AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

National Post Day 2024: ವಿಶ್ವದಲ್ಲೇ ಅತೀ ದೊಡ್ಡ ಅಂಚೆ ವ್ಯವಸ್ಥೆ ಹೊಂದಿರುವ ದೇಶವೇ ಭಾರತ, ಇಲ್ಲಿನ ಸೇವೆಯ ವಿಶೇಷಯೇನು?

ಮಾನವ ಸಂವಹನದ ಅತ್ಯಂತ ಹಳೆಯ ರೂಪಗಳಲ್ಲಿ ಒಂದು ಈ ಅಂಚೆ ಸೇವೆ. ಒಂದು ಕಾಲದಲ್ಲಿ ಜನರ ನಡುವಿನ ಸಂವಹನದ ಕೊಂಡಿಯಾಗಿದ್ದ ಅಂಚೆ ಇಂದು ಈ ಸೇವೆಯನ್ನು ಅವಲಂಬಿಸಿರುವವರ ಸಂಖ್ಯೆಯು ತೀರಾ ಕಡಿಮೆಯಾಗಿದೆ. ಈಸ್ಟ್ ಇಂಡಿಯಾ ಕಂಪನಿಯು ಭಾರತದಲ್ಲಿ ಮೊದಲ ಬಾರಿಗೆ 1854 ಅಕ್ಟೋಬರ್ 10 ರಂದು ಭಾರತೀಯ ಅಂಚೆ ಸೇವೆಯನ್ನು ಸ್ಥಾಪಿಸಲಾಯಿತು. ಇದರ ಸವಿನೆನಪಿಗಾಗಿ ರಾಷ್ಟ್ರೀಯ ಅಂಚೆ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

National Post Day 2024: ವಿಶ್ವದಲ್ಲೇ ಅತೀ ದೊಡ್ಡ ಅಂಚೆ ವ್ಯವಸ್ಥೆ ಹೊಂದಿರುವ ದೇಶವೇ ಭಾರತ, ಇಲ್ಲಿನ ಸೇವೆಯ ವಿಶೇಷಯೇನು?
ರಾಷ್ಟ್ರೀಯ ಅಂಚೆ ದಿನ
ಸಾಯಿನಂದಾ
| Edited By: |

Updated on: Oct 10, 2024 | 9:59 AM

Share

ಇಂದಿನ ಸ್ಮಾರ್ಟ್ ಫೋನ್ ಮತ್ತು ಇಂಟರ್ನೆಟ್ ಯುಗದಲ್ಲಿ ಅಂಚೆ ಸೇವೆಯನ್ನು ಅವಲಂಬಿಸಿರುವವರು ತುಂಬಾ ಕಡಿಮೆಯಾಗಿದೆ. ಆದರೆ ಇಂದಿಗೂ ಸಹ ಸ್ಮಾರ್ಟ್ ಫೋನ್ ಅಥವಾ ಇಂಟರ್ನೆಟ್ ತಲುಪಲು ಸಾಧ್ಯವಾಗದ ಸೂಕ್ಷ್ಮ ಪ್ರದೇಶಗಳಿಗಿವೆ. ಈ ಪ್ರದೇಶಗಳ ಜನರು ಅಂಚೆ ಸೇವೆಯನ್ನು ಅವಲಂಬಿಸಿದ್ದಾರೆ. ಭಾರತದಲ್ಲಿ ಅಂಚೆ ಸೇವೆ ಪ್ರಾರಂಭವಾದ ಸವಿನೆನಪಿಗಾಗಿ ಅಕ್ಟೋಬರ್ 10 ರಂದು ರಾಷ್ಟ್ರೀಯ ಅಂಚೆ ದಿನವನ್ನು ಆಚರಿಸಲಾಗುತ್ತಿದೆ.

ಭಾರತೀಯ ಅಂಚೆ ಸೇವೆಯ ಇತಿಹಾಸ

ದೇಶದ ಅಂಚೆ ಇತಿಹಾಸವನ್ನು ಗಮನಿಸಿದಾಗ ಮೌರ್ಯರ ಕಾಲದ ಪಾರಿವಾಳ ಪೋಸ್ಟ್ ವ್ಯವಸ್ಥೆಯಿಂದ ಪ್ರಾರಂಭವಾಗಿ, ಬಾಬರ್‌ನ ಕುದುರೆ ಓಟಗಾರ ಅಂಚೆ ಸೇವೆಯಿಂದ ಬ್ರಿಟಿಷರ ಆಳ್ವಿಕೆಯಲ್ಲಿ ಸೇನಾ ಪೋಸ್ಟ್ ಸೇವೆಯನ್ನು ಸ್ಥಾಪಿಸುವವರೆಗೂ ಬಹಳ ಆಸಕ್ತಿದಾಯಕವಾಗಿದೆ. ಭಾರತದಲ್ಲಿ ವ್ಯಾಪಾರಕ್ಕೆಂದು ಬಂದ ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಂಪನಿಯಿಂದ 18ನೇ ಶತಮಾನದಲ್ಲಿ ಅಂಚೆ ಸೇವೆ ಶುರುವಾಯಿತು. 1764ರಿಂದ 1766ರ ನಡುವೆ ಮುಂಬಯಿ, ಚೆನ್ನೈ, ಕೋಲ್ಕತಾದಲ್ಲಿ ಈಸ್ಟ್‌ ಇಂಡಿಯಾ ಕಂಪನಿಯು ಪೋಸ್ಟ್‌ ಆಫೀಸ್‌ ಪ್ರಾರಂಭಿಸಿತು.

1774ರಲ್ಲಿ ಕೋಲ್ಕೊತಾದಲ್ಲಿ ಪ್ರಧಾನ ಅಂಚೆ ಕಚೇರಿಯನ್ನು ತೆರೆಯಲಾಯಿತು. ಆದರೆ, ಭಾರತದಲ್ಲಿ ಅಂಚೆ ವ್ಯವಸ್ಥೆ ಶುರುವಾಗಲು ಬ್ರಿಟನನ ಲಾರ್ಡ್‌ಕ್ಲೈವ್‌ ಕಾರಣ ಎನ್ನಲಾಗುತ್ತದೆ. ಮೊದಲ ಬಾರಿಗೆ 1854 ಅಕ್ಟೋಬರ್ 10 ರಂದು ಭಾರತೀಯ ಅಂಚೆ ಸೇವೆಯನ್ನು ಸ್ಥಾಪಿಸಲಾಯಿತು. ಅದರ ಸವಿನೆನಪಿಗಾಗಿ ಈ ದಿನವನ್ನು ಭಾರತೀಯ ರಾಷ್ಟ್ರೀಯ ಅಂಚೆ ದಿನವನ್ನಾಗಿ ಆಯ್ಕೆ ಮಾಡಲಾಗಿದೆ. ಅಂದಿನಿಂದ ಪ್ರತಿ ವರ್ಷ ಅಕ್ಟೋಬರ್ 10 ರಂದು ರಾಷ್ಟ್ರೀಯ ಅಂಚೆ ದಿನವನ್ನು ಆಚರಿಸಲಾಗುತ್ತಾ ಬರಲಾಗುತ್ತಿದೆ.

ಇದನ್ನೂ ಓದಿ: ವಿಶ್ವ ದೃಷ್ಟಿ ದಿನದ ಇತಿಹಾಸ, ಮಹತ್ವದ ಕುರಿತ ಮಾಹಿತಿ ಇಲ್ಲಿದೆ

ರಾಷ್ಟ್ರೀಯ ಅಂಚೆ ದಿನದ ಪ್ರಾಮುಖ್ಯತೆ ಹಾಗೂ ಆಚರಣೆ

ರಾಷ್ಟ್ರೀಯ ಅಂಚೆ ದಿನವನ್ನು ಆಚರಿಸುವುದರ ಮುಖ್ಯ ಉದ್ದೇಶವೇ ಅಂಚೆ ಸೇವೆಯ ಪ್ರಮುಖ ಪಾತ್ರವನ್ನು ಎತ್ತಿ ತೋರಿಸುವುದು ಮತ್ತು ಅವರ ಸೇವೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು. ಭಾರತೀಯ ಅಂಚೆ ಸೇವೆಯು ಪತ್ರಗಳು ಮತ್ತು ಪಾರ್ಸೆಲ್‌ಗಳನ್ನು ತಲುಪಿಸುವುದಲ್ಲದೆ, ಇದು ಹಣಕಾಸು ಸೇವೆಗಳು, ಸರ್ಕಾರಿ ಸೇವೆಗಳು ಮತ್ತು ಹಲವಾರು ಇತರ ಸೌಲಭ್ಯಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ. ರಾಷ್ಟ್ರೀಯ ಅಂಚೆ ಸಪ್ತಾಹವನ್ನು ಅಕ್ಟೋಬರ್ 10 ರಿಂದ ಅಕ್ಟೋಬರ್ 15 ರವರೆಗೆ ಆಚರಿಸಲಾಗುತ್ತದೆ. ಈ ದಿನದಂದುಭಾರತೀಯ ಅಂಚೆ ಇಲಾಖೆಯ ಕೊಡುಗೆಯ ಬಗ್ಗೆ ಸಾಮಾನ್ಯ ಜನರಿಗೆ ತಿಳಿಸುವುದಾಗಿದೆ.

ವಿಶ್ವದಲ್ಲೇ ಅತೀ ದೊಡ್ಡ ಅಂಚೆ ಸೇವೆ ಹೊಂದಿರುವ ಏಕೈಕ ದೇಶ ಭಾರತ

ಪ್ರಪಂಚದಾದಂತ್ಯ ಅತಿ ದೊಡ್ಡ ಅಂಚೆ ವ್ಯವಸ್ಥೆಯನ್ನು ಹೊಂದಿರುವ ದೇಶ ಭಾರತದ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತದಲ್ಲಿ ಸರಿಸುಮಾರು 1,53,454 ಅಂಚೆಕಚೇರಿಗಳು, 5,62,000 ಲೆಟರ್‌ ಬಾಕ್ಸ್‌ಗಳನ್ನು ಹೊಂದಿದೆ. ಅದಲ್ಲದೇ ದೇಶದ 6,04,341 ಪಟ್ಟಣಗಳು, ನಗರಗಳು ಮತ್ತು ಗ್ರಾಮಗಳಲ್ಲಿ ಅಂಚೆ ಇಲಾಖೆಯಿದೆ. ಆದರೆ, ರಾಜಸ್ಥಾನದಲ್ಲಿ ಕ್ಯಾಮೆಲ್‌ ಪೊಸ್ಟ್‌ ಸರ್ವೀಸ್‌, ಒರಿಸ್ಸಾದಲ್ಲಿ ಪಿಜನ್‌ ಪೋಸ್ಟ್‌ ಸರ್ವೀಸ್‌ ಮತ್ತು ಸಿಯಾಚಿನ್‌ನಲ್ಲಿ ಡಾಗ್‌ ಪೋಸ್ಟ್‌ ಸವೀರ್ಸ್ ಗೆ ಹೆಸರುವಾಸಿಯಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ