ನವರಾತ್ರಿಯಂದು ಒಂಬತ್ತು ದಿನಗಳ ಕಾಲ ಎಲ್ಲೆಡೆ ಸಂಭ್ರಮವು ಮನೆ ಮಾಡಿರುತ್ತದೆ. ಸರಿಸುಮಾರು ಒಂಬತ್ತು ದಿನಗಳ ಕಾಲ ಮನೆಯಲ್ಲಿ ವಿಶೇಷವಾದ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಈ ಸಮಯದಲ್ಲಿ ಶುದ್ಧ ಮನಸ್ಸಿನಿಂದ ದುರ್ಗಾ ದೇವಿಯನ್ನು ಪೂಜಿಸುವುದರಿಂದ, ಉಪವಾಸ ವ್ರತಗಳನ್ನು ಮಾಡಿ ನೈವೇದ್ಯ ಅರ್ಪಿಸುವುದರಿಂದ ದೇವಿಯ ಆಶೀರ್ವಾದವನ್ನು ಪಡೆದುಕೊಳ್ಳಬಹುದು. ನೀವು ಕೂಡ ನವರಾತ್ರಿಗೆ ಪುಳಿಯೋಗರೆ ಮನೆಯಲ್ಲೇ ಮಾಡಿ ದೇವಿಗೆ ಅರ್ಪಿಸಿ ಕೃಪೆಗೆ ಪಾತ್ರರಾಗಬಹುದು.
* ಸ್ವಲ್ಪ ಹುಣಸೆಹಣ್ಣು
* ಸ್ವಲ್ಪ ಬೆಲ್ಲ
* ಕರಿ ಎಳ್ಳು
* ಅರ್ಧ ಕೊಬ್ಬರಿ
* ಒಂದು ಚಮಚ ಮೆಂತ್ಯೆ
* ಎರಡು ಚಮಚ ಕರಿ ಮೆಣಸು
* ಮೂರು ಚಮಚ ಕೊತ್ತಂಬರಿ ಬೀಜ
* ಎರಡು ಚಮಚ ಜೀರಿಗೆ
* ಆರು ಘಾಟಿ ಮೆಣಸು
* ಎಣ್ಣೆ
* ಒಂದು ಚಮಚ ಸಾಸಿವೆ
* ಎರಡು ಚಮಚ ಕಡಲೇ ಬೇಳೆ
* ಎರಡು ಚಮಚ ಶೇಂಗಾ
* ಎರಡು ಚಮಚ ಉದ್ದಿನಬೇಳೆ
* ಸ್ವಲ್ಪ ಇಂಗು
* ಕರಿಬೇವು
* 100 ಗ್ರಾಂ ಹುಣಿಸೆಹಣ್ಣನ್ನು ನೆನೆಸಿಟ್ಟು, ರಸ ಹಿಂಡಿಕೊಂಡು ಇಟ್ಟುಕೊಳ್ಳಿ, ಅದಕ್ಕೆ ಸ್ವಲ್ಪ ಬೆಲ್ಲವನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ.
* ಆ ಬಳಿಕ ಕರಿ ಎಳ್ಳನ್ನು ಹುರಿದುಕೊಂಡು ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಿ. ಒಣ ಕೊಬ್ಬರಿಯನ್ನು ತುರಿದು ಅದಕ್ಕೆ ಸೇರಿಸಿ.
* ಒಂದು ಬಾಣಲೆಗೆ ತೆಗೆದುಕೊಂಡು ಎರಡರಿಂದ ಮೂರು ಚಮಚ ಎಣ್ಣೆ, ಮೆಂತ್ಯ, ಕರಿ ಮೆಣಸು, ಕೊತ್ತಂಬರಿ ಬೀಜ ಜೀರಿಗೆ, ಘಾಟಿ ಮೆಣಸಿನಕಾಯಿ ಹಾಕಿ ಸಣ್ಣ ಉರಿಯಲ್ಲಿ ಗರಿಗರಿ ಹುರಿದುಕೊಳ್ಳಿ. ತಣ್ಣಗಾದ ಬಳಿಕ ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ.
* ಆ ಬಳಿಕ ಬಾಣಲೆಗೆ ಸ್ವಲ್ಪ ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕಡಲೆಬೇಳೆ, ಶೇಂಗಾ, ಕರಿಬೇವಿನ ಎಲೆಗಳು ಹಾಗೂ ಇಂಗು ಹಾಕಿ ಒಗ್ಗರಣೆ ಮಾಡಿಕೊಳ್ಳಿ.
* ಕೊನೆಗೆ ಈಗಾಗಲೇ ತಯಾರಿಸಿದ ಅನ್ನವನ್ನು ಇದಕ್ಕೆ ಹಾಕಿ ಮಿಶ್ರಣ ಮಾಡಿಕೊಂಡರೆ ರುಚಿಕರವಾದ ಪುಳಿಯೋಗರೆ ಸವಿಯಲು ಸಿದ್ಧ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ