AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Summer Holiday Destination 2023: ಔಲಿಗೆ ಟೂರ್​ ಹೋಗುವ ಪ್ಲಾನ್ ಹಾಕಿದ್ದೀರಾ, ಇಲ್ಲಿದೆ ನೋಡಿ ಅದ್ಭುತ ಆತಿಥ್ಯ ವ್ಯವಸ್ಥೆ ​​

ಔಲಿಯ ವಿಶೇಷತೆ, ಅಲ್ಲಿನ ಹವಾಮಾನ ಹಾಗೂ ಉಳಿದುಕೊಳ್ಳಲು ಸೂಕ್ತ ಸ್ಥಳ, ತಲುಪುದು ಹೇಗೆ? ಎಂಬ ಸಂಪೂರ್ಣ ಮಾಹಿತಿಗಳು ಇಲ್ಲಿವೆ. ಆದ್ದರಿಂದ ನೀವು ನಿಮ್ಮ ಸ್ನೇಹಿತರು, ಕುಟುಂಬದವರೊಂದಿಗೆ ಔಲಿಗೆ ಭೇಟಿ ನೀಡಿ ಸುಂದರ ಕ್ಷಣಗಳನ್ನು ಕಳೆಯಿರಿ.

Summer Holiday Destination 2023:  ಔಲಿಗೆ ಟೂರ್​ ಹೋಗುವ ಪ್ಲಾನ್ ಹಾಕಿದ್ದೀರಾ, ಇಲ್ಲಿದೆ ನೋಡಿ ಅದ್ಭುತ ಆತಿಥ್ಯ ವ್ಯವಸ್ಥೆ ​​
ಉತ್ತರಾಖಂಡದ ಚಮೋಲಿ ಜಿಲ್ಲೆಯ ಔಲಿ
ಅಕ್ಷತಾ ವರ್ಕಾಡಿ
|

Updated on:Feb 10, 2023 | 2:41 PM

Share

ಉತ್ತರಾಖಂಡದ ಚಮೋಲಿ ಜಿಲ್ಲೆಯ ಔಲಿ ಅತ್ಯಂತ ಜನಪ್ರಿಯ ಗಿರಿಧಾಮಗಳಲ್ಲಿ ಒಂದಾಗಿದೆ. ನೀವು ಬೇಸಿಗೆ ಗಾಲದ ರಜೆಯಲ್ಲಿ ಟೂರ್​​​ ಪ್ಲಾನ್​​​ ಇದ್ರೆ ಔಲಿಯನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಔಲಿಯ ವಿಶೇಷತೆ, ಅಲ್ಲಿನ ಹವಾಮಾನ ಹಾಗೂ ಉಳಿದುಕೊಳ್ಳಲು ಸೂಕ್ತ ಸ್ಥಳ, ತಲುಪುದು ಹೇಗೆ? ಎಂಬ ಸಂಪೂರ್ಣ ಮಾಹಿತಿಗಳು ಇಲ್ಲಿವೆ. ಆದ್ದರಿಂದ ನೀವು ನಿಮ್ಮ ಸ್ನೇಹಿತರು, ಕುಟುಂಬದವರೊಂದಿಗೆ ಔಲಿಗೆ ಭೇಟಿ ನೀಡಿ ಸುಂದರ ಕ್ಷಣಗಳನ್ನು ಕಳೆಯಿರಿ. ಗಹರ್ವಾಲ್ ಪ್ರದೇಶದ ಸ್ಕೀಯಿಂಗ್ ಪ್ಯಾರಡೈಸ್ ತನ್ನ ತಂಪಾದ ಹವಾಮಾನ, ರಮಣೀಯ ಸೌಂದರ್ಯ ಮತ್ತು ಶಾಂತಿಯುತ ವಾತಾವರಣದಿಂದಾಗಿ ಪರಿಪೂರ್ಣ ಕುಟುಂಬ ರಜೆಯ ತಾಣವಾಗಿದೆ. ಬೇಸಿಗೆ ಕಾಲದಲ್ಲಿ ಔಲಿ ಭಾರತ ಮತ್ತು ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಔಲಿಗೆ ಭೇಟಿ ನೀಡಲು ಉತ್ತಮ ಸಮಯ:

ಔಲಿಯು ಬೇಸಿಗೆ ಮತ್ತು ಚಳಿಗಾಲದಲ್ಲಿ ಭೇಟಿ ನೀಡಲು ಸೂಕ್ತವಾದ ಗಿರಿಧಾಮಗಳಲ್ಲಿ ಒಂದಾಗಿದೆ. ಸ್ಕೀಯಿಂಗ್ ಅನುಭವವನ್ನು ಬಯಸುತ್ತಿದ್ದರೆ ನೀವು ಜನವರಿ ಮತ್ತು ಮಾರ್ಚ್ ನಡುವೆ ಔಲಿಗೆ ಭೇಟಿ ನೀಡಬಹುದು. ವಿಪರೀತ ಚಳಿಯ ವಾತಾವರಣವನ್ನು ತಪ್ಪಿಸಲು ಬಯಸಿದರೆ, ಅಕ್ಟೋಬರ್‌ನಿಂದ ಜನವರಿ ಅವಧಿಯಲ್ಲಿ ಓಕ್ ಕಾಡುಗಳ ಮತ್ತು ಭವ್ಯವಾದ ನಂದಾದೇವಿ ಪರ್ವತ ಶ್ರೇಣಿಯ ರಮಣೀಯ ಸೌಂದರ್ಯವನ್ನು ಸಹ ನೀವು ಆನಂದಿಸಬಹುದು.

ಔಲಿಗೆ ತಲುಪುವುದು ಹೇಗೆ?

ಔಲಿಗೆ ಸಂಪರ್ಕ ಕಲ್ಪಿಸಲು ಉತ್ತರಾಖಂಡದ ಹೆಚ್ಚಿನ ನಗರಗಳು ಮತ್ತು ಪಟ್ಟಣಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ರಿಷಿಕೇಶ, ಪೌರಿ, ರುದ್ರಪ್ರಯಾಗ ಮತ್ತು ಚಮೋಲಿಯಿಂದ ಔಲಿಗೆ ಬಸ್ಸುಗಳು ಮತ್ತು ಟ್ಯಾಕ್ಸಿಗಳ ಸೌಲಭ್ಯವಿದೆ. ದೆಹಲಿಯ ಐ ಎಸ್​​ಬಿಟಿ ಕಾಶ್ಮೀರಿ ಗೇಟ್‌ನಿಂದ ಅಂತರರಾಜ್ಯ ಬಸ್ಸುಗಳು ಸಹ ಲಭ್ಯವಿವೆ. ಡೆಹ್ರಾಡೂನ್‌ನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ, ಇದು ಗಿರಿಧಾಮದಿಂದ 286 ಕಿಲೋಮೀಟರ್ ದೂರದಲ್ಲಿದೆ. ವಿಮಾನ ನಿಲ್ದಾಣದಿಂದ ಔಲಿಗೆ ಟ್ಯಾಕ್ಸಿಗಳು ಲಭ್ಯವಿದೆ. ರಿಷಿಕೇಶ ರೈಲು ನಿಲ್ದಾಣವು ಔಲಿಯಿಂದ 264 ಕಿಲೋಮೀಟರ್ ದೂರದಲ್ಲಿದೆ ಮತ್ತು ಇದು ಗಿರಿಧಾಮಕ್ಕೆ ಸಮೀಪದಲ್ಲಿದೆ.

ಇದನ್ನೂ ಓದಿ: ಕರ್ನಾಟಕ ಸೇರಿದಂತೆ ಭಾರತದ ಜನರು ರೈಲುಯಾನ ಉತ್ತಮ ಎನ್ನುತ್ತಿದ್ದಾರೆ, ಯಾಕೆ ಗೊತ್ತಾ?

ಔಲಿಯಲ್ಲಿನ ಸಾಹಸ ಕ್ರೀಡೆಗಳು:

ಸ್ಕೀಯಿಂಗ್:

ಔಲಿಯನ್ನು ಗರ್ವಾಲ್‌ನ ಸ್ಕೀಯಿಂಗ್ ಸ್ವರ್ಗ ಎಂದು ಕರೆಯಲಾಗುತ್ತದೆ. ನೀವು ಅನುಭವಿಸಲು ಬಯಸುವ ಮೊದಲ ವಿಷಯವೆಂದರೆ ಔಲಿಯಲ್ಲಿ ಸ್ಕೀಯಿಂಗ್. 5-ಕಿಲೋಮೀಟರ್ ಉದ್ದದ ಹಿಮದಿಂದ ಆವೃತವಾದ ಇಳಿಜಾರುಗಳು ಆನಂದಿಸಲು ಸೂಕ್ತವಾದ ಸ್ಥಳವಾಗಿದೆ. ಜೋಶಿಮಠವನ್ನು ಔಲಿಯಿಂದ ಸ್ವಲ್ಪ ಮೇಲಿರುವ ಗೋರ್ಸನ್‌ನೊಂದಿಗೆ ಸಂಪರ್ಕಿಸುವ 500 ಮೀಟರ್ ಸ್ಕೀ-ಲಿಫ್ಟ್ ವ್ಯವಸ್ಥೆ ಇದೆ. ಇದು ಭಾರತದ ಅತಿ ಉದ್ದದ ಕೇಬಲ್ ಕಾರ್ ಕೂಡ ಆಗಿದೆ.

ರೋಪ್‌ವೇ:

ಗಿರಿಧಾಮವು ಭಾರತದ ಅತಿ ಎತ್ತರದ ಮತ್ತು ಉದ್ದವಾದ ರೋಪ್‌ವೇಗಳಲ್ಲಿ ಒಂದನ್ನು ನೀವಿಲ್ಲಿ ಕಾಣಬಹುದು. ಇದು ಹಿಮದಿಂದ ಆವೃತವಾದ ಗರ್ವಾಲ್ ಪರ್ವತಗಳ ಪರಿಪೂರ್ಣ ನೋಟವನ್ನು ನೀಡುವ ಅಂದಾಜು 4 ಕಿಮೀ ದೂರವನ್ನು ವ್ಯಾಪಿಸಿದೆ. ಜೋಶಿಮಠ ಮತ್ತು ಗುರ್ಸನ್ ನಡುವೆ ನೀವು ಪ್ರಯಾಣಿಸುವಾಗ ದಟ್ಟವಾದ ಓಕ್ ಕಾಡುಗಳ ಸೌಂದರ್ಯವನ್ನು ವೀಕ್ಷಿಸಲು ನಿಮಗೆ ಸಾಧ್ಯವಾಗುತ್ತದೆ.

ಟ್ರೆಕ್ಕಿಂಗ್:

ನಂದಾ ದೇವಿ, ಕಾಮತ್, ಮನ ಪರ್ವತ ಮತ್ತು ದುನಾಗಿರಿಯಂತಹ ಹಿಮಾಲಯದ ಶಿಖರಗಳನ್ನು ನೀವಿಲ್ಲಿ ಕಣ್ತುಂಬಿಸಿಕೊಳ್ಳಬಹುದು. ಚಳಿಗಾಲದಲ್ಲಿ ಹಿಮದಿಂದ ಆವೃತವಾದ ಹಾದಿಗಳು, ಬೇಸಿಗೆಯಲ್ಲಿ ಸೊಂಪಾದ ಹುಲ್ಲುಗಾವಲುಗಳು ನಿಮ್ಮನ್ನು ಬೆರಗುಗೊಳಿಸುತ್ತದೆ.

ನಕ್ಷತ್ರ ವೀಕ್ಷಣೆ:

ನೀವು ನಿಮ್ಮ ಪ್ರೀತಿ ಪಾತ್ರರೊಂದಿಗೆ ಜೌಲಿಗೆ ಭೇಟಿ ನೀಡಲು ಬಯಸಿದರೆ, ನೂರಾರು ನಕ್ಷತ್ರಗಳಿಂದ ತುಂಬಿರುವ ಆಕಾಶವನ್ನು ನೋಡುತ್ತಾ ಸುಂದರಕ್ಷಣಗಳನ್ನು ಕಳೆಯಬಹುದು. ನೀವು ಜೀವನ ಪೂರ್ತಿ ನೆನಪಿನಲ್ಲಿಡುವ ಸುಂದರ ಕ್ಷಣಗಳು ಇಲ್ಲಿ ಸೃಷ್ಟಿಯಾಗುತ್ತವೆ. ಇದಲ್ಲದೇ ನೀವಿಲ್ಲಿ ಪ್ಯಾರಾಗ್ಲೈಡಿಂಗ್, ಬಂಗೀ ಜಂಪಿಂಗ್, ಜಂಗಲ್ ಸಫಾರಿ, ಮೌಂಟೇನ್ ಬೈಕಿಂಗ್ ಮತ್ತು ಇತರ ಜಲ ಕ್ರೀಡೆಗಳನ್ನು ಸಹ ಆನಂದಿಸಬಹುದು.

ಇದನ್ನೂ ಓದಿ: ಆಹಾರಪ್ರಿಯರಿಗೆ ಇಲ್ಲಿದೆ ಸಿಹಿಸುದ್ದಿ, ಫೆಬ್ರವರಿ ತಿಂಗಳ ಫುಡ್ ಇವೆಂಟ್‌ಗಳ ವಿವರ ಇಲ್ಲಿದೆ

ಉಳಿಯಲು ಸೂಕ್ತ ಸ್ಥಳ:

ಭಾರತದ ಸ್ಕೀಯಿಂಗ್ ಕ್ಯಾಪಿಟಲ್ ಹೆಚ್ಚು ಬೇಡಿಕೆಯಿರುವ ತಾಣಗಳಲ್ಲಿ ಒಂದಾಗಿದೆ. ಇದರರ್ಥ ನಿಮ್ಮ ಕುಟುಂಬ ರಜಾದಿನಗಳಲ್ಲಿ ನೀವು ಎಲ್ಲಿ ಉಳಿಯುತ್ತೀರಿ ಎಂಬುದನ್ನು ನಿರ್ಧರಿಸಲು ನಿಮಗೆ ಹಲವಾರು ಆಯ್ಕೆಗಳು ಲಭ್ಯವಿರುತ್ತವೆ. ನೀವು ಆಯ್ಕೆ ಮಾಡಲು ಸಾಕಷ್ಟು ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳನ್ನು ಹೊಂದಿರುತ್ತೀರಿ. ಅಧಿಕೃತ ಉತ್ತರಾಖಂಡ ಪ್ರವಾಸೋದ್ಯಮ ವೆಬ್‌ಸೈಟ್‌ನಲ್ಲಿ ನೀವು ಹುಡುಕಬಹುದಾದ ಹೋಮ್‌ಸ್ಟೇಗಳನ್ನು ಸಹ ಔಲಿ ಹೊಂದಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 2:41 pm, Fri, 10 February 23