AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂತರರಾಷ್ಟ್ರೀಯ ಸಂಕೇತ ಭಾಷೆಗಳ ದಿನ; ಸಂಕೇತ ಭಾಷೆಗಳ ಅಗತ್ಯತೆ ಮತ್ತು ಮಹತ್ವ ತಿಳಿಯಿರಿ

International Day of Sign Languages 2021: ದೃಶ್ಯ ಸೂಚನೆಗಳನ್ನು ಕೈ ಸನ್ನೆಗಳು, ಸಂಕೇತಗಳು, ಮುಖದ ಅಭಿವ್ಯಕ್ತಿಗಳು ಮತ್ತು ದೇಹದ ಚಲನೆಯ ಮೂಲಕ ಹೇಳುವುದಕ್ಕೆ ಸಂಕೇತ ಭಾಷೆಗಳನ್ನು ಬಳಸಲಾಗುತ್ತದೆ.

ಅಂತರರಾಷ್ಟ್ರೀಯ ಸಂಕೇತ ಭಾಷೆಗಳ ದಿನ; ಸಂಕೇತ ಭಾಷೆಗಳ ಅಗತ್ಯತೆ ಮತ್ತು ಮಹತ್ವ ತಿಳಿಯಿರಿ
ಸಂಗ್ರಹ ಚಿತ್ರ
TV9 Web
| Updated By: shruti hegde

Updated on:Sep 23, 2021 | 10:48 AM

Share

ಎಲ್ಲರೂ ಸಂವಹನಕ್ಕಾಗಿ ಭಾಷೆಯನ್ನು ಬಳಸುತ್ತೇವೆ. ಆದರೆ ಶ್ರವಣ ದೋಷ ಇರುವವರಿಗೆ ಅದು ಸಾಧ್ಯವಾಗುವುದಿಲ್ಲ. ಹಾಗಾಗಿ ಸಂಜ್ಞೆಯ ಮೂಲಕ ಅವರು ಸಂವಹನ ಮಾಡುತ್ತಾರೆ. ದೃಶ್ಯ ಸೂಚನೆಗಳನ್ನು ಕೈ ಸನ್ನೆಗಳು, ಸಂಕೇತಗಳು, ಮುಖದ ಅಭಿವ್ಯಕ್ತಿಗಳು ಮತ್ತು ದೇಹದ ಚಲನೆಯ ಮೂಲಕ ಹೇಳುವುದಕ್ಕೆ ಸಂಕೇತ ಭಾಷೆಗಳನ್ನು ಬಳಸಲಾಗುತ್ತದೆ. ಒಟ್ಟು 300ಕ್ಕೂ ಹೆಚ್ಚು ವಿಭಿನ್ನ ಸಂಕೇತ ಭಾಷೆಗಳಿವೆ. ಪ್ರತಿಯೊಂದು ಸಂಕೇತ ಭಾಷೆಗಳಲ್ಲಿಯೂ ಸಹ ಚಿಹ್ನೆಗಳು ಅಥವಾ ಸನ್ನೆಗಳು ವಿಭಿನ್ನವಾಗಿರುತ್ತವೆ.

ಸೆಪ್ಟೆಂಬರ್ 23ನೇ ತಾರೀಕಿನಂದು ಪ್ರತೀ ವರ್ಷ ಅಂತರರಾಷ್ಟ್ರೀಯ ಸಂಕೇತ ಭಾಷೆಗಳ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ ಸೆಪ್ಟೆಂಬರ್ 23ರನ್ನು ವಿಶ್ವ ಕಿವುಡರ ಒಕ್ಕೂಟ ಸ್ಥಾಪನೆಯನ್ನು ಆಚರಿಸಲು ಅಂಗೀಕರಿಸಿತು. ಭಾರತೀಯ ಸಂಜ್ಞಾ ಭಾಷೆ ಹೇಗಿದೆ ಜತೆಗೆ ಆ ಕುರಿತಾದ ಒಂದಿಷ್ಟು ಮಾಹಿತಿಯನ್ನು ತಿಳಿಯೋಣ.

ಬಿಬಿಸಿ ಪ್ರಕಾರ 700 ಭಾರತೀಯ ಶಾಲೆಗಳು ಸಾಂಕೇತ ಭಾಷೆಯನ್ನು ಕಲಿಸುತ್ತವೆ. ಅವು ವಿಶಿಷ್ಟವಾದ ವ್ಯಾಕರಣ ಮತ್ತು ಸನ್ನೆಗಳನ್ನು ಹೊಂದಿದೆ, ಆದರೆ ಕೆಲವು ಪ್ರಾದೇಶಿಕ ವ್ಯತ್ಯಾಸಗಳಿವೆ. ಭಾತರದಲ್ಲಿ ಕೆಲವರಲ್ಲಿ ಶ್ರವಣ ತೊಂದರೆಯಿರುವವರಿಗೆ ಸಂಕೇತ ಭಾಷೆಗಳ ಬಗ್ಗೆ ಸಾಮಾನ್ಯ ಅರಿವಿನ ಕೊರತೆ ಇದೆ. ಪೋಷಕರಿಗೆ ತಮ್ಮ ಶ್ರವಣ ದೋಷವಿರುವ ಮಕ್ಕಳೊಂದಿಗೆ ಹೇಗೆ ಸಂವಹನ ನಡೆಸಬೇಕೆಂದು ತಿಳಿದಿಲ್ಲ. ಜತೆಗೆ ಅವರೊಂದಿಗಿನ ಸಂವಹನಕ್ಕಾಗಿ ಈ ಸಂಕೇತ ಭಾಷೆಗಳ ಅರಿವು ಅಗತ್ಯವಾಗಿದೆ.

ISL (ಭಾರತೀಯ ಸಂಕೇತ ಭಾಷೆ) ಕಲಿಕೆ ಸಂವಹನಕ್ಕೆ ಸಹಾಯಕವಾಗಿದೆ. ವ್ಯಕ್ತಿಗಳಿಬ್ಬರ ನಡುವಿನ ಅಂತರವನ್ನು ನಿವಾರಿಸುತ್ತದೆ. ಪ್ರಸ್ತುತ 300ಕ್ಕಿಂತ ಕಡಿಮೆ ISL ಪ್ರಮಾಣೀಕೃತ ವ್ಯಾಖ್ಯಾನಕಾರರಿದ್ದಾರೆ. ಭಾಷೆಯನ್ನು ಚೆನ್ನಾಗಿ ಕಲಿಯಲು ನಮಗೆ ಸಹಾಯ ಮಾಡಲು ISL ದೃಶ್ಯ ನಿಘಂಟು ಕೂಡಾ ಲಭ್ಯವಿದೆ.

ಇದನ್ನೂ ಓದಿ:

Child Care: ನಿಮ್ಮ ಮಕ್ಕಳನ್ನು ಹೇಗೆ ಆರೈಕೆ ಮಾಡುತ್ತಿದ್ದೀರಿ? ಮಗುವಿನ ಆರೈಕೆಗೆ ಇಲ್ಲಿದೆ ಒಂದಿಷ್ಟು ಸಲಹೆಗಳು

(International day of sign languages day 2021 know about why you should learn it)

Published On - 10:42 am, Thu, 23 September 21

ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ
ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ
ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ
ಸಂಪುಟ ಸಭೆಯನ್ನು ಬೇರೆ ಬೇರೆ ಸ್ಥಳಗಳಲ್ಲಿ ನಡೆಸುವುದು ದುಂದು ವೆಚ್ಚವಲ್ಲವೇ?
ಸಂಪುಟ ಸಭೆಯನ್ನು ಬೇರೆ ಬೇರೆ ಸ್ಥಳಗಳಲ್ಲಿ ನಡೆಸುವುದು ದುಂದು ವೆಚ್ಚವಲ್ಲವೇ?
ಸಂವೇದನೆಯಿಲ್ಲದ, ಸೂಕ್ಷ್ಮತೆ ಗೊತ್ತಿರದ ಸಿಬ್ಬಂದಿಯಿಂದ ಸಮೀಕ್ಷೆ ಬೇಕಿತ್ತೇ?
ಸಂವೇದನೆಯಿಲ್ಲದ, ಸೂಕ್ಷ್ಮತೆ ಗೊತ್ತಿರದ ಸಿಬ್ಬಂದಿಯಿಂದ ಸಮೀಕ್ಷೆ ಬೇಕಿತ್ತೇ?
ಎಲ್ಲ ಮಂತ್ರಿಗಳು ಒಂದೇ ವಾಕ್ಯವನ್ನು ಪುನರಾವರ್ತಿಸುತ್ತಿದ್ದಾರೆ
ಎಲ್ಲ ಮಂತ್ರಿಗಳು ಒಂದೇ ವಾಕ್ಯವನ್ನು ಪುನರಾವರ್ತಿಸುತ್ತಿದ್ದಾರೆ
VIDEO: ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಹಾವು... ಆಮೇಲೇನಾಯ್ತು?
VIDEO: ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಹಾವು... ಆಮೇಲೇನಾಯ್ತು?