AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುರುಷರೇ ಈ ರಹಸ್ಯ ತಿಳಿದಿದ್ದರೆ ನಿಮ್ಮ ಲೈಂಗಿಕ ಜೀವನ ಸೂಪರ್

ದಾಂಪತ್ಯ ಜೀವನದಲ್ಲಿ ಗಂಡ ಹೆಂಡಿರ ನಡುವೆ ಭಾವನಾತ್ಮಕವಾದ ಬೆಸುಗೆ ಎಷ್ಟು ಮುಖ್ಯವೋ, ದೈಹಿಕವಾಗಿ ಒಬ್ಬರಿಗೊಬ್ಬರು ಹತ್ತಿರವಿರುವುದು ಅಷ್ಟೇ ಮುಖ್ಯವಾಗುತ್ತದೆ. ಆದರೆ ಎಷ್ಟೇ ಅನ್ಯೋನ್ಯತೆಯನ್ನು ಕಾಪಾಡಿಕೊಂಡರೂ ಕೆಲವೊಮ್ಮೆ ಸೆಕ್ಸ್ ಲೈಫ್ ತೀರಾ ಸಪ್ಪೆ ಎನಿಸಬಹುದು. ಆದರೆ ಈ ವಿಷಯದಲ್ಲಿ ಪುರುಷರಿಗೆ ಈ ಕೆಲವು ವಿಷಯಗಳು ತಿಳಿದಿದ್ದರೆ ಲೈಂಗಿಕ ಜೀವನವು ಸೂಪರ್ ಆಗಿಯೇ ಇರುತ್ತದೆ. ಹಾಗಾದ್ರೆ ಆ ಕುರಿತಾದ ಸಂಪೂರ್ಣ ಮಾಹಿತಿಯು ಇಲ್ಲಿದೆ.

ಪುರುಷರೇ ಈ ರಹಸ್ಯ ತಿಳಿದಿದ್ದರೆ ನಿಮ್ಮ ಲೈಂಗಿಕ ಜೀವನ ಸೂಪರ್
ಸಾಯಿನಂದಾ
| Edited By: |

Updated on: Aug 08, 2024 | 6:13 PM

Share

ದಾಂಪತ್ಯ ಜೀವನವು ಗಟ್ಟಿಯಾಗಬೇಕೆಂದರೆ ಎರಡು ಮನಸ್ಸು ಬೆರೆತರೆ ಸಾಲದು, ಎರಡು ದೇಹಗಳು ಬೆರೆಯಬೇಕು. ಹೌದು, ಲೈಂಗಿಕ ಜೀವನವು ಚೆನ್ನಾಗಿದ್ದರೆ ಮಾತ್ರ ಇಬ್ಬರ ನಡುವೆ ಮಧುರ ಬಾಂಧವ್ಯ ಬೆಳೆಯಲು ಸಾಧ್ಯ. ಎಷ್ಟೋ ಗಂಡ ಹೆಂಡಿರು ಲೈಂಗಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡುವುದೇ ಇಲ್ಲ. ಪತಿಯು ಈ ಬಗ್ಗೆ ಮಾತನಾಡಲು ಬಂದರೂ ಪತ್ನಿಯು ಸರಿಯಾಗಿ ಪ್ರತಿಕ್ರಿಯಿಸದೆ ಇರಬಹುದು. ಆದರೆ ಈ ವೇಳೆ ಪುರುಷರು ಈ ಕೆಲವು ರಹಸ್ಯಗಳನ್ನು ಅರಿತು ತಮ್ಮ ಸೆಕ್ಸ್ ಲೈಫನ್ನು ಸುಧಾರಿಸಿಕೊಳ್ಳಬಹುದಂತೆ.

  • ನೇರವಾಗಿ ಸೆಕ್ಸ್ ಗೆ ಅನ್ವಯ ನೀಡುವುದಕ್ಕಿಂತ ಮೈಗೆ ಮೈ ತಾಕಿಸುವುದು, ಅಪ್ಪಿಕೊಳ್ಳುವುದು. ಆಕೆಯ ಮನಸ್ಸನ್ನು ಗೆಲ್ಲುವುದು ಹೀಗೆ ಮೆಚ್ಚಿಸುವ ಕೆಲಸ ಮಾಡಿ ಪತ್ನಿಯನ್ನು ಲೈಂಗಿಕ ಕ್ರಿಯೆಗೆ ಆಹ್ವಾನಿಸುವ ಕಲೆ ಪುರುಷನಿಗೆ ತಿಳಿದಿರಲೇಬೇಕು. ಪ್ರೀತಿಯಿಂದ ಒಲಿಸಿಕೊಳ್ಳುವುದು ತಿಳಿದಿದ್ದರೆ ಲೈಂಗಿಕ ಜೀವನವು ಸುಮಧುರವಾಗಿರಲು ಸಾಧ್ಯ.
  • ನಿಮ್ಮ ಸಂಗಾತಿಯನ್ನು ಸೆಕ್ಸ್ ಮೂಡ್’ ಬರಿಸಲು ಆಕೆಯು ಮೆಚ್ಚುವಂತಹ ಕೆಲಸವು ಮುಖ್ಯವಾಗುತ್ತದೆ. ಪತ್ನಿಗೆ ಇಷ್ಟವಾದ ಕೆಲಸ, ವಿಶೇಷವಾದ ಗಿಫ್ಟ್ ಗಳು ರೋಮ್ಯಾಂಟಿಕ್ ಮೂಡ್ ಗೆ ಕರೆದ್ಯೋಯುತ್ತದೆ. ಈ ಕಲೆ ಗೊತ್ತಿದ್ದರೆ ಗಂಡನು ಹೆಂಡತಿಯ ಮನಸ್ಸನ್ನು ಸಲೀಸಾಗಿ ಸೆಳೆಯಲು ಸಾಧ್ಯ.
  • ಪತಿಯಾದವನು ಪತ್ನಿಗೆ ಆಸೆಯನ್ನು ಕಣ್ಣೋಟದಲ್ಲಿ ತಿಳಿಸುವುದು ಅಥವಾ ಕಣ್ಣಿನ ಸನ್ನೆಯಲ್ಲಿ ಮುದ್ದಿನ ಮಡದಿಯನ್ನು ಬರಸೆಳೆಯುವುದನ್ನು ಅರಿತಿದ್ದರೆ ಒಳ್ಳೆಯದು. ಈ ತುಂಟ ಸ್ವಭಾವಗಳು ಸಹಜವಾಗಿ ಮಹಿಳೆಯರಿಗೆ ಇಷ್ಟವಾಗುತ್ತದೆ. ಇದು ಸೆಕ್ಸ್ ಲೈಫನ್ನು ಇನ್ನಷ್ಟು ಕಲರ್ ಫುಲ್ ಆಗಿಸುತ್ತದೆ.
  • ಚುಂಬಿಸುವ ಕಲೆಯು ಕೂಡ ಪುರುಷ ಅರಿತಿರಬೇಕಾದ ರಹಸ್ಯಗಳಲ್ಲಿ ಒಂದು. ನೀವು ಸಂಗಾತಿಯನ್ನು ಒಲಿಸಿಕೊಳ್ಳುವುದಾದರೆ ಮತ್ತೇರುವಂತೆ ಚುಂಬಿಸಿ. ಮುತ್ತು ನೀಡಿ ಆಕೆಗೆ ನಿಮ್ಮ ಬಯಕೆಯನ್ನು ತಿಳಿಸಿ, ಈ ವೇಳೆಯಲ್ಲಿ ಪತಿಯು ಮೂಡಿನಲ್ಲಿದ್ದೀರಿ ಎಂದು ಆಕೆಯು ಸಮ್ಮತಿ ನೀಡಬಹುದು. ಈ ರೀತಿ ಮಾಡುವುದು ಕೂಡ ಸೆಕ್ಸ್ ಲೈಫ್ ಉತ್ತಮವಾಗಿರಲು ಸಹಾಯ ಮಾಡುತ್ತದೆ.
  • ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಾಗಲೂ ಮಹಿಳೆಯು ಕಾಳಜಿ ಹಾಗೂ ಸಹಾನುಭೂತಿಯನ್ನು ಬಯಸುತ್ತಾಳೆ. ಲೈಂಗಿಕ ಜೀವನದಲ್ಲಿಯು ಪತ್ನಿಯನ್ನು ಪ್ರೀತಿ ಹಾಗೂ ಕಾಳಜಿಯಿಂದ ಮುದ್ದಿಸಿ. ಈ ವೇಳೆಯಲ್ಲಿ ಪುರುಷನು ಅವಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಆಕೆಗೆ ಆಸೆ ಹಾಗೂ ಬಯಕೆಗಳಿದ್ದರೆ ಅದನ್ನು ಕೂಡ ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ.

ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ