AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಳಿವಿನಂಚಿನಲ್ಲಿದೆ ವಿಶ್ವದ ಈ ಬುಡಕಟ್ಟು ಜನಾಂಗಗಳು, ಈ ಜನರ ಸಂಪ್ರದಾಯಗಳೇ ವಿಚಿತ್ರ

International Day Of The World’s Indigenous Peoples 2024: ಪ್ರತಿ ವರ್ಷ ಆಗಸ್ಟ್​ 9 ರಂದು ವಿಶ್ವ ಬುಡಕಟ್ಟು ದಿನವಾಗಿ ಆಚರಿಸಲಾಗುತ್ತಿದೆ. 1994ರಲ್ಲಿ ವಿಶ್ವ ಸಂಸ್ಥೆ ಆಗಸ್ಟ್​ 9 ಅನ್ನು ವಿಶ್ವ ಸ್ಥಳೀಯ ಜನರ ನಿವಾಸ ಎಂದು ಘೋಷಿಸಿತು. ವಿಶ್ವದ ಬುಡಕಟ್ಟು ಜನರ ಹಕ್ಕುಗಳ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಈ ದಿನವು ಅಸ್ತಿತ್ವದಲ್ಲಿದೆ. ಹಾಗಾದ್ರೆ ಈ ದಿನದ ಮಹತ್ವ ಹಾಗೂ ಅಳಿವಿನಂಚಿರುವ ಬುಡಕಟ್ಟು ಜನಾಂಗ ಹಾಗೂ ಈ ಮೂಲನಿವಾಸಿಗಳ ವಿಚಿತ್ರ ಆಚರಣೆಗಳ ಸಂಪೂರ್ಣ ಮಾಹಿತಿಯು ಇಲ್ಲಿದೆ.

ಅಳಿವಿನಂಚಿನಲ್ಲಿದೆ ವಿಶ್ವದ ಈ ಬುಡಕಟ್ಟು ಜನಾಂಗಗಳು, ಈ ಜನರ ಸಂಪ್ರದಾಯಗಳೇ ವಿಚಿತ್ರ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on:Aug 09, 2024 | 9:55 AM

Share

ಪ್ರಪಂಚದ 90 ಕ್ಕೂ ಹೆಚ್ಚು ದೇಶಗಳಲ್ಲಿ ವಿವಿಧ ಬುಡಕಟ್ಟು ಸಮುದಾಯಗಳ ಜನರು ನೆಲೆಸಿದ್ದಾರೆ. ಒಟ್ಟು ಬುಡಕಟ್ಟು ಸಮುದಾಯಗಳ ಜನಸಂಖ್ಯೆಯು ಸುಮಾರು 370 ಮಿಲಿಯನ್ ನಷ್ಟಿವೆ. ಸರಿಸುಮಾರು ಏಳು ಸಾವಿರ ಬುಟ್ಟುಕಟ್ಟು ಜನಾಂಗದ ಬಾಷೆಗಳಿವೆ. ಕೆಲವು ಬುಡಕಟ್ಟು ಜನಾಂಗಗಳು ಕಣ್ಮರೆಯಾಗುತ್ತಿದೆ. ಈ ಆದಿವಾಸಿಗಳು ತಮ್ಮ ಅಸ್ತಿತ್ವ, ಸಂಸ್ಕೃತಿ, ಗೌರವವನ್ನು ಉಳಿಸಿಕೊಳ್ಳಲು ವಿಶ್ವ ಬುಡಕಟ್ಟು ದಿನವನ್ನು ಆಚರಿಸಲಾಗುತ್ತಿದೆ. ಜಿನೀವಾ ನಗರದಲ್ಲಿ ಆಗಸ್ಟ್ 9, 1994 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು “ಮೊದಲ ಅಂತರಾಷ್ಟ್ರೀಯ ಮೂಲ ನಿವಾಸಿಗಳ ದಿನ” ಸಮ್ಮೇಳನವನ್ನು ಆಯೋಜಿಸಿತು. ವಿಶ್ವಸಂಸ್ಥೆಯ ಪ್ರಕಾರ ಸ್ಥಳೀಯ ಬುಡಕಟ್ಟು ಜನರು ವಿಶ್ವದ ಜನಸಂಖ್ಯೆಯ ಶೇಕಡಾ 5 ಕ್ಕಿಂತ ಕಡಿಮೆ ಇದ್ದ ಕಾರಣ, ಅವರ ಅಸ್ತಿತ್ವ ಹಾಗೂ ಸಂಸ್ಕೃತಿಯನ್ನು ಉಳಸುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಲಾಯಿತು.

ಅಳಿವಿನಂಚಿನಲ್ಲಿರುವ ಬುಡಕಟ್ಟು ಜನಾಂಗಗಳಿವು

* ಜರಾವಾ : ಭಾರತದ ಅಂಡಮಾನ್ ದ್ವೀಪಗಳಲ್ಲಿ ವಾಸಿಸುವ ಜರಾವಾ ಬುಡಕಟ್ಟು ಜನಾಂಗದವರ ಸಂಖ್ಯೆ ಕೇವಲ 400 ಮಾತ್ರ. 1998ರವರೆಗೆ ಆಧುನಿಕ ಸಮಾಜದಿಂದ ಸಂಪೂರ್ಣ ದೂರವೇ ಉಳಿದಿದ್ದ ಈ ಬುಡಕಟ್ಟು ಸಮುದಾಯವು ಕಣ್ಮರೆಯತ್ತ ಸಾಗುತ್ತಿದೆ.

* ಬಟಕ್ ಬುಡಕಟ್ಟು : ಫಿಲಿಪೈನ್ಸ್‌ನಲ್ಲಿರುವ ಈ ಬುಡಕಟ್ಟು ಕೂಡ ಅಳಿವಿನಂಚಿನಲ್ಲಿದೆ. 300 ಜನರು ಮಾತ್ರ ಜನರನ್ನು ಈ ಸಮುದಾಯದಲ್ಲಿ ಕಾಣಬಹುದು.

* ಅಕುಂಟ್ಸು: ಈ ಅಕುಂಟ್ಸು ಬ್ರೆಜಿಲ್ ಬುಡಕಟ್ಟು ಸಮುದಾಯವು ಅವನತಿಯತ್ತ ಸಾಗುತ್ತಿದೆ. ಈ ಬುಡಕಟ್ಟಿನಲ್ಲಿ ಕೇವಲ 4 ಜನರು ವಾಯುವ್ಯ ಬ್ರೆಜಿಲ್‌ನಲ್ಲಿ ವಾಸಿಸುತ್ತಿದ್ದಾರೆ. 1980 ರವರೆಗೆ ಅವರ ಸಂಖ್ಯೆ ಹೆಚ್ಚಿತ್ತು, ಆದರೆ ಕ್ರಮೇಣವಾಗಿ ಈ ಬುಡಕಟ್ಟಿನ ಜನಸಂಖ್ಯೆಯು ಕಡಿಮೆಯಾಗುತ್ತ ಹೋಯಿತು.

* ಸಾವೋಚ್: ಕಾಂಬೋಡಿಯಾದಲ್ಲಿ ಸಾವೋಚ್ ಬುಡಕಟ್ಟಿನ ಜನಸಂಖ್ಯೆಯು 110 ಮಾತ್ರ. ಈ ಬುಡಕಟ್ಟಿನ ಜನರಿಗೆ ತಮ್ಮದೇ ಭಾಷೆಯಲ್ಲಿ ಮಾತನಾಡುವುದಕ್ಕಾಗಿ ಮರಣದಂಡನೆ ವಿಧಿಸಲಾಯಿತು. ಇದೇ ಈ ಬುಡಕಟ್ಟಿನ ಜನಸಂಖ್ಯೆಯು ಕಡಿಮೆಯಾಗಲು ಮುಖ್ಯ ಕಾರಣವಂತೆ.

* ಎಲ್ ಮೊಲೊ ಬುಡಕಟ್ಟು : ಕೀನ್ಯಾದಲ್ಲಿ ಕಾಣಸಿಗುವ ಈ ಎಲ್ ಮೊಲೊ ಬುಡಕಟ್ಟು ಕೂಡ ಅಳಿವಿನಂಚಿನಲ್ಲಿದೆ. ಸದ್ಯಕ್ಕೆ ಈ ಬುಡಕಟ್ಟಿನಲ್ಲಿ ಸುಮಾರು 800 ಮಂದಿ ಮಾತ್ರ ಇದ್ದಾರೆ ಎನ್ನಲಾಗಿದೆ.

* ಲಿವೊನಿಯನ್ನರು : ಲಾಟ್ವಿಯಾದಲ್ಲಿ ಈ ಬುಡಕಟ್ಟು ಜನಾಂಗದವರು ನೆಲೆಸಿದ್ದು, ಗ್ರಾಮಗಳು ನಾಶವಾದ ಪರಿಣಾಮ ಜನಸಂಖ್ಯೆಯು ಕಡಿಮೆಯಾಯಿತು. ಸದ್ಯಕ್ಕೆ ಈ ಬುಡಕಟ್ಟಿನಲ್ಲಿರುವವರು 200 ಜನರು ಮಾತ್ರ ಎನ್ನಲಾಗಿದೆ.

ಇದನ್ನೂ ಓದಿ: ಪುರುಷರೇ ಈ ರಹಸ್ಯ ತಿಳಿದಿದ್ದರೆ ನಿಮ್ಮ ಲೈಂಗಿಕ ಜೀವನ ಸೂಪರ್

ಈ ಬುಡಕಟ್ಟು ಜನಾಂಗದಲ್ಲಿದೆ ವಿಚಿತ್ರ ಆಚರಣೆ

* ಆಫ್ರಿಕನ್ ವುಡಾಬೆ ಬುಡಕಟ್ಟು ಜನಾಂಗದಲ್ಲಿ ವಿಚಿತ್ರ ಆಚರಣೆಯಿದೆ. ಈ ಬುಡಕಟ್ಟಿನವರು ಸಪ್ಟೆಂಬರ್‌ನಲ್ಲಿ ಗೆರೆವಾಲ್ ಎನ್ನುವ ಹಬ್ಬವನ್ನು ಆಚರಿಸುತ್ತಾರೆ. ಮಹಿಳೆಯರನ್ನು ಮೆಚ್ಚಿಸುವ ಸಲುವಾಗಿ ಆರು ಗಂಟೆಗಳ ಕಾಲ ಪುರುಷರು ಯಾಕಿ ನೃತ್ಯ ಮಾಡುತ್ತಾರೆ. ಈ ವೇಳೆಯಲ್ಲಿ ತಮಗಿಷ್ಟವಾದ ಪುರುಷರನ್ನು ಮಹಿಳೆಯರು ಆಯ್ಕೆ ಮಾಡಿ ಅವರೊಂದಿಗೆ ಸಂಸಾರ ಮಾಡುತ್ತಾರೆ.

* ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ವಾಸಿಸುವ ಗರಾಸಿಯಾ ಬುಡಕಟ್ಟು ಜನಾಂಗದಲ್ಲಿ ಲಿವ್-ಇನ್ ಸಂಬಂಧವನ್ನು ಹೊಂದಿ ಮದುವೆಗೂ ಮೊದಲೇ ತಾಯಿಯಾಗುವ ವಿಚಿತ್ರ ಸಂಪ್ರದಾಯವಿದೆ. ಆ ಬಳಿಕವೇನಾದರೂ ಮದುವೆಯಾಗಲು ಇಷ್ಟವಿದ್ದರೆ ಪೋಷಕರು ಬಹಳ ಆಡಂಬರ ಮತ್ತು ಪ್ರದರ್ಶನದಿಂದ ಮದುವೆ ಮಾಡುತ್ತಾರೆ.

* ಆಫ್ರಿಕನ್ ಬುಡಕಟ್ಟು ಜನಾಂಗದಲ್ಲಿ ಮದುವೆಯಾದ ದಂಪತಿಗಳು ಮೊದಲ ರಾತ್ರಿಯನ್ನು ವಧುವಿನ ತಾಯಿಯೊಂದಿಗೆ ಕಳೆಯುಬೇಕು. ಈ ಸಮಯದಲ್ಲಿ ಮೊದಲ ರಾತ್ರಿ ವಧು ಏನು ಮಾಡಬೇಕು ಎಂದು ತಾಯಿಯು ಹೇಳಿಕೊಡುತ್ತಾಳಂತೆ.

* ಇಂಡೋನೇಷ್ಯಾದ ಟಿಡಾಂಗ್ ಬುಡಕಟ್ಟು ಜನಾಂಗದಲ್ಲಿ ನವ ವಿವಾಹಿತ ದಂಪತಿಗಳು ಸ್ನಾನಗೃಹವನ್ನು ಬಳಸದೆ ಮೂರು ದಿನಗಳವರೆಗೆ ಒಟ್ಟಿಗೆ ಇರುವ ವಿಚಿತ್ರ ಸಂಪ್ರದಾಯವಿದೆ.

ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:54 am, Fri, 9 August 24

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ