Navratri 2026: ನವರಾತ್ರಿಯ ಏಳನೇ ದಿನ ಕಾಳರಾತ್ರಿ ದೇವಿಗೆ ಈ ವಿಶೇಷ ನೈವೇದ್ಯವನ್ನು ಅರ್ಪಿಸಿ

ನವರಾತ್ರಿ ಹಬ್ಬದ ಏಳನೇ ದಿನದಂದು ದುರ್ಗಾದೇವಿಯ ಉಗ್ರ ರೂಪವೆಂದು ಕರೆಯಲಾಗುವ ಕಾಳರಾತ್ರಿ ಅಥವಾ ಕಾಳಿ ದೇವಿಯನ್ನು ಪೂಜಿಸಲಾಗುತ್ತದೆ. ಕಾಳರಾತ್ರಿಯು ಭಕ್ತರ ಜೀವನದಿಂದ ಕತ್ತಲೆ ಮತ್ತು ಭಯವನ್ನು ದೂರಮಾಡುತ್ತಾಳೆ, ಭಕ್ತರನ್ನು ನಕಾರಾತ್ಮಕ ಶಕ್ತಿಗಳಿಂದ ರಕ್ಷಿಸುತ್ತಾಳೆ ಎಂಬ ನಂಬಿಕೆಯಿದೆ. ಇಂದು ನವರಾತ್ರಿಯ ಏಳನೇ ದಿನವಾಗಿದ್ದು, ಈ ದಿನ ಜಗನ್ಮಾತೆಗೆ ಯಾವ ನೈವೇದ್ಯವನ್ನು ಅರ್ಪಿಸಿದರೆ ಶ್ರೇಷ್ಠ ಎಂಬುದನ್ನು ತಿಳಿಯಿರಿ.

Navratri 2026: ನವರಾತ್ರಿಯ ಏಳನೇ ದಿನ ಕಾಳರಾತ್ರಿ ದೇವಿಗೆ ಈ ವಿಶೇಷ ನೈವೇದ್ಯವನ್ನು ಅರ್ಪಿಸಿ
ಅವಲಕ್ಕಿ ಲಡ್ಡು

Updated on: Oct 17, 2026 | 7:20 AM

ಇಂದು ನವರಾತ್ರಿಯ (Navratri) ಏಳನೇ ದಿನ. ಈ ದಿನ  ದುರ್ಗಾ ದೇವಿಯ ಏಳನೇ ರೂಪವಾದ ಮಾ ಕಾಳರಾತ್ರಿಯನ್ನು ಪೂಜಿಸಲಾಗುತ್ತದೆ. ರಕ್ತಬೀಜಾಸುರನನ್ನು ವಧಿಸುವ ಸಲುವಾಗಿ ದುರ್ಗೆಯು ಕಾಳರಾತ್ರಿಯ ರೂಪವನ್ನು ಅವತರಿಸುತ್ತಾಳೆ. ಈ ಸುದಿನ  ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುವ ಕಾಳರಾತ್ರಿಯನ್ನು ಪೂಜಿಸುವುದರಿಂದ, ಆಕೆ ಎಲ್ಲಾ ರೀತಿಯ ದುಷ್ಟಶಕ್ತಿ ನಕರಾತ್ಮಕ ಶಕ್ತಿ ಹಾಗೂ ನಮ್ಮೊಳಗಿನ ಭಯ ಭೀತಿಯನ್ನು ದೂರ ಮಾಡುತ್ತಾಳೆ ಎಂಬ ನಂಬಿಕೆಯಿದೆ. ಕಾಳರಾತ್ರಿಯು ಭಕ್ತರ ಜೀವನದಿಂದ ಕತ್ತಲೆ ಮತ್ತು ಭಯವನ್ನು ದೂರಮಾಡುತ್ತಾಳೆ, ಭಕ್ತರನ್ನು ನಕಾರಾತ್ಮಕ ಶಕ್ತಿಗಳಿಂದ ರಕ್ಷಿಸುತ್ತಾಳೆ ಎಂಬ ನಂಬಿಕೆಯಿದೆ. ಈ ದಿನ ಕಾಳರಾತ್ರಿಯ ನೆಚ್ಚಿನ ಖಾದ್ಯವನ್ನು ನೈವೇದ್ಯವಾಗಿ ಅರ್ಪಿಸುವುದು ತುಂಬಾನೇ ಶ್ರೇಷ್ಠ ಎಂದು ಹೇಳಲಾಗುತ್ತದೆ.

ಕಾಳರಾತ್ರಿ ದೇವಿಗೆ ಯಾವ ನೈವೇದ್ಯ ಅರ್ಪಿಸಿದರೆ ಶ್ರೇಷ್ಠ?

ಧಾರ್ಮಿಕ ನಂಬಿಕೆಗಳ ಪ್ರಕಾರ, ಕಾಳರಾತ್ರಿ ದೇವಿಗೆ ಆಕೆಯ ನೆಚ್ಚಿನ  ಖಾದ್ಯವನ್ನು ನೇವೇದ್ಯವಾಗಿ ಅರ್ಪಿಸುವುದುವುದು ತುಂಬಾನೇ ಶ್ರೇಷ್ಠ ಎಂದು ಹೇಳಲಾಗುತ್ತದೆ. ಬೆಲ್ಲದಿಂದ ತಯಾರಿಸಿದ ಖಾದ್ಯಗಳು ಕಾಳರಾತ್ರಿಗೆ ತುಂಬಾನೇ ಪ್ರಿಯವಂತೆ. ನವರಾತ್ರಿಯ ಏಳನೇ ದಿನ ಅಂದರೆ ಕಾಳರಾತ್ರಿಯ ಆರಾಧನೆಯ ದಿನ ಬೆಲ್ಲದಿಂದ ತಯಾರಿಸಿದ ಯಾವುದೇ ಸಿಹಿ ಖಾದ್ಯವನ್ನು ಜಗನ್ಮಾತೆಗೆ ನೈವೇದ್ಯವಾಗಿ ಅರ್ಪಿಸಬಹುದು. ಈ ಪವಿತ್ರ ದಿನದಂದು ನೀವು ಕಾಳರಾತ್ರಿಯನ್ನು ಮೆಚ್ಚಿಸಲು ಬಯಸಿದರೆ, ಮನೆಯಲ್ಲಿಯೇ ಅವಲಕ್ಕಿ ಲಡ್ಡು ಮಾಡಿ, ದೇವಿಗೆ ಅರ್ಪಿಸಿ.

ಅವಲಕ್ಕಿ ಲಡ್ಡು  ಮಾಡಲು ಬೇಕಾಗಿರುವ ಸಾಮಾಗ್ರಿಗಳು:

ಅವಲಕ್ಕಿ – 200 ಗ್ರಾಂ, ಬೆಲ್ಲ – 100 ಗ್ರಾಂ, ಒಣ ತೆಂಗಿನಕಾಯಿ ತುರಿ –  ¼ ಕಪ್, ಗೋಡಂಬಿ ಮತ್ತು ಒಣ ದ್ರಾಕ್ಷಿ – 5 ರಿಂದ 10, ಏಲಕ್ಕಿ ಪುಡಿ – 1 ಟೀ ಸ್ಪೂನ್, ತುಪ್ಪ

ಇದನ್ನೂ ಓದಿ: ನವರಾತ್ರಿಯ ನಾಲ್ಕನೇ ದಿನ ದೇವಿಗೆ ಯಾವ ನೈವೇದ್ಯವನ್ನು ಅರ್ಪಿಸಬೇಕು?

ಅವಲಕ್ಕಿ ಲಡ್ಡು ತಯಾರಿಸುವ ಸುಲಭ ವಿಧಾನ:

  • ಮೊದಲಿಗೆ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಅವಲಕ್ಕಿ ಹಾಕಿ ಸ್ವಲ್ಪ ಹುರಿದುಕೊಳ್ಳಿ, ನಂತರ ಒಣ ತೆಂಗಿನಕಾಯಿ ತುರಿಯನ್ನು ಸಹ ಹುರಿದುಕೊಳ್ಳಿ ಹಾಗೂ  ಅದನ್ನು ತಣ್ಣಗಾಗಲು ಬಿಟ್ಟು ಬಿಡಿ. ಈ ಮಿಶ್ರಣ  ತಣ್ಣಗಾದ ಬಳಿಕ  ಅದನ್ನು ಒಂದು ಮಿಕ್ಸಿ ಜಾರ್ಗೆ  ವರ್ಗಾಯಿಸಿ. ಅದಕ್ಕೆ ತುರಿದ  ಬೆಲ್ಲವನ್ನು ಸೇರಿಸಿ ರುಬ್ಬಿಕೊಳ್ಳಿ.  (ಈ ಮಿಶ್ರಣ ರವೆಯಂತೆ ತರಿತರಿಯಾಗಿರಲಿ)
  • ನಂತರ ಒಂದು ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಅದು ಕಾದ ಬಳಿಕ ಅದರಲ್ಲಿ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಉರಿದುಕೊಳ್ಳಿ. ನಂತರ ಹುರಿದಿಟ್ಟ ಈ ಮಿಶ್ರಣವನ್ನು ಪಕ್ಕಕ್ಕೆ ಇಟ್ಟು, ಇದೇ ಪ್ಯಾನ್‌ಗೆ ಇನ್ನೂ ಸ್ವಲ್ಪ ತುಪ್ಪವನ್ನು ಹಾಕಿ,   ಆಗಲೇ ರುಬ್ಬಿಟ್ಟ ಬೆಲ್ಲ ಮತ್ತು ಅವಲಕ್ಕಿಯ ಮಿಶ್ರಣವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ.ಕೊನೆಗೆ ಅದಕ್ಕೆ ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದಿಟ್ಟ  ಒಣದ್ರಾಕ್ಷಿ ಮತ್ತು ಗೋಡಂಬಿಯನ್ನು ಸೇರಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಬಳಿಕ ಗ್ಯಾಸ್ ಆಫ್ ಮಾಡಿ, ಈ ಮಿಶ್ರಣವನ್ನು ಒಂದು ಪಾತ್ರೆಗೆ ವರ್ಗಾಯಿಸಿಕೊಳ್ಳಿ.
  • ಈಗ ಅಂಗೈಗೆ ಸಲ್ಪ ತುಪ್ಪವನ್ನು ಸವರಿಕೊಂಡು ಅವಲಕ್ಕಿ ಮಿಶ್ರಣದಿಂದ ಸಣ್ಣ ಸ್ಣಣ ಲಡ್ಡುಗಳನ್ನು ತಯಾರಿಸಿದರೆ, ಕಾಳರಾತ್ರಿ ದೇವಿಗೆ ನೈವೇದ್ಯ ಪ್ರಸಾದ ಸಿದ್ಧ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us