AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಸ್ತುಗಳನ್ನು ಗ್ಯಾಸ್‌ ಒಲೆ ಪಕ್ಕ ಇಡಲೇಬೇಡಿ; ಯಾಕೆ ಗೊತ್ತಾ?

ಅಡುಗೆಮನೆಯ ಸುರಕ್ಷತೆಯ ಬಗ್ಗೆ ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ಸಹ ದೊಡ್ಡ ಅಪಘಾತ ಸಂಭವಿಸಬಹುದು. ಅದರಲ್ಲೂ ಗ್ಯಾಸ್‌ ಸ್ಟೌವ್‌ ಪಕ್ಕ ಈ ಕೆಲವೊಂದು ವಸ್ತುಗಳನ್ನು ಇಡುವುದರಿಂದ ಬೆಂಕಿ ತಗಲುವ ಅಥವಾ ಅ ವಸ್ತುಗಳ ಗುಣಮಟ್ಟ ಹಾಳಾಗುವ ಸಾಧ್ಯತೆ ಹೆಚ್ಚು. ಅಡುಗೆ ಮಾಡುವಾಗ ಕೆಲಸ ಇನ್ನಷ್ಟು ಸುಲಭವಾಗಲಿ ಎಂದು ಈ ಒಂದಷ್ಟು ವಸ್ತುಗಳನ್ನು ನೀವು ಸಹ ಗ್ಯಾಸ್‌ ಸ್ಟೌವ್‌ ಪಕ್ಕದಲ್ಲಿಯೇ ಇಟ್ಟಿದ್ದರೆ ಅದನ್ನು ಈ ತಕ್ಷಣವೇ ತೆಗೆದು ಬಿಡಿ. ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ.

ಈ ವಸ್ತುಗಳನ್ನು ಗ್ಯಾಸ್‌ ಒಲೆ ಪಕ್ಕ ಇಡಲೇಬೇಡಿ; ಯಾಕೆ ಗೊತ್ತಾ?
ಸಾಂದರ್ಭಿಕ ಚಿತ್ರ Image Credit source: Pinterest
ಮಾಲಾಶ್ರೀ ಅಂಚನ್​
|

Updated on: Jun 04, 2026 | 6:50 PM

Share

ಅಡುಗೆ ಮಾಡುವಾಗ ಕೆಲಸ ಇನ್ನಷ್ಟು ಸುಲಭವಾಗಲಿ ಎಂದು ಕೆಲವೊಂದು ವಸ್ತುಗಳನ್ನು ಕೈಗೆಟಕುವಂತೆ ಗ್ಯಾಸ್‌ ಸ್ಟೌವ್‌ (gas stove) ಪಕ್ಕವೇ ಇಟ್ಟುಬಿಡುತ್ತೇವೆ. ಈ ರೀತಿ ಕೆಲವು ವಸ್ತುಗಳನ್ನು ಗ್ಯಾಸ್‌ ಸ್ಟೌವ್‌ ಪಕ್ಕ ಇಡಲೇಬಾರದಂತೆ, ಏಕೆಂದರೆ ಒಂದು ಸಣ್ಣ ನಿರ್ಲಕ್ಷ್ಯ ಕೂಡ ದೊಡ್ಡ ಅಪಾಯವನ್ನು ಉಂಟು ಮಾಡಬಹುದು. ಹೌದು ಗ್ಯಾಸ್‌ ಸ್ಟೌವ್‌ ಪಕ್ಕದಲ್ಲಿ ಈ ಕೆಲವೊಂದು ವಸ್ತುಗಳನ್ನಿಟ್ಟರೆ ಅವುಗಳಿಗೆ ಬಹುಬೇಗನೆ ಬೆಂಕಿಗೆ ತಗಲುತ್ತವೆ, ಅಲ್ಲದೆ ಆ ವಸ್ತುಗಳ ಗುಣಮಟ್ಟವೂ ಹಾಳಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ತಿಳಿದೋ ತಿಳಿಯದೆಯೋ ಗ್ಯಾಸ್‌ ಸ್ಟೌವ್‌ ಪಕ್ಕದಲ್ಲಿ  ಈ ಕೆಲವೊಂದು ವಸ್ತುಗಳನ್ನು ಇಟ್ಟಿದ್ದರೆ ಅವುಗಳನ್ನು ತಕ್ಷಣವೇ ತೆಗೆದು ಬಿಡಿ. ಆ ವಸ್ತುಗಳು ಯಾವುವು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಗ್ಯಾಸ್‌ ಸ್ಟೌವ್‌ ಪಕ್ಕ ಈ ವಸ್ತುಗಳನ್ನು ಇಡಲೇಬೇಡಿ:

 ಅಡುಗೆಮನೆ ಬಟ್ಟೆಗಳು: ಕೆಲವೊಮ್ಮೆ, ಅಡುಗೆಮನೆಯಲ್ಲಿ ಅಡುಗೆ ಮಾಡುವಾಗ, ನಾವು ನಮ್ಮ ಕೈಗಳನ್ನು ಒರೆಸಲು ಅಥವಾ ಬಿಸಿ ಪಾತ್ರೆಗಳನ್ನು ಹಿಡಿಯಲು ಬಟ್ಟೆಗಳನ್ನು ಬಳಸುತ್ತೇವೆ. ಹೆಚ್ಚಿನವರು ಈ ಬಟ್ಟೆಗಳನ್ನು ಗ್ಯಾಸ್‌ ಸ್ಟೌವ್‌ ಪಕ್ಕದಲ್ಲಿಯೇ ಇಟ್ಟುಬಿಡುತ್ತಾರೆ. ಅಡುಗೆ ಮಾಡುವಾಗ ಆತುರದಲ್ಲಿ, ಈ ಬಟ್ಟೆಗಳು ಆಕಸ್ಮಿಕವಾಗಿ ಜ್ವಾಲೆಗಳು ಅಥವಾ ಬಿಸಿ ಪಾತ್ರೆಗಳೊಂದಿಗೆ ಸಂಪರ್ಕಕ್ಕೆ ಬಂದರೆ ಅವುಗಳಿಗೆ ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿಕೊಳ್ಳಬಹುದು. ಆದ್ದರಿಂದ ನ್ಯಾಪ್ಕಿನ್‌ ಅಥವಾ ಅಡುಗೆ ಬಟ್ಟೆಗಳನ್ನು ಗ್ಯಾಸ್‌ ಸ್ಟೌವ್‌ ಪಕ್ಕ ಇಡಬೇಡಿ.

ಅಡುಗೆ ಎಣ್ಣೆ ಬಾಟಲಿಗಳು: ಅಡುಗೆಗೆ ಎಣ್ಣೆ ಅತ್ಯಗತ್ಯ. ಅಡುಗೆ ಕೆಲಸ ಆದಷ್ಟು ಸುಲಭವಾಗಿ ಆಗಲಿ ಎಂದು ಬಹುತೇಕ ಎಲ್ಲರೂ ಈ ಎಣ್ಣೆ  ಬಾಟಲಿಗಳನ್ನು ಗ್ಯಾಸ್‌ ಸ್ಟೌವ್‌ ಪಕ್ಕದಲ್ಲಿಯೇ ಇಟ್ಟುಬಿಡುತ್ತಾರೆ.  ಒಲೆಯ ಬಳಿ ಇಟ್ಟ ಎಣ್ಣೆ ಬಾಟಲಿಗಳು ಬೇಗನೆ ಬಿಸಿಯಾಗುತ್ತವೆ. ಅದರಲ್ಲೂ  ಅವು ಪ್ಲಾಸ್ಟಿಕ್ ಆಗಿದ್ದರೆ, ಅವು ಕರಗಿ ಎಣ್ಣೆ ಸೋರಿಕೆಯಾಗುವ ಅಪಾಯವಿದೆ. ಇದಲ್ಲದೆ, ಬೆಂಕಿ ಜ್ವಾಲೆಗೆ ಎಣ್ಣೆ ತಾಕಿದರೆ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆ ಇರುತ್ತದೆ.

ಪೇಪರ್ ಮತ್ತು ಶಾಪಿಂಗ್ ಬ್ಯಾಗ್‌ಗಳು: ಅನೇಕರು ಅಂಗಡಿಯಿಂದ ವಸ್ತುಗಳನ್ನು ತಂದ ಬಳಿಕ ಆ ವಸ್ತುಗಳ ಪೇಪರ್‌ ಮತ್ತು ಪ್ಲಾಸ್ಟಿಕ್‌ ಕವರ್‌ಗಳಲ್ಲೂ ಅಡುಗೆ ಮನೆಯಲ್ಲೇ ಇಟ್ಟುಬಿಡುತ್ತಾರೆ. ಕೆಲವು ಮನೆಗಳಲ್ಲಿ ಗ್ಯಾಸ್‌ ಒಲೆ ಪಕ್ಕವೇ ಪೇಪರ್‌, ಬ್ಯಾಗ್‌ಗಳನ್ನು ಇಟ್ಟುಬಿಡುತ್ತಾರೆ. ಈ ವಸ್ತುಗಳಿಗೆ ಸುಲಭವಾಗಿ ಬೆಂಕಿ ತಾಕುವ ಕಾರಣ ಅವುಗಳನ್ನು ಗ್ಯಾಸ್‌ ಒಲೆಯಿಂದ ಸಾಧ್ಯವಾದಷ್ಟು ದೂರವಿಡಿ.

ಬೆಂಕಿಕಡ್ಡಿಗಳು ಮತ್ತು ಲೈಟರ್‌ಗಳು: ಗ್ಯಾಸ್ ಹೊತ್ತಿಸಲು ಒಲೆಯ ಬಳಿ ಬೆಂಕಿಕಡ್ಡಿಗಳು ಮತ್ತು ಲೈಟರ್‌ಗಳನ್ನು ಇಡುವುದು ಸಾಮಾನ್ಯ. ಆದರೆ ಈ ರೀತಿ ಮಾಡುವುದು ಸರಿಯಲ್ಲ. ಏಕೆಂದರೆ ಶಾಖದ ನೇರ ಸಂಪರ್ಕವು ಲೈಟರ್‌ಗೆ ಹಾನಿಯಾಗಬಹುದು  ಆದ್ದರಿಂದ ಈ ವಸ್ತುಗಳನ್ನು  ಸುರಕ್ಷಿತ ಸ್ಥಳದಲ್ಲಿ ಇಡಬೇಕು.

ಇದನ್ನೂ ಓದಿ: ಅಡುಗೆ ಮಾಡುವಾಗ ಎಲ್​ಪಿಜಿ ಉಳಿಸಬೇಕಾ? ಹೀಗೆ ಮಾಡಿದರೆ 15 ದಿನ ಹೆಚ್ಚು ಗ್ಯಾಸ್ ಬಳಸಬಹುದು!

ಮರದ ಚಮಚಗಳು ಮತ್ತು ಚಾಪ್ ಬೋರ್ಡ್‌ಗಳು: ಮರದ ಚಮಚಗಳು ಮತ್ತು ಚಾಪ್ ಬೋರ್ಡ್‌ಗಳು ಅಡುಗೆಮನೆಯಲ್ಲಿ ತುಂಬಾ ಉಪಯುಕ್ತವಾಗಿರುವ ವಸ್ತುಗಳು, ಆದ್ದರಿಂದ ಹೆಚ್ಚಿನವರು ಅವುಗಳನ್ನು ಗ್ಯಾಸ್‌ ಒಲೆಯ ಪಕ್ಕದಲ್ಲಿಯೇ ಇಟ್ಟುಬಿಡುತ್ತಾರೆ. ಈ ರೀತಿ ಬಿಸಿ ಬರ್ನರ್ ಬಳಿ ಮರದ ವಸ್ತುಗಳನ್ನು ಇಟ್ಟರೆ ಅವು ಕಪ್ಪಾಗಬಹುದು, ಬಿರುಕು ಬಿಡಬಹುದು ಅಥವಾ ಅವುಗಳಿಗೆ ಬೆಂಕಿ ಹಿಡಿದುಕೊಳ್ಳಬಹುದು.

ಉಪ್ಪು, ಸಕ್ಕರೆ ಮತ್ತು ಮಸಾಲೆ ಜಾಡಿಗಳು: ಅಡುಗೆ ಮಾಡುವಾಗ ಸುಲಭವಾಗಿ ಲಭ್ಯವಾಗುವಂತೆ ಅನೇಕ ಜನರು ಉಪ್ಪು, ಮೆಣಸು, ಅರಿಶಿನ ಮತ್ತು ಗರಂ ಮಸಾಲೆ ಸೇರಿಂದ ಅಡುಗೆಗೆ ಉಪಯುಕ್ತವಾದ ಬಹುತೇಕ ಎಲ್ಲಾ ವಸ್ತುಗಳನ್ನು ಒಲೆಯ ಪಕ್ಕದಲ್ಲಿಯೇ ಇಟ್ಟುಬಿಡುತ್ತಾರೆ. ಗ್ಯಾಸ್‌ ಒಲೆಯ ತೀವ್ರವಾದ ಶಾಖ ಮತ್ತು ಅನಿಲದಿಂದ ಬರುವ ಉಗಿಯ ತೇವಾಂಶವು ಮಸಾಲೆ ಡಬ್ಬಿಗಳ ಒಳಗೆ ಸುಲಭವಾಗಿ ಪ್ರವೇಶಿಸುತ್ತದೆ. ಪರಿಣಾಮವಾಗಿ, ದುಬಾರಿ ಮಸಾಲೆಗಳು ಬೇಗನೆ ಹಾಳಾಗುತ್ತವೆ, ಅವುಗಳ ಪರಿಮಳವೂ ಹೋಗಿಬಿಡುತ್ತದೆ.

ಪ್ಲಾಸ್ಟಿಕ್ ವಸ್ತುಗಳು: ಅಡುಗೆ ಮನೆಯಲ್ಲಿ ನೀವು ಬಳಸುವಂತಹ ಪ್ಲಾಸ್ಟಿಕ್‌ ವಸ್ತುಗಳನ್ನು ಯಾವುದೇ ಕಾರಣಕ್ಕೂ ಗ್ಯಾಸ್‌ ಒಲೆ ಪಕ್ಕದಲ್ಲಿ ಇಡಬೇಡಿ. ಇದರಿಂದ ಆ ವಸ್ತಗಳು ಬೇಗನೆ ಹಾಳಾಗುತ್ತವೆ.ಗ್ಯಾಸ್ ಸ್ಟೌವ್ ಸುತ್ತಲಿನ ಪ್ರದೇಶವನ್ನು ಯಾವಾಗಲೂ ಒಣಗಿರುವಂತೆ ನೋಡಿಕೊಳ್ಳಿ ಮತ್ತು ಸ್ವಚ್ಛವಾಗಿಡಿ. ಸ್ಟೌವ್ ಬಳಿ ಅನಗತ್ಯ ಪ್ಲಾಸ್ಟಿಕ್ ಮತ್ತು ಕಾಗದದ ವಸ್ತುಗಳನ್ನು ಸಂಗ್ರಹಿಸುವುದನ್ನು ತಪ್ಪಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ಜಿಲ್ಲೆಗಳ ಸಮಸ್ಯೆ ಪಟ್ಟಿ ಮಾಡಿ 25 ದಿನಗಳ ಒಳಗೆ ಕೊಡಿ: ಡಿಕೆಶಿ ಸೂಚನೆ
ಜಿಲ್ಲೆಗಳ ಸಮಸ್ಯೆ ಪಟ್ಟಿ ಮಾಡಿ 25 ದಿನಗಳ ಒಳಗೆ ಕೊಡಿ: ಡಿಕೆಶಿ ಸೂಚನೆ
ಸಿಎಂ ಆದ 2ನೇ ದಿನಕ್ಕೆ ರೌಡಿಗಳ ವಿರುದ್ಧ ಸಮರ ಸಾರಿದ ಡಿಕೆ ಶಿವಕುಮಾರ್!
ಸಿಎಂ ಆದ 2ನೇ ದಿನಕ್ಕೆ ರೌಡಿಗಳ ವಿರುದ್ಧ ಸಮರ ಸಾರಿದ ಡಿಕೆ ಶಿವಕುಮಾರ್!
ಪಾರದರ್ಶಕವಾಗಿ ಕೆಲಸ ಮಾಡಲು ಅಧಿಕಾರಿಗಳಿಗೆ ಡಿಕೆಶಿ ಖಡಕ್ ಸೂಚನೆ​​
ಪಾರದರ್ಶಕವಾಗಿ ಕೆಲಸ ಮಾಡಲು ಅಧಿಕಾರಿಗಳಿಗೆ ಡಿಕೆಶಿ ಖಡಕ್ ಸೂಚನೆ​​
ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್​​ಗೆ ಡಿಕ್ಕಿ
ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್​​ಗೆ ಡಿಕ್ಕಿ
ಪೆದ್ದಿ ರಿಲೀಸ್​​ಗೂ ಮೊದಲು ಕಾಲ್ನಡಿಗೆಯಲ್ಲಿ ತಿರುಪತಿಗೆ ಬಂದ ಜಾನ್ವಿ
ಪೆದ್ದಿ ರಿಲೀಸ್​​ಗೂ ಮೊದಲು ಕಾಲ್ನಡಿಗೆಯಲ್ಲಿ ತಿರುಪತಿಗೆ ಬಂದ ಜಾನ್ವಿ
ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ
ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ
ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ