Smiling Depression: ಸ್ಮೈಲಿಂಗ್ ಡಿಪ್ರೆಶನ್ ಎಂದರೇನು? ಲಕ್ಷಣಗಳೇನು?

ಯಾಕೆ ಇವ್ರು ಯಾವಾಗಲೂ ನಗುನಗುತ್ತಾ ಇರ್ತಾರೆ, ಜೀವನವನ್ನು ತುಂಬಾ ಚೆನ್ನಾಗಿ ಎಂಜಾಯ್ ಮಾಡ್ತಾರೆ ಅನ್ಸುತ್ತೆ ಎಂದುಕೊಳ್ಳಬಹುದು. ಆದರೆ ಎಲ್ಲರದ್ದೂ ಮನಸ್ಸಿನಿಂದ ಬರುವ ನಗು ಆಗಿರುವುದಿಲ್ಲ, ದುಃಖವನ್ನು ಮರೆಮಾಚುವ ನಗು ಅದಾಗಿರುತ್ತದೆ.

Smiling Depression: ಸ್ಮೈಲಿಂಗ್ ಡಿಪ್ರೆಶನ್ ಎಂದರೇನು? ಲಕ್ಷಣಗಳೇನು?
Smiling DepressionImage Credit source: Amen clinics
Follow us
TV9 Web
| Updated By: ನಯನಾ ರಾಜೀವ್

Updated on: Sep 25, 2022 | 2:15 PM

ಯಾಕೆ ಇವರು ಯಾವಾಗಲೂ ನಗುನಗುತ್ತಾ ಇರ್ತಾರೆ, ಜೀವನವನ್ನು ತುಂಬಾ ಚೆನ್ನಾಗಿ ಎಂಜಾಯ್ ಮಾಡ್ತಾರೆ ಅನ್ಸುತ್ತೆ ಎಂದುಕೊಳ್ಳಬಹುದು. ಆದರೆ ಎಲ್ಲರದ್ದೂ ಮನಸ್ಸಿನಿಂದ ಬರುವ ನಗು ಆಗಿರುವುದಿಲ್ಲ, ದುಃಖವನ್ನು ಮರೆಮಾಚುವ ನಗು ಅದಾಗಿರುತ್ತದೆ. ಆದರೆ ಸದಾ ನಗುನಗುತ್ತಾ ಇರುವ ಮುಖದ ಹಿಂದೆ ನೋವಿನ ಕೋಡಿಯೇ ಇರುತ್ತದೆ, ಇಂತಹ ಅನೇಕ ಮುಖಗಳನ್ನು ನಾವು ಪ್ರತಿದಿನ ನಮ್ಮ ಸುತ್ತಮುತ್ತ ನೋಡುತ್ತಿರುತ್ತೇವೆ.

ಯಾರನ್ನಾದರೂ ನೋಡಿದರೆ ಅವರ ರೀತಿ ಬದುಕಬೇಕಪ್ಪಾ, ಏನೇ ಕಷ್ಟಗಳು ಬಂದರೂ ನಗುತ್ತಲೇ ಇರಬೇಕು ಎಂದುಕೊಳ್ಳುತ್ತೇವೆ, ಆದರೆ ಆ ನಗುವಿನ ಹಿಂದಿರುವ ದುಃಖದ ಬಗ್ಗೆ ನಮಗೆ ಅರಿವಿರುವುದಿಲ್ಲ. ನೀವು ಎಂದಾದರೂ ಸ್ಮೈಲಿಂಗ್ ಡಿಪ್ರೆಶನ್ ಬಗ್ಗೆ ಕೇಳಿದ್ದೀರಾ? ಅನೇಕರು ಇದರ ಬಗ್ಗೆ ತಿಳಿದಿಲ್ಲ.

ಸದಾ ನಗುತ್ತಿರುವುದು ಕೂಡ ಖಿನ್ನತೆಯ ಲಕ್ಷಣ ಯಾವಾಗಲೂ ನಗುತ್ತಿರುವುದು ಕೂಡ ಖಿನ್ನತೆಯ ಒಂದು ಲಕ್ಷಣವಾಗಿರಬಹುದು. ಹೊರಗಿನಿಂದ ಸಂತೋಷವಾಗಿದ್ದರೂ ಒಳಗಿನಿಂದ ಅತೃಪ್ತರಾಗಿರುತ್ತಾರೆ. ಖಿನ್ನತೆಯಿಂದ ಬಳಲುತ್ತಿರುವವರು ಹೊರಗಡೆ ನಗುತ್ತಿದ್ದಂತೆ ಕಂಡರೂ ಒಳಗಡೆ ನೋವು ಅನುಭವಿಸುತ್ತಿರುತ್ತಾರೆ.

ಸ್ಮೈಲಿಂಗ್ ಡಿಪ್ರೆಷನ್​ನ ಲಕ್ಷಣಗಳು -ಹಸಿವು, ತೂಕ ಮತ್ತು ನಿದ್ರೆಯಲ್ಲಿ ಬದಲಾವಣೆ. -ಆಯಾಸ ಅಥವಾ ಆಲಸ್ಯದ ಭಾವನೆ. -ಹತಾಶೆಯ ಭಾವನೆ. -ಸ್ವಾಭಿಮಾನ ಮತ್ತು ಆತ್ಮವಿಶ್ವಾಸದ ಕೊರತೆ. -ನೀವು ಇಷ್ಟಪಡುವ ಕೆಲಸಗಳನ್ನು ಮಾಡಲು ಆಸಕ್ತಿ ಇಲ್ಲದೇ ಇರುವುದು ಹೆಚ್ಚಿನ ಅಥವಾ ಎಲ್ಲಾ ರೋಗಲಕ್ಷಣಗಳು ಗೋಚರಿಸುವುದಿಲ್ಲ, ಅಂದರೆ, ಇತರ ವ್ಯಕ್ತಿಯು ಆ ಅವರಲ್ಲಿ ಈ ರೋಗಲಕ್ಷಣಗಳನ್ನು ಗುರುತಿಸಲು ಸಾಧ್ಯವಾಗುವುದಿಲ್ಲ.

ಯಾರಾದರೂ ಈ ರೀತಿಯ ಖಿನ್ನತೆಯನ್ನು ಅನುಭವಿಸುತ್ತಿದ್ದರೆ, ಮುಗುಳ್ನಗುತ್ತಿದ್ದರೆ ಅವರು ನೋವು ಅನುಭವಿಸುತ್ತಿರಬಹುದು ಎಂದು ನೀವು ತಿಳಿಯಬೇಕು. -ಖಿನ್ನತೆಯ ಲಕ್ಷಣಗಳನ್ನು ತೋರಿಸುವುದು ದೌರ್ಬಲ್ಯದ ಸಂಕೇತವಲ್ಲ -ನಿಮ್ಮ ನಿಜವಾದ ಭಾವನೆಗಳನ್ನು ವ್ಯಕ್ತಪಡಿಸುವುದು ಎಂದರೆ ಯಾರೊಬ್ಬರ ಮೇಲೆ ಹೊರೆ ಹಾಕುವುದು ಎಂದರ್ಥವಲ್ಲ -ಖಿನ್ನತೆಗೆ ಒಳಗಾದ ವ್ಯಕ್ತಿಯು ಮಾನಸಿಕ ಶಕ್ತಿಯ ಕೊರತೆಯನ್ನು ಹೊಂದಿರುತ್ತಾನೆ. -ಖಿನ್ನತೆಯು ಹೆಚ್ಚಾಗಿ ಆತ್ಮಹತ್ಯೆಯಂತಹ ಅಪಾಯದ ನಿರ್ಧಾರಕ್ಕೆ ಕೈಹಾಕಬಹುದು.

ಯಾರಾದರೂ ನಿಮ್ಮ ಹತ್ತಿರದವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂಬುದು ನಿಮ್ಮ ಗಮನಕ್ಕೆ ಬಂದರೆ ತಕ್ಷಣ ವೈದ್ಯರ ಬಳಿ ತೆರಳಿ, ಸೂಕ್ತ ಚಿಕಿತ್ಸೆ ಕೊಡಿಸುವುದು ಉತ್ತಮ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ