Kannada News Lifestyle IT May Surprise You Orange Peels Have 4 Times More Health Benefits Than The Orange Fruit
Orange Peels : ಕಿತ್ತಳೆ ಸಿಪ್ಪೆಯ ಪ್ರಯೋಜನಗಳೇನು? ಬಳಕೆ ಹೇಗೆ?
Orange Peel Benefits:ಕಿತ್ತಳೆ ಸಿಪ್ಪೆಯು ಹಲವು ರೀತಿಯಲ್ಲಿ ನಮ್ಮ ಆರೋಗ್ಯ ರಕ್ಷಣೆ ಮಾಡುತ್ತದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಸಾಮಾನ್ಯವಾಗಿ ಹಳ್ಳಿ ಪ್ರದೇಶಗಳಲ್ಲಿ ಕಿತ್ತಳೆ ಸಿಪ್ಪೆಯನ್ನು ಸಾಕಷ್ಟು ಪದಾರ್ಥಗಳಲ್ಲಿ ಬಳಕೆ ಮಾಡುತ್ತಾರೆ.
ಕಿತ್ತಳೆ ಸಿಪ್ಪೆಯು ಹಲವು ರೀತಿಯಲ್ಲಿ ನಮ್ಮ ಆರೋಗ್ಯ ರಕ್ಷಣೆ ಮಾಡುತ್ತದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಸಾಮಾನ್ಯವಾಗಿ ಹಳ್ಳಿ ಪ್ರದೇಶಗಳಲ್ಲಿ ಕಿತ್ತಳೆ ಸಿಪ್ಪೆಯನ್ನು ಸಾಕಷ್ಟು ಪದಾರ್ಥಗಳಲ್ಲಿ ಬಳಕೆ ಮಾಡುತ್ತಾರೆ. ಹಣ್ಣನ್ನು ತಿಂದು ಸಿಪ್ಪೆಯನ್ನು ಎಸೆಯುವ ಬದಲು ಹೀಗೆ ಮಾಡಿದರೆ ಹಲವು ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಇದರಲ್ಲಿರುವ ವಿಟಮಿನ್ ಸಿ, ಕ್ಯಾಲ್ಸಿಯಂ ಮತ್ತು ಫೋಲೇಟ್ ಆರೋಗ್ಯಕ್ಕೆ ತುಂಬಾ ಉಪಯೋಗಕಾರಿಯಾಗಿದೆ.
ನೈಸರ್ಗಿಕ ಬ್ಲೀಚ್ ಆಗಿ ಕಾರ್ಯನಿರ್ವಹಣೆ
ಕಿತ್ತಳೆ ಹಣ್ಣಿನ ಸಿಪ್ಪೆಯು ನೈಸರ್ಗಿಕ ಬ್ಲೀಚ್ ಆಗಿ ಕಾರ್ಯ ನಿರ್ವಹಿಸಲಿದೆ, ಬಹುತೇಕ ವಿಟಮಿನ್ ಸಿ ಯುಕ್ತ ಹಣ್ಣುಗಳು ನೈಸರ್ಗಿಕವಾಗಿ ಬ್ಲೀಚಿಂಗ್ ಏಜೆಂಟ್‌ಗಳಾಗಿ ಕಾರ್ಯ ನಿರ್ವಹಿಸುತ್ತವೆ. ಇದು ಚರ್ಮದ ಮೇಲಿರುವ ಕಪ್ಪು ಕಲೆಗಳನ್ನು ಲೈಟನಿಂಗ್ ಮಾಡುತ್ತದೆ.
ಕಿತ್ತಳೆ ಸಿಪ್ಪೆಯ ಪುಡಿಯು ಬಹಳಷ್ಟು ಉತ್ತಮ ಮೂಲವನ್ನು ಹೊಂದಿದ್ದು, ಚರ್ಮದ ನೈಸರ್ಗಿಕ ಬಣ್ಣವನ್ನು ಪುನಃಸ್ಥಾಪಿಸಲು ಉತ್ತೇಜಿಸುತ್ತದೆ.
ನಿದ್ರೆಗೆ ಸಹಾಯ ಮಾಡುತ್ತದೆ :
ಕಿತ್ತಳೆ ಸಿಪ್ಪೆಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ನಂತರ ಈ ನೀರನ್ನು ಕುಡಿಯಿರಿ ಇದರಿಂದ ನಿದ್ರಾಹೀನತೆ ದೂರವಾಗುತ್ತದೆ. ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ.
ಮೊಡವೆ ಮತ್ತು ಕಲೆಯನ್ನು ದೂರ ಮಾಡುತ್ತದೆ
ಕಿತ್ತಳೆ ಸಿಪ್ಪೆಯ ಪುಡಿಯು ವಿಟಮಿನ್ ಸಿಯಲ್ಲಿ ಹೇರಳವಾಗಿದ್ದು, ಇದು ಚರ್ಮದ ಕಾಲಜನ್ ಮತ್ತು ಎಲಾಸ್ಟಿನ್ ಅನ್ನು ರೂಪಿಸಲು ಉತ್ತೇಜಿಸುತ್ತದೆ. ಕಿತ್ತಳೆ ಸಿಪ್ಪೆಗಳು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವುದರಿಂದ, ಇದು ನಿಮಗೆ ದೋಷರಹಿತ ಚರ್ಮವನ್ನು ನೀಡುತ್ತದೆ. ಅಲ್ಲದೆ, ಮೊಡವೆಗಳನ್ನು ರೂಪಿಸುವ ಬ್ಯಾಕ್ಟೀರಿಯಾಗಳ ಮೇಲೆ ಹೋರಾಡುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಳ
ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿ ಆಂಟಿ ಇಂಫ್ಲಮೇಟರಿ ಗುಣವಿರುತ್ತದೆ. ಕಿತ್ತಳೆ ಸಿಪ್ಪೆಯು ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಕಿತ್ತಳೆ ಸಿಪ್ಪೆಯನ್ನು ಸಕ್ಕರೆ ಮತ್ತು ನಿಂಬೆಯೊಂದಿಗೆ ತಿನ್ನಬಹುದು.
ಹೇರ್ ಕಂಡಿಷನರ್ ಆಗಿ ಬಳಕೆ ಈ ಹಣ್ಣಿನ ಸಿಪ್ಪೆಯಲ್ಲಿ ಕೂದಲಿಗೆ ಪ್ರಯೋಜನಕಾರಿಯಾದ ಕ್ಲೆನ್ಸಿಂಗ್ ಗುಣಗಳು ಇರುತ್ತವೆ. ಇದಕ್ಕಾಗಿ ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ, ನಂತರ ಅದರಲ್ಲಿ ಜೇನು ತುಪ್ಪವನ್ನು ಬೆರೆಸಿ ತಲೆ ಕೂದಲಿಗೆ ಹಚ್ಚಿಕೊಳ್ಳಿ.
ಕೂದಲು ಹೊಟ್ಟಿನಿಂದ ಮುಕ್ತಿ ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪುಡಿಯನ್ನು ತಯಾರಿಸಿ ನಂತರ ಅದರಲ್ಲಿ ತೆಂಗಿನ ಎಣ್ಣೆಯನ್ನು ಬೆರೆಸಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟು ದೂರವಾಗುತ್ತದೆ.
ಇಲ್ಲಿ ನೀಡಲಾದ ಮಾಹಿತಿಗಳು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಹಾಗೂ ಮನೆಮದ್ದು ಆಧರಿತ ಮಾಹಿತಿಯಾಗಿರುತ್ತದೆ.
ಜೀವನಶೈಲಿಗೆ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ