AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಲವರಿಗಂತೂ ಸುಳ್ಳು ಹೇಳುವುದೇ ಕಾಯಕ, ಇದು ಮಾನಸಿಕ ಅಸ್ವಸ್ಥತೆಯೇ ಅಥವಾ ರೂಢಿಯೇ?

ಯಾವುದೋ ಒಂದು ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುವುದು ಸಾಮಾನ್ಯ. ಆದರೆ ಅದೇ ಕಾಯಕವಾದರೆ ಆಲೋಚಿಸಲೇಬೇಕು. ಪ್ರತಿಯೊಂದು ಸಣ್ಣ ವಿಚಾರಕ್ಕೂ ಸುಳ್ಳು ಹೇಳುವ ಅಥವಾ ಸತ್ಯವನ್ನು ಮರೆ ಮಾಡಲು ಸುಳ್ಳು ಕಥೆಗಳನ್ನು ಹೆಣೆಯುವ ಅನೇಕ ಜನರಿದ್ದಾರೆ. ಅಂತಹ ವ್ಯಕ್ತಿಯನ್ನು ನಂಬುವುದು ತುಂಬಾ ಕಷ್ಟ. ಒಮ್ಮೆ ಅವರು ಸುಳ್ಳು ಹೇಳಿದ್ದಾರೆಂದು ಮನವರಿಕೆಯಾದರೆ ಯಾವಾಗಲೂ ಅವರ ಮೇಲೆ ಅನುಮಾನವಿದ್ದೇ ಇರುತ್ತದೆ. ನೀವು ಮನೆಯಲ್ಲಿರಲಿ, ಕಚೇರಿಯಲ್ಲಿರಲಿ ಎಲ್ಲಾ ಕಡೆಯೂ ಇಂಥಾ ಜನರನ್ನು ಕಾಣುತ್ತೀರ.

ಕೆಲವರಿಗಂತೂ ಸುಳ್ಳು ಹೇಳುವುದೇ ಕಾಯಕ, ಇದು ಮಾನಸಿಕ ಅಸ್ವಸ್ಥತೆಯೇ ಅಥವಾ ರೂಢಿಯೇ?
ಮಾನಸಿಕ ಆರೋಗ್ಯImage Credit source: Healthshots
ನಯನಾ ರಾಜೀವ್
|

Updated on: Nov 06, 2025 | 10:56 AM

Share

ಯಾವುದೋ ಒಂದು ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುವುದು ಸಾಮಾನ್ಯ. ಆದರೆ ಅದೇ ಕಾಯಕವಾದರೆ ಆಲೋಚಿಸಲೇಬೇಕು. ಪ್ರತಿಯೊಂದು ಸಣ್ಣ ವಿಚಾರಕ್ಕೂ ಸುಳ್ಳು ಹೇಳುವ ಅಥವಾ ಸತ್ಯವನ್ನು ಮರೆ ಮಾಡಲು ಸುಳ್ಳು ಕಥೆಗಳನ್ನು ಹೆಣೆಯುವ ಅನೇಕ ಜನರಿದ್ದಾರೆ. ಅಂತಹ ವ್ಯಕ್ತಿಯನ್ನು ನಂಬುವುದು ತುಂಬಾ ಕಷ್ಟ. ಒಮ್ಮೆ ಅವರು ಸುಳ್ಳು ಹೇಳಿದ್ದಾರೆಂದು ಮನವರಿಕೆಯಾದರೆ ಯಾವಾಗಲೂ ಅವರ ಮೇಲೆ ಅನುಮಾನವಿದ್ದೇ ಇರುತ್ತದೆ. ನೀವು ಮನೆಯಲ್ಲಿರಲಿ, ಕಚೇರಿಯಲ್ಲಿರಲಿ ಎಲ್ಲಾ ಕಡೆಯೂ ಇಂಥಾ ಜನರನ್ನು ಕಾಣುತ್ತೀರ.

ಜನರು ಸುಳ್ಳು ಹೇಳುವ ಪ್ರವೃತ್ತಿಯನ್ನು ಏಕೆ ಬೆಳೆಸಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಸಹ ಮುಖ್ಯವಾಗಿದೆ. ಮೀರತ್‌ನ ಛತ್ರಪತಿ ಶಿವಾಜಿ ಸುಭಾರ್ತಿ ಆಸ್ಪತ್ರೆಯ ಮನೋವೈದ್ಯೆ ಡಾ. ರಿತಿಕಾ ಅವರು ಹೆಲ್ತ್ ಶಾಟ್ಸ್ಗೆ ನೀಡಿರುವ ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ.

ಜನರು ಮತ್ತೆ ಮತ್ತೆ ಸುಳ್ಳು ಹೇಳುವುದಕ್ಕೆ ಕಾರಣಗಳು ಯಾವುವು?

ವಿಭಿನ್ನ ಜನರು ಸುಳ್ಳು ಹೇಳಲು ವಿಭಿನ್ನ ಕಾರಣಗಳನ್ನು ಹೊಂದಿರಬಹುದು, ಆದರೆ ಜನರು ಬಹುಶಃ ತಮ್ಮನ್ನು ತಾವು ರಕ್ಷಿಸಿಕೊಳ್ಳಲು, ಕೆಲವೊಮ್ಮೆ ಯಾರನ್ನಾದರೂ ಮೆಚ್ಚಿಸಲು ಮತ್ತು ಕೆಲವೊಮ್ಮೆ ಅಭ್ಯಾಸದಿಂದ ಹಾಗೆ ಮಾಡುತ್ತಾರೆ.ಮಾನಸಿಕ ದೃಷ್ಟಿಕೋನದಿಂದ, ಒಬ್ಬ ವ್ಯಕ್ತಿಯು ಪದೇ ಪದೇ ಸುಳ್ಳು ಹೇಳಿದಾಗ, ಅದು ಬಾಲ್ಯದ ಅನುಭವಗಳು, ಆತ್ಮವಿಶ್ವಾಸದ ಕೊರತೆ ಅಥವಾ ಸಾಮಾಜಿಕ ಒತ್ತಡಕ್ಕೆ ಸಂಬಂಧಿಸಿರಬಹುದು. ಅಥವಾ ಜನರ ಗಮನ ಸೆಳೆಯುವುದು ಕೂಡ ಉದ್ದೇಶವಾಗಿರಬಹುದು.

ಪದೇ ಪದೇ ಸುಳ್ಳು ಹೇಳುವ ಜನರೊಂದಿಗೆ ವ್ಯವಹರಿಸಲು, ಅವರು ಏಕೆ ಸುಳ್ಳು ಹೇಳುತ್ತಾರೆ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳುವುದು ಮುಖ್ಯ. ಅವರನ್ನು ನೇರವಾಗಿ ಎದುರಿಸುವ ಬದಲು, ಸತ್ಯವನ್ನು ಹೇಳಲು ನಿಧಾನವಾಗಿ ಪ್ರೋತ್ಸಾಹಿಸಿ. ಪದೇ ಪದೇ ಅವರನ್ನು ಹಿಡಿಯುವುದು ಮತ್ತು ಅವರಿಗೆ ಅಡ್ಡಿಪಡಿಸುವುದು ಅವರನ್ನು ಇನ್ನಷ್ಟು ರಕ್ಷಣಾತ್ಮಕವಾಗಿಸುತ್ತದೆ.

ಮತ್ತಷ್ಟು ಓದಿ:  ಅತಿಯಾದ ಒತ್ತಡದಿಂದ ಮುಕ್ತಿ ಪಡೆಯಲು ನೀವು ಕುಡಿಯಬೇಕಾದ ಪಾನೀಯಗಳಿವು

ಸತ್ಯವನ್ನೇ ಮಾತನಾಡಿ ಮತ್ತು ಸತ್ಯವನ್ನು ಕೇಳುವ ಅಭ್ಯಾಸವನ್ನು ಮಾಡಿಕೊಳ್ಳಿ

ಯಾರೋ ನಿಮಗೆ ಹೇಳುವ ಸುಳ್ಳು ಕ್ಷಣಕ್ಕೆ ನಿಮಗೆ ಖುಷಿಕೊಡಬಹುದು ಆದರೆ ಸತ್ಯ ತಿಳಿದಾಗ ಅದರಿಂದ ಬೇಜಾರಾಗುತ್ತದೆ.ಹಾಗಾಗಿ ನಿಮ್ಮ ಸುತ್ತಮುತ್ತಲಿರುವವರು ಸ್ನೇಹಿತರು, ಕುಟುಂಬದ ಸದಸ್ಯರ ಬಳಿ ನನಗೆ ಬೇಸರವಾದರೂ ತೊಂದರೆಯಿಲ್ಲ ನೀವು ಸತ್ಯವನ್ನೇ ಹೇಳಿ ಎಂದು ಪ್ರೋತ್ಸಾಹಿಸಿ.

ನೀವು ಪ್ರಾಮಾಣಿಕತೆಯನ್ನು ಗೌರವಿಸುತ್ತೀರಿ ಎಂದು ಅವರಿಗೆ ತಿಳಿಸಿ

ಅನೇಕ ಜನರು ನಿಮ್ಮ ದೃಷ್ಟಿಯಲ್ಲಿ ತಮ್ಮನ್ನು ತಾವು ಉತ್ತಮವಾಗಿ ಕಾಣುವಂತೆ ಮಾಡಲು ಅಥವಾ ಉತ್ತಮ ವ್ಯಕ್ತಿತ್ವವನ್ನು ಪ್ರದರ್ಶಿಸಲು ಸುಳ್ಳು ಹೇಳುತ್ತಾರೆ. ಆದ್ದರಿಂದ, ಯಾರಾದರೂ ನಿಮಗೆ ಸುಳ್ಳು ಹೇಳುತ್ತಿದ್ದಾರೆ ಅಥವಾ ಸುಳ್ಳು ಹೇಳಲು ಪ್ರಯತ್ನಿಸುತ್ತಿದ್ದಾರೆ ಎಂದು ನಿಮಗೆ ಅನಿಸಿದರೆ, ನೀವು ಪ್ರಾಮಾಣಿಕತೆಯನ್ನು ನಂಬುತ್ತೀರಿ ಮತ್ತು ಸುಳ್ಳುಗಳನ್ನು ಇಷ್ಟಪಡುವುದಿಲ್ಲ ಎಂದು ಮೊದಲಿನಿಂದಲೂ ಸ್ಪಷ್ಟಪಡಿಸಿ. ಇದು ಇತರ ವ್ಯಕ್ತಿಗೆ ಏನನ್ನು ನಿರೀಕ್ಷಿಸಬಹುದು ಎಂಬುದನ್ನು ತಿಳಿಯಲು ಸಹಾಯ ಮಾಡುತ್ತದೆ.

ಸುಳ್ಳು ಹೇಳುವಾಗ ಸಿಕ್ಕಿಬಿದ್ದಾಗ ಶಾಂತವಾಗಿ ವರ್ತಿಸಿ

ಕೆಲವೊಮ್ಮೆ, ಸುಳ್ಳು ಹೇಳುವ ವ್ಯಕ್ತಿಯು ನಿಮ್ಮೆದುರು ಸಿಕ್ಕಿಬಿದ್ದಾಗ ನೀವು ಕೋಪದಿಂದ ವರ್ತಿಸಿದರೆ ಅವರು ಸತ್ಯ ಹೇಳುವ ಧೈರ್ಯವನ್ನೇ ಮಾಡುವುದಿಲ್ಲ, ಹಾಗಾಗಿ ಸುಳ್ಳು ಹೇಳಿ ನಿಮ್ಮೆದುರು ಸಿಕ್ಕಿಬಿದ್ದರೆ ಶಾಂತರೀತಿಯಿಂದ ವರ್ತಿಸುವುದು ಒಳಿತು.ಅವರಿಗೆ ಅವರ ತಪ್ಪಿನ ಅರಿವು ಮಾಡಿಸುವುದು ಕೂಡ ಮುಖ್ಯವಾಗುತ್ತದೆ. ಕೆಲವೊಮ್ಮೆ ಒಬ್ಬ ವ್ಯಕ್ತಿಯ ಪರಿಸ್ಥಿತಿ ಅವರನ್ನು ಸುಳ್ಳು ಹೇಳಲು ಒತ್ತಾಯಿಸುತ್ತದೆ, ಆದ್ದರಿಂದ ಒಬ್ಬ ವ್ಯಕ್ತಿಯು ಯಾವಾಗ ಮತ್ತು ಏಕೆ ಸುಳ್ಳು ಹೇಳುತ್ತಾನೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ