ದೀರ್ಘ ಪ್ರಯಾಣದ ಸಮಯದಲ್ಲಿ ನಿಮ್ಮ ಆರೋಗ್ಯ ಕೆಡದಿರಲು ತಜ್ಞರು ನೀಡಿರುವ ಸಲಹೆ ಇಲ್ಲಿದೆ

ಪೌಷ್ಟಿಕತಜ್ಞರಾದ ರುಜುತಾ ದಿವೇಕರ್ ಪ್ರಯಾಣದ ಸಮಯದಲ್ಲಿ ಆರೋಗ್ಯವನ್ನು ಕಾಪಾಡಲು ಕೆಲವು ಸಲಹೆಗಳನ್ನು ನೀಡಿದ್ದಾರೆ.

ದೀರ್ಘ ಪ್ರಯಾಣದ ಸಮಯದಲ್ಲಿ ನಿಮ್ಮ ಆರೋಗ್ಯ ಕೆಡದಿರಲು ತಜ್ಞರು ನೀಡಿರುವ ಸಲಹೆ ಇಲ್ಲಿದೆ
Travel Tips
Image Credit source: Stylecraze

Updated on: May 04, 2023 | 7:00 AM

ದೂರ ಪ್ರಯಾಣ ಮಾಡುವಂತಹ ಸಮಯದಲ್ಲಿ ವಾಂತಿ, ತಲೆನೋವು ಮೈ ಕೈ ನೋವು, ಅಜೀರ್ಣ ಮುಂತಾದ ಸಾಕಷ್ಟು ಸಮಸ್ಯೆಗಳು ಸಾಕಷ್ಟು ಜನರಲ್ಲಿ ಕಂಡುಬರುತ್ತದೆ. ಆದ್ದರಿಂದ ಪ್ರಯಾಣ ಮಾಡುವಾಗ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ತಜ್ಞರು ನೀಡಿರುವ ಸಲಹೆಗಳನ್ನು ಪಾಲಿಸಿ. ಪೌಷ್ಟಿಕತಜ್ಞರಾದ ರುಜುತಾ ದಿವೇಕರ್ ಪ್ರಯಾಣದ ಸಮಯದಲ್ಲಿ ಆರೋಗ್ಯವನ್ನು ಕಾಪಾಡಲು ಕೆಲವು ಸಲಹೆಗಳನ್ನು ನೀಡಿದ್ದಾರೆ.

ನೀವು ಎಷ್ಟೇ ದೂರ ಪ್ರಯಾಣ ಬೆಳೆಸಿದರೂ ಕೂಡ ನೀವು ಬೆಳಿಗ್ಗೆ ಎಂದ ಕೂಡಲೇ ಸೂರ್ಯ ನಮಸ್ಕಾರ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ. ಈ ವ್ಯಾಯಾಮ ಮಾಡಲು ಯಾವುದೇ ಉಪಕರಣಗಳ ಅಗತ್ಯವಿರುವುದಿಲ್ಲ. ಜೊತೆಗೆ ಹೊಸ ಪ್ರದೇಶದಲ್ಲಿ ದಿನ ಪೂರ್ತಿ ಸಮಯ ಕಳೆಯಲು ಉಲ್ಲಾಸ ನೀಡುತ್ತದೆ.ಪ್ರಯಾಣದ ಸಮಯದಲ್ಲಿ ನೀವು ಸೇವಿಸುವ ಆಹಾರವು ಕೂಡ ಮುಖ್ಯವಾಗಿರುತ್ತದೆ. ಆದ್ದರಿಂದ ನೀವು ಪ್ರಯಾಣ ಬೆಳೆಸುವಾಗ ಅನ್ನವನ್ನು ಸೇವಿಸಿ. ನೀವು ಎಲ್ಲಿಗೆ ಪ್ರಯಾಣಿಸಿದರೂ, ಎಲ್ಲಾ ಪ್ರದೇಶಗಳಲ್ಲಿ ಅಕ್ಕಿ ಸುಲಭವಾಗಿ ಲಭ್ಯವಿರುತ್ತದೆ. ಆದ್ದರಿಂದ ಇತರ ಆಹಾರಗಳನ್ನು ಸೇವಿಸುವ ಬದಲಾಗಿ ಅನ್ನವನ್ನು ಆಯ್ಕೆಮಾಡಿ ತಜ್ಞರು ಸಲಹೆ ನೀಡುತ್ತಾರೆ.

ಇದನ್ನೂ ಓದಿ: ಮಾವಿನಕಾಯಿ ಆರೋಗ್ಯಕರವೇ? ಹಸಿ ಮಾವಿನಕಾಯಿ ಚಟ್ನಿಯ ಊಟಕ್ಕೆ ಸೂಪರ್​​​

ಪ್ರಯಾಣದ ಸಮಯದಲ್ಲಿ ಕುರುಕಲು ತಿಂಡಿಗಳನ್ನು ಸೇವಿಸಿ ಬದಲು, ಹಣ್ಣುಗಳನ್ನು ಆಯ್ಕೆ ಮಾಡಿ. ಇದಲ್ಲದೇ ಡ್ರೈಫ್ರೂಟ್ಸ್​​ಗಳನ್ನು ತೆಗೆದುಕೊಂಡು ಹೋಗುವುದು ಉತ್ತಮ ಆಯ್ಕೆಯಾಗಿದೆ. ಕರಿದ ತಿಂಡಿಗಳು ಕೆಲವೊಮ್ಮೆ ಅಜೀರ್ಣಕ್ಕೆ ಕಾರಣವಾಗಬಹುದು. ನಿಮ್ಮ ಆರೋಗ್ಯ ಕೆಡುವ ಸಾಧ್ಯತೆ ಹೆಚ್ಚಿದೆ ಎಂದು ತಜ್ಞರು ಸಲಹೆ ನೀಡುತ್ತಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us