Law of Attraction: ನಿಮ್ಮ ಆಸೆಗಳನ್ನು ವ್ಯಕ್ತಪಡಿಸಲು, ಇತರರನ್ನು ಆಕರ್ಷಿಸಲು ಇಲ್ಲಿದೆ ಕ್ರಮ
ನೀವು ಪ್ರೀತಿ, ಪ್ರಣಯ, ಹಣ, ಬುದ್ಧಿಶಕ್ತಿ ಅಥವಾ ಯಶಸ್ಸಿನ ಹಂಬಲದಲ್ಲಿರುವಂತೆ ಅಭಿವ್ಯಕ್ತಿಯ ಕಲೆಯನ್ನು ಕರಗತ ಮಾಡಿಕೊಳ್ಳಲು ಬಯಸುವಿರಾ? ಆಕರ್ಷಣೆಯ ನಿಯಮ ಮತ್ತು 2023ರ ನಿಮ್ಮ ಆಸೆಗಳನ್ನು ವ್ಯಕ್ತಪಡಿಸುವ ಹಂತಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ.
ನೀವು ಪ್ರೀತಿ, ಪ್ರಣಯ, ಹಣ, ಬುದ್ಧಿಶಕ್ತಿ ಅಥವಾ ಯಶಸ್ಸಿನ ಹಂಬಲದಲ್ಲಿರುವಂತೆ ಅಭಿವ್ಯಕ್ತಿಯ ಕಲೆಯನ್ನು ಕರಗತ ಮಾಡಿಕೊಳ್ಳಲು ಬಯಸುವಿರಾ? ಆಕರ್ಷಣೆಯ ನಿಯಮ ಮತ್ತು 2023ರ ನಿಮ್ಮ ಆಸೆಗಳನ್ನು ವ್ಯಕ್ತಪಡಿಸುವ ಹಂತಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ. ಆಕರ್ಷಣೆಯ ನಿಯಮಕ್ಕೆ ಹೆಚ್ಚಿನ ಒತ್ತು ಮತ್ತು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ, ಅದರ ಪ್ರಕಾರ ನಾವು ಬಯಸಿದ್ದನ್ನು ವ್ಯಕ್ತಪಡಿಸಬಹುದು, ನಮಗೆ ಬೇಕಾದುದನ್ನು ನಾವು ಆಕರ್ಷಿಸಬಹುದು, ನಾವು ಅದನ್ನು ಉತ್ಸಾಹದಿಂದ ಹುಡುಕಿದರೆ, ಅದರ ಬಗ್ಗೆ ಯೋಚಿಸಿ ಮತ್ತು ಅದನ್ನು ದೃಶ್ಯೀಕರಿಸಬಹುದು. ಆಕರ್ಷಣೆ ಎಂಬ ಪದವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅದರೊಳಗೆ ನಾವು ಕ್ರಿಯೆ ಎಂಬ ಪದವನ್ನು ಕಂಡುಕೊಳ್ಳುತ್ತೇವೆ. ಹಾಗೂ ಕ್ರಿಯೆಯಿಲ್ಲದೆ, ಪ್ರಯತ್ನವಿಲ್ಲದೆ ನಾವು ನಮ್ಮ ಕನಸುಗಳನ್ನು ಎಂದಿಗೂ ನನಸಾಗಿಸಲು ಸಾಧ್ಯವಿಲ್ಲ. ಆದ್ದರಿಂದ ಕನಸು ನನಸಾಗಲು ಸಾಕಷ್ಟು ಶ್ರಮ ಬೇಕಾಗುತ್ತದೆ.
ಲೈಫ್ ಬೈ ಡಿಸೈನ್ ಸಂಸ್ಥಾಪಕಿ, ಸಿಇಒ ಹಾಗೂ ಲೈಫ್ ಕೋಚ್ ಆಗಿರುವ ಪೂಜಾ ಪುನೀತ್ ಅವರು ಅಭಿವ್ಯಕ್ತಿಯ ವಿಷಯದ ಬಗ್ಗೆ ಮಾತನಾಡುವಾಗ ಮಾಸ್ಟರಿಂಗ್ ಮಾಡಬೇಕಾದ ಮೂರು ಕಾನೂನುಗಳಿವೆ ಎಂದು ಬಹಿರಂಗ ಪಡಿಸಿದರು.
ಕಂಪನದ ನಿಯಮ: ನಿಮ್ಮನ್ನು ನೀವು ಕೇಳಿಕೊಳ್ಳಬೇಕಾದ ಪ್ರಮುಖ ಪ್ರಶ್ನೆಯೆಂದರೆ ನಾನು ಹೇಗೆ ಭಾವಿಸುತ್ತೇನೆ. ನಮ್ಮ ಆಲೋಚನೆಗಳು ವಿದ್ಯುದಾವೇಶವನ್ನು ಸೃಷ್ಟಿಸುತ್ತದೆ ಮತ್ತು ಆ ಆಲೋಚನೆಗಳಿಗೆ ನಮ್ಮ ಅನುಗುಣವಾದ ಭಾವನೆಗಳು ಆಯಸ್ಕಾಂತೀಯ ಚಾರ್ಜ್ನ್ನು ರಚಿಸುತ್ತವೆ. ಅದು ಅದೇ ರೀತಿಯ ಕಂಪನಸ ವಸ್ತುಗಳನ್ನು ನಿಮ್ಮ ಜೀವನದಲ್ಲಿ ಮತ್ತೆ ಎಳೆಯುತ್ತದೆ. ನಾವು ಉತ್ತಮವಾಗಿ ಭಾವಿಸಿದರೆ, ಯೋಚಿಸಿದರೆ ನಾವು ಹೆಚ್ಚು ಹೆಚ್ಚು ಆರ್ಷಿಸಬಹುದು.
ಇದನ್ನು ಓದಿ:Lifestyle Tips: ನೀವು 6 ಗಂಟೆಗಿಂತ ಕಡಿಮೆ ನಿದ್ರೆ ಮಾಡುತ್ತೀರಾ? ಈ ಆರೋಗ್ಯ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಿ
ಲಾ ಆಫ್ ಅಟ್ರಾಕ್ಷನ್: ನನಗೆ ಏನು ಬೇಕು ಎಂಬುದು ಇಲ್ಲಿ ಪ್ರಮುಖ ಪ್ರಶ್ನೆಯಾಗಿದೆ. ನಾವು ಬಯಸದಿರುವ ಎಲ್ಲದರ ಬಗ್ಗೆ ನಾವು ತ್ವರಿತವಾಗಿ ಗಮನಹರಿಸುತ್ತೇವೆ ಮತ್ತು ಮಾತನಾಡುತ್ತೇವೆ. ಆದರೆ ನಾವು ನಿಜವಾಗಿ ನಿಜವಾಗಿ ಏನನ್ನು ಬಯಸುತ್ತೇವೆ ಎಂಬುದರ ಬಗ್ಗೆ ಸ್ಪಷ್ಟತೆಯನ್ನು ಹೊಂದಲು ಮರೆಯುತ್ತೇವೆ.
ಅನುಕರಣನದ ಕಾನೂನು: ಇಲ್ಲಿ ಅತ್ಯಂತ ಮುಖ್ಯವಾದ ಪ್ರಶ್ನೆಯೆಂದರೆ ನನ್ನ ಅಭಿವ್ಯಕ್ತಿ ನಿಜವಾಗಲು ನಾನು ಯಾರಾಗಿರಬೇಕು. ನಾವು ಬಯಸಿದ್ದನ್ನು ನಾವು ಪಡೆಯುತ್ತೇವೆ ಅಥವಾ ಪಡೆಯುವುದಿಲ್ಲ. ಹಾಗೂ ನಮ್ಮ ಅರ್ಹತೆಯು ನಮ್ಮ ಜಾಗೃತ ಮನಸ್ಸು ಮತ್ತು ನಮ್ಮ ಹೊಂದಾಣಿಕೆಯಿಂದ ಬರುತ್ತದೆ. ನಾವು ಹೆಚ್ಚು ನಮ್ಮ ಮೇಲೆ ನಂಬಿಕೆಯನ್ನು ಇಡಬೇಕು.
ಮೈಂಡ್‌ಫುಲ್‌ನೆಸ್ ತರಬೇತುದಾರ ಹಾಗೂ ಜೀವನ, ನಾಯಕತ್ವ ಮತ್ತು ಸೆಲ್ಫ್ ಮಾಸ್ಟರಿ ತರಬೇತುದಾರರಾದ ಡಾ. ಸಲೋನಿ ಸಿಂಗ್ ಅವರ ಪ್ರಕಾರ ನಿಮ್ಮ ಆಸೆಗಳನ್ನು ವ್ಯಕ್ತಪಡಿಸುವ ಮೊದಲ ಹೆಜ್ಜೆ ನಿಮ್ಮ ಭಾಷೆಯನ್ನು ಗಮನದಲ್ಲಿಟ್ಟುಕೊಳ್ಳುವುದು. ಹಾಗೂ ಅವರು ಹೇಳಿದರು, ‘ನೀವು ನಿಮ್ಮೊಂದಿಗೆ ಮಾತನಾಡಲು ಬಳಸುವ ಭಾಷೆಯನ್ನು ಗಮನಿಸಿ. ನೀವು ವ್ಯಕ್ತಪಡಿಸಲು ಬಯಸುವ ವಿಷಯಗಳನ್ನು ಮಾತ್ರ ಹೇಳಿ ಮತ್ತು ಅವುಗಳನ್ನು ನಂಬಿರಿ, ಹೊರತು ನೀವು ಚಿಂತಿಸುವ ವಿಷಯಗಳನ್ನಲ್ಲ. ಉದಾಹರಣೆಗೆ ನೀವು ಉತ್ತಮ ಆರೋಗ್ಯ, ಫಿಟ್ನೆಸ್ ಮತ್ತು ಸಮೃದ್ಧಿಯನ್ನು ಬಯಸಿದರೆ, ನಾನು ಆಹಾರ ಮತ್ತು ವ್ಯಾಯಾಮದ ಬಗ್ಗೆ ಜಾಗೃತನಾಗುತ್ತಿದ್ದೇನೆ ಎಂದು ಹೇಳಿ. ನಾನು ಆಹಾರ ಮತ್ತು ಹಣದ ಸುತ್ತ ಆರೋಗ್ಯಕರ ಅಭ್ಯಾಸಗಳನ್ನು ಕಲಿಯುತ್ತಿದ್ದೇನೆ. ನಾನು ಎಲ್ಲವನ್ನೂ ಮಡಬಲ್ಲೆ ಎಂಬುದನ್ನು ಹೇಳಿ. ಮತ್ತು ನಾನು ನನ್ನನ್ನು ನಿಯಂತ್ರಿಸಲು ಸಾಧ್ಯವಿಲ್ಲ, ನಾನು ತೂಕ ಇಳಿಸಿಕೊಳ್ಳಲು ಸಾಧ್ಯವಿಲ್ಲ, ನಾನು ಸೋಮಾರಿ, ಅಸಿಸ್ತಿನವನಾಗಿದ್ದೇನೆ, ನನಗೆ ಹಣ ಉಳಿಸಲು ಸಾಧ್ಯವಿಲ್ಲ ಎಂದು ನೀವು ಹೇಳಿಕೊಂಡರೆ ಅದು ನಿಮ್ಮ ವೈಫಲ್ಯಕ್ಕೆ ಕಾರಣವಾಗುತ್ತದೆ. ಹಾಗಾಗಿ ಸದಾ ಕಾಲ ನೀವು ನಿಮ್ಮ ಯಶಸ್ಸಿನ ಬಗ್ಗೆ ಯೋಚಿಸಬೇಕು.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:12 pm, Tue, 31 January 23