Skin care tips for men: ಬೇಸಿಗೆಯಲ್ಲಿ ಪುರುಷರು ಅನುಸರಿಸಬೇಕಾದ ತ್ವಚೆಯ ಆರೈಕೆ ಸಲಹೆ

ಸೌಂದರ್ಯ ತಜ್ಞೆ ಶಹನಾಜ್ ಹುಸೇನ್ ಅವರು ಈ ಬೇಸಿಗೆಯಲ್ಲಿ ಪುರುಷರು ಅನುಸರಿಸಬೇಕಾದ ಪರಿಣಾಮಕಾರಿ ತ್ವಚೆಯ ಆರೈಕೆಯ ಸಲಹೆಗಳನ್ನು ಹಂಚಿಕೊಂಡಿದ್ದಾರೆ.

Skin care tips for men: ಬೇಸಿಗೆಯಲ್ಲಿ ಪುರುಷರು ಅನುಸರಿಸಬೇಕಾದ ತ್ವಚೆಯ ಆರೈಕೆ ಸಲಹೆ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: May 29, 2023 | 5:27 PM

ಮಹಿಳೆಯರಂತೆಯೇ ಪುರುಷರು ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳುವುದು ನಿರ್ಣಾಯಕವಾಗಿದೆ. ಪುರುಷರಲ್ಲಿ ಹೆಚ್ಚಿನವರು ಹೆಚ್ಚಾಗಿ ತ್ವಚೆಯ ಆರೈಕೆ ಮಾಡಿಕೊಳ್ಳುವುದರಿಂದ ತಪ್ಪಿಸಿಕೊಳ್ಳುತ್ತಾರೆ. ಹಾಗೂ ಸಾಬೂನಿನಿಂದ ಮುಖ ತೊಳೆಯುವುದು ಮತ್ತು ಶೇವಿಂಗ್ ಮಾಡುವುದಕ್ಕೆ ತಮ್ಮ ಆರೈಕೆಯನ್ನು ಸೀಮಿತಗೊಳಿಸಿದ್ದಾರೆ. ಇದರ ಹೊರತಾಗಿಯೂ ಸ್ವ ಆರೈಕೆಯು ಮುಖ್ಯವಾಗಿ ಬೇಕಾಗುತ್ತದೆ. ತ್ವಚೆಯ ಆರೈಕೆಗೆ ಅಗತ್ಯವಾಗಿ ಬೇಕಾದ ಸನ್ಸ್ಕ್ರೀನ್​​​​ಗಳು, ಟೋನರ್ ಗಳನ್ನು ಹಚ್ಚುವ ಮೂಲಕ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಅದರಲ್ಲೂ ಬೇಸಿಗೆಯಲ್ಲಿ ಸೂರ್ಯನ ನೇರಳಾತೀತ ಕಿರಣಗಳಿಂದ ಚರ್ಮವನ್ನು ರಕ್ಷಿಸುವುದು ಮುಖ್ಯವಾಗಿದೆ. ಬೇಸಿಗೆಯಲ್ಲಿ ಪುರುಷರು ಅನುಸರಿಸಬೇಕಾದ ಪರಿಣಾಮಕಾರಿ ತ್ವಚೆಯ ಆರೈಕೆಯ ಸಲಹೆಗಳು ಇಲ್ಲಿವೆ.

ಸೌಂದರ್ಯ ತಜ್ಞೆ ಶಹನಾಜ್ ಹುಸೇನ್ ಈ ಬೇಸಿಗೆಯಲ್ಲಿ ಪುರುಷರಿಗೆ 7 ಅತ್ಯುತ್ತಮ ತ್ವಚೆಯ ಆರೈಕೆಯ ಸಲಹೆಗಳನ್ನು ಹಂಚಿಕೊಂಡಿದ್ದಾರೆ:

ಕ್ಲೆನ್ಸರ್: ವಿಶೇಷವಾಗಿ ಬೇಸಿಗೆಯಲ್ಲಿ ಚರ್ಮಕ್ಕೆ ಶುದ್ಧೀಕರಣ ಅಗತ್ಯವಾಗಿ ಬೇಕಾಗಿದೆ. ಕ್ಲೆನ್ಸರ್ ತ್ವಚೆಯ ಕಲ್ಮಶ ಮತ್ತು ಎಣ್ಣೆಯನ್ನು ತೆಗೆದುಹಾಕುತ್ತದೆ. ಬೇಸಿಗೆಯಲ್ಲಿ ಚರ್ಮದಲ್ಲಿ ಕಾಣಿಸಿಕೊಳ್ಳುವ ಎಣ್ಣೆಯುಕ್ತತೆಯನ್ನು ಕಡಿಮೆಗೊಳಿಸಲು, ಪುರುಷರಿಗೆ ಎಣ್ಣೆಯುಕ್ತ ಚರ್ಮಕ್ಕಾಗಿ ವಿಶೇಷವಾಗಿ ರೂಪಿಸಲಾದ ಕ್ಲೆನ್ಸರ್ ಬಳಸುವುದು ಉತ್ತಮ. ಇದಲ್ಲದೆ ತುಳಸಿ ಮತ್ತು ಬೇವಿನಂತಹ ಪದಾರ್ಥಗಳನ್ನು ಹೊಂದಿರುವ ಫೇಸ್ವಾಶ್ ಬಳಸಿ ಮುಖವನ್ನು ಸ್ವಚ್ಛಗೊಳಿಸಬಹುದು ಅಥವಾ ಔಷಧೀಯ ಸೋಪ್ ಅಥವಾ ಕ್ಲೆನ್ಸರ್ ಬಳಸಿ.

ಫೇಶಿಯಲ್ ಸ್ಕ್ರಬ್: ಇದನ್ನು ವಾರಕ್ಕೆ ಎರಡು ಬಾರಿ ಬಳಸಬಹುದು. ಇದು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ಮುಖದ ಕಪ್ಪು ಕಲೆಗಳನ್ನು ಕಡಿಮೆಗೊಳಿಸುತ್ತದೆ. ಫೇಶಿಯಲ್ ಸ್ಕ್ರಬ್ ನ್ನು ಮುಖಕ್ಕೆ ಹಚ್ಚಿಕೊಂಡು ವೃತ್ತಾಕಾರದ ಚಲನೆಯೊಂದಿಗೆ ಚರ್ಮದ ಮೇಲೆ ನಿಧಾನವಾಗಿ ಉಜ್ಜಿಕೊಳ್ಳಿ, ನಂತರ ಶುದ್ಧ ನೀರಿನಿಂದ ಚೆನ್ನಾಗಿ ಮುಖ ತೊಳೆದುಕೊಳ್ಳಿ. ಮೊಡವೆಗಳ ಮೇಲೆ ಸ್ಕ್ರಬ್ ಗಳನ್ನು ಅನ್ವಯಿಸುವುದನ್ನು ತಪ್ಪಿಸಿ.

ಇದನ್ನೂ ಓದಿ:Skincare Tips: ಈ ಆಹಾರಗಳು ನಿಮ್ಮ ಮುಖದಲ್ಲಿ ಮೊಡವೆ ಹುಟ್ಟಲು ಕಾರಣವಾಗಬಹುದು

ಸನ್ಸ್ಕ್ರೀನ್ ಲೋಷನ್: ಹೆಚ್ಚಿನ ಪುರುಷರು ತಮ್ಮ ಕೆಲಸದ ಸಮಯವನ್ನು ಬಿಸಿಲಿನಲ್ಲಿ ಕಳೆಯುತ್ತಾರೆ. ಹಾಗಾಗಿ ಸೂರ್ಯನ ನೇರಳಾತೀತ ಕಿರಣಗಳಿಂದ ಚರ್ಮವನ್ನು ರಕ್ಷಿಸಿಕೊಳ್ಳುವುದು ತುಂಬಾನೇ ಮುಖ್ಯ. ಹಾಗಾಗಿ ಮನೆಯಿಂದ ಹೋರಗೆ ಹೋಗುವ 20ನಿಮಿಷಗಳ ಮೊದಲು ಸನ್ಸ್ಕ್ರೀನ್ ಲೋಷನ್ ಅನ್ವಯಿಸುವ ಮೂಲಕ ಚರ್ಮವನ್ನು ಸೂರ್ಯನ ನೇರಳಾತೀತ ಕಿರಣಗಳಿಂದ ರಕ್ಷಿಸಿ.

ಫೇಶಿಯಲ್ ಜೆಲ್: ಪುರುಷರಿಗೆ ತ್ವಚೆಯ ಶುದ್ಧೀಕರಣ ಜೆಲ್ ಬೇಕಾಗಬಹುದು. ಇದು ಮುಖದ ಮೇಲಿನ ಕಲ್ಮಶಗಳನ್ನು ತೆಗೆದುಹಾಕಲು ಸಹಕಾರಿಯಾಗಿದೆ. ಮತ್ತು ಇದು ಚರ್ಮ ಒಣಗುವಿಕೆಯನ್ನು ತಪ್ಪಿಸುತ್ತದೆ.

ಟೋನರ್: ಬಿಸಿ ವಾತಾವರಣದಲ್ಲಿ ಚರ್ಮವನ್ನು ರಿಫ್ರೆಶ್ ಮಾಡಲು ಉತ್ತಮ ಸ್ಕಿನ್ ಟೋನರ್ ಅತ್ಯಗತ್ಯ. ಇದು ತ್ವಚೆಯ ಹೆಚ್ಚುವರಿ ಕಲ್ಮಶ ಮತ್ತು ಎಣ್ಣೆಯ ಅಂಶವನ್ನು ತೆಗೆದುಹಾಕಲು ಸಹಕಾರಿಯಾಗಿದೆ.

ನೀರಿನ ಸೇವನೆ: ದೇಹವನ್ನು ಶುದ್ಧೀಕರಿಸಲು ಮತ್ತು ತ್ವಚೆಯನ್ನು ಆರೋಗ್ಯಕರವಾಗಿಡಲು ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಸೇವಿಸುವ ಅಗತ್ಯವಿದೆ. ಇದಲ್ಲದೆ ಒಂದು ಗ್ಲಾಸ್ ನೀರಿಗೆ ನಿಂಬೆ ಹಣ್ಣಿನ ರಸವನ್ನು ಹಿಂಡಿ ಬೆಳಗ್ಗೆ ಸೇವಿಸಬಹುದು. ಇದು ಚರ್ಮ ಸ್ಪಷ್ಟ ಮತ್ತು ತಾಜಾವಾಗಿ ಕಾಣುವಂತೆ ಮಾಡುತ್ತದೆ.

ಸ್ವಯಂ ಆರೈಕೆ: ಸ್ವಯಂ ಆರೈಕೆ ಎನ್ನುವಂತಹದ್ದು ತುಂಬಾ ಮುಖ್ಯ. ಸ್ವ ಆರೈಕೆಯು ತ್ವಚೆಯನ್ನು ಅಂದಗೊಳಿಸುವುದು ಮಾತ್ರವಲ್ಲದೆ, ತ್ವಚೆಯನ್ನು ಆರೋಗ್ಯಕರವಾಗಿಡಲು ಸಹಾಯಕವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ದಿನಂಪ್ರತಿ ತಮ್ಮ ತ್ವಚೆಯ ಸ್ವ ಆರೈಕೆಯನ್ನು ಮಾಡುವುದು ಮುಖ್ಯವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: