AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಸಿಗೆಯ ಉರಿ ಬಿಸಿಲಿನಲ್ಲೂ ದೇಹವನ್ನು ತಂಪಾಗಿರಿಸಲು ಈ ಸುಲಭ ಸಲಹೆಗಳನ್ನು ಪ್ರಯತ್ನಿಸಿ

ಸುಡು ಬೇಸಿಗೆಯಲ್ಲಿ ಹೆಚ್ಚುತ್ತಿರುವ ತಾಪಮಾನ ಮತ್ತು ಉರಿ ಬಿಸಿಲ ಶಾಖವು ಪರಿಸರದ ಮೇಲೆ ಮಾತ್ರವಲ್ಲ ನಮ್ಮ ದೇಹದ ಮೇಲೂ ಹಲವು ರೀತಿಯಲ್ಲಿ ಪರಿಣಾಮಗಳನ್ನು ಬೀರುತ್ತವೆ. ಆದ್ದರಿಂದ ದೇಹವನ್ನು ತಂಪಾಗಿರಿಸುವುದು ಮತ್ತು ಆರಾಮದಾಯಕವಾಗಿರಿಸುವುದು ತುಂಬಾನೇ ಮುಖ್ಯ. ಉರಿ ಬಿಸಿಲಿನ ಈ ಸಯಮದಲ್ಲಿ ದೇಹವನ್ನು ತಂಪಾಗಿರಿಸಿ, ಆರಾಮದಾಯಕವಾಗಿರಲು ಈ ಸುಲಭ ಸಲಹೆಗಳನ್ನು ಪ್ರಯತ್ನಿಸಿ.

ಬೇಸಿಗೆಯ ಉರಿ ಬಿಸಿಲಿನಲ್ಲೂ ದೇಹವನ್ನು ತಂಪಾಗಿರಿಸಲು ಈ ಸುಲಭ ಸಲಹೆಗಳನ್ನು ಪ್ರಯತ್ನಿಸಿ
ಸಾಂದರ್ಭಿಕ ಚಿತ್ರ Image Credit source: Pinterest
ಮಾಲಾಶ್ರೀ ಅಂಚನ್​
|

Updated on: Apr 18, 2026 | 4:02 PM

Share

ಬೇಸಿಗೆಯ (summer) ಉರಿ ಬಿಸಿಲು ಮತ್ತು ವಿಪರೀತ ಸೆಕೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಾ ಹೋಗುತ್ತಿದ್ದು, ಬಿಸಿಲು ಹಾಗೂ ಸೆಕೆಯ ಹೊಡೆತಕ್ಕೆ ಜನ ಹೈರಾಣಾಗಿದ್ದಾರೆ. ಬೇಸಿಗೆಯಲ್ಲಿನ ಈ ತೀವ್ರವಾದ ಶಾಖ ಮತ್ತು ಬಿಸಿಲು ದೇಹದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುವ ಕಾರಣ ನಿರ್ಜಲೀಕರಣ, ಶಾಖದ ಹೊಡೆತದಂತಹ ಸಮಸ್ಯೆಗಳನ್ನು ತಪ್ಪಿಸಲು ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ದೇಹವನ್ನು ಸರಿಯಾಗಿ ತಂಪಾಗಿಸುವುದರಿಂದ ನಿರ್ಜಲೀಕರಣ, ಶಾಖದ ಹೊಡೆತದಂತಹ ಪರಿಣಾಮಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಸರಿಯಾದ ಆಹಾರ, ಜಲಸಂಚಯನ ಮತ್ತು ಜೀವನಶೈಲಿಯ ಬದಲಾವಣೆಗಳು ನಿಮ್ಮನ್ನು ಶಾಖದ ಹೊಡೆತದಿಂದ ರಕ್ಷಿಸಲು ಹಾಗೂ ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ. ಹಾಗಿದ್ದರೆ ದೇಹವನ್ನು ತಂಪಾಗಿರಿಸಲು ಏನೆಲ್ಲಾ ಕ್ರಮಗಳನ್ನು ಪಾಲಿಸಬೇಕು ಎಂಬುದನ್ನು ನೋಡೋಣ ಬನ್ನಿ.

ಸುಡುವ ಬಿಸಿಲಿನಲ್ಲಿ ದೇಹವನ್ನು ತಂಪಾಗಿರಿಸುವುದ ಹೇಗೆ?

ಜಲಸಂಚಯನ ಅತ್ಯಗತ್ಯ:  ದೇಹವನ್ನು ತಂಪಾಗಿರಿಲಸು ನೀವು ಪಾಲಿಸಬೇಕಾದ ಅತ್ಯಂತ ಮುಖ್ಯವಾದ ವಿಷಯವೆಂದರೆ ಸಾಕಷ್ಟು ನೀರು ಕುಡಿಯುವುದು. ದಿನವಿಡೀ ಸಾಕಷ್ಟು ನೀರು, ನಿಂಬೆ ನೀರು, ಮಜ್ಜಿಗೆ, ಎಳನೀರು ಅಥವಾ ORS ಕುಡಿಯಿರಿ. ನಿರ್ಜಲೀಕರಣವನ್ನು ತಪ್ಪಿಸಿ, ಏಕೆಂದರೆ ನಿರ್ಜಲೀಕರಣವು ಶಾಖದ ಹೊಡೆತಕ್ಕೆ ಪ್ರಮುಖ ಕಾರಣವಾಗುತ್ತದೆ. ಆದ್ದರಿಂದ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಿರಿ.

ಹಗುರವಾದ ಬಟ್ಟೆಗಳನ್ನು ಧರಿಸಿ: ಬೇಸಿಗೆಯಲ್ಲಿ ನಿಮ್ಮ ಬಟ್ಟೆಗಳ ಬಗ್ಗೆ ಜಾಗರೂಕರಾಗಿರಿ. ದೇಹವನ್ನು ತಂಪಾಗಿಡುವ ತಿಳಿ ಬಣ್ಣದ, ಹತ್ತಿ ಮತ್ತು ಉಸಿರಾಡುವ ಬಟ್ಟೆಗಳನ್ನು ಧರಿಸಿ. ಗಾಢವಾದ ಅಥವಾ ಬಿಗಿಯಾದ ಬಟ್ಟೆಗಳು ಶಾಖವನ್ನು ಹೆಚ್ಚು ಹೀರಿಕೊಳ್ಳುತ್ತವೆ, ಆದ್ದರಿಂದ ಅವುಗಳನ್ನು ತಪ್ಪಿಸಿ. ಹತ್ತಿ, ಮಸ್ಲಿನ್, ಲಿನಿನ್ ಮುಂತಾದ ಉಸಿರಾಡುವ ಬಟ್ಟೆಗಳನ್ನು ಧರಿಸಿ. ಸಡಿಲವಾದ ಬಟ್ಟೆಗಳನ್ನು ಧರಿಸುವುದು ಗಾಳಿಯ ಹರಿವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ ಹಗುರವಾದ ಬಟ್ಟೆಗಳನ್ನು ಧರಿಸುವುದರಿಂದ ಯಾವುದೇ ಕಿರಿಕಿರಿಯಿಲ್ಲದೆ ನೀವು ಆರಾಮದಾಯಕವಾಗಿರಬಹುದು.

ಕಾಲೋಚಿತ ಹಣ್ಣುಗಳ ಸೇವನೆ: ನಿಮ್ಮ ದೇಹವನ್ನು ತಂಪಾಗಿಟ್ಟುಕೊಳ್ಳಲು ಬಯಸಿದರೆ, ನೀವು ಋತುಮಾನದ ಹಣ್ಣುಗಳನ್ನು ಸಹ ತಿನ್ನಬಹುದು. ಅವು ಶಾಖವನ್ನು ನಿವಾರಿಸಲು ನಿಮಗೆ ಸಹಾಯ ಮಾಡುತ್ತವೆ. ಅಲ್ಲದೆ ಈ ಹಣ್ಣುಗಳು ದೇಹವನ್ನು ತಂಪಾಗಿರಿಸಲು ಸಹ ಸಹಾಯ ಮಾಡುತ್ತದೆ.

ತಣ್ಣೀರಿನ ಸ್ನಾನ ಮಾಡುವುದು: ನಿಮ್ಮ ದೇಹವನ್ನು ತಂಪಾಗಿಟ್ಟುಕೊಳ್ಳಲು ಬಯಸಿದರೆ, ನೀವು ತಣ್ಣೀರಿನ ಸ್ನಾನ ಮಾಡಬಹುದು. ಇದು ನಿಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮನ್ನು ರಿಫ್ರೆಶ್ ಮಾಡುತ್ತದೆ. ನೀವು ಬೆಳಿಗ್ಗೆ ಮತ್ತು ಸಂಜೆ ಸ್ನಾನ ಮಾಡಬಹುದು.

ಮಣ್ಣಿನ ಮಡಕೆ  ನೀರು ಕುಡಿಯಿರಿ: ಸುಡು ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಲು, ಆರೋಗ್ಯವಾಗಿರಲು ಬಯಸಿದರೆ ಮಣ್ಣಿನ ಮಡಕೆ ನೀರನ್ನು ಕುಡಿಯಿರಿ.  ಇದು ಅನೇಕ ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ದೇಹವನ್ನು ತಾಜಾ ಮತ್ತು ತಂಪಾಗಿಡುತ್ತದೆ.

ಇದನ್ನೂ ಓದಿ: ಬಿಸಿಲ ಶಾಖದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಅಗತ್ಯ ಸಲಹೆಗಳನ್ನು ಪಾಲಿಸಿ

ಆಹಾರ ಪದ್ಧತಿ ಮತ್ತು ಜೀವನಶೈಲಿಯ ಬದಲಾವಣೆಗಳು: ಬೇಸಿಗೆಯಲ್ಲಿ ಮಸಾಲೆಯುಕ್ತ ಹುರಿದ ಆಹಾರಗಳು, ಆಲ್ಕೋಹಾಲ್, ಕೆಫೀನ್ ಮತ್ತು ಹುಳಿ ಆಹಾರಗಳಂತಹ ಆಹಾರಗಳ ಸೇವನೆಯನ್ನು ಮಿತಿಗೊಳಿಸಿ. ಹೆಚ್ಚುವರಿಯಾಗಿ, ಸಂಜೆ 20-30 ನಿಮಿಷಗಳ ಲಘು ವಾಕಿಂಗ್ ಮಾಡಿ. ಇದು ರಕ್ತ ಪರಿಚಲನೆ ಸುಧಾರಿಸುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡಲು  ಸಹಾಯ ಮಾಡುತ್ತದೆ.

ಸಣ್ಣ ದೈನಂದಿನ ಕ್ರಮಗಳು: ಬೇಸಿಗೆಯ ಶಾಖದಲ್ಲಿ ದೇಹವನ್ನು ತಂಪಾಗಿಡಲು ಮತ್ತು ಒತ್ತಡ ಮುಕ್ತವಾಗಿರಲು  ಸ್ವಲ್ಪ ಧ್ಯಾನ ಮಾಡಿ ಆರೋಗ್ಯಕರ ಆಹಾರ ಪದ್ಧತಿ ಅನುಸರಿಸಿ.  ಪ್ರತಿದಿನ 5-10 ನಿಮಿಷಗಳ ಪ್ರಾಣಾಯಾಮವು ಸುಡು ಬೇಸಿಗೆಯಲ್ಲೂ ಸಹ ನೀವು ಉಲ್ಲಾಸದಿಂದಿರಲು ಸಹಾಯ ಮಾಡುತ್ತದೆ. ಹೀಗೆ ಈ ಸರಳ ಸಲಹೆಗಳನ್ನು ಅನುಸರಿಸುವ ಮೂಲಕ, ನೀವು ಈ ಸುಡು ಬೇಸಿಗೆಯ ಸಮಯದಲ್ಲಿಯೂ ದೇಹವನ್ನು ತಂಪಾಗಿರಿಸಿಕೊಳ್ಳಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us