Valentine’s Week 2026: ನಿಮ್ಮ ಸಂಗಾತಿಗೆ ಈ ವಸ್ತುಗಳನ್ನು ಉಡುಗೊರೆಯಾಗಿ ನೀಡುವ ತಪ್ಪನ್ನು ಮಾಡಲೇಬೇಡಿ

ವ್ಯಾಲೆಂಟೈನ್‌ ವೀಕ್‌ ಈಗಾಗಲೇ ಆರಂಭವಾಗಿದೆ. ಪ್ರೇಮಿಗಳ ವಾರದ ಪ್ರತಿದಿನವೂ ಸಹ ಪ್ರೇಮಪಕ್ಷಿಗಳಿಗೆ ಹಬ್ಬ ಇದ್ದಂತೆ. ಈ ಸಂದರ್ಭದಲ್ಲಿ ಪರಸ್ಪರ ಗಿಫ್ಟ್‌ಗಳನ್ನು ನೀಡಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಪ್ರೇಮಿಗಳ ದಿನದ ಸಂದರ್ಭದಲ್ಲಿ ನಿಮ್ಮ ಸಂಗಾತಿಗೆ ನೀವು ಕೂಡ ಚೆಂದದ ಗಿಫ್ಟ್‌ ಕೊಡ್ಬೇಕು ಎಂದು ಪ್ಲಾನ್‌ ಮಾಡಿದ್ದೀರಾ? ಹಾಗಿದ್ದರೆ, ಈ ಕೆಲವು ಉಡುಗೊರೆಗಳನ್ನು ಕೊಡಲೇಬೇಡಿ, ಏಕೆಂದರೆ ಇಂತಹ ಉಡುಗೊರೆಗಳು ಸಂಬಂಧಕ್ಕೆ ಕಹಿಯನ್ನು ತರಬಹುದು ಎಂದು ಹೇಳಲಾಗುತ್ತದೆ.

Valentine’s Week 2026: ನಿಮ್ಮ ಸಂಗಾತಿಗೆ ಈ ವಸ್ತುಗಳನ್ನು ಉಡುಗೊರೆಯಾಗಿ ನೀಡುವ ತಪ್ಪನ್ನು ಮಾಡಲೇಬೇಡಿ
ಸಾಂದರ್ಭಿಕ ಚಿತ್ರ

Updated on: Feb 08, 2026 | 7:07 PM

ವ್ಯಾಲೆಂಟೈನ್‌ ವೀಕ್‌ (Valentine’s Week) ಈಗಾಗಲೇ ಆರಂಭವಾಗಿದೆ. ಪ್ರೇಮಪಕ್ಷಿಗಳು ಪರಸ್ಪರ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ಸಮಯ ಇದು. ರೋಸ್‌ ಡೇಯಿಂದ ಹಿಡಿದು ವ್ಯಾಲೆಂಟೈನ್‌ ಡೇ ವರೆಗೆ ಹೆಚ್ಚಿನವರು ತಮ್ಮ ಸಂಗಾತಿಗೆ ಒಂದಲ್ಲಾ ಒಂದು ರೀತಿಯ ಸರ್ಪ್ರೈಸ್‌ ಗಿಫ್ಟ್‌ಗಳನ್ನು ನೀಡುತ್ತಿರುತ್ತಾರೆ. ಹೀಗೆ ನೀವು ಕೂಡ ಗಿಫ್ಟ್‌ಗಳನ್ನು ನೀಡಿ ನಿಮ್ಮ ಸಂಗಾತಿಗೆ ಸರ್ಪ್ರೈಸ್‌ ಕೊಡುವ ಪ್ಲಾನ್‌ನಲ್ಲಿ ಇದ್ದೀರಾ? ಹಾಗಿದ್ರೆ ಈ ಸುದ್ದಿ ನಿಮಗಾಗಿ. ಪ್ರೇಮಿಗಳ ದಿನವಾಗಲಿ ಅಥವಾ ಇನ್ಯಾವುದೇ ದಿನವಾಗಲಿ, ನಿಮ್ಮ ಸಂಗಾತಿಗೆ ಈ ಕೆಲವು ವಸ್ತುಗಳನ್ನು ಗಿಫ್ಟ್‌ ಆಗಿ ನೀಡಲೇಬೇಡಿ. ನಂಬಿಕೆಯ ಪ್ರಕಾರ ಕೆಲವೊಂದು ವಸ್ತುಗಳನ್ನು ಉಡುಗೊರೆಯಾಗಿ ನೀಡಿದರೆ, ಅವು ಸಂಬಂಧದ ಮಾಧುರ್ಯವನ್ನೇ ಹಾಳು ಮಾಡುತ್ತಂತೆ. ಹಾಗಿದ್ರೆ ಯಾವ ವಸ್ತುಗಳನ್ನು ಗಿಫ್ಟ್‌ ಆಗಿ ನೀಡಬಾರದು ಎಂಬುದನ್ನು ನೋಡೋಣ ಬನ್ನಿ.

ನಿಮ್ಮ ಸಂಗಾತಿಗೆ ತಪ್ಪಿಯೂ ಈ ವಸ್ತುಗಳನ್ನು ಗಿಫ್ಟ್‌ ಮಾಡ್ಬೇಡಿ:

ಕರವಸ್ತ್ರ ಮತ್ತು ಪೆನ್ನುಗಳು: ಕರವಸ್ತ್ರ ಮತ್ತು ಪೆನ್ನುಗಳನ್ನು ಎಂದಿಗೂ ಉಡುಗೊರೆಯಾಗಿ ನೀಡಬಾರದಂತೆ. ನಿಮ್ಮ ಕೆಲಸಕ್ಕೆ ಸಂಬಂಧಿಸಿದ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದರಿಂದ ನಿಮ್ಮ ವ್ಯವಹಾರದಲ್ಲಿ ನಷ್ಟವಾಗಬಹುದು ಮತ್ತು ಅದು ಸಂಬಂಧಗಳಲ್ಲಿ ಕಹಿ ಮೂಡಿಸಬಹುದು.

ಕಪ್ಪು ಬಟ್ಟೆಗಳನ್ನು ಉಡುಗೊರೆಯಾಗಿ ನೀಡಬೇಡಿ: ನೀವು ಎಂದಿಗೂ ಕಪ್ಪು ಬಟ್ಟೆಗಳನ್ನು ಉಡುಗೊರೆಯಾಗಿ ನೀಡಬಾರದುನಂಬಿಕೆಗಳ ಪ್ರಕಾರ ಕಪ್ಪು ಬಣ್ಣವನ್ನು ನಕಾರಾತ್ಮಕತೆ, ದುಃಖ ಮತ್ತು ಪ್ರತ್ಯೇಕತೆಯ ಸಂಕೇತವೆಂದು ಪರಿಗಣಿಸುತ್ತದೆ. ಕಪ್ಪು ವಸ್ತುಗಳನ್ನು ಉಡುಗೊರೆಯಾಗಿ ನೀಡುವುದರಿಂದ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸಬಹುದು, ಇದು ಸಂಗಾತಿಗಳ ನಡುವೆ ತಪ್ಪು ತಿಳುವಳಿಕೆ ಮತ್ತು ಜಗಳಗಳಿಗೆ ಕಾರಣವಾಗಬಹುದು.

ಶೂಗಳನ್ನು ಗಿಫ್ಟ್‌ ಮಾಡ್ಬೇಡಿ: ನಿಮ್ಮ ಸಂಗಾತಿಗೆ ತಪ್ಪಿಯೂ ಶೂಗಳನ್ನು ಉಡುಗೊರೆಯಾಗಿ ನೀಡಬೇಡಿ. ನಂಬಿಕೆಗಳ ಪ್ರಕಾರ, ಶೂಗಳು ಬೇರ್ಪಡುವಿಕೆಯ ಸಂಕೇತ ಎಂದು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಶೂಗಳನ್ನು ಉಡುಗೊರೆಯಾಗಿ ನೀಡುವುದು ಬ್ರೇಕಪ್‌ಗೆ ಕಾರಣವಾಗಬಹುದು.

ವಾಚ್‌, ಗಡಿಯಾ ಉಡುಗೊರೆಯಾಗಿ ನೀಡಬೇಡಿ:  ಜನರು ಸಾಮಾನ್ಯವಾಗಿ ವಾಚ್‌ ಉಡುಗೊರೆಯಾಗಿ ನೀಡುವುದು ಉತ್ತಮ ಆಯ್ಕೆ ಎಂದು ಪರಿಗಣಿಸುತ್ತಾರೆ, ಆದರೆ ನಂಬಿಕೆಯ ಪ್ರಕಾರ ಇದನ್ನು ಉಡುಗೊರೆಯಾಗಿ ನೀಡುವುದು ಸೂಕ್ತವಲ್ಲ. ಗಡಿಯಾರವನ್ನು ಅಥವಾ ವಾಚ್‌  ಉಡುಗೊರೆಯಾಗಿ ನೀಡಿದರೆ , ಪ್ರೀತಿ ಯಶಸ್ವಿಯಾಗದೆ , ಪ್ರೇಮಿಗಳು ಬೇರೆಯಾಗುವ ಸಾಧ್ಯತೆ ಇರುತ್ತದೆ.

ಸುಗಂಧ ದ್ರವ್ಯ: ಹೆಚ್ಚಿನ ದಂಪತಿಗಳು ಪರಸ್ಪರ ಸುಗಂಧ ದ್ರವ್ಯಗಳನ್ನು ನೀಡಲು ಇಷ್ಟಪಡುತ್ತಾರೆ. ಆದರೆ ಇದನ್ನು ಗಿಫ್ಟ್‌ ಮಾಡಬಾರದಂತೆ. ಏಕೆಂದರೆ ಇದುಇದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸುಗಂಧ ದ್ರವ್ಯದ ವಾಸನೆ ಸ್ಪಲ್ಪ ಸಮಯದ ಬಳಿಕ ಮಾಯವಾಗುವಂತೆ, ಇದನ್ನು ಲವರ್‌ಗೆ ಉಡುಗೊರೆಯಾಗಿ ನೀಡಿದರೆ ನಿಮ್ಮ ಸಂಬಂಧ ಕೂಡಾ ಹಾಳಾಗಬಹುದು. ಅದಕ್ಕಾಗಿ ಇದನ್ನು ಉಡುಗೊರೆಯಾಗಿ ನೀಡಬೇಡಿ.

ಇದನ್ನೂ ಓದಿ: ನಿಮ್ಮ ಸಂಗಾತಿಗೆ ಈ ಉಡುಗೊರೆಗಳನ್ನು ನೀಡುವ ಮೂಲಕ ಪ್ರಪೋಸ್‌ ಡೇಯನ್ನು ಸ್ಪೆಷಲ್‌ ಆಗಿ ಆಚರಿಸಿ

ತಾಜ್‌ ಮಹಲ್‌ ಪ್ರತಿಕೃತಿ: ಪ್ರೇಮಿಗಳು ಸಾಮಾನ್ಯವಾಗಿ ಪರಸ್ಪರ ತಾಜ್ ಮಹಲ್ ನ ಪ್ರತಿಕೃತಿಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ತಾಜ್ ಮಹಲ್ ಅನ್ನು ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ, ಆದರೆ ಅದನ್ನು ಉಡುಗೊರೆ ನೀಡುವುದು ಅಶುಭವೆಂದು ಹೇಳಲಾಗುತ್ತದೆ. ತಾಜ್ ಮಹಲ್ ಸಮಾಧಿಯನ್ನು ಆಗಿರುವುದರಿಂದ, ಇಂತಹ ವಸ್ತುಗಳನ್ನು ಉಡುಗೊರೆ ನೀಡುವುದರಿಂದ ಸಂಬಂಧಗಳಲ್ಲಿ ನಕಾರಾತ್ಮಕತೆ ಸೃಷ್ಟಿಯಾಗುತ್ತದೆ.

ಕಳ್ಳಿ ಗಿಡ ಅಥವಾ ಮುಳ್ಳಿನ ಸಸ್ಯಗಳು: ಸಂಗಾತಿಗೆ ಗಿಡಗಳು ಇಷ್ಟ ಅಂತ ಕೆಲವರು ಬೇರೆಬೇರೆ ಗಿಡಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಹೀಗೆ ನೀವು ಗಿಡ ಗಿಫ್ಟ್‌ ಕೊಡ್ತೀರಿ ಎಂದಾದ್ರೆ ಯಾವುದೇ ಕಾರಣಕ್ಕೂ ಕಳ್ಳಿ ಗಿಡ ಅಥವಾ ಮುಳ್ಳಿನ ಸಸ್ಯವನ್ನು ಗಿಫ್ಟ್‌ ಮಾಡ್ಬೇಡಿ. ಈ ಉಡುಗೊರೆಗಳು ನಿಮ್ಮ ಸಂಬಂಧಕ್ಕೆ ಹಾನಿ ಮಾಡಬಹುದು. ಈ ಸಸ್ಯಗಳು ನಕಾರಾತ್ಮಕ ಶಕ್ತಿಯನ್ನು ಹೊರಸೂಸುತ್ತವೆ, ಸಂಗಾತಿಗಳ ನಡುವೆ ಉದ್ವಿಗ್ನತೆ ಮತ್ತು ಸಂಘರ್ಷಕ್ಕೆ ಕಾರಣವಾಗುತ್ತವೆ.

ಚೂಪಾದ ವಸ್ತುಗಳು: ರೇಜರ್‌ಗಳು, ಚಾಕುಗಳು ಮುಂತಾದ ಚೂಪಾದ ವಸ್ತುಗಳನ್ನು ಉಡುಗೊರೆಯಾಗಿ ನೀಡಬೇಡಿ. ಇದು ಸಂಗಾತಿಗಳ ನಡುವಿನ ಬಂಧವನ್ನೇ ಒಡೆದು ಬ್ರೇಕಪ್‌ಗೆ ಕಾರಣವಾಗಬಹುದು. ಅಲ್ಲದೆ ಇಂತಹ ವಸ್ತುಗಳು ನಕಾರಾತ್ಮಕ ಶಕ್ತಿಗಳನ್ನು ಹೊರ ಸೂಸುವುದರಿಂದ ಇದರಿಂದ ಜಗಳಗಳು, ಮನಸ್ತಾಪಗಳು ಕೂಡಾ ಉಂಟಾಗಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ