AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೂದಲ ಆರೈಕೆಗೆ ಸಹಕಾರಿ ಅಂಟುವಾಳ ಕಾಯಿ, ಇದರ ಅದ್ಭುತ ಪ್ರಯೋಜನ ಇಲ್ಲಿದೆ

ಸೋಪ್ ನಟ್ ಎಂದು ಕರೆಯಲ್ಪಡುವ ಅಂಟುವಾಳ ಅಥವಾ ನೊರೆಕಾಯಿಯನ್ನು ಶತಮಾನಗಳಿಂದಲೂ ಸಾಂಪ್ರದಾಯಿಕ ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ. ಅಂಟುವಾಳದಲ್ಲಿ ಸಪೋನಿನ್ ಅಂಶವು ಸಮೃದ್ಧವಾಗಿದ್ದು, ಇದನ್ನು ನೀರಿನೊಂದಿಗೆ ಬೆರೆಸಿದಾಗ ಇದರಲ್ಲಿ ನೊರೆ ಉತ್ಪತ್ತಿಯಾಗುತ್ತದೆ. ಅದಕ್ಕಾಗಿಯೇ ಇದನ್ನು ನೈಸರ್ಗಿಕ ಮಾರ್ಜಕ (ಸೋಪ್) ಎಂದು ಕರೆಯುತ್ತಾರೆ. ನೊರೆಕಾಯಿ ಕೂದಲಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದು ಕೂದಲನ್ನು ಬಹಳ ಸೂಕ್ಷ್ಮವಾಗಿ ಪೋಷಿಸುವ ಮೂಲಕ ಕೂದಲ ರಕ್ಷಣೆಯನ್ನು ಮಾಡುತ್ತದೆ. ನೊರೆಕಾಯಿ ಬಳಕೆಯಿಂದ ಕೂದಲಿಗೆ ಯಾವೆಲ್ಲಾ ಪ್ರಯೋಜಗಳು ಲಭಿಸುತ್ತವೆ ಎಂಬ ಮಾಹಿತಿ ಇಲ್ಲಿದೆ.

ಕೂದಲ ಆರೈಕೆಗೆ ಸಹಕಾರಿ ಅಂಟುವಾಳ ಕಾಯಿ, ಇದರ ಅದ್ಭುತ ಪ್ರಯೋಜನ ಇಲ್ಲಿದೆ
ಸಾಂದರ್ಭಿಕ ಚಿತ್ರ Image Credit source: freepik
ಮಾಲಾಶ್ರೀ ಅಂಚನ್​
| Edited By: |

Updated on: Aug 04, 2023 | 7:21 PM

Share

ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿ ಮತ್ತು ಒತ್ತಡ ಜೀವನವು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತಿದೆ. ಒಂದೆಡೆ ಹಲವಾರು ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡಿದರೆ, ಇನ್ನೊಂದೆಡೆ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಸಾಯನಿಕಯುಕ್ತ ಶಾಂಪೂಗಳ ಬಳಕೆಯು ಇದಕ್ಕೆ ಮುಖ್ಯ ಕಾರಣವಾಗಿರಬಹುದು. ಅತಿಯಾದ ಶಾಂಪೂಗಳ ಬಳಕೆಯು ಕೂದಲಿಗೆ ಹಾನಿಯನ್ನು ಮಾಡುತ್ತದೆ. ಹೀಗಿರುವಾಗ ಶಾಂಪೂಗಳ ಪರ್ಯಾಯವಾಗಿ ಕೂದಲು ಸ್ವಚ್ಛಗೊಳಿಸಲು ಏನನ್ನು ಬಳಸಬೇಕು ಎಂದು ಯೋಚಿಸುತ್ತಿದ್ದೀರಾ? ನೀವು ಶಾಂಪೂ ಬದಲಿಗೆ ಅಂಟುವಾಳವನ್ನು ಬಳಸಬಹುದು. ವಿಶೇಷವಾಗಿ ನೊರೆಕಾಯಿ ಅಥವಾ ಅಂಟುವಾಳ ಕೂದಲ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಂಟುವಾಳದಲ್ಲಿ ಕಬ್ಬಿಣಾಂಶವು ಹೇರಳವಾಗಿ ಕಂಡುಬರುತ್ತದೆ. ಇದು ಕೂದಲಿನ ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ. ಇದಲ್ಲದೆ ಇದರಲ್ಲಿ ಅನೇಕ ಉತ್ಕರ್ಷಣ ನಿರೋಧಕಗಳು ಕಂಡುಬರುತ್ತವೆ. ಇದರ ಸಹಾಯದಿಂದ ಕೂದಲಿನ ಬಹುತೇಕ ಸಮಸ್ಯೆಗಳನ್ನು ಪರಿಹರಿಸಬಹುದು.

ಅಂಟುವಾಳದಿಂದ ಬಳಕೆಯಿಂದ ಕೂದಲಿಗೆ ಏನೆಲ್ಲಾ ಪ್ರಯೋಜನಗಳು ಲಭಿಸುತ್ತದೆ:

ನೆತ್ತಿಯ ಆರೋಗ್ಯಕ್ಕಾಗಿ ಸಹಕಾರಿ:

ನೊರೆಕಾಯಿಯ ಆಂಟಿಮೈಕ್ರೊಬಿಯಲ್ ಮತ್ತು ಉರಿಯೂತ ವಿರೋಧಿ ಗುಣಲಕ್ಷಣಗಳು ನೆತ್ತಿಯನ್ನು ಆರೋಗ್ಯಕರವಾಗಿರಿಸುತ್ತದೆ. ತಲೆಹೊಟ್ಟು, ತುರಿಕೆ ಮತ್ತು ನೆತ್ತಿಯ ಸೋಂಕುಗಳು ಭಾದಿಸುವ ಸಂಭವವನ್ನು ಕಡಿಮೆ ಮಾಡುತ್ತದೆ. ಮತ್ತು ನೆತ್ತಿಯ ಮೇಲೆ ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ:

ನೆತ್ತಿಯ ಮೇಲೆ ರಕ್ತ ಪರಿಚಲನೆಯನ್ನು ಸುಧಾರಿಸುವ ಮೂಲಕ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುವ ಉತ್ಕರ್ಷಣ ನಿರೋಧಕಗಳನ್ನು ನೊರೆಕಾಯಿ ಹೊಂದಿದೆ. ಇದು ವಿಟಮಿನ್ ಸಿ ಯನ್ನು ಸಹ ಹೊಂದಿದೆ. ಇದು ಕೂದಲು ಕಿರುಚೀಲಗಳನ್ನು ಬಲಪಡಿಸಲು ಮತ್ತು ಕೂದಲು ಉದುರುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ. ಇದರ ನಿಯಮಿತವಾದ ಬಳಕೆಯು ಸೊಂಪಾದ ಆರೋಗ್ಯಕರ ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ನೈಸರ್ಗಿಕ ಶಾಂಪೂ:

ಸಾಮಾನ್ಯವಾಗಿ ಸಲ್ಫೇಟ್, ಪ್ಯಾರಬೆನ್ ಮತ್ತು ಸಿಲಿಕೋನ್ ಗಳಂತಹ ಕಠಿಣ ರಾಸಾಯನಿಕಗಳನ್ನು ಒಳಗೊಂಡಿರುವ ಶ್ಯಾಂಪೂಗಳು ಕೂದಲಿಗೆ ಬಹಳ ಹಾನಿಕಾರಕವಾಗಿದೆ. ಅದರ ಬದಲು ನೀವು ನೊರೆಕಾಯಿಯನ್ನು ಶಾಂಪೂ ರೀತಿಯಲ್ಲಿ ಬಳಸಬಹುದು. ಇದು ನಿಯಮಿತ ಕೂದಲ ರಕ್ಷಣೆಗೆ ಸುರಕ್ಷಿತ ಆಯ್ಕೆಯಾಗಿದೆ.

ನೈಸರ್ಗಿಕ ಕಂಡೀಷನರ್:

ನೊರೆಕಾಯಿಯನ್ನು ನೈಸರ್ಗಿಕ ಕಂಡಿಷನರ್ ಆಗಿ ಬಳಸಬಹುದು. ಇದು ಕೂದಲನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ. ಇದರಲ್ಲಿನ ನೈಸರ್ಗಿಕ ಸಪೋನಿನ್ ಅಂಶಗಳು ನೆತ್ತಿಯನ್ನು ಸ್ವಚ್ಛಗೊಳಿಸಲು ಮತ್ತು ಹೆಚ್ಚುವರಿ ಎಣ್ಣೆ, ಕೊಳೆಯನ್ನು ತಗೆದುಹಾಕಲು ಸಹಾಯ ಮಾಡುತ್ತದೆ. ಮತ್ತು ಕೂದಲನ್ನು ಸ್ವಚ್ಛವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ.

ತಲೆಹೊಟ್ಟು ನಿಯಂತ್ರಿಸುತ್ತದೆ:

ಅಂಟುವಾಳವು ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಅದು ತಲೆಹೊಟ್ಟು ನಿಯಂತ್ರಿಸಲು ಮತ್ತು ನೆತ್ತಿಯ ಸೋಂಕನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಹಾಗೂ ಇದು ನೆತ್ತಿಯ ಉಷ್ಣತೆಯನ್ನು ಶಮನಗೊಳಿಸಲು ಮತ್ತು ತುರಿಕೆ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಅಂಟುವಾಳ ಕಾಯಿಯ ಪ್ರಯೋಜನಗಳು: ಮನೆ ಮತ್ತು ವೈಯಕ್ತಿಕ ಆರೈಕೆಯ ನೈಸರ್ಗಿಕ ಪರ್ಯಾಯ

ಕೂದಲು ಆಕಾಲಿಕವಾಗಿ ಬಿಳಿಯಾಗುವುದನ್ನು ತಡೆಯುತ್ತದೆ:

ನೊರೆಕಾಯಿ ನೈಸರ್ಗಿಕ ವರ್ಣದ್ರವ್ಯಗಳನ್ನು ಹೊಂದಿದ್ದು, ಅದು ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯುತ್ತದೆ. ಅಲ್ಲದೆ ಇದು ಕೂದಲಿನ ನೈಸರ್ಗಿಕ ಬಣ್ಣ ಮತ್ತು ಹೊಳಪನ್ನು ಕಾಪಾಡಿಕೊಳ್ಳಲು ಸಹ ಸಹಾಯ ಮಾಡುತ್ತದೆ.

ಕೂದಲನ್ನು ಬಲಪಡಿಸುತ್ತದೆ:

ಅಂಟುವಾಳದಲ್ಲಿ ಕಬ್ಬಿಣ, ಕ್ಯಾಲ್ಸಿಯಂ ಮತ್ತು ಮೆಗ್ನೇಸಿಯಮ್ ನಂತಹ ಖನಿಜಗಳಿವೆ. ಇದು ಕೂದಲನ್ನು ಬಲಪಡಿಸಲು ಮತ್ತು ಸೀಳು ಕೂದಲಿನ ಸಮಸ್ಯೆಯನ್ನು ತಡೆಯಲು ಸಹಾಯ ಮಾಡುತ್ತದೆ. ಅಲ್ಲದೆ ಇದು ಕೂದಲ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಕೂದಲಿನ ರಕ್ಷಣೆಗೆ ನೊರೆಕಾಯಿಯನ್ನು ಹೇಗೆ ಬಳಸುವುದು:

ಶಾಂಪೂ:

ಒಂದು ಕೈಬೆರಳೆಣಿಕೆಯಷ್ಟು ನೊರೆಕಾಯಿಗಳನ್ನು ಸುಮಾರು 15 ರಿಂದ 20 ನಿಮಿಷಗಳ ಕಾಲ ನೀರಿನಲ್ಲಿ ಕುದಿಸಿ ಅದನ್ನು ತಣ್ಣಗಾಗಲು ಬಿಡಿ. ಈ ನೀರನ್ನು ಸಾಮಾನ್ಯವಾಗಿ ಕೂದಲು ತೊಳೆಯಲು ಬಳಸುವ ಶಾಂಪೂ ಬದಲಾಗಿ ಬಳಸಬಹುದು.

ಹೇರ್ ಮಾಸ್ಕ್:

ಇದಕ್ಕಾಗಿ ನೀವು ಸ್ವಲ ನೊರಕಾಯಿ ಬೀಜಗಳನ್ನು ನುಣ್ಣಗೆ ಪಡಿಮಾಡಿ ಇಟ್ಟುಕೊಳ್ಳಿ. ನಂತರ ಇದನ್ನು ನೀರಿನೊಂದಿಗೆ ಮಿಶ್ರಣ ಮಾಡಿ, ದಪ್ಪ ಪೇಸ್ಟ್ ತಯಾರಿಸಿ. ಅದನ್ನು ನಿಮ್ಮ ನೆತ್ತಿ ಮತ್ತು ಕೂದಲಿಗೆ ಹಚ್ಚಿಕೊಳ್ಳಿ. ನಿಧಾನವಾಗಿ ಮಸಾಜ್ ಮಾಡಿದ ಬಳಿಕ ಕೂದಲನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು