AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೂದಲಿನ ಆರೈಕೆಗೆ ಶ್ಯಾಂಪೂ ಜತೆಗೆ ಬಿಯರ್ ಬಳಸಿ, ಇಲ್ಲಿದೆ ನೋಡಿ ಸಲಹೆ

ಕೂದಲ ಆರೈಕೆಗೆ ಮಾರುಕಟ್ಟೆಯಲ್ಲಿ ಸಿಗುವ ವಿವಿಧ ಉತ್ಪನ್ನಗಳನ್ನು ಬಳಸುವವರೇ ಹೆಚ್ಚು. ಆದರೆ ಕೂದಲಿನ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಬಿಯರ್‌ನಿಂದ ತಯಾರಿಸಿದ ಶ್ಯಾಂಪೂ ಬಹುಮುಖ್ಯ ಪಾತ್ರವಹಿಸುತ್ತದೆ ಎಂದು ನಿಮಗೆ ತಿಳಿದಿದೆಯೇ?. ಹೌದು, ತಲೆಹೊಟ್ಟು, ತುರಿಕೆ ಸಮಸ್ಯೆಯಿದ್ದರೆ ಇತರ ಶ್ಯಾಂಪೂ ಬಳಸುವ ಬದಲು ಬಿಯರ್‌ ಬಳಸಿದ್ರೆ ಬೆಸ್ಟ್.

ಕೂದಲಿನ ಆರೈಕೆಗೆ  ಶ್ಯಾಂಪೂ ಜತೆಗೆ ಬಿಯರ್ ಬಳಸಿ, ಇಲ್ಲಿದೆ ನೋಡಿ ಸಲಹೆ
ಸಾಂದರ್ಭಿಕ ಚಿತ್ರImage Credit source: Stefan Nita/500px/Getty Images
ಸಾಯಿನಂದಾ
|

Updated on:Aug 01, 2025 | 3:59 PM

Share

ಇತ್ತೀಚೆಗಿನ ದಿನಗಳಲ್ಲಿ ಕೂದಲಿನ ಸಮಸ್ಯೆಗಳು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಹೆಚ್ಚಿನವರು ಮಾರುಕಟ್ಟೆಯಲ್ಲಿ ಸಿಗುವ ಶ್ಯಾಂಪೂ ಸೇರಿದಂತೆ ಇನ್ನಿತರ ಉತ್ಪನ್ನಗಳನ್ನು ಕೂದಲಿನ ಆರೈಕೆಗೆ (hair care) ಬಳಸುತ್ತಾರೆ.ಈ ರಾಸಾಯನಿಕ ಕೂದಲಿನ ಉತ್ಪನ್ನಗಳು ಕೂದಲ ಕಾಂತಿಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಆದರೆ ಕೂದಲಿನ ಆರೈಕೆಗೆ ಬಿಯರ್ (beer) ಪರಿಣಾಮಕಾರಿಯಾಗಿದೆಯಂತೆ. ಮಾದಕ ಪಾನೀಯವೂ ಈ ಕೇಶರಾಶಿಯ ಸಮಸ್ಯೆಯನ್ನು ಹೇಗೆ ನಿವಾರಿಸಲು ಸಾಧ್ಯ ಎನ್ನುವ ಪ್ರಶ್ನೆ ಮೂಡಬಹುದು. ಆದರೆ, ಈ ಬಿಯರ್ ನಲ್ಲಿರುವ ಕ್ಯಾಲ್ಸಿಯಂ, ಕಬ್ಬಿಣ, ಪ್ರೋಟೀನ್, ಸೆಲೆನಿಯಮ್, ವಿಟಮಿನ್ ಡಿ ಹಾಗೂ ವಿಟಮಿನ್ ಇ ಅಂಶಗಳು ಕೂದಲನ್ನು ಸ್ವಚ್ಛಗೊಳಿಸಿ ಕಳೆಗುಂದಿದ ಕೂದಲ ಹೊಳಪನ್ನು ಹೆಚ್ಚಿಸುತ್ತದೆ. ಮನೆಯಲ್ಲೇ ಬಿಯರ್‌ ಇದ್ದರೆ ಈ ರೀತಿ ಶ್ಯಾಂಪೂ ತಯಾರಿಸಿ ಬಳಸಬಹುದು. ಹೀಗಾಗಿ ಈ ಶ್ಯಾಂಪೂ ಪ್ರಯೋಜನಗಳೇನು ಎಂದು ನೀವು ತಿಳಿದುಕೊಳ್ಳಿ.

ಬಿಯರ್ ಶ್ಯಾಂಪೂ ಪ್ರಯೋಜನಗಳು

  • ಬಿಯರ್ ಶ್ಯಾಂಪೂ ನಿಯಮಿತ ಬಳಕೆಯೂ ಕೂದಲು ಸೊಂಪಾಗಿ ನೀಳವಾಗಿ ಬೆಳೆಯುವಂತೆ ಮಾಡುತ್ತದೆ.
  • ಇದರಲ್ಲಿರುವ ಸಿಲಿಕಾ ಎಂಬ ಧಾತುವು ಕೂದಲಿನ ಕಾಂತಿ ಹೆಚ್ಚಿಸಿ ಕೂದಲ ಪೋಷಣೆಯುಕ್ತವಾಗಿರಲು ಸಹಾಯ ಮಾಡುತ್ತದೆ.
  • ಬಿಯರ್ ಶ್ಯಾಂಪೂ ಕೂದಲಿನಲ್ಲಿರುವ ಹೆಚ್ಚುವರಿ ಎಣ್ಣೆ ಅಂಶ ಹಾಗೂ ಜಿಡ್ಡನ್ನು ತೆಗೆದು ಹಾಕುತ್ತದೆ.
  •  ತಲೆಹೊಟ್ಟು ಹಾಗೂ ತುರಿಕೆಯಂತಹ ಸಮಸ್ಯೆಗಳಿದ್ದರೆ ಬಿಯರ್ ಶ್ಯಾಂಪೂ ಬಳಸುವುದು ಪರಿಣಾಮಕಾರಿಯಾಗಿದೆ.

ಕೂದಲಿನ ಹೊಳಪು ಹೆಚ್ಚಾಗಲು ಬಿಯರ್ ಈ ರೀತಿ ಬಳಸಿ ನೋಡಿ

ಇದನ್ನೂ ಓದಿ
Image
ತಲೆಯಲ್ಲಿನ ಹೇನಿನ ಸಮಸ್ಯೆಯಿಂದ ಮುಕ್ತಿ ಪಡೆಯಲು ಇಲ್ಲಿವೆ ಸಿಂಪಲ್‌ ಮನೆಮದ್ದು
Image
ತಲೆ ಹೊಟ್ಟಿನ ಸಮಸ್ಯೆಗೆ ಮನೆಯಲ್ಲೇ ಇದೆ ಸುಲಭ ಪರಿಹಾರ
Image
ಪ್ರತಿದಿನ ಈ ಒಂದು ಬೀಜವನ್ನು ತಿಂದ್ರೆ ಸಾಕು ಕೂದಲು ಉದುರುವುದು ನಿಲ್ಲುತ್ತೆ
Image
ಚರ್ಮದೊಳಗೆ ಕೂದಲು ಬೆಳೆದರೆ ಈ ಸಮಸ್ಯೆ ಖಂಡಿತ

ಕೂದಲಿಗೆ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಿ. ಆ ಬಳಿಕ ಶ್ಯಾಂಪೂ ಬಳಸಿ ತೊಳೆದುಕೊಳ್ಳಿ. ಅಂತಿಮವಾಗಿ ಬಿಯರ್ ಅನ್ನು ಕಂಡೀಶನರ್ ರೀತಿಯಲ್ಲಿ ಬಳಸಬಹುದು. ಒಂದು ಕಪ್ ಬಿಯರ್ ಗೆ ಆಪಲ್ ಸೈಡರ್ ವಿನೆಗರ್ ಸೇರಿಸಿ, ನೆತ್ತಿಯ ಮೇಲೆ ಹಾಗೂ ಕೂದಲಿನ ಬುಡಕ್ಕೆ ಹಚ್ಚಿಕೊಳ್ಳಿ. ಹತ್ತು ನಿಮಿಷಗಳ ಬಳಿಕ ತಣ್ಣೀರಿನಿಂದ ಕೂದಲನ್ನು ಚೆನ್ನಾಗಿ ತೊಳೆಯಿರಿ. ಹೀಗೆ ಮಾಡುವುದರಿಂದ ಕೂದಲು ಜಿಗುಟಾಗುವುದನ್ನು ತಪ್ಪಿಸಿ ಮೃದುವಾಗಿಸಿ ಹೊಳಪನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ತಲೆಯಲ್ಲಿ ಹೇನಿನ ಕಿರಿಕಿರಿಯೇ? ಈ ಮದ್ದುಗಳನ್ನು ಬಳಸಿದ್ರೆ ಈ ಸಮಸ್ಯೆಯಿಂದ ಪರಿಹಾರ ಗ್ಯಾರಂಟಿ

ಬಿಯರ್ ಶ್ಯಾಂಪೂ ಮನೆಯಲ್ಲೇ ಹೀಗೆ ತಯಾರಿಸಿ

ಮಾರುಕಟ್ಟೆಯಲ್ಲಿ ಸಿಗುವ ಶ್ಯಾಂಪೂಗಳ ಬದಲಿಗೆ ಈ ಶ್ಯಾಂಪನ್ನು ಬಳಸುವುದು ಪರಿಣಾಮಕಾರಿ ಫಲಿತಾಂಶವನ್ನು ನೀಡುತ್ತದೆ. ಒಂದು ಪಾತ್ರೆಯಲ್ಲಿ ಒಂದು ಕಪ್ ಬಿಯರ್ ತೆಗೆದುಕೊಂಡು ಹದಿನೈದು ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. ಆ ಬಳಿಕ ತಣ್ಣಗಾಗಲು ಬಿಡಿ. ಇದಕ್ಕೆ ನೀವು ದಿನನಿತ್ಯ ಬಳಸುವ ಶ್ಯಾಂಪನ್ನು ಇದಕ್ಕೆ ಬೆರೆಸಿ, ಇದನ್ನು ನೀವು ಶೇಖರಿಸಿಟ್ಟುಕೊಳ್ಳಿ. ತಲೆ ಸ್ನಾನದ ಸಮಯದಲ್ಲಿ ಈ ಬಿಯರ್ ಶ್ಯಾಂಪನ್ನು ಬಳಸಬಹುದು.

ವಿಶೇಷ ಸೂಚನೆ: ಯಾವುದೇ ರೀತಿಯ ಅಲರ್ಜಿ ಸಮಸ್ಯೆಗಳಿದ್ದಲ್ಲಿ ಬಿಯರ್ ಶ್ಯಾಂಪೂ ಬಳಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆಗಳನ್ನು ಪಡೆದುಕೊಳ್ಳಿ.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:58 pm, Fri, 1 August 25

‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ