Anger Management: ಈ ಕಾರಣಗಳಿಂದ ನಿಮಗೆ ಬೇಗ ಕೋಪ ಬರಬಹುದು, ನಿಯಂತ್ರಿಸುವ ಬಗೆ ಹೇಗೆ ತಿಳಿಯಿರಿ

ಮನುಷ್ಯ ಎಂದ ಮೇಲೆ ಒಮ್ಮೆ ಕೋಪ, ಬೇಸರ, ಖುಷಿ ಎಲ್ಲಾ ಭಾವನೆಗಳು ಇರುತ್ತವೆ. ಕೆಲವರು ಈ ಭಾವನಾತ್ಮಕ ಮನಸ್ಥಿತಿಯಿಂದ ಬೇಗ ಹೊರ ಬರುತ್ತಾರೆ ಆದರೆ ಕೆಲವರು ಅದೇ ವಿಷಯದ ಬಗ್ಗೆ ಗಂಟೆಗಟ್ಟಲೆ ಆಲೋಚಿಸುತ್ತಾರೆ.

Anger Management: ಈ ಕಾರಣಗಳಿಂದ ನಿಮಗೆ ಬೇಗ ಕೋಪ ಬರಬಹುದು, ನಿಯಂತ್ರಿಸುವ ಬಗೆ ಹೇಗೆ ತಿಳಿಯಿರಿ
ಕೋಪ ನಿಯಂತ್ರಣImage Credit source: Healthshots.com
Follow us
ನಯನಾ ರಾಜೀವ್
|

Updated on: Jul 29, 2023 | 4:00 PM

ಮನುಷ್ಯ ಎಂದ ಮೇಲೆ ಒಮ್ಮೆ ಕೋಪ, ಬೇಸರ, ಖುಷಿ ಎಲ್ಲಾ ಭಾವನೆಗಳು ಇರುತ್ತವೆ. ಕೆಲವರು ಈ ಭಾವನಾತ್ಮಕ ಮನಸ್ಥಿತಿಯಿಂದ ಬೇಗ ಹೊರ ಬರುತ್ತಾರೆ ಆದರೆ ಕೆಲವರು ಅದೇ ವಿಷಯದ ಬಗ್ಗೆ ಗಂಟೆಗಟ್ಟಲೆ ಆಲೋಚಿಸುತ್ತಾರೆ. ಮನಸ್ಸಿನಲ್ಲಿ ಕೋಪ ತುಂಬಿದ್ದಾಗ ನಡವಳಿಕೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಉಂಟು ಮಾಡಬಹುದು. ಕೋಪ ನಿರ್ವಹಣೆ ಮಾಡಲಾಗದಿದ್ದಾಗ ಹೃದಯ ಬಡಿತ ಹೆಚ್ಚುತ್ತದೆ, ರಕ್ತದೊತ್ತಡ ಹೆಚ್ಚಾಗಲು ಪ್ರಾರಂಭವಾಗುತ್ತದೆ.ಅಡ್ರಿನಾಲಿನ್ ಮತ್ತು ನೊರಾಡ್ರಿನಾಲಿನ್ ಮಟ್ಟವು ದೇಹದಲ್ಲಿ ಹೆಚ್ಚಾಗುತ್ತದೆ.

ಅಮೆರಿಕನ್ ಸೈಕಲಾಜಿಕಲ್ ಅಸೋಸಿಯೇಷನ್ ​​ಪ್ರಕಾರ, ಒಬ್ಬ ವ್ಯಕ್ತಿಯು ಎರಡು ಪರಿಸ್ಥಿತಿಗಳಲ್ಲಿ ಕೋಪಗೊಳ್ಳುತ್ತಾನೆ. ಮೊದಲನೆಯದು ಬಾಹ್ಯ ಮತ್ತು ಎರಡನೆಯದು ಆಂತರಿಕ ಘಟನೆ. ಬಾಹ್ಯ ಎಂದರೆ ವ್ಯಕ್ತಿಯು ಅಂತಹ ಸನ್ನಿವೇಶದಲ್ಲಿ ಕೋಪಗೊಳ್ಳುವುದು, ಮತ್ತೊಂದೆಡೆ, ಆಂತರಿಕ ಘಟನೆ ಎಂದರೆ ಒಬ್ಬ ವ್ಯಕ್ತಿಯು ತನ್ನ ಹಿಂದಿನ ಕೆಲವು ಘಟನೆಗಳನ್ನು ನೆನೆದು ಪದೇ ಪದೇ ಕೋಪಗೊಳ್ಳುವುದು. ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲಾ ಒಂದು ಸಮಯದಲ್ಲಿ ಕೋಪಗೊಳ್ಳುತ್ತಾನೆ ಅದು ಸಹಜ ಭಾವನೆಯಾಗಿದೆ. ಕೆಲವೊಮ್ಮೆ ಕೋಪದ ಪ್ರಮಾಣ ವಿಪರೀತವಾಗಿರುತ್ತದೆ, ಅದು ಅವರಿಗೆ ಹಾನಿಯುಂಟು ಮಾಡಬಹುದು.

ಕೋಪಕ್ಕೆ ಕಾರಣಗಳೇನು? ಕೆಲಸಕ್ಕೆ ಅಡ್ಡಿಪಡಿಸುವುದು ಗಟ್ಟಿ ಧ್ವನಿಯಲ್ಲಿ ಮಾತನಾಡುವುದು ಕೆಲವು ಕೆಲಸಗಳಿಗೆ ಪದೇ ಪದೇ ಅಡ್ಡಿಪಡಿಸುವುದು ಭಾವನೆಗಳನ್ನು ಅರ್ಥಮಾಡಿಕೊಳ್ಳದಿರುವುದು ತಪ್ಪು ಪದಗಳನ್ನು ಬಳಸಿ ಅಪಹಾಸ್ಯ ಮಾಡುವುದು

ಮತ್ತಷ್ಟು ಓದಿ: ನಿಮ್ಮ ಮನಸ್ಸು ಮಾರಾಟಕ್ಕಿಲ್ಲ, ಸಂಬಂಧದಲ್ಲಿ ಭಾವುಕತೆ ಇರಲಿ, ಭಾವನೆಗಳ ನಿಂದನೆ ಇದ್ದರೆ ಆ ಸಂಬಂಧಗಳಿಂದ ಹೊರಬನ್ನಿ

ಕೋಪ ನಿರ್ವಹಣೆ ಏಕೆ ಮುಖ್ಯ ಎಂಬುದನ್ನು ಅರ್ಥಮಾಡಿಕೊಳ್ಳಿ ಕೋಪ ನಿರ್ವಹಣೆಯ ಅರ್ಥವು ಕೋಪವನ್ನು ನಿಗ್ರಹಿಸುವುದಲ್ಲ, ಆದರೆ ಪರಿಸ್ಥಿತಿಗೆ ಅನುಗುಣವಾಗಿ ಕೋಪವನ್ನು ನಿಯಂತ್ರಣದಲ್ಲಿಡುವುದು. ಪ್ರತಿಕ್ರಿಯೆಯು ಕೆಲವೊಮ್ಮೆ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಕಾರಾತ್ಮಕತೆಯಿಂದ ದೂರವಿರಲು ಧನಾತ್ಮಕ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ.

ಮಾತನಾಡುವ ಮೊದಲು ಒಮ್ಮೆ ಯೋಚಿಸಿ ನೀವು ಯಾರ ಮೇಲಾದರೂ ಕೋಪಗೊಂಡಿದ್ದರೆ, ಏನನ್ನಾದರೂ ಹೇಳುವ ಮುನ್ನ ಎರಡು ಬಾರಿ ಯೋಚಿಸಿ. ನೀವು ಹೇಳುವುದು ಇನ್ನೊಬ್ಬರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಈ ಮಾತಿನಿಂದ ನಿಮ್ಮ ಸಂಬಂಧ ಹಾಳಾಗಬಹುದೇ ಎಂಬುದನ್ನು ಯೋಚಿಸಿ ಸ್ವಲ್ಪ ಹೊತ್ತು ತಾಳ್ಮೆಯಿಂದಿರಿ. ನೀವು ಶಾಂತವಾಗಿದ್ದರೆ ನಿಮ್ಮ ಜೊತೆ ಜಗಳವಾಡಿದ ವ್ಯಕ್ತಿಯು ಪಶ್ಚಾತಾಪ ಪಡುವಂತಾಗುತ್ತದೆ.

ತಪ್ಪು ಪದ ಬಳಕೆ ಕೆಲವೊಮ್ಮೆ ತಪ್ಪು ಪದ ಬಳಕೆಯು ಅನೇಕ ವಿಷಯಗಳನ್ನು ಹಾಳು ಮಾಡುತ್ತದೆ, ಅಂತಹ ಪರಿಸ್ಥಿತಿಯಲ್ಲಿ ಒಳ್ಳೆಯ ಅಥವಾ ಕೆಟ್ಟ ಭಾವನೆ ಇದ್ದರೆ ಅದನ್ನು ಅದನ್ನು ನಿಗ್ರಹಿಸುವ ಬದಲು ಏನಾದರೂ ಬರೆಯಿರಿ, ಬರವಣಿಗೆ ನಿಮ್ಮ ಒತ್ತಡವನ್ನು ನಿವಾರಿಸುತ್ತದೆ.

ಹೊರಗೆ ಸ್ವಲ್ಪ ಸಮಯ ಕಳೆಯಿರಿ ಅಸಮಾಧಾನ ಮತ್ತು ಕೋಪ ಮಾಡಿಕೊಂಡು ಮನೆಯಲ್ಲೇ ಕೂರುವ ಬದಲು, ಸ್ವಲ್ಪ ಸಮಯ ಮನೆಯಿಂದ ಹೊರಗಿರಿ, ಅದರಿಂದ ನಿಮ್ಮ ಆತಂಕವೂ ದೂರವಾಗುತ್ತದೆ.

ವ್ಯಾಯಾಮ ಮಾಡಿ ನಿಮ್ಮನ್ನು ಉದ್ವೇಗದಿಂದ ಮುಕ್ತವಾಗಿಡಲು ಸ್ವಲ್ಪ ಸಮಯದವರೆಗೆ ವ್ಯಾಯಾಮ ಅಥವಾ ಯೋಗವನ್ನು ಮಾಡಿ. ಇದರೊಂದಿಗೆ ನೀವು ನಿಮ್ಮನ್ನು ಆರೋಗ್ಯವಾಗಿರಿಸಿಕೊಳ್ಳಬಹುದು ಮತ್ತು ಒತ್ತಡದಿಂದ ಮುಕ್ತರಾಗಬಹುದು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ