್ರಮುಖ ಸಮಸ್ಯೆಯಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಆಹಾರವನ್ನು ವ್ಯರ್ಥ ಮಾಡದಿರೊಣ ಎಂಬುದರ ಬಗ್ಗೆ ಜನರಿಗೆ ಜಗೃತಿ ಮೂಡಿಸಲು ಪ್ರತಿ ವರ್ಷ ಸೆಪ್ಟೆಂಬರ್‌ 29 ರಂದು ಆಹಾರ ನಷ್ಟ ಮತ್ತು ತ್ಯಾಜ್ಯದ ಜಾಗೃತಿ ದಿನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಗುತ್ತದೆ.

ಇತಿಹಾಸ:

2019 ರಲ್ಲಿ ವಿಶ್ವಸಂಸ್ಥೆಯ 74 ನೇ ಸಾಮಾನ್ಯ ಸಭೆಯಲ್ಲಿ ಆಹಾರ ಸುರಕ್ಷತೆ ಮತ್ತು ಪೋಷಣೆಯನ್ನು ಉತ್ತೇಜಿಸುವಲ್ಲಿ ಸುಸ್ಥಿರ ಆಹಾರ ಉತ್ಪಾದನೆಯು ವಹಿಸುವ ಮೂಲಭೂತ ಪಾತ್ರವನ್ನು ಗುರುತಿಸಿ ಹಾಗೂ ಆಹಾರ ನಷ್ಟವನ್ನು ತಡೆಯಲು ಅಂತರಾಷ್ಟ್ರೀಯ ಆಹಾರ ನಷ್ಟ ಹಾಗೂ ತ್ಯಾಜ್ಯದ ಬಗ್ಗೆ ಜಾಗೃತಿ ದಿನವನ್ನು ಗೊತ್ತುಪಡಿಸಲಾಯಿತು. ಅಂದಿನಿಂದ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP) ಮತ್ತು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) ಈ ದಿನವನ್ನು ಆಚರಿಸಲು ಒಟ್ಟಾಗಿ ಕಾರ್ಯನಿರ್ವಹಿಸುತ್ತಿದೆ.

ಆಹಾರ ನಷ್ಟ ಮತ್ತು ತ್ಯಾಜ್ಯವನ್ನು ಕಡಿಮೆ ಮಾಡುವುದು ಏಕೆ ಮುಖ್ಯ?

ಆಹಾರ ನಷ್ಟ ಮತ್ತು ಆಹಾರ ತ್ಯಾಜ್ಯವು ನಮ್ಮ ಆಹಾರ ವ್ಯವಸ್ಥೆಗಳ ಸುಸ್ಥಿರತೆಯನ್ನು ಹಾಳು ಮಾಡುತ್ತದೆ. ಹೌದು ಆಹಾರವು ವ್ಯರ್ಥವಾದಾಗ ನೀರು, ಭೂಮಿ, ಶಕ್ತಿ, ಶ್ರಮ ಮತ್ತು ಬಂಡವಾಳ ಸೇರಿದಂತೆ ಆಹಾರವನ್ನು ಉತ್ಪಾದಿಸಲು ಬಳಸಿದ ಎಲ್ಲಾ ಸಂಪನ್ಮೂಲಗಳು ವ್ಯರ್ಥವಾಗುತ್ತದೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) ಪ್ರಕಾರ, ಮಾನವನ ಬಳಕೆಗಾಗಿ ಉತ್ಪಾದಿಸಲಾದ ಎಲ್ಲಾ ರೀತಿಯ ಆಹಾರದ ಮೂರನೇ ಒಂದು ಭಾಗವು ಪ್ರತಿ ವರ್ಷ ವ್ಯರ್ಥವಾಗುತ್ತಿದೆ. ಆಹಾರ ಉತ್ಪಾದನೆಯಿಂದ ಸಂಸ್ಕರಣೆ, ಸಾಗಾಣೆ, ವಿತರಣೆ ಮತ್ತು ಬಳಕೆಯವರೆಗೆ ಅಂದರೆ ಆಹಾರ ಉತ್ಪಾದನೆಯಿಂದ ತಿನ್ನುವವರೆಗೆ ಆಹಾರ ಪೂರೈಕೆ ಸರಪಳಿಯ ಎಲ್ಲಾ ಹಂತಗಳಲ್ಲಿ ಆಹಾರ ನಷ್ಟ ಮತ್ತು ಆಹಾರ ತ್ಯಾಜ್ಯ ಸಂಭವಿಸುತ್ತಿದೆ. ಹೀಗಿರುವಾಗ ಆಹಾರ ನಷ್ಟ ಮತ್ತು ತ್ಯಾಜ್ಯವನ್ನು ಕಡಿಮೆ ಮಾಡುವ ಮೂಲಕ ನಾವು ಆಹಾರ ಮೂಲವನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ಇದು ಇದು ಭವಿಷ್ಯದ ಪೀಳಿಗೆಗೆ ಆಹಾರದ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.

ಅಲ್ಲದೆ ನಾವು ದೊಡ್ಡ ಮಟ್ಟದಲ್ಲಿ ಎಸೆಯುವ ಆಹಾರಗಳು ಭೂಮಿಯಲ್ಲಿ ಕೊಳೆತು ಹಸಿರುಮನೆ ಅನಿಲವನ್ನು ಉತ್ಪಾದಿಸುತ್ತದೆ. ಇದು ಹವಾಮಾನ ಬದಲಾವಣೆಗೆ ಕಾರಣವಾಗಿ ಪರಿಸರ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಆದ್ದರಿಂದ ಆಹಾರ ನಷ್ಟವನ್ನು ತಡೆಗಟ್ಟುವುದು ಅತ್ಯಗತ್ಯ. ಇದಲ್ಲದೆ ಆಹಾರ ನಷ್ಟ ಮತ್ತು ತ್ಯಾಜ್ಯವು ಆಹಾರದ ಒಟ್ಟಾರೆ ಲಭ್ಯತೆಯನ್ನು ಕಡಿಮೆ ಮಾಡುವ ಮೂಲಕ ಆಹಾರ ಭದ್ರತೆಯ ಮೇಲೂ ಋಣಾತ್ಮಕವಾಗಿ ಪರಿಣಾಮ ಬೀರಬಹುದು. ಲಕ್ಷಾಂತರ ಜನರು ಇನ್ನೂ ಹಸಿವು ಮತ್ತು ಅಪೌಷ್ಠಿಕತೆಯಿಂದ ಬಳಲುತ್ತಿರುವ ಈ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಆಹಾರ ಪೂರೈಕೆಯಾಗುವಂತೆ ನೋಡಿಕೊಳ್ಳಲು ಹಾಗೂ ಪ್ರತಿಯೊಬ್ಬರೂ ಹಸಿವು ಮುಕ್ತರಾಗಲು ಆಹಾರವನ್ನು ಪೋಲು ಮಾಡದೆ ಸಂರಕ್ಷಿಸುವುದು ಬಹಳ ಮುಖ್ಯವಾಗಿದೆ.

ಇದನ್ನೂ ಓದಿ: ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬೇಗನೆ ಖಾಲಿ ಆಗುತ್ತಾ?: ಈ ಟ್ರಿಕ್ ಮೂಲಕ ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡಿ

ತಿನ್ನುವ ಹಕ್ಕಿದೆಯೇ ಹೊರತು ಬಿಸಾಡುವ ಹಕ್ಕು ನಮಗಿಲ್ಲ:

ಒಂದೆಡೆ ಈ ಜಗತ್ತಿನಲ್ಲಿ ಪೌಷ್ಠಿಕ ಆಹಾರವಿಲ್ಲದೆ ಹಸಿವು ಹಸಿವು ಎಂದು ಕೂಗುತ್ತಿದ್ದರೆ ಮತ್ತೊಂದೆಡೆ ಬೇಕಾಬಿಟ್ಟಿ ಊಟ ಹಾಕಿಸಿಕೊಂಡು ಕೊನೆಗೆ ಅದನ್ನು ತಿನ್ನದೆ ಹೆಚ್ಚಿನ ಪ್ರಮಾಣದ ಆಹಾರ ಪದಾರ್ಥಗಳನ್ನು ಬಿಸಾಡುವ ಅನೇಕರಿದ್ದಾರೆ. ಆದರೆ ಈ ಆಹಾರ ಪೋಲು ಹೆಚ್ಚಿನವರಿಗೆ ದೊಡ್ಡ ಸಮಸ್ಯೆಯೆಂದು ಅನ್ನಿಸುವುದಿಲ್ಲ. ಆದರೆ ಇದು ಹವಾಮಾನದಿಂದ ಹಿಡಿದು ಆಹಾರ ಭದ್ರತೆಯವರೆಗೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಆದ್ದರಿಂದ ನಮಗೆ ಎಷ್ಟು ಬೇಕೋ ಅಷ್ಟೇ ಆಹಾರವನ್ನು ತಿನ್ನಿ. ಒಂದು ವೇಳೆ ಬಟ್ಟಲಿನಲ್ಲಿ ಆಹಾರ ಮಿಕ್ಕರೆ ಅದನ್ನು ಕಸದ ಬುಟ್ಟಿಗೆ ಎಸೆಯದೆ ಹಸಿದ ಪ್ರಾಣಿಗಳಿಗೆ ಹಾಕಿ. ಇನ್ನೂ ಯಾವುದೇ ರೀತಿಯ ಆಹಾರವನ್ನು ವ್ಯರ್ಥ ಮಾಡದೇ ಹಸಿವು ಎಂದು ಬಂದವರಿಗೆ ಒಳ್ಳೆಯ ಊಟವನ್ನು ನೀಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್
ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್?
ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್?
ಗಿನ್ನಿಸ್​​ ದಾಖಲೆ ಬರೆದ ತುಮಕೂರು: ಪ್ರಮಾಣಪತ್ರ ಸ್ವೀಕರಿಸಿದ ಸಿದ್ದರಾಮಯ್ಯ
ಗಿನ್ನಿಸ್​​ ದಾಖಲೆ ಬರೆದ ತುಮಕೂರು: ಪ್ರಮಾಣಪತ್ರ ಸ್ವೀಕರಿಸಿದ ಸಿದ್ದರಾಮಯ್ಯ