Personality Test : ನೀವು ನಿಮ್ಮ ಸಂಗಾತಿಗೆ ನಿಷ್ಠವಂತರಾಗಿದ್ದೀರಾ? ನಿಮ್ಮ ಅಂಗೈಯಲ್ಲಿನ ಹೃದಯರೇಖೆ ಬಿಚ್ಚಿಡುತ್ತೆ ನಿಮ್ಮ ವ್ಯಕ್ತಿತ್ವ

ಒಬ್ಬ ವ್ಯಕ್ತಿಯನ್ನು ನೋಡಿದ ತಕ್ಷಣವೇ ಆ ವ್ಯಕ್ತಿ ಹೇಗೆ ಎಂದು ಹೇಳುವುದು ಕಷ್ಟ. ಸ್ವಲ್ಪ ಸಮಯವಾದರೂ ಆ ವ್ಯಕ್ತಿಯೊಂದಿಗೆ ಬೆರೆಯಬೇಕು. ಹೀಗಾಗಿ ವ್ಯಕ್ತಿಯಿಂದ ವ್ಯಕ್ತಿಗೆ ವ್ಯಕ್ತಿತ್ವ, ಗುಣ ಸ್ವಭಾವ ಹಾಗೂ ಮಾತಿನಲ್ಲಿ ಭಿನ್ನತೆಯಿರುತ್ತದೆ. ಆದರೆ ಅಂಗೈಯಲ್ಲಿರುವ ಹೃದಯ ರೇಖೆಯಿಂದಲೂ ವ್ಯಕ್ತಿಯ ನಿಗೂಢ ವ್ಯಕ್ತಿತ್ವವನ್ನು ಅರಿತುಕೊಳ್ಳಬಹುದು. ಹಾಗಾದ್ರೆ ನಿಮ್ಮ ಕೈಯಲ್ಲಿರುವ ಹೃದಯ ರೇಖೆ ಹೇಗಿದೆ ಎನ್ನುವ ಆಧಾರದ ಮೇಲೆ ರಹಸ್ಯಮಯ ವ್ಯಕ್ತಿತ್ವ ತಿಳಿದುಕೊಳ್ಳಬಹುದು. ಈ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

Personality Test : ನೀವು ನಿಮ್ಮ ಸಂಗಾತಿಗೆ ನಿಷ್ಠವಂತರಾಗಿದ್ದೀರಾ? ನಿಮ್ಮ ಅಂಗೈಯಲ್ಲಿನ ಹೃದಯರೇಖೆ ಬಿಚ್ಚಿಡುತ್ತೆ ನಿಮ್ಮ ವ್ಯಕ್ತಿತ್ವ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 27, 2025 | 11:21 AM

ಮನುಷ್ಯ ವ್ಯಕ್ತಿತ್ವ ತಿಳಿಯಲು ಆತನೊಂದಿಗೆ ಬೆರೆಯಲೇ ಬೇಕಾಗಿಲ್ಲ. ಒಬ್ಬ ವ್ಯಕ್ತಿಯ ಕಣ್ಣು, ಕಿವಿ, ಮೂಗು, ಹಣೆಯ ಆಕಾರ, ಮಾತನಾಡುವ, ನಡೆದಾಡುವ ಹಾಗೂ ಕುಳಿತುಕೊಳ್ಳುವ ಭಂಗಿಯು ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತದೆ. ಆದರೆ ಅಂಗೈಯಲ್ಲಿರುವ ಹೃದಯ ರೇಖೆಯು ವ್ಯಕ್ತಿತ್ವವನ್ನು ರಿವೀಲ್ ಮಾಡುತ್ತದೆ. ನಿಮ್ಮ ಕೈಯಲ್ಲಿರುವ ಎರಡೂ ಅಂಗೈಗಳ ಹೃದಯ ರೇಖೆಯು ಒಂದೇ ಹಂತದಲ್ಲಿ ಸಂಧಿಸುತ್ತದೆಯೇ? ಅಥವಾ ಎಡಗೈಯ ಹೃದಯ ರೇಖೆಯು ಬಲಗೈಗಿಂತ ಹೆಚ್ಚು ಅಥವಾ ಕಡಿಮೆಯಿದ್ದರೆ ನೀವು ಯಾವ ರೀತಿಯ ವ್ಯಕ್ತಿತ್ವವನ್ನು ಅರಿತುಕೊಳ್ಳಬಹುದು.

  •  ಎರಡೂ ಕೈಗಳ ಹೃದಯ ರೇಖೆಗಳು ಸಮಾನಾಂತರವಾಗಿದ್ದರೆ : ಈ ವ್ಯಕ್ತಿಗಳ ಜೀವನವು ಒಂದೇ ಸಮತೋಲನದಿಂದ ಕೂಡಿರುತ್ತದೆ. ಈ ವ್ಯಕ್ತಿಗಳು ಶಾಂತ ಸ್ವಭಾವವನ್ನು ಹೊಂದಿದ್ದು ಮಾನಸಿಕಸ್ಥಿರತೆ ಕಾಪಾಡಿಕೊಳ್ಳುತ್ತಾರೆ ಒಲವು. ದಯೆ, ಸಹಾನುಭೂತಿ ಹಾಗೂ ವಿಶ್ವಾಸಾರ್ಹರು ವ್ಯಕ್ತಿಗಳಾಗಿರುತ್ತಾರೆ. ಸ್ನೇಹಪರ ವ್ಯಕ್ತಿತ್ವ ಹೊಂದಿದ್ದು, ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಸಂಬಂಧದಲ್ಲಿ ನಿಷ್ಠಾವಂತರಾಗಿದ್ದು ಎಲ್ಲಾ ಸಂಬಂಧವನ್ನು ಚೆನ್ನಾಗಿ ನಿರ್ವಹಿಸಿಕೊಂಡು ಹೋಗುತ್ತಾರೆ. ಭಾವನೆಗಳನ್ನು ಹೊಂದಿದ್ದರೂ ಅದನ್ನು ನಿಯಂತ್ರಣದಲ್ಲಿಡುವುದು ಈ ವ್ಯಕ್ತಿಗಳಿಗೆ ಚೆನ್ನಾಗಿ ತಿಳಿದಿದೆ. ಅತ್ಯುತ್ತಮ ಕೇಳುಗರಾಗಿದ್ದು, ಪ್ರೀತಿ ಪಾತ್ರರೊಂದಿಗಿನ ಸಂಬಂಧಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಯಾರಿಗೂ ಕೂಡ ನಂಬಿಕೆ ದ್ರೋಹ ಮಾಡುವುದಿಲ್ಲ.
  • ಬಲಗೈಗಿಂತ ಎಡಗೈ ಹೃದಯರೇಖೆ ಹೆಚ್ಚಾಗಿದ್ದರೆ : ಈ ಜನರು ಸೃಜನಶೀಲ, ಸಾಹಸಮಯ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಸ್ವಾವಲಂಬನೆ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಅವಶ್ಯಕತೆಯು ಹೆಚ್ಚಿರುತ್ತದೆ. ಉತ್ಸಾಹಭರಿತ ಸ್ವಭಾವವು ಎಲ್ಲರನ್ನು ಈ ವ್ಯಕ್ತಿಗಳತ್ತ ಆಕರ್ಷಸುವಂತೆ ಮಾಡುತ್ತದೆ. ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಳ್ಳುವ ವ್ಯಕ್ತಿ ಇವರದಾಗಿದ್ದು, ವಿಶ್ವಾಸರ್ಹರಾಗಿರುತ್ತಾರೆ. ಸ್ಪಷ್ಟ ಗುರಿಗಳನ್ನು ಹೊಂದಿದ್ದು, ಅದನ್ನು ಸಾಧಿಸಲು ಶ್ರದ್ಧೆಯಿಂದ ಕೆಲಸ ಮಾಡುತ್ತಾರೆ. ಅದಲ್ಲದೇ ಕೆಲವರೊಂದಿಗೆ ಮಾತ್ರ ಸ್ನೇಹ ಬೆಳೆಸುತ್ತಾರೆ. ಈ ವ್ಯಕ್ತಿಗಳಿಗೆ ಯಾರದರೂ ಇಷ್ಟವಿಲ್ಲವಾದರೆ ಅವರತ್ತ ತಿರುಗಿಯು ನೋಡುವುದಿಲ್ಲ.
  • ಎಡಗೈ ಹೃದಯ ರೇಖೆಯು ಬಲಗೈಗಿಂತ ಹೆಚ್ಚಾಗಿದ್ದರೆ : ಈ ವ್ಯಕ್ತಿಗಳಲ್ಲಿ ಸಾಮಾಜಿಕವಾಗಿ ಬೆರೆಯುವ ಗುಣವಿರುತ್ತದೆ. ತಮ್ಮ ವೃತ್ತಿಜೀವನದಲ್ಲಿ ಮಹತ್ವಾಕಾಂಕ್ಷೆಯನ್ನು ಹೊಂದಿದ್ದು, ಅಪಾಯಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ಹೀಗಾಗಿ ತಮ್ಮನ್ನು ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಾರೆ. ಸ್ವತಂತ್ರ ಮತ್ತು ಸೃಜನಶೀಲ ಸ್ವಭಾವವು ನಿಮ್ಮನ್ನು ಕಲೆ, ಮನರಂಜನಾ ಕ್ಷೇತ್ರಗಳಲ್ಲಿ ವೃತ್ತಿಜೀವನನ್ನಾಗಿ ಆಯ್ಕೆ ಮಾಡಿಕೊಳ್ಳುವಂತೆ ಮಾಡುತ್ತದೆ. ತಮ್ಮ ಸ್ವಂತಿಕೆ ಮತ್ತು ಉತ್ಸಾಹವು ಯಶಸ್ಸಿಗೆ ಕಾರಣವಾಗುತ್ತದೆ. ಆದರೆ ಖಿನ್ನತೆ, ಚಡಪಡಿಕೆ, ದಿನಚರಿ ಆಧಾರಿತ ಕೆಲಸಗಳು ಉಸಿರುಗಟ್ಟುವಂತೆ ಮಾಡುವುದೇ ಹೆಚ್ಚು. ಈ ಜನರು ತಮ್ಮ ಬಗ್ಗೆ ಕಾಳಜಿವಹಿಸುವವರಿಗೆ ನಿಷ್ಠವಂತರಾಗಿರುತ್ತಾರೆ. ಆದರೆ ಹೆಚ್ಚಿನ ಸಂದರ್ಭ ಈ ಜನರು ಇತರರನ್ನು ಅವಲಂಬಿಸಲು ಇಷ್ಟ ಪಡುವುದಿಲ್ಲ. ಕೆಲವೊಮ್ಮೆ ಇದು ಸಂಬಂಧಗಳಲ್ಲಿ ಸವಾಲುಗಳಿಗೆ ಕಾರಣವಾಗಬಹುದು.

ಜೀವಶಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Daily Devotional: ನಮಃ ಮಂತ್ರಾಕ್ಷರದ ಅರ್ಥ ಮತ್ತು ಮಹತ್ವ ತಿಳಿಯಿರಿ
Daily Devotional: ನಮಃ ಮಂತ್ರಾಕ್ಷರದ ಅರ್ಥ ಮತ್ತು ಮಹತ್ವ ತಿಳಿಯಿರಿ
Daily horoscope: ವೃಷಭ ರಾಶಿಯವರಿಗೆ ಇಂದು ಧನಯೋಗ
Daily horoscope: ವೃಷಭ ರಾಶಿಯವರಿಗೆ ಇಂದು ಧನಯೋಗ
ಕನ್ನಡ ಹೋರಾಟಗಾರರ ಮೇಲಿನ ಕೇಸ್ ವಾಪಸ್: ಸಿಎಂ ಘೋಷಣೆ
ಕನ್ನಡ ಹೋರಾಟಗಾರರ ಮೇಲಿನ ಕೇಸ್ ವಾಪಸ್: ಸಿಎಂ ಘೋಷಣೆ
ಮಾಧ್ಯಮಗೋಷ್ಠಿಯಲ್ಲಿ ಲೈಮ್​ಲೈಟನ್ನು ತನ್ನ ಮೇಲೆ ಎಳೆದುಕೊಂಡಿದ್ದು ಹನುಮಂತು
ಮಾಧ್ಯಮಗೋಷ್ಠಿಯಲ್ಲಿ ಲೈಮ್​ಲೈಟನ್ನು ತನ್ನ ಮೇಲೆ ಎಳೆದುಕೊಂಡಿದ್ದು ಹನುಮಂತು
‘ನನಗೂ ಫ್ಯಾಮಿಲಿ ಇದೆ’: ಮಾಜಿ ಗೆಳತಿ ಕಿರಿಕ್​ ಬಗ್ಗೆ ರಜತ್ ಸ್ಪಷ್ಟನೆ
‘ನನಗೂ ಫ್ಯಾಮಿಲಿ ಇದೆ’: ಮಾಜಿ ಗೆಳತಿ ಕಿರಿಕ್​ ಬಗ್ಗೆ ರಜತ್ ಸ್ಪಷ್ಟನೆ
ಬಿಬಿಎಲ್ ಫೈನಲ್‌ನಲ್ಲಿ ದಾಖಲೆಯ ಶತಕ ಸಿಡಿಸಿದ ಮಿಚೆಲ್ ಓವನ್
ಬಿಬಿಎಲ್ ಫೈನಲ್‌ನಲ್ಲಿ ದಾಖಲೆಯ ಶತಕ ಸಿಡಿಸಿದ ಮಿಚೆಲ್ ಓವನ್
ಮಾಧ್ಯಮದವರು ಪ್ರಶ್ನೆ ಕೇಳಿದಾಗ ಹನುಮಂತನಿಂದ ಅದೇ ಮುಗ್ಧತೆಯ ಉತ್ತರ!
ಮಾಧ್ಯಮದವರು ಪ್ರಶ್ನೆ ಕೇಳಿದಾಗ ಹನುಮಂತನಿಂದ ಅದೇ ಮುಗ್ಧತೆಯ ಉತ್ತರ!
ಫೈನಾನ್ಸ್ ಸಂಸ್ಥೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚನೆ
ಫೈನಾನ್ಸ್ ಸಂಸ್ಥೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚನೆ
ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಸಿದರೆ ಯತ್ನಾಳ್ ನಡೆ ಏನು?
ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಸಿದರೆ ಯತ್ನಾಳ್ ನಡೆ ಏನು?
ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಹನುಮಂತ ಮೊದಲ ಪ್ರೆಸ್ ಮೀಟ್; ಇಲ್ಲಿದೆ ಲೈವ್
ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಹನುಮಂತ ಮೊದಲ ಪ್ರೆಸ್ ಮೀಟ್; ಇಲ್ಲಿದೆ ಲೈವ್