Summer Gardening Tips : ಸುಡುವ ಬಿಸಿಲಿಗೆ ಹೂವಿನ ಗಿಡಗಳು ಒಣಗದಂತೆ ತಡೆಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ಬೇಸಿಗೆ ಕಾಲ ಬಂತೆಂದರೆ ಸೂರ್ಯನು ತನ್ನ ಪ್ರಕಾಶವಾದ ಕಿರಣಗಳಿಂದ ನೆತ್ತಿಯನ್ನು ಸುಡುತ್ತಾನೆ. ಅದಲ್ಲದೇ, ಈ ಬೇಸಿಗೆ ಋತು ಮುಗಿಯುವ ಹೊತ್ತಿಗೆ ಅದೆಷ್ಟು ಗಿಡಗಳು ಬಾಡಿ ಅವುಗಳ ಸಂತತಿಯೇ ಅಳಿದು ಹೋಗಿರುತ್ತದೆ. ಹೀಗಾಗಿ ಬೇಸಿಗೆಕಾಲದಲ್ಲಿ ಮನೆಯಂಗಳದಲ್ಲಿರುವ ಹೂವಿನಗಿಡಗಳ ಬಗ್ಗೆ ಸ್ವಲ್ಪ ಮಟ್ಟಿಗಾದರೂ ಮುತುವರ್ಜಿ ವಹಿಸಬೇಕು. ಕೆಲವು ರಕ್ಷಣಾತ್ಮಕ ಕ್ರಮಗಳನ್ನು ಅನುಸರಿಸಿದರೆ ಮಾತ್ರ ಈ ಬಿರುಬಿಸಿಲಿನಲ್ಲಿಯೂ ನಿಮ್ಮ ಮನೆಯಲ್ಲಿರುವ ಈ ಹೂವಿನ ತೋಟವು ಹಸಿರಾಗಿರುತ್ತದೆ. ಹಾಗಾದ್ರೆ ಈ ಇಲ್ಲಿದೆ ಸಿಂಪಲ್ ಟಿಪ್ಸ್

ಅಂದದ ಮನೆಗೆ ಒಂದು ಹೂದೋಟ (Garden) ವಿದ್ದರೆ ಮನೆಯ ಅಂದವು ಹೆಚ್ಚುತ್ತದೆ. ಎಲ್ಲರಿಗೂ ಕೂಡ ತಮ್ಮ ಮನೆಯ ಮುಂದೆ ಹೂದೋಟ ಮಾಡಬೇಕು ಎನ್ನುವುದಿರುತ್ತದೆ. ಆದರೆ ಎಲ್ಲಾ ಋತುವಿನಲ್ಲಿಯೂ ಅದರ ನಿರ್ವಹಣೆ ಸಮಯ ನೀಡಬೇಕು. ಅದರಲ್ಲಿಯೂ ಈ ಬೇಸಿಗೆ ಋತು (Summer season) ವಿನಲ್ಲಿ ಗಾರ್ಡನ್‍ನಲ್ಲಿ ಬೆಳೆದ ಗಿಡಗಳನ್ನು ಉಳಿಸಿಕೊಳ್ಳುವುದೇ ಸವಾಲಿನ ಕೆಲಸ. ಒಂದು ದಿನ ನೀರು ಹಾಕದೇ ನಿವರ್ಹಣೆ ಸರಿಯಾಗಿ ಮಾಡದೇ ಇದ್ದರೆ ಗಿಡ ಬಾಡಿ ಹೋಗಿರುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಹೂದೋಟಗಳ ಬಗ್ಗೆ ಈ ರೀತಿ ಆರೈಕೆ ಮಾಡುವುದು ಸೂಕ್ತ.
* ಸಾಕಷ್ಟು ನೀರು ಉಣಿಸಿ : ಈ ಬೇಸಿಗೆಯಲ್ಲಿ ಸೂರ್ಯ ಕಿರಣಗಳು ಪ್ರಕಾಶಮಾನವಾಗಿರುತ್ತವೆ. ಈ ಋತುವಿನಲ್ಲಿ ಗಿಡಗಳು ಬಾಡಲು ಅಥವಾ ಜೀವ ಕಳೆದುಕೊಳ್ಳಲು ಮುಖ್ಯ ಕಾರಣ ಅವುಗಳಿಗೆ ಸಮರ್ಪಕವಾಗಿ ನೀರು ಹಾಕದೇ ಇರುವುದು. ಹೀಗಾಗಿ ಸಸ್ಯಗಳಿಗೆ ನಿಯಮಿತವಾಗಿ ನೀರುಣಿಸುವುದನ್ನು ಖಚಿತಪಡಿಸಿಕೊಳ್ಳಿ. ಬೆಳಗ್ಗಿನ ಸಮಯದಲ್ಲಿ ಅವುಗಳಿಗೆ ನೀರುಣಿಸುವುದು ಹೆಚ್ಚು ಮುಖ್ಯ ಏಕೆಂದರೆ ಬಿಸಿ ಅಲೆಗಳು ಮಣ್ಣಿನಲ್ಲಿರುವ ತೇವಾಂಶವನ್ನು ಆವಿ ಮಾಡುತ್ತದೆ. ಹೀಗಾಗಿ ದಿನಕ್ಕೆ ಎರಡು ಬಾರಿ ನೀರೂಣಿಸುವುದರಿಂದ ನೀರು ಮಣ್ಣಿನ ಕೆಳಕ್ಕೆ ಇಳಿದು ಗಿಡವನ್ನು ಹಚ್ಚಹಸಿರಾಗಿ ಇರುವಂತೆ ಮಾಡುತ್ತದೆ.
* ರಸಗೊಬ್ಬರ ಬಳಸಬೇಡಿ : ಸಾಮಾನ್ಯವಾಗಿ ಈ ರಸಗೊಬ್ಬರ ಗಿಡಗಳ ಬೆಳವಣಿಗೆಯನ್ನು ಪ್ರಚೋದಿಸುತ್ತೇನೋ ನಿಜ. ಆದರೆ ಈ ಬೇಸಿಗೆಯಲ್ಲಿ ಗಿಡಗಳಿಗೆ ರಸಗೊಬ್ಬರವನ್ನು ಹೀರಿಕೊಳ್ಳಲು ಸಾಧ್ಯವಾಗಲ್ಲ. ಸುಡುವ ಬಿಸಿಲಿನಲ್ಲಿ ರಸಗೊಬ್ಬರ ಹಾಕಿದರೆ ಗಿಡಗಳು ಸಾಯುತ್ತವೆ. ಅದಲ್ಲದೆ ಗಿಡಗಳ ಮೇಲೆ ಹೆಚ್ಚುವರಿ ಹೊರೆಯನ್ನು ಹಾಕಿದಂತಾಗುತ್ತದೆ,ಹೀಗಾಗಿ ಸಾಧ್ಯವಾದಷ್ಟು ಈ ಬೇಸಿಗೆ ಋತುವಿನಲ್ಲಿ ರಸ ಗೊಬ್ಬರ ಬಳಕೆ ಮಾಡುವುದನ್ನು ತಪ್ಪಿಸಿ.
ಮತ್ತಷ್ಟು ಓದಿ: Summer Tips : ಎಸಿ ಬೇಕಿಲ್ಲ, ಬೇಸಿಗೆಯಲ್ಲಿ ಮನೆಯನ್ನು ತಂಪಾಗಿಡಲು ಇಲ್ಲಿದೆ ನೈಸರ್ಗಿಕ ಮಾರ್ಗಗಳು
* ಮಣ್ಣಿನ ಫಲವತ್ತತೆ ಹೆಚ್ಚಿಸುವತ್ತ ಗಮನ ಕೊಡಿ : ಬೇಸಿಗೆ ಆರಂಭವಾಗುತ್ತಿದ್ದಂತೆ ಹೂವಿನ ತೋಟ ಅಥವಾ ಕೈ ತೋಟದ ಆರೈಕೆಯತ್ತ ಗಮನ ಕೊಡುವುದು ಮುಖ್ಯ. ಈ ವೇಳೆಯಲ್ಲಿ ಗಿಡದ ಮಣ್ಣನ್ನು ಸಡಿಲ ಮಾಡಿ, ಹೀಗೆ ಮಾಡಿದ್ರೆ ಬೇರುಗಳಿಗೆ ಗಾಳಿಯಾಡುತ್ತದೆ. ಪ್ರಾರಂಭದಲ್ಲಿಯೇ ಮಣ್ಣಿಗೆ ಸಾವಯವ ಗೊಬ್ಬರ ಸೇರಿಸಿದ್ರೆ ಮಣ್ಣಿನ ಫಲವತ್ತತೆಯೂ ಹೆಚ್ಚುತ್ತದೆ. ಗಿಡಕ್ಕೆ ಬೇಕಾದ ಪೋಷಕಾಂಶಗಳು ದೊರೆತು ಗಿಡಗಳು ಹಸಿರಿನಿಂದ ಕೂಡಿರುತ್ತದೆ.
* ನೆರಳು ನೀಡಿ : ಝಳ ಝಳ ಬಿಸಿಲಿನಲ್ಲಿ ಶಾಖವನ್ನು ತಾಳಿಕೊಳ್ಳಲು ಗಿಡಗಳಿಗೆ ಹಾಗೂ ಬಳ್ಳಿಗಳಿಗೆ ಕಷ್ಟವಾಗುತ್ತದೆ. ಹೀಗಾಗಿ ಬಿಸಿಲು ಬೀಳುವ ಸ್ಥಳದಲ್ಲಿರುವ ಗಿಡ ಹಾಗೂ ಬಳ್ಳಿಗಳನ್ನು ನೆರಳಿರುವ ಸ್ಥಳದಲ್ಲಿಡಿ. ಇದರಿಂದ ಸೂರ್ಯನ ಕಿರಣಗಳು ಗಿಡಗಳ ಮೇಲೆ ನೇರವಾಗಿ ಬೀಳದಂತೆ ತಡೆಯಬಹುದು.
* ಮುಚ್ಚಿಗೆ ಮುಚ್ಚುವುದನ್ನು ಮರೆಯದಿರಿ : ಬೇಸಿಗೆಯ ಸಮಯದಲ್ಲಿ ಸೂರ್ಯ ಶಾಖ ತೀವ್ರ ತೆರೆನಾಗಿದ್ದು ಇದು ಗಿಡಗಳು ಒಣಗಳು ಕಾರಣವಾಗುತ್ತದೆ. ಎಷ್ಟೇ ನೀರು ಹಾಕಿದರೂ ಕೂಡ ಬೇಗನೇ ಆವಿಯಾಗುತ್ತದೆ. ಗಿಡಗಳ ಕಾಂಡದ ಸುತ್ತಲೂ ಒಣ ಎಲೆ, ಹಸಿ ಎಲೆ, ಗಿಡದಿಂದ ಕೆಳಗುದುರಿದ ಹೂವುಗಳು, ನಿಮ್ಮ ಮನೆಯಲ್ಲಿ ಬಳಸಿದ ತೆಂಗಿನ ಕಾಯಿಯ ಸಿಪ್ಪೆಯಿಂದ ಮುಚ್ಚಿಗೆ ಮಾಡಿ. ಹೀಗೆ ಮಾಡಿದ್ರೆ ಮಣ್ಣಿನಲ್ಲಿರುವ ತೇವಾಂಶ ಆವಿಯಾಗುವುದಿಲ್ಲ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ