AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

6 ವರ್ಷಗಳ ಕಾಲ ತಾನು ಡೇಟಿಂಗ್ ಮಾಡಿದ್ದ ಗೆಳೆಯನೇ ತನ್ನ ಸಹೋದರನೆಂದು ತಿಳಿದಾಗ…

ಬರೋಬ್ಬರಿ 6 ವರ್ಷಗಳ ಕಾಲ ಡೇಟಿಂಗ್ ಮಾಡಿ, ಆತನನ್ನು ಇಷ್ಟಪಟ್ಟು, ಗೆಳೆಯನೇ ತನ್ನ ಸಹೋದರ ಎಂದು ತಿಳಿದಾಗ ಆಕೆಯ ಮನಸ್ಸು ಹೇಗಾಗಿರಬೇಡ.

6 ವರ್ಷಗಳ ಕಾಲ ತಾನು ಡೇಟಿಂಗ್ ಮಾಡಿದ್ದ ಗೆಳೆಯನೇ ತನ್ನ ಸಹೋದರನೆಂದು ತಿಳಿದಾಗ...
Relationship
TV9 Web
| Edited By: |

Updated on: Sep 02, 2022 | 1:00 PM

Share

ಬರೋಬ್ಬರಿ 6 ವರ್ಷಗಳ ಕಾಲ ಡೇಟಿಂಗ್ ಮಾಡಿ, ಆತನನ್ನು ಇಷ್ಟಪಟ್ಟು, ಗೆಳೆಯನೇ ತನ್ನ ಸಹೋದರ ಎಂದು ತಿಳಿದಾಗ ಆಕೆಯ ಮನಸ್ಸು ಹೇಗಾಗಿರಬೇಡ. ಮದುವೆಗೂ ಮುನ್ನ ವರ್ಷಗಳ ಕಾಲ ಡೇಟಿಂಗ್ ಮಾಡುವುದು ಸಾಮಾನ್ಯ ಹುಡುಗ-ಹುಡುಗಿ ಡೇಟಿಂಗ್ ಮೂಲಕ ಪರಸ್ಪರ ಅರಿಯುವ ಪ್ರಯತ್ನವನ್ನು ಮಾಡುತ್ತಾರೆ. ಡೇಟಿಂಗ್ ಬಳಿಕ ಆಕೆ/ಆತ ಓಕೆ ಅನಿಸಿದರೆ ಮದುವೆ ಇಲ್ಲವಾದರಲ್ಲಿ ಅಲ್ಲಿಗೆ ಸಂಬಂಧಕ್ಕೆ ಗುಡ್​ಬೈ ಹೇಳುತ್ತಾರೆ.

ಆದರೆ ಇಲ್ಲೊಬ್ಬ ಯುವತಿ 6 ವರ್ಷಗಳ ಕಾಲ ಡೇಟಿಂಗ್ ಮಾಡಿದ ಬಳಿಕ ತಾನು ಡೇಟಿಂಗ್ ಮಾಡಿದ್ದು ತನ್ನ ಸಹೋದರನ ಜತೆಗೆ ಎಂದು ತಿಳಿದು ಶಾಕ್ ಆಗಿದ್ದಾರೆ.

ಕಥೆ ಏನು? ಆರು ವರ್ಷಗಳ ಹಿಂದೆ ಇಬ್ಬರೂ ಭೇಟಿಯಾಗಿದ್ದರು, ಅವರಿಬ್ಬರು ಬೇಗ ಒಬ್ಬರಿಗೊಬ್ಬರು ಆಕರ್ಷಿತರಾಗಿದ್ದರು, ಬದುಕಿದ್ದರೆ ಜತೆಗೆ ಬದುಕಬೇಕು ಎಂದು ಕನಸು ಕಂಡವರು. ಇಬ್ಬರಿಗೂ ಸುಂದರ ಕುಟುಂಬವಿತ್ತು ಇಬ್ಬರಿಗೂ ಹೈಸ್ಕೂಲ್​ಗೆ ಬರುವವರೆ ತಾವು ದತ್ತು ಮಕ್ಕಳು ಎಂಬುದು ತಿಳಿದಿರಲಿಲ್ಲ.

ಇಬ್ಬರೂ ಸ್ವಂತ ಮನೆ ಖರೀದಿಸಿದ್ದರು, ಒಟ್ಟಿಗೆ ಇರುತ್ತಿದ್ದರು, ಇಬ್ಬರಿಗೂ ಸಾಮ್ಯತೆ ಇತ್ತು ತುಂಬಾ ಜನ ಹೇಳಿದ್ದರು ಕೂಡ, ಆದರೂ ಇಬ್ಬರು ತಲೆ ಕೆಡಿಸಿಕೊಂಡಿರಲಿಲ್ಲ. ಇಬ್ಬರೂ ತಮ್ಮ ಪೋಷಕರನ್ನು ಪತ್ತೆ ಹಚ್ಚಲು ಡಿಎನ್​ಎ ಪರೀಕ್ಷೆ ಮಾಡಿಸಿದ್ದರು. ಅದರಲ್ಲಿ ಆತ ಜೈವಿಕ ಸಹೋದರನೆಮಬುದು ತಿಳಿದುಬಂದಿದೆ.

ಡಿಎನ್‌ಎ ಪರೀಕ್ಷೆಯ ಫಲಿತಾಂಶ ನನ್ನನ್ನು ವಿಚಲಿತಗೊಳಿಸುತ್ತಿದೆ ಏನು ಮಾಡಬೇಕೆಂಬುದು ನನಗೆ ತೋಚುತ್ತಿಲ್ಲ ಎಂದು ಆಕೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾಳೆ. ಆದರೆ ಈ ಪರೀಕ್ಷೆಯು ಸುಳ್ಳಾಗಿರಲಿ ಎಂದು ನಾನು ಬಯಸುತ್ತೇನೆ ಶೀಘ್ರ ಮತ್ತೊಂದು ಪರೀಕ್ಷೆ ನಡೆಲಿದೆ ಎಂದು ಆಕೆ ಬರೆದುಕೊಂಡಿದ್ದಾಳೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ