Summer Care Tips: ಪೋಷಕರೇ, ಬೇಸಿಗೆಯ ಸುಡು ಬಿಸಿಲಿಗೆ ನಿಮ್ಮ ಮಕ್ಕಳ ಆರೈಕೆ ಈ ರೀತಿಯಿರಲಿ

| Updated By: ಅಕ್ಷತಾ ವರ್ಕಾಡಿ

Updated on: Mar 12, 2024 | 8:03 PM

ಬೇಸಿಗೆಯೆಂದರೆ ದೊಡ್ಡವರಷ್ಟೇ ಅಲ್ಲ, ಮಕ್ಕಳಿಗೂ ಕೂಡ ಕಿರಿಕಿರಿ ತರುವ ಋತು. ಸುಡುವ ಬಿಸಿಲು, ಬಿಸಿ ಗಾಳಿ, ವಿಪರೀತ ಸೆಕೆ, ಕಾಡುವ ಆರೋಗ್ಯ ಸಮಸ್ಯೆಗಳು ಹೀಗೆ ಒಂದೆರಡಲ್ಲ. ಬೇಸಿಗೆಯಲ್ಲಿ ಅತಿಯಾದ ಬೆವರು ನಿರ್ಜಲೀಕರಣ ಮತ್ತು ಅನೇಕ ಚರ್ಮದ ಸಮಸ್ಯೆಗಳನ್ನು ಉಂಟುಮಾಡುವ ಕಾರಣ ಆರೋಗ್ಯ ಕಡೆಗೆ ಕಾಳಜಿ ವಹಿಸುವುದು ಅಗತ್ಯ. ಮಕ್ಕಳಿಗೆ ಈ ಬೇಸಿಗೆ ರಜೆಯಿರುವ ಕಾರಣ ಹೆತ್ತವರು ಈ ಸಮಯದಲ್ಲಿ ಮಕ್ಕಳಿಗೆ ನೀಡುವ ಆಹಾರ, ಉಡುಪು ಹಾಗೂ ಇನ್ನಿತ್ತರ ವಿಷಯಗಳ ಬಗ್ಗೆ ಗಮನ ನೀಡಬೇಕಾಗುತ್ತದೆ ಹಾಗಾದ್ರೆ ಬೇಸಿಗೆಯ ಋತುವಿನಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಈ ಸಲಹೆಗಳನ್ನು ಪಾಲಿಸಿ.

Summer Care Tips: ಪೋಷಕರೇ, ಬೇಸಿಗೆಯ ಸುಡು ಬಿಸಿಲಿಗೆ ನಿಮ್ಮ ಮಕ್ಕಳ ಆರೈಕೆ ಈ ರೀತಿಯಿರಲಿ
Summer Care Tips
Image Credit source: Pinterest
Follow us on

ಈಗಿನ ಬಿಸಿಲು ನೋಡಿದರೆ ಯಾಕಾದ್ರೂ ಬೇಸಿಗೆ ಶುರುವಾಗುತ್ತದೆ ಎಂದು ಗೊಣಗುವವರೇ ಹೆಚ್ಚಾಗಿದ್ದಾರೆ. ಈ ಬೇಸಿಗೆಯ ತಾಪಮಾನವನ್ನು ಸಹಿಸಿಕೊಳ್ಳುವುದು ಕಷ್ಟ ಎನ್ನುವಂತಾಗಿದೆ. ಪ್ಯಾನ್ ನಡಿಯಲ್ಲಿ ಕುಳಿತುಕೊಂಡರೂ ಬಿಸಿ ಗಾಳಿಯಿಂದ ಬಿಸಿ ಬಿಸಿ ಅನುಭವವಾಗಿ ದೇಹಕ್ಕೆ ಸಂಕಟವೆನಿಸುತ್ತದೆ. ಈ ಸಮಯದಲ್ಲಿ ಪೋಷಕರು ತಮ್ಮ ಆರೋಗ್ಯದ ಜೊತೆಗೆ ಮಕ್ಕಳ ಬಗ್ಗೆಯು ಕಾಳಜಿ ವಹಿಸಬೇಕಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಮಕ್ಕಳ ಆರೋಗ್ಯವು ಹದಗೆಡುತ್ತವೆ. ಹವಾಮಾನದ ವಿರುದ್ಧ ಮಕ್ಕಳನ್ನು ರಕ್ಷಿಸಲು ಕೆಲವು ಕ್ರಮಗಳನ್ನು ಅನುಸರಿಸಿದರೆ ಈ ಋತುವಿನಲ್ಲಿ ಮಕ್ಕಳನ್ನು ಆರೋಗ್ಯಯುತ ರಾಗಿಸಿಕೊಳ್ಳಬಹುದು.

ನಿಮ್ಮ ಮಕ್ಕಳಿಗೆ ಸಾಕಷ್ಟು ನೀರು ಕುಡಿಸಿ :

ಬೇಸಿಗೆಯಲ್ಲಿ ಸುಡು ಬಿಸಿಲಿನಲ್ಲಿ ಅತಿಯಾದ ಬೆವರುವಿಕೆ ಮತ್ತು ದೇಹದಿಂದ ನೀರಿನ ನಷ್ಟವು ನಿರ್ಜಲೀಕರಣಕ್ಕೆ ಕಾರಣವಾಗುವುದಲ್ಲದೆ ಮತ್ತಷ್ಟು ಸಮಸ್ಯೆಗಳಿಗೆ ಆಹ್ವಾನ ಕೊಟ್ಟಂತೆಯಾಗುತ್ತದೆ. ಹೀಗಾಗಿ ಮಕ್ಕಳಿಗೆ ದ್ರವ ರೂಪದ ಆಹಾರಗಳನ್ನು ಹೆಚ್ಚಾಗಿ ನೀಡಿ. ಹೆಚ್ಚು ನೀರು ಕುಡಿಯುವಂತೆ ನೋಡಿಕೊಳ್ಳಿ.

ಹತ್ತಿ ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳಿ:

ಬೇಸಿಗೆಯಲ್ಲಿ ಸುಡು ಬಿಸಿಲಿನ ನಡುವೆ ಸೆಕೆಯು ವಿಪರೀತವಾಗಿರುತ್ತದೆ. ಈ ಸಮಯದಲ್ಲಿ ದಪ್ಪನೆಯ ಬಟ್ಟೆಯು ಧರಿಸುವುದರಿಂದ ಕಿರಿಕಿರಿಯಾಗಬಹುದು. ಹೀಗಾಗಿ ಮಕ್ಕಳು ಕಂಫರ್ಟ್ ಆಗಿರಲು ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸುವಂತೆ ನೋಡಿ ಕೊಳ್ಳಿ. ಈ ಸಮಯದಲ್ಲಿ ಹತ್ತಿಯ ಉಡುಪು ಮಕ್ಕಳಿಗೆ ಈ ಆರಾಮದಾಯಕರಾಗಿರುತ್ತಾರೆ.

ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಲು ನೀಡಿ :

ಬೇಸಿಗೆಯಲ್ಲಿ ಹೆಚ್ಚಿನ ತಾಪಮಾನದಿಂದಾಗಿ ಜೀರ್ಣಕ್ರಿಯೆಯು ನಿಧಾನವಾಗುತ್ತದೆ. ಮಕ್ಕಳಿಗೆ ಮಸಾಲೆಯುಕ್ತ ಹಾಗೂ ಕರಿದ ಆಹಾರ ಪದಾರ್ಥಗಳನ್ನು ಆದಷ್ಟು ತಪ್ಪಿಸಿ. ಇದರಿಂದ ಹೊಟ್ಟೆಗೆ ಸಂಬಂಧ ಪಟ್ಟ ಸಮಸ್ಯೆಗಳು ಎದುರಾಗಬಹುದು. ಬೇಸಿಗೆಯಲ್ಲಿ ಸಿಗುವ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಮಕ್ಕಳ ಆಹಾರ ಪಟ್ಟಿಯಲ್ಲಿ ಸೇರಿಸಿದರೆ ಪೋಷಕರಾಗಿ ಮಕ್ಕಳ ಆರೋಗ್ಯವನ್ನು ಕಾಪಾಡುವತ್ತ ಗಮನಹರಿಸಿ.

ಇದನ್ನೂ ಓದಿ: Skin Care Tips: ನಿಮ್ಮ ತ್ವಚೆಯ ಸೌಂದರ್ಯಕ್ಕೂ ಆಲೂಗಡ್ಡೆಗೂ ಏನು ಸಂಬಂಧ?

ಸುಡು ಬಿಸಿಲಿಗೆ ಹೊರಗೆ ಹೋಗುವುದನ್ನು ತಪ್ಪಿಸಿ :

ಬೇಸಿಗೆಯಲ್ಲಿ ಮಕ್ಕಳಿಗೆ ರಜಾ ಇರುವುದರಿಂದ ಹೊರಗಡೆ ಹೋಗಿ ಆಡಲು ಇಷ್ಟ ಪಡುತ್ತಾರೆ. ಬಿಸಿಲಿನ ಝಳವು ಹೆಚ್ಚಾಗಿರುವ ಕಾರಣ ಹೊರಾಂಗಣ ಆಟಕ್ಕೆಂದು ಮಕ್ಕಳನ್ನು ಹೊರಗಡೆ ಕಳುಹಿಸಬೇಡಿ. ಪಾಲಕರು ಕೆಲವು ಒಳಾಂಗಣ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಮಕ್ಕಳು ಬೇಸಿಗೆರಜೆಯನ್ನು ಕಳೆಯುವಂತೆ ಮಾಡಿ.

ವಾಹನದೊಳಗೆ ಮಕ್ಕಳನ್ನು ಬಿಡಬೇಡಿ :

ಈ ಸಮಯದಲ್ಲಿ ಬಿಸಿಲಿನಲ್ಲಿ ಪಾರ್ಕ್ ಮಾಡಿರುವ ಕಾರಿನೊಳಗೆ ಮಕ್ಕಳನ್ನು ಬಿಡುವುದು ಒಳ್ಳೆಯದಲ್ಲ. ಬಿಸಿಲಿನ ತಾಪಮಾನಕ್ಕೆ ವಾಹನಗಳು ಬೇಗ ಬಿಸಿಯಾಗುತ್ತದೆ. ಮಕ್ಕಳು ಈ ವಾಹನದಲ್ಲಿದ್ದರೆ ತೊಂದರೆಗಳಾಗಬಹುದು.

ಮಕ್ಕಳ ಚರ್ಮದ ಆರೈಕೆಗೆ ಈ ಪ್ರಾಡಕ್ಟ್ ಗಳನ್ನು ಬಳಸಿ :

ಎಷ್ಟೇ ಕಾಳಜಿಯುತ ಪೋಷಕರು ನೀವಾಗಿದ್ದರೂ ಮಕ್ಕಳನ್ನು ಬೇಸಿಗೆಯ ರಜೆಯಲ್ಲಿ ಮನೆಯಲ್ಲೇ ಕೂಡಿ ಹಾಕಲು ಸಾಧ್ಯವಿಲ್ಲ. ಸಂಜೆಯ ಸಮಯದಲ್ಲಾದರೂ ನಿಮ್ಮ ಕಣ್ಣು ತಪ್ಪಿಸಿ ಮಕ್ಕಳು ಆಟವಾಡಲು ಹೋಗಬಹುದು. ಮಕ್ಕಳು ಸೂರ್ಯನ ಶಾಖಕ್ಕೆ ಒಡ್ಡಿಕೊಳ್ಳುವ ಕಾರಣ ಸನ್ ಸ್ಕ್ರೀನ್ ಗಳನ್ನು ಬಳಸುವಂತೆ ನೋಡಿಕೊಳ್ಳಿ. ಹಾನಿಕಾರಕ ಯುವಿ ಕಿರಣಗಳಿಂದ ಅವರ ಕಣ್ಣುಗಳನ್ನು ರಕ್ಷಿಸಲು ಸನ್‌ಗ್ಲಾಸ್‌ಗಳನ್ನು ನೀಡುವುದು ಒಳ್ಳೆಯದು.

ಮಕ್ಕಳ ಆರೋಗ್ಯದಲ್ಲಿ ಏರುಪೇರಾದರೆ ವೈದ್ಯರನ್ನು ಭೇಟಿ ನೀಡಿ :

ಬೇಸಿಗೆಯಲ್ಲಿ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಬಹುದು. ಹೀಗಾಗಿ ಮಕ್ಕಳಲ್ಲಿ ಯಾವುದೇ ಸಣ್ಣ ಆರೋಗ್ಯ ಸಮಸ್ಯೆಯ ಲಕ್ಷಣಗಳು ಕಂಡು ಬಂದರೂ ವೈದ್ಯರನ್ನು ಭೇಟಿಯಾಗಿ ಸರಿಯಾದ ಚಿಕಿತ್ಸೆ ಪಡೆದುಕೊಳ್ಳಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ