International Womens Day 2024 : ಯೋಗಾಸನದ ಭಂಗಿಯಿಂದಲೇ ವಿಶ್ವ ದಾಖಲೆ ಬರೆದ ಉಡುಪಿಯ ಪ್ರತಿಭಾನ್ವಿತೆ ತನುಶ್ರೀ ಪಿತ್ರೋಡಿ

ಎಳೆಯ ವಯಸ್ಸಿನಲ್ಲಿ ಪ್ರತಿಭೆಗೆ ಸೂಕ್ತ ವೇದಿಕೆ ಸಿಕ್ಕರೆ ತನ್ನೊಳಗಿನ ಪ್ರತಿಭೆಯನ್ನು ಹೊರತರಬಹುದು ಎನ್ನುವುದಕ್ಕೆ ಉಡುಪಿಯ ತನುಶ್ರೀ ಪಿತ್ರೋಡಿ ಉದಾಹರಣೆಯಾಗಿದ್ದಾರೆ. ಯೋಗ ಹಾಗೂ ನೃತ್ಯದಲ್ಲಿ ಗಿನ್ನಿಸ್ ರೆಕಾರ್ಡ್ ಗಳನ್ನು ಬರೆದು ಎಲ್ಲರಿಗೂ ಚಿರಪರಿಚಿತಳಾಗಿದ್ದಾಳೆ. ಈಗಾಗಲೇ 500 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದು, 250 ಹೆಚ್ಚು ಸನ್ಮಾನಗಳು ಪ್ರತಿಭಾವಂತೆ ತನುಶ್ರೀ ಪಿತ್ರೋಡಿಯವರನ್ನು ಹುಡುಕಿಕೊಂಡು ಬಂದಿದೆ.

International Womens Day 2024 : ಯೋಗಾಸನದ ಭಂಗಿಯಿಂದಲೇ ವಿಶ್ವ ದಾಖಲೆ ಬರೆದ ಉಡುಪಿಯ ಪ್ರತಿಭಾನ್ವಿತೆ ತನುಶ್ರೀ ಪಿತ್ರೋಡಿ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 08, 2024 | 5:50 PM

ಕಲೆಯೂ ಯಾರ ಸ್ವತ್ತು ಅಲ್ಲ, ಕಲಿಯುವ ಮನಸ್ಸು, ಪ್ರೋತ್ಸಾಹ ನೀಡುವವರು ಇದ್ದರೆ ಗುರಿಯತ್ತ ಕೇಂದ್ರಿಕರಿಸುವುದು ಕಷ್ಟವೇನಲ್ಲ ಎನ್ನುವುದಕ್ಕೆ ನೈಜ ಉದಾಹರಣೆವೇ ಈ ತನುಶ್ರೀ ಪಿತ್ರೋಡಿ. ಉಡುಪಿ ಜಿಲ್ಲೆಯ ಉದ್ಯಾವರದ ಪಿತ್ರೋಡಿಯವರಾಗಿದ್ದು, ಉದಯ್ ಕುಮಾರ್ ಮತ್ತು ಸಂಧ್ಯಾ ದಂಪತಿಯ ಮುದ್ದಿನ ಮಗಳು. ಪ್ರಸ್ತುತ ಉಡುಪಿ ಸೈಂಟ್ ಸಿಸಿಲಿ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವ್ಯಾಸಂಗ ಮಾಡುತ್ತಿದ್ದು, ಓದಿನ ಜೊತೆ ಜೊತೆಗೆ ನೃತ್ಯ, ಯೋಗದಲ್ಲಿ ದಾಖಲೆಗಳನ್ನು ಬರೆದಿದ್ದಾರೆ.

ಮೂರನೇ ವಯಸ್ಸಿನಲ್ಲಿ ನೃತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡ ಈ ಪೋರಿ ಮಾಸ್ಟರ್ ಗ್ರುಪ್‌ನಲ್ಲಿ ನೃತ್ಯ ತರಬೇತಿ ಪಡೆದುಕೊಂಡಳು. ಸಣ್ಣ ವಯಸ್ಸಿನಲ್ಲಿ ಈಕೆಗೆ ನೃತ್ಯವೆಂದರೆ ಅಚ್ಚು ಮೆಚ್ಚು. ಆರಂಭದಲ್ಲಿ ಗುರುವಿಲ್ಲದೇ ಅಭ್ಯಾಸವನ್ನು ಆರಂಭಿಸಿದ ಈ ಪ್ರತಿಭಾವನ್ವಿತೆ ನಂತರದಲ್ಲಿ ಗುರುವಿನ ಮಾರ್ಗದರ್ಶನವನ್ನು ಪಡೆದುಕೊಂಡರು. ಈಕೆಯ ಆಸಕ್ತಿಯನ್ನರಿತ ಪೋಷಕರು ಐದನೇ ವಯಸ್ಸಿನಲ್ಲಿಯೇ ಭರತ ನಾಟ್ಯಕ್ಕೆ ಸೇರಿಸಿದರು.

ಗುರುಗಳಾದ ರಾಮಕೃಷ್ಣ ಕೊಡಂಚ ಇವರಲ್ಲಿ ಭರತ ನಾಟ್ಯ ಅಭ್ಯಾಸವನ್ನು ಶುರು ಮಾಡಿದಳು. ನೃತ್ಯದ ಜೊತೆಗೆ ಯೋಗದತ್ತ ಒಲವು ಬೆಳೆಸಿಕೊಂಡ ಈಕೆಯು ಹಲವು ದಾಖಲೆಗಳನ್ನು ಬರೆದಿದ್ದಾರೆ. ಯೋಗ ಗುರುಗಳಾದ ಹರಿರಾಜ್ ಕಿನ್ನಿಗೋಳಿ ಹಾಗೂ ಸುದರ್ಶನ್ ಕಾರ್ಕಳ ಅವರಲ್ಲಿ ಯೋಗ ಅಭ್ಯಾಸವನ್ನು ಮಾಡುತ್ತಿದ್ದು, ಈಗಾಗಲೇ ನೃತ್ಯ ಮತ್ತು ಸ್ಲಂಟ್ ಮಾಡುವ ಮೂಲಕ ಎಲ್ಲರನ್ನು ಬೆರಗು ಮೂಡಿಸುತ್ತಿದ್ದಾರೆ.

ತನ್ನ ಎಂಟನೇ ವಯಸ್ಸಿನಲ್ಲಿಯೇ ನೀರಾರಂಭ ಪೂರ್ಣ ಚಕ್ರಾಸನ ಎಂಬ 5 ಯೋಗ ಒಂದು ನಿಮಿಷದಲ್ಲಿ 19 ಬಾರಿ ಮಾಡುವುದರ ಮೂಲಕ ಮೊದಲ ಬಾರಿಗೆ ವಿಶ್ವ ದಾಖಲೆ ಬರೆದಿದ್ದಾರೆ. ವೆಂಕಟರಮಣ ಸ್ಪೋರ್ಟ್ಸ್ ಮತ್ತು ಕಲ್ಬರಲ್ ಟ್ರೋದಿ ಅವರ ನೇತೃತ್ವದಲ್ಲಿ ಮೋಸ್ಟ್ ಬಾರಿ ರೆವಲ್ಯೂಷನ್ ಮೈಂಟೇನಿಂಗ್ ಏಜೆನ್ಸ್ ಸ್ಟಾಂಡ್ ಪೊಸಿಷನ್ ಭಂಗಿಯನ್ನು ಒಂದು ನಿಮಿಷದಲ್ಲಿ 42 ಬಾರಿ ಮಾಡಿ ಬೆರಗು ಮೂಡಿಸಿದ್ದಳು. ಧನಾಸನ ಯೋಗದ ಭಂಗಿಯನ್ನು 61 ಬಾರಿ ರೋಲ್ ಮಾಡಿ 3ನೇ ಬಾರಿ ವಿಶ್ವದಾಖಲೆ ಮಾಡಿದ್ದಾರೆ

ಇದನ್ನೂ ಓದಿ: ಕಂಚಿನ ಕಂಠದಿಂದ ಯಕ್ಷ ಪ್ರೇಮಿಗಳ ಮನಸ್ಸು ಗೆದ್ದಿರುವ ಮಹಿಳಾ ಭಾಗವತ ಕು. ಚಿಂತನಾ ಹೆಗಡೆ ಮಾಳ್ಕೋಡ್

ಈಗಾಗಲೇ ಯೋಗಾಸನದ ಮೂಲಕ 2 ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಹಾಗೂ 6 ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾಳೆ. ಭರತನಾಟ್ಯದಲ್ಲಿಯೂ ಒಂದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾಳೆ. ಅದಲ್ಲದೆ, ಇಟಲಿ ದೇಶದ ರೋಮ್ ನಗರದಲ್ಲಿ ನಡೆದ ವಿಶ್ವ ಗಿನ್ನಿಸ್ ದಾಖಲೆಯ ಸಾಧಕರೊಂದಿಗೆ ಸೇರಿ ತಾನು ಕೂಡ ಯೋಗ ಪ್ರದರ್ಶನವನ್ನು ನೀಡಿದ್ದಾಳೆ. ಕಲರ್ಸ್ ಕನ್ನಡದ ಯಶಸ್ವಿ ಕಾರ್ಯಕ್ರಮ ಮಜಾ ಟಾಕಿನಲ್ಲಿ ವಿಭಿನ್ನವಾದ ನೃತ್ಯ ಮಾಡಿ ಎಲ್ಲರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.

ಈ ಪೋರಿಯ ಪ್ರತಿಭೆಯನ್ನು ಗಮನಿಸಿ ನೂರಾರು ಸಂಘ ಸಂಸ್ಥೆಗಳು ಸನ್ಮಾನಿಸಿದೆ. 5 ನೆಯ ಯೋಗ ದಿನಾಚರಣೆಯ ಸಂದರ್ಭ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಡೆಯವರಿಂದ ಯೋಗರತ್ನ ಪ್ರಶಸ್ತಿ, ಅಭಿನಯ ಕಲಾವಿದರು ಉಡುಪಿ ಇವರಿಂದ ನಾಟ್ಯ ಮಯೂರಿ ಬಿರುದು, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಇವರ ವತಿಯಿಂದ 2020ನೇ ಸಾಲಿನ ವಿಶೇಷ ಬಾಲ ಪ್ರತಿಭೆ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿಗಳು ಈಕೆಯನ್ನು ಅರಸಿಕೊಂಡು ಬಂದಿವೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್