Chanakya Niti: ಇದೇ ಕಾರಣಕ್ಕಂತೆ ಗಂಡ ಹೆಂಡತಿಯ ನಡುವೆ ವಯಸ್ಸಿನ ಅಂತರ ಹೆಚ್ಚಿರಬಾರದು
ಸಾಮಾನ್ಯವಾಗಿ ಎಲ್ಲರೂ ಪ್ರೀತಿ, ಮದುವೆಗೆ ಜಾತಿ ಅಂತಸ್ತುಗಳ ಅಂತರವಿಲ್ಲ ಎಂದು ಹೇಳುವ ಹಾಗೆ ವಯಸ್ಸಿನ ಅಂತರ ಕೂಡ ಮುಖ್ಯವಾಗುವುದಿಲ್ಲ ಎಂದು ಹೇಳುತ್ತಾರೆ. ಆದರೆ ಚಾಣಕ್ಯರ ಪ್ರಕಾರ ಸಂಸಾರ ಸುಖಮಯವಾಗಿರಬೇಕೆಂದರೆ ವಯಸ್ಸಿನ ಅಂತರ ಕೂಡ ಬಹುಮುಖ್ಯ ಪಾತ್ರ ವಹಿಸುತ್ತದೆ. ಒಂದು ವೇಳೆ ಗಂಡ ಹೆಂಡತಿಯ ನಡುವೆ ವಯಸ್ಸಿನ ಅಂತರ ತುಂಬಾ ಹೆಚ್ಚಿದ್ದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆ ನೀಡಿದ್ದಾರೆ. ಹಾಗಿದ್ರೆ ಪತಿ ಪತ್ನಿಯ ನಡುವೆ ಏಜ್ ಗ್ಯಾಪ್ ಹೆಚ್ಚಿದ್ದರೆ ಏನೆಲ್ಲಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂಬುದನ್ನು ತಿಳಿಯಿರಿ.

ಹಿಂದೆಲ್ಲಾ ಮದುವೆಯಾಗುವಾಗ ಅಂತಸ್ತು, ಜಾತಿಯೊಂದಿಗೆ ವಯಸ್ಸನ್ನು ಕೂಡ ಪರಿಗಣನೆಗೆ ತೆದುಕೊಳ್ಳುತ್ತಿದ್ದರು. ಆದರೆ ಇಂದು ಅಂತಸ್ತಿನ ಜೊತೆಗೆ ವಯಸ್ಸನ್ನು ಕೂಡ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಗಂಡ ಹೆಂಡತಿಯ ನಡುವೆ ವಯಸ್ಸು (age gap) ಮುಖ್ಯ ಆಗಲ್ಲ ಬದಲಿಗೆ ಪ್ರೀತಿ, ಹೊಂದಾಣಿಕೆ ಅಷ್ಟೇ ಮುಖ್ಯ ಆಗೋದು ಎಂಬುದು ಹಲವರ ವಾದ. ಆದ್ರೆ ಆಚಾರ್ಯ ಚಾಣಕ್ಯರ ಪ್ರಕಾರ ಸಂಸಾರದಲ್ಲಿ ಸ್ವಾರಸ್ಯ, ಸಾಮರಸ್ಯ, ಪತಿ ಪತ್ನಿಯರ ನಡುವೆ ಹೊಂದಾಣಿಕೆ ಇರಲು ವಯಸ್ಸಿನ ಅಂತರದ ಅಂಶ ಕೂಡ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಒಂದು ವೇಳೆ ಪತಿ ಪತ್ನಿಯರ ನಡುವೆ ವಯಸ್ಸಿನ ಅಂತರ ತೀರಾ ಹೆಚ್ಚಿದ್ದರೆ, ಆ ಸಂಸಾರದಲ್ಲಿ ಸಮಸ್ಯೆಗಳೇ ಹೆಚ್ಚು ಕಾಣಿಸಿಕೊಳ್ಳುತ್ತವೆಯಂತೆ. ಹಾಗಿದ್ರೆ ಗಂಡ ಹೆಂಡತಿಯ ನಡುವೆ ವಯಸ್ಸಿನ ಅಂತರ ಹೆಚ್ಚಿದ್ದರೆ ಏನೆಲ್ಲಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ, ವಯಸ್ಸಿನ ಅಂತರ ಎಷ್ಟಿದ್ದರೆ ಚೆಂದ ಎಂಬ ವಿಚಾರಗಳನ್ನು ತಿಳಿಯಿರಿ.
ಗಂಡ ಹೆಂಡತಿಯ ನಡುವೆ ವಯಸ್ಸಿನ ಅಂತರ ಹೆಚ್ಚಿರಬಾರದು ಏಕೆ?
ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವು ನಿರ್ಣಾಯಕವಾಗಿದೆ. ದಂಪತಿಗಳ ನಡುವಿನ ಹೆಚ್ಚಿನ ವಯಸ್ಸಿನ ಅಂತರವು ಸಮಸ್ಯೆಗಳು ಉಂಟಾಗಲು ಕಾರಣವಾಗಬಹುದು. ಚಾಣಕ್ಯರ ಪ್ರಕಾರ, ವಯಸ್ಸಾದ ಪುರುಷನು ಕಿರಿಯ ವಯಸ್ಸಿನ ಯುವತಿಯನ್ನು ಮದುವೆಯಾದರೆ ಅಂತಹ ವಿವಾಹವು ಹೆಚ್ಚು ಕಾಲ ಉಳಿಯುವುದಿಲ್ಲ.
ಚಾಣಕ್ಯ ನೀತಿಯ ಪ್ರಕಾರ, ಗಂಡ ಮತ್ತು ಹೆಂಡತಿಯ ನಡುವೆ ವಯಸ್ಸಿನ ಅಂತರ ಹೆಚ್ಚಿರುವುದು ಒಳ್ಳೆಯದಲ್ಲ ಎಂದು ಪರಿಗಣಿಸಲಾಗಿದೆ. ಗಂಡ ಹೆಂಡತಿ ಸಂಸಾರ ಎಂಬ ರಥದ ಎರಡು ಚಕ್ರಗಳಿದ್ದಂತೆ. ಈ ಎರಡು ಚಕ್ರಗಳು ಒಂದೇ ವೇಗದಲ್ಲಿ ಚಲಿಸಿದರೆ ಮಾತ್ರ ಆ ರಥವು ಸರಾಗವಾಗಿ ಸಾಗಲು ಸಾಧ್ಯ. ವಯಸ್ಸಿನ ದೊಡ್ಡ ವ್ಯತ್ಯಾಸದಿಂದ ಗಂಡ ಹೆಂಡತಿಯ ನಡುವೆ ಹೊಂದಾಣಿಕೆ ಇರುವುದಿಲ್ಲ. ಅವರ ಆಲೋಚನೆಗಳಲ್ಲಿ ಭಿನ್ನಾಭಿಪ್ರಾಯಗಳಿರುತ್ತವೆ, ಇದರಿಂದಾಗಿ ಸಂಸಾರದಲ್ಲಿ ಬಿರುಕು ಮೂಡುತ್ತದೆ. ಅಲ್ಲದೆ, ವೈವಾಹಿಕ ಜೀವನವು ಹೆಚ್ಚು ಕಾಲ ಉಳಿಯುವುದಿಲ್ಲ. ಆದ್ದರಿಂದ, ಗಂಡ ಮತ್ತು ಹೆಂಡತಿಯ ನಡುವೆ ಹೆಚ್ಚಿನ ವಯಸ್ಸಿನ ವ್ಯತ್ಯಾಸ ಇರಬಾರದು.
ಇದನ್ನೂ ಓದಿ: ನಿಮ್ಮ ಈ ಅಭ್ಯಾಸಗಳೇ ಮನೆಯಲ್ಲಿ ದಾರಿದ್ರ್ಯ ನೆಲೆಸಲು ಕಾರಣ ಎನ್ನುತ್ತಾರೆ ಚಾಣಕ್ಯ
ಗಂಡ ಹೆಂಡತಿಯ ನಡುವೆ ವಯಸ್ಸಿನ ಅಂತರ ಎಷ್ಟಿರಬೇಕು?
ಗಂಡ ಹೆಂಡತಿಯ ನಡುವೆ 3 ರಿಂದ 5 ವರ್ಷಗಳ ಅಂತರವಿದ್ದರೆ ಸಾಕು, ಅದಕ್ಕಿಂತ ಹೆಚ್ಚಿರಬಾರದು. ಒಂದೇ ವಯಸ್ಸಿನ ಜನರ ಮನಸ್ಥಿತಿಯೂ ಒಂದೇ ರೀತಿ ಇರುತ್ತದೆ, ಅವರ ಆಲೋಚನೆಗಳಲ್ಲೂ ಕೂಡ ಭಿನ್ನಾಭಿಪ್ರಾಯಗಳು ಬರುವುದಿಲ್ಲ. ಇದು ಒಬ್ಬರನ್ನೊಬ್ಬರು ಪರಸ್ಪರ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಸಂಸಾರವೂ ಸುಖವಾಗಿರುತ್ತದೆ. ಇದೇ ಕಾರಣಕ್ಕೆ ಗಂಡ ಹೆಂಡತಿಯ ನಡುವೆ ವಯಸ್ಸಿನ ಅಂತರ ಹೆಚ್ಚಿರಬಾರದು ಎಂದು ಚಾಣಕ್ಯರು ಹೇಳಿದ್ದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




