AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ನಿಮ್ಮ ವೃತ್ತಿ ಜೀವನಕ್ಕೆ ಎಂದಿಗೂ ಅಡ್ಡಿಯಾಗುವುದಿಲ್ಲ; ಉಪಾಸನಾ ಮಾತಿಗೆ ವೈದ್ಯೆಯ ಟಾಂಗ್‌

ಉಪಾಸನಾ ಕೊನಿಡೆಲಾ ಹೈದರಾಬಾದ್ ಐಐಟಿ ಕಾರ್ಯಕ್ರಮದಲ್ಲಿ ಮದುವೆ ಮಕ್ಳು ಅಂತೆಲ್ಲಾ ಆತುರಪಡಬೇಡಿ, ಮೊದಲು ಕೆರಿಯರ್‌ ಕಡೆ ಗಮನ ಹರಿಸಿ, ಇನ್ನು ಹೆಣ್ಮಕ್ಳು ಅಂಡಾಣು ಫ್ರೀಜಿಂಗ್‌ ಮಾಡಿ, ಇದು ಮಹಿಳೆಯರಿಗೆ ದೊಡ್ಡ ವಿಮೆ ಎಂಬ ಹೇಳಿಕೆ ನೀಡಿದ್ದರು. ಈ ಮಾತಿಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಇದೀಗ ಈ ಬಗ್ಗೆ ಮಾತನಾಡಿದ ವೈದ್ಯೆ ಗುಂಜನ್‌ ದೇಶಪಾಂಡೆ ಮದುವೆ ವೃತ್ತಿ ಜೀವನಕ್ಕೆ ಅಡ್ಡಿಯಾಗುವುದಿಲ್ಲ ಎಂದು ಉಪಾಸನಾಗೆ ಟಾಂಗ್‌ ನೀಡಿದ್ದಾರೆ.

ಮದುವೆ ನಿಮ್ಮ ವೃತ್ತಿ ಜೀವನಕ್ಕೆ ಎಂದಿಗೂ ಅಡ್ಡಿಯಾಗುವುದಿಲ್ಲ; ಉಪಾಸನಾ ಮಾತಿಗೆ ವೈದ್ಯೆಯ ಟಾಂಗ್‌
ಉಪಾಸನಾ ಕೊನಿಡೆಲಾ Image Credit source: Social Media
ಮಾಲಾಶ್ರೀ ಅಂಚನ್​
|

Updated on:Nov 22, 2025 | 3:31 PM

Share

ಟಾಲಿವುಡ್ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರ ಪತ್ನಿ ಉಪಾಸನಾ ಕೊನಿಡೆಲಾ (Upasana Konidela) ಉದ್ಯಮ ಕ್ಷೇತ್ರದಲ್ಲಿ ಸಖತ್‌ ಹೆಸರು ಮಾಡಿದವರು. ಇತ್ತೀಚಿಗಷ್ಟೇ  ಹೈದರಾಬಾದ್‌ನ ಐಐಟಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಯುವಜನತೆಯನ್ನು ಉದ್ದೇಶಿಸಿ ಮಾತನಾಡಿದ ಇವರು, “ನಾನು ಸ್ವಂತ ಕಾಲಿನ ಮೇಲೆ ನಿಂತಿದ್ದೇನೆ, ಆರ್ಥಿಕವಾಗಿ ಸ್ವಾತಂತ್ರಳಾಗಿದ್ದೇನೆ. ನೀವು ಕೂಡ 30 ವರ್ಷಕ್ಕೂ ಮೊದಲೇ ಗುರಿಗಳನ್ನು ಹೊಂದಿಸಿ, ಮದುವೆ ಮಕ್ಳು ಅಂತೆಲ್ಲಾ ಆತುರಪಡಬೇಡಿ, ಮೊದಲು ಕೆರಿಯರ್‌ ಕಡೆ ಗಮನ ಹರಿಸಿ, ಅದರಲ್ಲೂ ಹೆಣ್ಮಕ್ಳು ಮೊದಲೇ ಅಂಡಾಣು ಫ್ರೀಜಿಂಗ್‌ ಮಾಡಿಟ್ಟುಕೊಳ್ಳಿ, ಇದು ನಿಮಗೆ ದೊಡ್ಡ ವಿಮೆ” ಎಂದು ಹೇಳಿದ್ದರು. ಇವರ ಈ ಹೇಳಿಕೆಗೆ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಇದೀಗ ಡಾ. ಗುಂಜನ್‌ ದೇಶಪಾಂಡೆ ಎಂಬವರು ಸಹ ಉಪಾಸನಾ ಹೇಳಿಕೆಯನ್ನು ಟೀಕಿಸಿದ್ದು, ಮದುವೆ ವೃತ್ತಿ ಜೀವನಕ್ಕೆ ಎಂದಿಗೂ ಅಡ್ಡಿಯಾಗುವುದಿಲ್ಲ ಎಂದು ಹೇಳಿದ್ದಾರೆ.

ಮದುವೆ ವೃತ್ತಿ ಜೀವನಕ್ಕೆ ಅಡ್ಡಿಯಾಗುವುದಿಲ್ಲ:

ಇಂದು ನಾನು ನನ್ನ ಕಾಲ ಮೇಲೆ ನಿಂತಿದ್ದೇನೆ, ನಾನು ಆರ್ಥಿಕವಾಗಿ ಸ್ವತಂತ್ರಳಾಗಿದ್ದೇನೆ. ಅದೇ ರೀತಿ ನೀವು ನಿಮಗಾಗಿ ಕೆಲಸ ಮಾಡಿ, 30 ವರ್ಷ ತುಂಬುವ ಮೊದಲೇ ನಿಮ್ಮ ಗುರಿಗಳನ್ನು ನಿಗದಿಪಡಿಸಿ, ಕೆರಿಯರ್‌ ಸೆಟ್‌ ಮಾಡಿಕೊಳ್ಳಿ. ಜೊತೆಗೆ ಹೆಣ್ಮಕ್ಳು ಅಂಡಾಣು ಫ್ರೀಜ್‌ ಮಾಡಿಟ್ಟುಕೊಳ್ಳಿ. ಇದು  ಮಹಿಳೆಯರಿಗೆ ದೊಡ್ಡ ವಿಮೆ ಇದ್ದಂತೆ ಎಂದು ಉಪಾಸನಾ ಹೇಳಿಕೆಯನ್ನು ನೀಡಿದ್ದರು. ಈ ಮಾತು ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ಮಾತನಾಡಿದ ಹಲವರು ಉಪಾಸನ ಅವರ ಸಲಹೆ ಎಲ್ಲರಿಗೂ ಅನ್ವಯಿಸುವುದಿಲ್ಲ. ಇದು ಕೆಲವು ಶ್ರೀಮಂತ ಕುಟುಂಬಗಳಿಗೆ ಮಾತ್ರ ವರ್ಕ್‌ ಆಗುತ್ತೆ, ಇವರ ಈ ಮಾತು ಕೇಳಿ ಯಾರು ಮದುವೆಯನ್ನು ಮುಂದೂಡಬೇಡಿ ಎಂದು ಹೇಳಿದ್ದಾರೆ. ಇದೀಗ ಡಾ. ಗುಂಜನ್‌ ದೇಶಪಾಂಡೆ ಎಂಬವರು ಉಪಾಸನಾ ಮಾತನ್ನು ಟೀಕಿಸಿ, ಮದುವೆ ವೃತ್ತಿ ಜೀವನಕ್ಕೆ ಎಂದಿಗೂ ಅಡ್ಡಿಯಾಗುವುದಿಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಗುಂಜನ್‌ (drgunjand) ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಒಂದನ್ನು ಶೇರ್‌ ಮಾಡಿಕೊಂಡಿದ್ದು, “ನನಗೆ 23 ವರ್ಷಕ್ಕೆ ಮದುವೆಯಾಯ್ತು, 27 ವರ್ಷಕ್ಕೆ ಮನೆ ಮಾಡಿದೆ, 28 ವರ್ಷಕ್ಕೆ ಮೊದಲ ಮಗು, 29 ವರ್ಷಕ್ಕೆ ಅಖಿಲ ಭಾರತ ನೇತ್ರ ವಿಜ್ಞಾನ ಸಂಘದ ಸಹಭಾಗಿತ್ವ ಪಡೆದೆ, 30 ವರ್ಷಕ್ಕೆ ಎರಡನೇ ಮಗು, 33 ವರ್ಷಕ್ಕೆ ಅಂತರಾಷ್ಟ್ರೀಯ ನೇತ್ರವಿಜ್ಞಾನ ಮಂಡಳಿಯ ಪಾಲುದಾರಿಕೆ, 36 ವರ್ಷಕ್ಕೆ ರಾಯಲ್‌ ಕಾಲೇಜ್‌ ಆಫ್‌ ಸರ್ಜನ್ಸ್‌ ಸಹಭಾಗಿತ್ವ ಪಡೆದೆ. ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾದ ನನಗೆ ವೈವಾಹಿಕ ಜೀವನ ವೃತ್ತಿ ಜೀವನಕ್ಕೆ ಅಡ್ಡಿಯಾಗಿಲ್ಲ ಎಂದು ವಿವರಿಸುತ್ತಾ ಮದುವೆ ಎಂದಿಗೂ ನಿಮ್ಮ ವೃತ್ತಿ ಜೀವನಕ್ಕೆ ಅಡ್ಡಿಯಾಗುವುದಿಲ್ಲ ಎಂದು ಹೇಳಿದ್ದಾರೆ.

ಪೋಸ್ಟ್ ಇಲ್ಲಿದೆ ನೋಡಿ:

ಇದನ್ನೂ ಓದಿ: ಖರ್ಚು ಕಮ್ಮಿ ಮಾಡಿ, ಉಳಿತಾಯ ಹೆಚ್ಚು ಮಾಡಲು ನೀವು ಸಲಹೆಗಳನ್ನು ಅನುಸರಿಸಲೇಬೇಕು

ಡಾ. ಗುಂಜನ್‌ರ ಈ ಪೋಸ್ಟ್‌ ಭಾರೀ ವೈರಲ್‌ ಆಗಿದ್ದು, ಸಾಕಷ್ಟು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಮಗುವಾದ ನಂತರ ವೃತ್ತಿ ಜೀವನವನ್ನು ನಡೆಸಲು ಕಷ್ಟಸಾಧ್ಯ, ಸರಿಯಾದ ಬೆಂಬಲವಿದ್ದರೆ ಮಾತ್ರ ಇದೆಲ್ಲಾ ಸಾಧ್ಯʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಿಮಗೆ ಬೆಂಬಲ ನೀಡುವ ಕುಟುಂಬ, ಗಂಡ ಇದ್ದರು, ಆದ್ರೆ ಎಲ್ಲರ ಮನೆಯವರು ಇದೇ ರೀತಿ ಇರುತ್ತಾರೆಯೇʼ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ʼಎಲ್ಲರಿಗೂ ನಿಮಗೆ ಸಿಕ್ಕಂತೆ ಬೆಂಬಲ ಸಿಗಲ್ಲ ಮೇಡಂʼ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:16 pm, Sat, 22 November 25