Kannada News » Lifestyle » Uses of Eyebrows why eyebrows exist what is need of Eyebrows Health and Lifestyle
ಹುಬ್ಬುಗಳು ಯಾಕಿವೆ? ಅದರ ವಿಶೇಷ ಕೆಲಸವೇನು? ಇಲ್ಲಿದೆ ಕುತೂಹಲಕಾರಿ ಮಾಹಿತಿ
ಹುಬ್ಬು ಗಂಟಿಕ್ಕಿಕೊಳ್ಳುವುದು ಎಂಬ ಮಾತು ಕೇಳಿರುತ್ತೀರಿ. ಆದರೆ, ವೈಜ್ಞಾನಿಕ ಹಿನ್ನೆಲೆಯಲ್ಲಿ ಇದಕ್ಕೆ ಉತ್ತರ ಬೇರೆಯದೇ ಇದೆ. ಹುಬ್ಬುಗಳು ಯಾಕಿದೆ ಎಂದರೆ ಕೆಲವು ಅಂಶಗಳನ್ನು ನೀವು ತಿಳಿಯಬೇಕಾಗುತ್ತದೆ.
ಕಣ್ಣಿನ ಮೇಲೆ ಇರುವ ಹುಬ್ಬುಗಳ ಕೆಲಸವೇನು? ಎಂದು ಪ್ರಶ್ನೆ ಕೇಳಿದರೆ ಹಲವರು ಮುಖದ ಅಂದಕ್ಕೆ ಎಂದು ಹೇಳಬಹುದು. ಇನ್ನು ಕೆಲವರು ಹುಬ್ಬು ವ್ಯಕ್ತಿಯ ಭಾವವನ್ನು ತಿಳಿಸುತ್ತದೆ ಎಂದು ಹೇಳಬಹುದು. ಒಬ್ಬ ವ್ಯಕ್ತಿ ಖುಷಿಯಲ್ಲಿ ಇದ್ದರೆ, ದುಃಖದಲ್ಲಿ ಇದ್ದರೆ, ಬೇಸರ, ಸಿಟ್ಟು ಎಲ್ಲವನ್ನೂ ಹುಬ್ಬು ಹೇಳುತ್ತದೆ ಎಂದು ತಿಳಿಸಬಹುದು. ಹುಬ್ಬು ಗಂಟಿಕ್ಕಿಕೊಳ್ಳುವುದು ಎಂಬ ಮಾತು ಕೇಳಿರುತ್ತೀರಿ. ಆದರೆ, ವೈಜ್ಞಾನಿಕ ಹಿನ್ನೆಲೆಯಲ್ಲಿ ಇದಕ್ಕೆ ಉತ್ತರ ಬೇರೆಯದೇ ಇದೆ. ಹುಬ್ಬುಗಳು ಯಾಕಿದೆ ಎಂದರೆ ಕೆಲವು ಅಂಶಗಳನ್ನು ನೀವು ತಿಳಿಯಬೇಕಾಗುತ್ತದೆ.
1 / 5
ಕಣ್ಣಿನ ಹುಬ್ಬುಗಳು ಕಣ್ಣನ್ನು ರಕ್ಷಿಸುವ ಕೆಲಸವನ್ನು ಮಾಡುತ್ತವೆ. ವಿಶೇಷವಾಗಿ ಬಿರುಬಿಸಿಲಿನ ಬೇಸಿಗೆ ಕಾಲದಲ್ಲಿ ಹಾಗೂ ಚಳಿಗಾಲದ ದಿನಗಳಲ್ಲಿ ಕಣ್ಣಿನ ರಕ್ಷಣೆಗೆ ಹುಬ್ಬು ಸಹಾಯ ಮಾಡುತ್ತದೆ. ಧೂಳು ಸಹಿತ ಬೆವರು ಹಣೆಯಿಂದ ಕಣ್ಣಿಗೆ ಇಲೀಯದಂತೆ ಹುಬ್ಬು ಕಾಪಾಡುತ್ತದೆ. ಅದೇ ರೀತಿ ಮಂಜಿನ ಹನಿಗಳು ಕಣ್ಣಿಗೆ ಉದುರದಂತೆ ಹುಬ್ಬು ಕಾಪಾಡುತ್ತದೆ.
2 / 5
ಇದಿಷ್ಟೇ ಅಲ್ಲ ಧೂಳು ಮತ್ತು ಮಣ್ಣಿನ ಕಣಗಳು ಹುಬ್ಬಿಗೆ ಬಂದು ತಲುಪಿದಾಗ ಅದರ ಪರಿಣಾಮ ಕಣ್ಣಿಗೂ ತಿಳಿಯುತ್ತದೆ. ಹೀಗಾದಾಗ ಎರಡೂ ಕಣ್ಣುಗಳು ಮುಚ್ಚಲ್ಪಡುತ್ತವೆ. ಅದರಿಂದ ಮುಖದ ಎಕ್ಸ್ಪ್ರೆಶನ್ ಬದಲಾಗುತ್ತವೆ. ಹುಬ್ಬಿಗೆ ಸಂಬಂಧಿಸಿದ ಸ್ನಾಯುಗಳು ಹೀಗೆ ಮಾಡಲು ಸಹಾಯ ಮಾಡುತ್ತದೆ. ಇದರಿಂದಾಗಿ ವ್ಯಕ್ತಿಯು ತನ್ನ ಮುಖಭಾವವನ್ನು ಬದಲಿಸಲು ಸಹಾಯ ಆಗುತ್ತದೆ.
3 / 5
ಹುಬ್ಬುಗಳು ವ್ಯಕ್ತಿಯ ನಿಜ ಗುರುತನ್ನು ಹೇಳುತ್ತದೆ. ನಾವು ಹೇಗೆ ಕಾಣಿಸುತ್ತೇವೋ ಅದರಲ್ಲಿ ಹುಬ್ಬಿನ ಪಾತ್ರ ಮಹತ್ವದ್ದಾಗಿದೆ. ಅಂದರೆ ಪುರುಷರಲ್ಲಿ ದಪ್ಪನೆಯ ಹುಬ್ಬು ಹಾಗೂ ಸ್ತ್ರೀಯರಲ್ಲಿ ತೆಳುವಾದ ಹುಬ್ಬುಗಳನ್ನು ಸಾಮಾನ್ಯವಾಗಿ ನಾವು ಕಾಣಬಹುದು. ಇದರ ಬಗ್ಗೆ ಅರ್ಥ ಆಗಬೇಕಿದ್ದರೆ ಪುರುಷ ಒಬ್ಬನನ್ನು ತೆಳುವಾದ ಹುಬ್ಬಿನಲ್ಲಿ ಊಹೆ ಮಾಡಿ. ಅಥವಾ ಹುಬ್ಬೇ ಇಲ್ಲದೆ ವ್ಯಕ್ತಿಯನ್ನು ಕಲ್ಪಿಸಿಕೊಳ್ಳಿ. ಆಗುವುದಿಲ್ಲ ಅಲ್ವಾ? ಅದು ಹುಬ್ಬಿನ ಪಾತ್ರ.
4 / 5
Follow these home remedies for heavy and beautiful eyebrows