AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Propose Day Gift Ideas: ನಿಮ್ಮ ಸಂಗಾತಿಗೆ ಈ ಉಡುಗೊರೆಗಳನ್ನು ನೀಡುವ ಮೂಲಕ ಪ್ರಪೋಸ್‌ ಡೇಯನ್ನು ಸ್ಪೆಷಲ್‌ ಆಗಿ ಆಚರಿಸಿ

Valentine’s Week 2026: ವ್ಯಾಲೆಂಟೈನ್‌ ವೀಕ್‌ನ ಎರಡನೇ ದಿನ ಅಂದ್ರೆ ಫೆಬ್ರವರಿ 8 ರಂದು ಪ್ರಪೋಸ್‌ ಡೇ ಆಚರಿಸಲಾಗುತ್ತದೆ. ಪ್ರೇಮಿಗಳ ಪಾಲಿಗಂತೂ ಈ ದಿನ ತುಂಬಾನೇ ಸ್ಪೆಷಲ್.‌ ಹಲವರು ತಾವು ಪ್ರೀತಿಸಿದ ಹುಡುಗ/ಹುಡುಗಿಗೆ ಈ ದಿನ ರೋಸ್‌ ಕೊಟ್ಟು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಪ್ರಪೋಸ್‌ ಡೇಯಂದು ಬರೀ ರೋಸ್‌ ಕೊಡುವ ಬದಲು ಈ ಕೆಲವೊಂದು ಗಿಫ್ಟ್‌ಗಳನ್ನು ನೀಡುವ ಮೂಲಕ ಪ್ರಪೋಸ್‌ ಡೇಯನ್ನು ಸ್ಮರಣೀಯವಾಗಿ ಆಚರಿಸಬಹುದು.

Propose Day Gift Ideas: ನಿಮ್ಮ ಸಂಗಾತಿಗೆ ಈ ಉಡುಗೊರೆಗಳನ್ನು ನೀಡುವ ಮೂಲಕ ಪ್ರಪೋಸ್‌ ಡೇಯನ್ನು ಸ್ಪೆಷಲ್‌ ಆಗಿ ಆಚರಿಸಿ
ಪ್ರಪೋಸ್‌ ಡೇImage Credit source: Unsplash
ಮಾಲಾಶ್ರೀ ಅಂಚನ್​
|

Updated on: Feb 07, 2026 | 5:02 PM

Share

ಪ್ರಪೋಸ್ ಡೇಯನ್ನು (Propose Day) ಫೆಬ್ರವರಿ 8 ರಂದು ಆಚರಿಸಲಾಗುತ್ತದೆ, ಇದು ಪ್ರೇಮಿಗಳ ವಾರದ ಎರಡನೇ ದಿನ. ಈ ದಿನವನ್ನು ಪ್ರೀತಿಯನ್ನು ವ್ಯಕ್ತಪಡಿಸಲು ಅತ್ಯಂತ ವಿಶೇಷವೆಂದು ಪರಿಗಣಿಸಲಾಗುತ್ತದೆ. ಈ ವಿಶೇಷ ದಿನದಂದು ಜನ ತಮ್ಮ ಜೀವನ ಸಂಗಾತಿಗೆ ಉಂಗುರ ತೊಡಿಸುವ ಮೂಲಕ ರೋಸ್‌ ನೀಡುವ ಮೂಲಕ ಭಾವನೆಯನ್ನು ವ್ಯಕ್ತಪಡಿಸುತ್ತಾರೆ. ಇನ್ನೂ ಕೆಲವರು ತಾವು ಇಷ್ಟಪಟ್ಟ ಹುಡುಗಿಗೆ ಇದೇ ದಿನ ಧೈರ್ಯದಿಂದ ಪ್ರಪೋಸ್‌ ಮಾಡುತ್ತಾರೆ. ಇಂತಹ ಸುಂದರ ದಿನವನ್ನು ಲೈಫ್‌ಲಾಂಗ್‌ ಸ್ಮರಣೀಯವಾಗಿಸಲು ನೀವು ಇಷ್ಟಪಡುವವರಿಗೆ ಅರ್ಥಪೂರ್ಣ ಗಿಫ್ಟ್‌ಗಳನ್ನು ಸಹ ನೀಡಬಹುದು. ಪ್ರಪೋಸ್‌ ಡೇ ದಿನ ನಿಮ್ಮ ಸಂಗಾತಿಗೆ ಯಾವ ವಿಶೇಷ ಗಿಫ್ಟ್‌ ನೀಡಬಹುದು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರಪೋಸ್‌ ಡೇಯಂದು ನಿಮ್ಮ ಸಂಗಾತಿಗಾಗಿ ಈ ಉಡುಗೊರೆಗಳನ್ನು ನೀಡಿ:

ಉಂಗುರ ಮತ್ತು ಟೆಡ್ಡಿ ಬೇರ್: ಪ್ರಪೋಸ್‌ ಡೇ ದಿನ ನೀವು  ನಿಮ್ಮ ಗೆಳತಿಗೆ ಮದುವೆ ಪ್ರಸ್ತಾಪ ಮಾಡಲು ಯೋಜಿಸುತ್ತಿದ್ದರೆ, ಅವಳಿಗೆ ಉಂಗುರ ಮಾತ್ರವಲ್ಲದೆ ಟೆಡ್ಡಿ ಬೇರ್ ಕೂಡನೀಡಬಹುದು. ಹೆಚ್ಚಿನ ಹುಡುಗಿಯರು ಟೆಡ್ಡಿ ಬೇರ್‌ಗಳನ್ನು ಇಷ್ಟಪಡುತ್ತಾರೆ, ಅವರು ಅವುಗಳನ್ನು ಯಾವಾಗಲೂ ತಮ್ಮೊಂದಿಗೆ ಇಟ್ಟುಕೊಳ್ಳುತ್ತಾರೆ. ಹೀಗಿರುವಾಗ ಮುದ್ದಾದ ಟೆಡ್ಡಿಬೇರ್‌ ಅನ್ನು ಗಿಫ್ಟ್‌ ಆಗಿ ನೀಡಿದ್ರೆ, ಆ ಮುದ್ದು ಗೊಂಬೆಯನ್ನು ನೋಡಿ ನಿಮ್ಮನ್ನೇ ನೆನಪಿಸಿಕೊಳ್ಳುತ್ತಾರೆ.

ಪುಷ್ಪಗುಚ್ಛ: ನೀವು ಹೂಗುಚ್ಛ ನೀಡುವ ಮೂಲಕ ಪ್ರಪೋಸ್ ಡೇ ಅನ್ನು ಇನ್ನಷ್ಟು ವಿಶೇಷವಾಗಿ ಆಚರಿಸಬಹುದು. ಅನೇಕ ಹುಡುಗರು ಮತ್ತು ಹುಡುಗಿಯರು ಉಡುಗೊರೆಗಳಿಗಿಂತ ಹೂಗುಚ್ಛಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಆದ್ದರಿಂದ, ಅವರನ್ನು ಸಂತೋಷಪಡಿಸಲು ನೀವು ಹೂಗುಚ್ಛದ ಜೊತೆಗೆ ಒಂದು ಕಾರ್ಡ್ ಅನ್ನು ಸಹ ನೀಡಬಹುದು.

ರಿಂಗ್: ಪ್ರಪೋಸ್ ಮಾಡುವಾಗ ನೀವು ನಿಮ್ಮ ಸಂಗಾತಿಗೆ ಉಂಗುರವನ್ನೂ ತೊಡಿಸಬಹುದು. ಹೆಚ್ಚಿನ ಹುಡುಗಿಯರು ಇದನ್ನು ಇಷ್ಟಪಡುತ್ತಾರೆ. ಅಲ್ಲದೆ ಮದುವೆ ಪ್ರಪೋಸ್ ಮಾಡಲು ಸಹ ಉಂಗುರ ಅತ್ಯಂತ ರೋಮ್ಯಾಂಟಿಕ್ ಉಡುಗೊರೆಯಾಗಿದೆ. ಸುಂದರವಾದ ಉಂಗುರವು ನಿಮ್ಮ ಪ್ರೀತಿ ಮತ್ತು ಬದ್ಧತೆಯನ್ನು ತೋರಿಸುತ್ತದೆ.

ಚಾಕೊಲೇಟ್: ಪ್ರಪೋಸ್ ದಿನದಂದು, ನಿಮ್ಮ ಸಂಗಾತಿಗೆ ಚಾಕೊಲೇಟ್‌ಗಳನ್ನು ನೀಡುವ ಮೂಲಕ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಬಹುದು. ಹೆಚ್ಚಿನ ಹುಡುಗಿಯರು ದುಬಾರಿ ಉಡುಗೊರೆಗಳಿಗಿಂದ ಇಂತಹ ಸಣ್ಣಪುಟ್ಟ ಗಿಫ್ಟ್‌ಗಳನ್ನು ತುಂಬಾನೇ ಇಷ್ಟಪಡುತ್ತಾರೆ. ಹಾಗಿರುವಾಗ ನೀವು ನಿಮ್ಮ ಹುಡುಗಿಗೆ ಚಾಕೊಲೇಟ್‌ ಗಿಫ್ಟ್‌ ನೀಡಬಹುದು.

ಇದನ್ನೂ ಓದಿ: ಪ್ರಪೋಸ್‌ ಡೇ ಯಾವಾಗ? ಪ್ರೇಮಿಗಳ ಈ ಮಹತ್ವದ ದಿನದ ಹಿನ್ನೆಲೆಯ ಬಗ್ಗೆ ತಿಳಿಯಿರಿ

ಬ್ರೇಸ್ಲೆಟ್: ಪ್ರಪೋಸ್‌ ಡೇ ದಿನ ನೀವು ನಿಮ್ಮ ಸಂಗಾತಿಗೆ ಬ್ರೇಸ್ಲೆಟ್‌ ಕೂಡ ಉಡುಗೊರೆಯಾಗಿ ನೀಡಬಹುದು. ಬ್ರೇಸ್ಲೆಟ್‌ ಯಾವಾಗಲೂ ಅವರ ಜೊತೆಯಲ್ಲಿಯೇ ಇರುತ್ತದೆ. ಇದು ಅವರಿಗೆ ನೀವು ಅವರ ಜೊತೆ ಸದಾ ಇರುತ್ತೀರಿ ಎಂಬ ಭಾವನೆಯನ್ನು ಮೂಡಿಸುತ್ತದೆ.

ಮೇಕಪ್ ಕಿಟ್: ನೀವು ನಿಮ್ಮ ಹುಡುಗಿಗೆ ಮೇಕಪ್‌ ಕಿಟ್‌ ಉಡುಗೊರೆಯಾಗಿ ನೀಡಬಹುದು. ಹುಡುಗಿಯರು ಸಾಮಾನ್ಯವಾಗಿ ಮೇಕಪ್ ಅನ್ನು ತುಂಬಾ ಇಷ್ಟಪಡುತ್ತಾರೆ. ಆದ್ದರಿಂದ, ಹೊಸ ಮೇಕಪ್ ಕಿಟ್ ಮತ್ತು ಗ್ರೂಮಿಂಗ್ ಕಿಟ್ ಕೊಟ್ಟರೆ ಖಂಡಿತವಾಗಿಯೂ ಅವರು ಅದನ್ನು ಇಷ್ಟಪಡುತ್ತಾರೆ.

ಕಸ್ಟಮೈಸ್ ಮಾಡಿದ ಉಡುಗೊರೆ: ಇತ್ತೀಚಿನ ದಿನಗಳಲ್ಲಿ ಕಸ್ಟಮೈಸ್ ಮಾಡಿದ ಉಡುಗೊರೆಗಳನ್ನು ನೀಡುವ ಪ್ರವೃತ್ತಿ ಗಮನಾರ್ಹವಾಗಿ ಹೆಚ್ಚಿದೆ. ನೀವು ಈ ಉಡುಗೊರೆಗಳನ್ನು ಪರಸ್ಪರರ ಫೋಟೋಗಳು ಮತ್ತು ಹೆಸರುಗಳೊಂದಿಗೆ ಕಸ್ಟಮೈಸ್ ಮಾಡಬಹುದು. ಅಲ್ಲದೆ ನಿಮ್ಮ ಕೈಯಾರೆ ಬರೆದ ಲವ್‌ ಲೆಟರ್‌ಗಳನ್ನು ಸಹ ನೀಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ