Navaratri 2024: ನವರಾತ್ರಿಯ ಒಂಬತ್ತನೆ ದಿನ ನೈವೇದ್ಯವಾಗಿ ಪುಳಿಯೋಗರೆ ಅರ್ಪಿಸಿ, ಇಲ್ಲಿದೆ ರೆಸಿಪಿ
ಪುಳಿಯೋಗರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಸೂಪರ್ ಮಾರ್ಕೆಟ್ಗಳಲ್ಲಿ ವಿವಿಧ ಬ್ರಾಂಡ್ಗಳ ಇನ್ಸ್ಟಂಟ್ ಪುಳಿಯೊಗರೆ ಪ್ಯಾಕೆಟ್ಗಳು ಸಿಗುತ್ತವೆ. ಹೀಗಾಗಿ ದಿಢೀರನೇ ಮಾಡಬಹುದಾದ ರುಚಿಕರ ಖಾದ್ಯವು ಇದಾಗಿದೆ. ಆದರೆ ಮನೆಯಲ್ಲಿಯೇ ಪುಳಿಯೋಗರೆ ಪುಡಿ ತಯಾರಿಸಿ ಮಾಡಿದರೆ ದೇವಸ್ಥಾನದಲ್ಲಿ ನೀಡುವ ಪ್ರಸಾದದಷ್ಟೇ ರುಚಿಕರವಾಗಿರುತ್ತದೆ. ನವರಾತ್ರಿಗೆ ಈ ಪುಳಿಯೋಗರೆಯನ್ನು ಮಾಡಿ ದೇವಿಗೆ ನೈವೇದ್ಯವಾಗಿ ಅರ್ಪಿಸಬಹುದು. ಹಾಗಾದ್ರೆ ಈ ಸುಲಭ ಪಾಕ ವಿಧಾನದ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ನವರಾತ್ರಿಯಂದು ಒಂಬತ್ತು ದಿನಗಳ ಕಾಲ ಎಲ್ಲೆಡೆ ಸಂಭ್ರಮವು ಮನೆ ಮಾಡಿರುತ್ತದೆ. ಸರಿಸುಮಾರು ಒಂಬತ್ತು ದಿನಗಳ ಕಾಲ ಮನೆಯಲ್ಲಿ ವಿಶೇಷವಾದ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಈ ಸಮಯದಲ್ಲಿ ಶುದ್ಧ ಮನಸ್ಸಿನಿಂದ ದುರ್ಗಾ ದೇವಿಯನ್ನು ಪೂಜಿಸುವುದರಿಂದ, ಉಪವಾಸ ವ್ರತಗಳನ್ನು ಮಾಡಿ ನೈವೇದ್ಯ ಅರ್ಪಿಸುವುದರಿಂದ ದೇವಿಯ ಆಶೀರ್ವಾದವನ್ನು ಪಡೆದುಕೊಳ್ಳಬಹುದು. ನೀವು ಕೂಡ ನವರಾತ್ರಿಗೆ ಪುಳಿಯೋಗರೆ ಮನೆಯಲ್ಲೇ ಮಾಡಿ ದೇವಿಗೆ ಅರ್ಪಿಸಿ ಕೃಪೆಗೆ ಪಾತ್ರರಾಗಬಹುದು.
ಪುಳಿಯೋಗರೆ ಮಾಡಲು ಬೇಕಾಗುವ ಸಾಮಗ್ರಿಗಳು
* ಸ್ವಲ್ಪ ಹುಣಸೆಹಣ್ಣು
* ಸ್ವಲ್ಪ ಬೆಲ್ಲ
* ಕರಿ ಎಳ್ಳು
* ಅರ್ಧ ಕೊಬ್ಬರಿ
* ಒಂದು ಚಮಚ ಮೆಂತ್ಯೆ
* ಎರಡು ಚಮಚ ಕರಿ ಮೆಣಸು
* ಮೂರು ಚಮಚ ಕೊತ್ತಂಬರಿ ಬೀಜ
* ಎರಡು ಚಮಚ ಜೀರಿಗೆ
* ಆರು ಘಾಟಿ ಮೆಣಸು
* ಎಣ್ಣೆ
* ಒಂದು ಚಮಚ ಸಾಸಿವೆ
* ಎರಡು ಚಮಚ ಕಡಲೇ ಬೇಳೆ
* ಎರಡು ಚಮಚ ಶೇಂಗಾ
* ಎರಡು ಚಮಚ ಉದ್ದಿನಬೇಳೆ
* ಸ್ವಲ್ಪ ಇಂಗು
* ಕರಿಬೇವು
ಪುಳಿಯೋಗರೆ ಮಾಡುವ ವಿಧಾನ
* 100 ಗ್ರಾಂ ಹುಣಿಸೆಹಣ್ಣನ್ನು ನೆನೆಸಿಟ್ಟು, ರಸ ಹಿಂಡಿಕೊಂಡು ಇಟ್ಟುಕೊಳ್ಳಿ, ಅದಕ್ಕೆ ಸ್ವಲ್ಪ ಬೆಲ್ಲವನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ.
* ಆ ಬಳಿಕ ಕರಿ ಎಳ್ಳನ್ನು ಹುರಿದುಕೊಂಡು ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಿ. ಒಣ ಕೊಬ್ಬರಿಯನ್ನು ತುರಿದು ಅದಕ್ಕೆ ಸೇರಿಸಿ.
* ಒಂದು ಬಾಣಲೆಗೆ ತೆಗೆದುಕೊಂಡು ಎರಡರಿಂದ ಮೂರು ಚಮಚ ಎಣ್ಣೆ, ಮೆಂತ್ಯ, ಕರಿ ಮೆಣಸು, ಕೊತ್ತಂಬರಿ ಬೀಜ ಜೀರಿಗೆ, ಘಾಟಿ ಮೆಣಸಿನಕಾಯಿ ಹಾಕಿ ಸಣ್ಣ ಉರಿಯಲ್ಲಿ ಗರಿಗರಿ ಹುರಿದುಕೊಳ್ಳಿ. ತಣ್ಣಗಾದ ಬಳಿಕ ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ.
* ಆ ಬಳಿಕ ಬಾಣಲೆಗೆ ಸ್ವಲ್ಪ ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕಡಲೆಬೇಳೆ, ಶೇಂಗಾ, ಕರಿಬೇವಿನ ಎಲೆಗಳು ಹಾಗೂ ಇಂಗು ಹಾಕಿ ಒಗ್ಗರಣೆ ಮಾಡಿಕೊಳ್ಳಿ.
* ಕೊನೆಗೆ ಈಗಾಗಲೇ ತಯಾರಿಸಿದ ಅನ್ನವನ್ನು ಇದಕ್ಕೆ ಹಾಕಿ ಮಿಶ್ರಣ ಮಾಡಿಕೊಂಡರೆ ರುಚಿಕರವಾದ ಪುಳಿಯೋಗರೆ ಸವಿಯಲು ಸಿದ್ಧ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ