ಒಂದು ಬಟ್ಟೆಯ ಬಣ್ಣ ಇನ್ನೊಂದು ಬಟ್ಟೆಗೆ ತಗುಲಿದ್ರೆ ಏನು ಮಾಡೋದು? ದೀಪ್ತಿ ಕಪೂರ್ ಈ ಸಲಹೆ ಪಾಲಿಸಿ
ಬಟ್ಟೆಗೆ ಅಂಟಿಕೊಂಡಿರುವ ಇತರ ಬಟ್ಟೆಗಳ ಬಣ್ಣವನ್ನು ತೆಗೆದು ಹಾಕುವುದೇ ಒಂದು ತಲೆನೋವು, ಮತ್ತೆ ಅದನ್ನು ಹಾಕಿಕೊಳ್ಳಲು ಆಗುವುದಿಲ್ಲ. ಅದರಲ್ಲೂ ಹೊಸ ಬಟ್ಟೆಗೆ ಬಣ್ಣ ಆದ್ರೆ ತುಂಬಾ ಬೇಜಾರಾಗುವುದು ಖಂಡಿತ. ಅದಕ್ಕಾಗಿ ಬಣ್ಣವನ್ನು ತೆಗೆದು ಹಾಕುವ ಈ ಹೊಸ ಪ್ರಯೋಗವನ್ನು ಮನೆಯಲ್ಲೇ ಮಾಡಬಹುದು. ಈ ಬಗ್ಗೆ ಫ್ಯಾಷನ್ ಸಲಹೆಗಾರ್ತಿ ದೀಪ್ತಿ ಕಪೂರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಬಟ್ಟೆಗಳನ್ನು (clothes) ಒಟ್ಟಿಗೆ ತೊಳೆಯುವಾಗ ಒಂದು ಬಟ್ಟೆಯ ಬಣ್ಣ (colour transfer) ಇನ್ನೊಂದು ಬಟ್ಟೆಗೆ ಅಂಟಿಕೊಳ್ಳುತ್ತದೆ. ಅದರಲ್ಲೂ ಬಿಳಿ ಬಟ್ಟೆಗಳಿಗೆ ತಗುಲಿದ್ರೆ ಮುಗಿತು ಕಥೆ. ಆತುರದಲ್ಲಿ ವಾಷಿಂಗ್ ಮಿಷನ್ ಒಳಗೆ ಎಲ್ಲವನ್ನು ಒಮ್ಮೆಯೇ ಹಾಕಿ ಬಿಡುತ್ತೇವೆ. ಆದರೆ ಈ ವೇಳೆ ಬಟ್ಟೆಗಳು ಕೊಳೆಯ ಜತೆಗೆ ಬಣ್ಣವನ್ನು ಕೂಡ ಬಿಡುತ್ತದೆ. ಮತ್ತೆ ತೊಳೆದರು ಅದು ಹೋಗುವುದಿಲ್ಲ. ಬಿಳಿ ಶರ್ಟ್ ಅಥವಾ ಹೊಸ ಕುರ್ತಾ ನೀಲಿ, ಗುಲಾಬಿ ಅಥವಾ ಯಾವುದೇ ಇತರ ಬಣ್ಣದಿಂದ ಕಲೆಯಾದರೆ ಅದನ್ನು ತೆಗೆದು ಹಾಕುವುದು ಹೇಗೆ? ಇದಕ್ಕೆ ಸರಳ ಪರಿಹಾರ ಇದ್ದೀಯಾ? ಎಂಬ ಪ್ರಶ್ನೆಗಳು ಇರಬಹುದು. ಈ ಬಗ್ಗೆ ಫ್ಯಾಷನ್ ಸಲಹೆಗಾರ್ತಿ ದೀಪ್ತಿ ಕಪೂರ್ (Deepti Kapoor) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಬಟ್ಟೆಗಳ ಮೇಲಿನ ಈ ಮೊಂಡುತನದ ಬಣ್ಣವನ್ನು ತೊಡೆದುಹಾಕಲು ತುಂಬಾ ಸುಲಭದಾಯಕ ಹಾಗೂ ಪರಿಣಾಮಕಾರಿ ಪರಿಹಾರವನ್ನು ಹೇಳಿದ್ದಾರೆ.
ಕಲೆ ತೆಗೆಯಲು ಈ ವಸ್ತುಗಳು ಬೇಕು:
2 ಚಮಚ ಲಾಂಡ್ರಿ ಡಿಟರ್ಜೆಂಟ್ ಬೇಕಾಗುತ್ತದೆ.
3 ಟೀ ಚಮಚ ಫ್ಯಾಬ್ರಿಕ್ ವೈಟ್ನರ್ ಅಥವಾ ಬ್ಲೀಚ್
2 ಚಮಚ ಅಡಿಗೆ ಸೋಡಾ ಬೇಕಾಗುತ್ತದೆ.
ವಿಡಿಯೋ ಇಲ್ಲಿದೆ ನೋಡಿ:
View this post on Instagram
ಬಳಸುವುದು ಹೇಗೆ?
ಮೊದಲಿಗೆ, ಒಂದು ಸ್ವಚ್ಛವಾದ ಕಪ್‌ನಲ್ಲಿ ಡಿಟರ್ಜೆಂಟ್ ಹಾಕಿ.
ಅದಕ್ಕೆ ಫ್ಯಾಬ್ರಿಕ್ ವೈಟ್ನರ್ ಅಥವಾ ಬ್ಲೀಚ್ ಸೇರಿಸಿ.
ಈಗ ಅದಕ್ಕೆ ಅಡುಗೆ ಸೋಡಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ತಯಾರಿಸಿದ ಈ ದ್ರಾವಣವನ್ನು ಬಟ್ಟೆಯ ಮೇಲೆ ಬಣ್ಣ ಅಂಟಿಕೊಂಡಿರುವ ಸ್ಥಳದಲ್ಲಿ ಹಚ್ಚಿ.
ಹೀಗೆ ಮಾಡಿದ ನಂತರ ಆ ಪ್ರದೇಶವನ್ನು ನಿಧಾನವಾಗಿ ಉಜ್ಜಿ.
ತದನಂತರ ಬಟ್ಟೆಗಳನ್ನು 2 ರಿಂದ 3 ಗಂಟೆಗಳ ಕಾಲ ಹಾಗೆಯೇ ಬಿಡಿ.
ಹೀಗೆ ಮಾಡಿದ ನಂತರ ಬಟ್ಟೆಗಳನ್ನು ಬಕೆಟ್ನಲ್ಲಿ ತೊಳೆದು ಬಿಸಿಲಿನಲ್ಲಿ ಒಣಗಿಸಿ.
ಇದನ್ನೂ ಓದಿ: ಕೂದಲಿನ ಆರೈಕೆಗೆ ಶ್ಯಾಂಪೂ ಜತೆಗೆ ಬಿಯರ್ ಬಳಸಿ, ಇಲ್ಲಿದೆ ನೋಡಿ ಸಲಹೆ
ಹೀಗೆ ಮಾಡುವುದರಿಂದ, ನಿಮ್ಮ ಬಟ್ಟೆಯಿಂದ ಬಣ್ಣದ ಕಲೆ ಒಂದೇ ಬಾರಿಗೆ ನಿವಾರಣೆಯಾಗುತ್ತದೆ. ಈ ವಿಧಾನವು ತುಂಬಾ ಸುರಕ್ಷಿತ ಎಂದು ಹೇಳಿದ್ದಾರೆ. ಇದು ನಿಮ್ಮ ಬಟ್ಟೆಗಳಿಗೆ ಹಾನಿ ಮಾಡುವುದಿಲ್ಲ. ಹೆಚ್ಚು ಬ್ಲೀಚ್ ಸೇರಿಸುವುದರಿಂದ ಬಟ್ಟೆಗಳ ಗುಣಮಟ್ಟ ಹಾಳಾಗಬಹುದು, ಆದ್ದರಿಂದ ಈ ವಿಧಾನ ಮಾಡುವುದು ಒಳ್ಳೆಯದು ಎಂದು ದೀಪ್ತಿ ಕಪೂರ್ ಹೇಳಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




