ಚಂದ್ರಗ್ರಹಣ 2022: ದಿನಾಂಕ, ಸಮಯ, ವೀಕ್ಷಣೆ ಹೇಗೆ? ಭಾರತದಲ್ಲಿ ಗೋಚರಿಸುವುದೇ?

ಚಂದ್ರಗ್ರಹಣ 2022: ದಿನಾಂಕ, ಸಮಯ, ವೀಕ್ಷಣೆ ಹೇಗೆ? ಭಾರತದಲ್ಲಿ ಗೋಚರಿಸುವುದೇ?
ಚಂದ್ರಗ್ರಹಣ

Lunar Eclipse 2022: ಚಂದ್ರಗ್ರಹಣವು ಈ ಬಾರಿ ಮೇ 15-16ರಂದು ನಡೆಯಲಿದ್ದು, ಚಂದ್ರನು ಕೆಂಪು ಬಣ್ಣದಲ್ಲಿ ಗೋಚರಿಸಲಿದ್ದಾನೆ. ಇದು ಸಂಪೂರ್ಣ ಚಂದ್ರಗ್ರಹಣವಾಗಿರುತ್ತದೆ, ಆದಾಗ್ಯೂ ಕೆಲವು ಸ್ಥಳಗಳು ಸೂರ್ಯನು ದಿಗಂತದ ಮೇಲಿರುವಾಗ ವೀಕ್ಷಣಾ ಹಂತಗಳನ್ನು ಕಳೆದುಕೊಳ್ಳುತ್ತವೆ.

TV9kannada Web Team

| Edited By: Nayana Rajeev

May 14, 2022 | 4:01 PM

ಚಂದ್ರಗ್ರಹಣ( Lunar Eclipse)ವು ಈ ಬಾರಿ ಮೇ 15-16ರಂದು ಸಂಭವಿಸಲಿದ್ದು, ಚಂದ್ರನು ಕೆಂಪು ಬಣ್ಣದಲ್ಲಿ ಗೋಚರಿಸಲಿದ್ದಾನೆ. ಇದು ಸಂಪೂರ್ಣ ಚಂದ್ರಗ್ರಹಣವಾಗಿರುತ್ತದೆ, ಆದಾಗ್ಯೂ ಕೆಲವು ಸ್ಥಳಗಳು ಸೂರ್ಯನು ದಿಗಂತದ ಮೇಲಿರುವಾಗ ವೀಕ್ಷಣಾ ಹಂತಗಳನ್ನು ಕಳೆದುಕೊಳ್ಳುತ್ತವೆ. ಚಂದ್ರಗ್ರಹಣದ ಗೋಚರತೆಯು ಸಮಯ ವಲಯವನ್ನು ಅವಲಂಬಿಸಿರುತ್ತದೆ. ಸೂರ್ಯ ಚಂದ್ರ ಹಾಗೂ ಭೂಮಿ ಸಮಾನ ರೇಖೆಯಲ್ಲಿ ಬಂದಾಗ ಸಂಭವಿಸುವುದೇ ಗ್ರಹಣ. ಸೂರ್ಯ ಹಾಗೂ ಚಂದ್ರರ ನಡುವೆ ಭೂಮಿ ಬಂದಾಗ, ಸೂರ್ಯನ ಬೆಳಕು ಭೂಮಿಯ ಮೇಲೆ ಬಿದ್ದು, ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಆಗ ಉಂಟಾಗುವುದೇ ಚಂದ್ರಗ್ರಹಣ.

ಚಂದ್ರಗ್ರಹಣ ವೀಕ್ಷಣೆ ಹೇಗೆ? ಈ ಬಾರಿಯ ಚಂದ್ರಗ್ರಹಣವು ಭಾರತದಲ್ಲಿ ಗೋಚರವಾಗುತ್ತಿಲ್ಲ ಹಾಗಾಗಿ ಚಂದ್ರಗ್ರಹಣ ನೋಡಬಯಸುವವರು ನಾಸಾವು ಈ ವಿದ್ಯಮಾನವನ್ನು ಆನ್‌ಲೈನ್‌ನಲ್ಲಿ ಲೈವ್ ಸ್ಟ್ರೀಮ್ ಅಲ್ಲಿ ವೀಕ್ಷಿಸಬಹುದಾಗಿದೆ.

ಚಂದ್ರಗ್ರಹಣ 2022: ಗೋಚರ ಯಾವಾಗ? ಭಾರತದ ಸಮಯದ ಪ್ರಕಾರ ಮೇ 15ರ ರಾತ್ರಿ 9.40ಕ್ಕೆ ಗ್ರಹಣ ಆರಂಭವಾಗಿ ಮೇ 16ರಂದು ಬೆಳಗ್ಗೆ 12.20ರವರೆಗೆ ಗ್ರಹಣ ಇರಲಿದೆ. ರಾತ್ರಿ 10.23ರ ಸಮಯದಲ್ಲಿ ಗ್ರಹಣ ತೀಕ್ಷ್ಣವಾಗಲಿದೆ.

ಚಂದ್ರಗ್ರಹಣ ಗೋಚರ ಎಲ್ಲೆಲ್ಲಿ? ಚಂದ್ರಗ್ರಹಣವು ದಕ್ಷಿಣ ಅಮೆರಿಕ, ಉತ್ತರ ಅಮೆರಿಕ ಹಾಗೂ ಪೂರ್ವ ಭಾಗಗಳಲ್ಲಿ ಗೋಚರವಾಗಲಿದೆ. ಜತೆಗೆ ಆಫ್ರಿಕಾದ ಪಶ್ಚಿಮ ಭಾಗಗಳು, ಯುರೋಪ್ ಮತ್ತು ಪೆಸಿಫಿಕ್​ನ ಪೂರ್ವ ಭಾಗದಲ್ಲಿ ಗೋಚರಿಸಲಿದೆ. ಮಧ್ಯಪ್ರಾಚ್ಯ, ನ್ಯೂಜಿಲೆಂಡ್, ಪೂರ್ವ ಯುರೋಪಿನ ಜನರು ಭಾಗಶಃ ಗ್ರಹಣವನ್ನು ನೋಡಬಹುದಾಗಿದೆ. ಅಂದರೆ, ಈ ಸಮಯದಲ್ಲಿ ಭೂಮಿಯ ನೆರಳಿನ ಅಂಚು ಮಾತ್ರ ಚಂದ್ರನ ಮೇಲೆ ಬೀಳುವುದು ಮಾತ್ರ ಇವರಿಗೆ ಕಾಣಿಸುತ್ತದೆ.

ಚಂದ್ರ ಕೆಂಪಗೆ ಕಾಣುವುದೇಕೆ? ಗ್ರಹಣ ಸಂದರ್ಭದಲ್ಲಿ ಚಂದ್ರನ ಮೇಲ್ಮೈಯನ್ನು ತಲುಪುವ ಏಕೈಕ ಬೆಳಕು ಭೂಮಿಯ ವಾತಾವರಣದಿಂದ ಮಾತ್ರ. ಹೀಗಾಗಿ ಭೂಮಿಯ ವಾತಾವರಣದಲ್ಲಿ ಧೂಳಿನ ಕಣಗಳು ಹೆಚ್ಚಿದ್ದಷ್ಟೂ ಚಂದ್ರನು ಕೆಂಪಾಗಿ ಕಾಣಿಸುತ್ತಾನೆ. ಭೂಮಿಯ ವಾತಾವರಣದಿಂದ ಗಾಳಿಯ ಅಣುಗಳು ಹೆಚ್ಚಿನ ನೀಲಿ ಬೆಳಕನ್ನು ಚದುರಿಸುತ್ತವೆ. ಉಳಿದ ಬೆಳಕು ಚಂದ್ರನ ಮೇಲ್ಮೈಯಲ್ಲಿ ಕೆಂಪು ಹೊಳಪಿನಿಂದ ಪ್ರತಿಫಲಿಸುತ್ತದೆ, ಅದು ರಾತ್ರಿಯ ಆಕಾಶದಲ್ಲಿ ಚಂದ್ರನನ್ನು ಕೆಂಪು ಬಣ್ಣದಲ್ಲಿ ಕಾಣುವಂತೆ ಮಾಡುತ್ತದೆ.

ಚಂದ್ರಗ್ರಹಣ ಏಕೆ ಸಂಭವಿಸುತ್ತದೆ ಚಂದ್ರಗ್ರಹಣವನ್ನು ಬರಿಗಣ್ಣಿನಲ್ಲೇ ವೀಕ್ಷಿಸಬಹುದಾಗಿದೆ, ಇದರಿಂದ ಯಾವುದೇ ಅಪಾಯವಿಲ್ಲ. ಚಂದ್ರನು ಭೂಮಿಯ ನೆರಳಿನಲ್ಲಿ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ, ಅಂದರೆ ಭೂಮಿ ಸೂರ್ಯ ಮತ್ತು ಚಂದ್ರನ ನಡುವೆ ಬರುತ್ತದೆ. ಆಗ ಸೂರ್ಯನ ಪ್ರಕಾಶಮಾನ ಕಿರಣ ಭೂಮಿಯ ಮೇಲೆ ಬಿದ್ದು, ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಚಂದ್ರನು ಭೂಮಿಯ ನೆರಳಿನ ಕಪ್ಪು ಭಾಗವನ್ನು ಪ್ರವೇಶಿಸಿದಾಗ ಸಂಪೂರ್ಣ ಚಂದ್ರ ಗ್ರಹಣ ಸಂಭವಿಸುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada